ವೀಕ್ಷಕರ ಮೆಚ್ಚಿಗೆ ಪಡೆದ ಶಂಕರ್ ಬಿದರಿ ಅವರ ಪವರ್ ಫುಲ್ ಪ್ರೊಮೋ
Recommended Video
''ಪೊಲೀಸ್ ಸೇವೆಯಂತಹ ಪವಿತ್ರ ಸೇವೆ ಭೂ ಲೋಕದಲ್ಲಿ ಮತ್ತೊಂದಿಲ್ಲ'' ಎಂದು ಹೇಳುತ್ತಲೇ IPS ಅಧಿಕಾರಿ ಶಂಕರ್ ಬಿದರಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಿದ್ದಾರೆ.
ಶಂಕರ್ ಬಿದರಿ ಅವರ ಸಂಚಿಕೆಯ ಪ್ರೊಮೋ ಇದೀಗ ಹೊರ ಬಂದಿದೆ. ಶಂಕರ್ ಬಿದರಿ ಸಾಧನೆ ಹಾದಿಯ ಕಥೆಯ ಝಲಕ್ ಪ್ರೊಮೋದಲ್ಲಿ ತೋರಿಸಲಾಗಿದೆ. ಕಾರ್ಯಕ್ರಮ ಯಾವ ರೀತಿ ಮೂಡಿ ಬಂದಿದೆ ಎನ್ನುವುದು ಪ್ರೊಮೋ ಮೂಲಕ ತಿಳಿದಿದೆ.
ಕಾಡುಗಳ್ಳ ವೀರಪ್ಪನ್ ಹಿಡಿದ ಕಥೆ ಪ್ರೊಮೋದ ಹೈಲೈಟ್ ಆಗಿದೆ. ''ನೀನಗೇನು ಬೇಕೋ ಅದು ನೀನು ಮಾಡು.. ನನಗೇನು ಬೇಕೋ ಅದು ನಾನು ಮಾಡುತ್ತೇನೆ..'' ಎಂಬ ಬಿದರಿ ಡೈಲಾಗ್ ರೋಚಕವಾಗಿದೆ.

ಉಳಿದಂತೆ, ಶಂಕರ್ ಬಿದರಿ ಪತ್ನಿ, ಕುಟುಂಬ, ಗುರುಗಳು ಅವರ ಜೊತೆಗೆ ಕೆಲಸ ಮಾಡಿದ ಅಧಿಕಾರಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಗಂಭೀರ ಮಾತಿನ ಜೊತೆ ಜೊತೆಗೆ ತರ್ಲೆ ತಮಾಷೆ ಕೂಡ ಎಂದಿನಂತೆ ಇರುತ್ತದೆ.
ಶನಿವಾರ ರಾತ್ರಿ 9.30ಕ್ಕೆ ಶಂಕರ್ ಬಿದರಿ ಕಾರ್ಯಕ್ರಮ ಪ್ರಸಾರ ಆಗಲಿದೆ. ಭಾನುವಾರ ಅಸಿಸ್ಟೆಂಟ್ ಕಮಿಷನರ್ ಟೈಗರ್ ಅಶೋಕ್ ಕುಮಾರ್ ಅವರ ಸಂಚಿಕೆ ಪ್ರಸಾರ ಆಗಲಿದೆ.
ಪ್ರೊಮೋ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











