For Quick Alerts
  ALLOW NOTIFICATIONS  
  For Daily Alerts

  ಸಂತಸದ ಸುದ್ದಿ: ಕನ್ನಡದಲ್ಲಿ ಪ್ರಸಾರವಾಗಲಿದೆ ಹೆಮ್ಮೆಯ 'ಮಾಲ್ಗುಡಿ ಡೇಸ್' ಧಾರಾವಾಹಿ

  |

  ಆರ್ ಕೆ ನಾರಾಯಣ್ ಅವರ ಬರಹಗಳ ಆಧಾರಿತ 'ಮಾಲ್ಗುಡಿ ಡೇಸ್' ಧಾರಾವಾಹಿಯನ್ನು 1986ರಲ್ಲಿ ಖ್ಯಾತ ನಿರ್ದೇಶಕ, ನಟ ಶಂಕರ್ ನಾಗ್ ದೂರದರ್ಶನಕ್ಕಾಗಿ ನಿರ್ದೇಶಿಸಿದ್ದರು. ಆ ಕಾಲದಲ್ಲಿ ಮಾಲ್ಗುಡಿ ಡೇಸ್ ಅಪಾರ ಜನಮನ್ನಣೆ ಗಳಿಸಿತ್ತು. ಈ ಮೂಲಕ ಕನ್ನಡದ ನಟರು, ತಂತ್ರಜ್ಞರು, ಸ್ಥಳಗಳು ದೇಶವ್ಯಾಪಿ ಟೆಲಿವಿಷನ್ ವೀಕ್ಷಕರನ್ನು ತಲುಪಲು ಸಾಧ್ಯವಾಗಿತ್ತು.

  ಅಭಿನಂದನ್ ವರ್ಧಮಾನ್ ಜೀವನಾಧಾರಿತ ಸಿನಿಮಾದಲ್ಲಿ ಡಿ ಬಾಸ್! | Darshan | Abhinandan | Filmibeat Kannada

  ಈ ಧಾರಾವಾಹಿಯ ಮೊದಲ 13 ಎಪಿಸೋಡುಗಳನ್ನು ಇಂಗ್ಲಿಷ್‌ನಲ್ಲಿ ನಂತರದ 54 ಎಪಿಸೋಡ್‌ಗಳನ್ನು ಹಿಂದಿಯಲ್ಲಿ ಚಿತ್ರೀಕರಿಸಲಾಗಿತ್ತು. ಆರ್ ಕೆ ನಾರಾಯಣ್ ಅವರ 'ಮಾಲ್ಗುಡಿ ಡೇಸ್', ಎ ಹಾರ್ಸ್ ಆಂಡ್ ಟೂ ಗೋಟ್ಸ್, ಆನ್ ಆಸ್ಟ್ರೋಲಜರ್ಸ್ ಡೇ ಮುಂತಾದ ಕಿರು ಕಥೆಗಳು ಹಾಗೂ ಸ್ವಾಮಿ ಆಂಡ್ ಫ್ರೆಂಡ್ಸ್ ಮತ್ತು ದಿ ವೆಂಡರ್ ಆಫ್ ಸ್ವೀಟ್ಸ್ ಕಾದಂಬರಿಗಳನ್ನು ಆಧಾರವಾಗಿಟ್ಟುಕೊಂಡು ಈ ಧಾರಾವಾಹಿ ಸಿದ್ಧವಾಗಿತ್ತು. ಬೇಸರದ ಸಂಗತಿಯೆಂದರೆ ಇದು ಕನ್ನಡದವರ ಪ್ರಯತ್ನವಾಗಿದ್ದರೂ ಕನ್ನಡಿಗರಿಗೆ ಅವರ ಭಾಷೆಯಲ್ಲಿ ಮಾತ್ರ ದಕ್ಕಿರಲಿಲ್ಲ. ಮುಂದೆ ಓದಿ...

  ನಮಗೆ 'ಮಹಾಭಾರತ' ಕನ್ನಡದಲ್ಲಿಯೇ ಬೇಕು: ಡಬ್ಬಿಂಗ್ ಪ್ರಿಯರಿಂದ ಅಭಿಯಾನನಮಗೆ 'ಮಹಾಭಾರತ' ಕನ್ನಡದಲ್ಲಿಯೇ ಬೇಕು: ಡಬ್ಬಿಂಗ್ ಪ್ರಿಯರಿಂದ ಅಭಿಯಾನ

  ಕನ್ನಡದಲ್ಲಿ ಪ್ರಸಾರವಾಗಿರಲಿಲ್ಲ

  ಕನ್ನಡದಲ್ಲಿ ಪ್ರಸಾರವಾಗಿರಲಿಲ್ಲ

  ದೂರದರ್ಶನ ಆಗ ಹಿಂದಿ ಭಾಷೆಯ ಪ್ರಸಾರವನ್ನು ಮಾತ್ರ ಹೊಂದಿತ್ತು. ಅದಕ್ಕಾಗಿ ಹಿಂದಿಯಲ್ಲಿ ಧಾರಾವಾಹಿ ಪ್ರಸಾರವಾಗಿತ್ತು. ಕನ್ನಡಿಗರಿಂದ ಧಾರಾವಾಹಿ ಸಿದ್ಧವಾಗಿದ್ದರೂ ಕನ್ನಡದಲ್ಲಿ ಪ್ರಸಾರ ಕಾಣುವ ಭಾಗ್ಯ ಸಿಗಲಿಲ್ಲ. ಆ ಪ್ರಯತ್ನವೂ ನಡೆದಿರಲಿಲ್ಲ. ಡಬ್ಬಿಂಗ್ ಪ್ರಿಯರು ಈ ಸಲುವಾಗಿ ಆಂದೋಲನವನ್ನೇ ನಡೆಸಿದ್ದರು.

  ಮಾಲ್ಗುಡಿ ಡೇಸ್ ಕನ್ನಡದಲ್ಲಿ ಡಬ್ ಆಗ್ಬೇಕು ಏಕೆ? ಏನಿದು ಅಭಿಯಾನ?

  ಉಪ ಶೀರ್ಷಿಕೆಯಲ್ಲಿ ಪ್ರಸಾರವಾಗಿತ್ತು

  ಉಪ ಶೀರ್ಷಿಕೆಯಲ್ಲಿ ಪ್ರಸಾರವಾಗಿತ್ತು

  ಕೆಲವು ವರ್ಷಗಳ ಹಿಂದೆ 'ಜನಶ್ರೀ' ಟಿವಿ ವಾಹಿನಿ ಮಾಲ್ಗುಡಿ ಡೇಸ್ ಧಾರಾವಾಹಿಯ ಕೆಲವು ಕಂತುಗಳನ್ನು ಪ್ರಸಾರ ಮಾಡಿತ್ತು. ಆದರೆ ಅದನ್ನು ಡಬ್ಬಿಂಗ್ ಮಾಡಿರಲಿಲ್ಲ. ಆಗ ಡಬ್ಬಿಂಗ್ ವಿರೋಧಿ ಹೋರಾಟ ತೀವ್ರ ಮಟ್ಟದಲ್ಲಿದ್ದರಿಂದ ಅದನ್ನು ಡಬ್ಬಿಂಗ್ ಮಾಡುವ ಧೈರ್ಯ ಮಾಡಿರಲಿಲ್ಲ. ಬದಲಾಗಿ ಹಿಂದಿಯಲ್ಲಿಯೇ ಪ್ರಸಾರ ಮಾಡಿ ಕನ್ನಡದಲ್ಲಿ ಉಪ ಶೀರ್ಷಿಕೆ ನೀಡುವ ಪ್ರಯತ್ನ ಮಾಡಲಾಗಿತ್ತು.

  ಹಿಂದಿ ಟೆಲಿವಿಷನ್‌ನಲ್ಲಿಯೂ ದಾಖಲೆ ನಿರ್ಮಿಸಿದ ಕನ್ನಡದ ಕೆಜಿಎಫ್-1ಹಿಂದಿ ಟೆಲಿವಿಷನ್‌ನಲ್ಲಿಯೂ ದಾಖಲೆ ನಿರ್ಮಿಸಿದ ಕನ್ನಡದ ಕೆಜಿಎಫ್-1

  ಕನ್ನಡಿಗರ ಭಾಷೆಯಲ್ಲಿ ನಮ್ಮದೇ ಧಾರಾವಾಹಿ

  ಕನ್ನಡಿಗರ ಭಾಷೆಯಲ್ಲಿ ನಮ್ಮದೇ ಧಾರಾವಾಹಿ

  ಈಗ ಡಬ್ಬಿಂಗ್ ಪರ ಹೋರಾಟಗಾರರ ಫಲದಿಂದ 'ಮಾಲ್ಗುಡಿ ಡೇಸ್' ಕನ್ನಡಿಗರಿಗೆ ದಕ್ಕುವ ದಿನಗಳು ಸನಿಹವಾಗಿದೆ. ಕನ್ನಡಿಗರದ್ದೇ ಆದ ಕಾರ್ಯಕ್ರಮವೊಂದು ಕನ್ನಡಿಗರಿಗೆ ತಲುಪದೆ ಇರುವುದು ಭಾಷೆ ಮತ್ತು ಮನರಂಜನಾ ಉದ್ಯಮಕ್ಕೆ ಮಾಡಿದ ವಂಚನೆಯಾಗಿತ್ತು. ಆದರೆ ಕೊನೆಗೂ ಸತತ ಪರಿಶ್ರಮದ ಬಳಿಕ ಇದೊಂದು ಗುರಿ ಈಡೇರುತ್ತಿದೆ ಎಂದು ಡಬ್ಬಿಂಗ್ ಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.

  'ಮಾಲ್ಗುಡಿ ಡೇಸ್' ಕನ್ನಡಕ್ಕೆ ಬರುವುದು ಬಿಡುವುದು ಕನ್ನಡ ವಾಹಿನಿಗಳ ಕೈಯಲ್ಲಿದೆ.!'ಮಾಲ್ಗುಡಿ ಡೇಸ್' ಕನ್ನಡಕ್ಕೆ ಬರುವುದು ಬಿಡುವುದು ಕನ್ನಡ ವಾಹಿನಿಗಳ ಕೈಯಲ್ಲಿದೆ.!

  ಸಮಯ, ದಿನಾಂಕ ತಿಳಿಸಿಲ್ಲ

  ಸಮಯ, ದಿನಾಂಕ ತಿಳಿಸಿಲ್ಲ

  ಖಾಸಗಿ ವಾಹಿನಿಯೊಂದರಲ್ಲಿ 'ಮಾಲ್ಗುಡಿ ಡೇಸ್' ಧಾರಾವಾಹಿ ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗಲಿದೆ. ಧಾರಾವಾಹಿ ಪ್ರಸಾರವಾಗುವ ದಿನಾಂಕ ಮತ್ತು ಸಮಯವನ್ನು ಇನ್ನೂ ಖಚಿತಪಡಿಸಿಲ್ಲ. ಕನ್ನಡದ ವೀಕ್ಷಕರು ಶಂಕರ್ ನಾಗ್ ನಿರ್ದೇಶನದ ಬಹು ಜನಪ್ರಿಯ ಧಾರಾವಾಹಿಯನ್ನು ತಮ್ಮ ಮಾತೃಭಾಷೆಯಲ್ಲಿ ನೋಡಲು ಕಾತರದಿಂದ ಕಾಯುವ ಸಮಯ ಬಂದಿದೆ.

  ''ಮಾಲ್ಗುಡಿ ಡೇಸ್' ಕನ್ನಡಕ್ಕೆ ಡಬ್ ಆಗಿ ಬರಲಿ' ಅಭಿಯಾನಕ್ಕೆ ನಿಮ್ಮ ಬೆಂಬಲ ಇದ್ಯಾ.?''ಮಾಲ್ಗುಡಿ ಡೇಸ್' ಕನ್ನಡಕ್ಕೆ ಡಬ್ ಆಗಿ ಬರಲಿ' ಅಭಿಯಾನಕ್ಕೆ ನಿಮ್ಮ ಬೆಂಬಲ ಇದ್ಯಾ.?

  ಮಹಾಭಾರತ ಪ್ರಸಾರವಾಗಲಿಲ್ಲ

  ಮಹಾಭಾರತ ಪ್ರಸಾರವಾಗಲಿಲ್ಲ

  ಈ ಹಿಂದೆ 'ಮಹಾಭಾರತ' ಧಾರಾವಾಹಿ ಕೂಡ ಕನ್ನಡಕ್ಕೆ ಡಬ್ ಆಗಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತದೆ ಎಂದು ಹೇಳಲಾಗಿತ್ತು. ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 13ರಿಂದ ಮಹಾಭಾರತ ಕನ್ನಡದಲ್ಲಿ ಪ್ರಸಾರವಾಗಬೇಕಿತ್ತು. ಆದರೆ ಡಬ್ಬಿಂಗ್ ವಿರೋಧಿಗಳ ಬೆದರಿಕೆಯಿಂದ ವಾಹಿನಿ ಡಬ್ಬಿಂಗ್ ಧಾರಾವಾಹಿಯ ಪ್ರಸಾರದಿಂದ ಹಿಂದೆ ಸರಿದಿತ್ತು. ಈಗ ಅದೇ ವಾಹಿನಿ ಡಬ್ಬಿಂಗ್ ಮಾಡದೆಯೇ ಇಂಗ್ಲಿಷ್ ಸಿನಿಮಾಗಳನ್ನು ಯಥಾವತ್ತು ಪ್ರಸಾರ ಮಾಡುತ್ತಿರುವುದು ಕೂಡ ಆಕ್ರೋಶಕ್ಕೆ ಕಾರಣವಾಗಿದೆ. 'ಮಾಲ್ಗುಡಿ ಡೇಸ್' ಕೂಡ ಇದೇ ರೀತಿ ಆಗಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

  ವಿಶ್ವದಾಖಲೆ ನಿರ್ಮಿಸಿದ 'ರಾಮಾಯಣ' ಧಾರಾವಾಹಿ: ಖುಷಿ ಹಂಚಿಕೊಂಡ ದೂರದರ್ಶನವಿಶ್ವದಾಖಲೆ ನಿರ್ಮಿಸಿದ 'ರಾಮಾಯಣ' ಧಾರಾವಾಹಿ: ಖುಷಿ ಹಂಚಿಕೊಂಡ ದೂರದರ್ಶನ

  ಜನಪ್ರಿಯ ತಾರಾಗಣ

  ಜನಪ್ರಿಯ ತಾರಾಗಣ

  ಮಾಸ್ಟರ್ ಮಂಜುನಾಥ್, ಗಿರೀಶ್ ಕಾರ್ನಾಡ್, ವೈಶಾಲಿ ಕಾಸರವಳ್ಳಿ, ಅನಂತ್ ನಾಗ್, ಬಿ. ಜಯಶ್ರೀ, ರಮೇಶ್ ಭಟ್, ಅರುಂಧತಿ ನಾಗ್ ಸೇರಿದಂತೆ ಅನೇಕ ಕನ್ನಡಿಗರು 'ಮಾಲ್ಗುಡಿ ಡೇಸ್' ಧಾರಾವಾಹಿಯಲ್ಲಿ ನಟಿಸಿದ್ದರು. ಇತರೆ ಭಾಷೆಗಳ ಖ್ಯಾತ ಕಲಾವಿದರೂ ಅಭಿನಯಿಸಿದ್ದರು.

  English summary
  Shankar Nag directed Malgudi Days serial will be telecasted in Kannada dubbing version soon on Zee Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X