ಶರಣ್ ನಟನೆ ನೋಡಿ 10 ರೂಪಾಯಿ ಕೊಟ್ಟಿದ್ದರಂತೆ ಆ ದಿಗ್ಗಜ ನಟ

Recommended Video

Weekend With Ramesh Season 4: ಶರಣ್ ನಟನೆ ನೋಡಿ 10 ರೂಪಾಯಿ ಕೊಟ್ಟಿದ್ದರಂತೆ ಆ ದಿಗ್ಗಜ ನಟ | FILMIBEAT KANNADA

ನಟ ಶರಣ್ ರಂಗಭೂಮಿ ಕುಟುಂಬದ ಹಿನ್ನೆಲೆಯಿಂದ ಬಂದವರು. ಅವರ ತಾತ ಗುಬ್ಬಿ ವೀರಣ್ಣ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ತಂದೆ ಸ್ವಂತ ನಾಟಕ ಕಂಪನಿಯನ್ನ ನಡೆಸುತ್ತಿದ್ದರು. ತಮ್ಮ ಮಕ್ಕಳನ್ನ ಸಿನಿಮಾ ಕಲಾವಿದರನ್ನ ಮಾಡಬೇಕು ಎಂಬ ಆಸೆಯಿಂದ ರಂಗಭೂಮಿಯನ್ನ ಬಿಟ್ಟು ಸಿನಿ ಇಂಡಸ್ಟ್ರಿಗೆ ಬಂದವರು.

ಇಂದು ಶರಣ್ ಮತ್ತು ಶ್ರುತಿ ಇಬ್ಬರು ಕನ್ನಡ ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನ ಹೊಂದಿರುವ ಪ್ರತಿಭಾನ್ವಿತ ಕಲಾವಿದರು. ಇತ್ತೀಚಿಗಷ್ಟೆ ನಟ ಶರಣ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಶರಣ್ ಗೆ ಮೊದಲ ಸಲ 10 ರೂಪಾಯಿ ಗೌರವಧನ ನೀಡಿದ ಹಿರಿಯ ನಟ ಯಾರೆಂಬ ಕುತೂಹಲಕಾರಿ ಸಂಗತಿ ಬಹಿರಂಗವಾಗಿದೆ.

ಆಗ ಶರಣ್ ಅವರಿಗೆ ಸುಮಾರು ಎರಡೂವರೆ ವರ್ಷ ವಯಸ್ಸು. ಹಾಸನದಲ್ಲಿ ಸಿದ್ದಲಿಂಗಯ್ಯ ಎಂಬ ನಾಟಕದಲ್ಲಿ ತಂದೆ ಜೊತೆ ಶರಣ್ ಕೂಡ ನಟಿಸಿದ್ದರು. ತಂದೆಗೆ ಶಿಷ್ಯನಾಗಿ ಶರಣ್ ಕಾಮಿಡಿ ಪಾತ್ರ ಮಾಡಿದ್ದರಂತೆ. ಈ ನಾಟಕದ ಬಳಿಕ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಅವರು ಶರಣ್ ಕೈಯಲ್ಲಿ 10 ನೀಡಿದರಂತೆ.

Sharan got 10 rupees from star actor

ಅಂದು ದ್ವಾರಕೀಶ್ ಅವರಿಂದ ಹತ್ತು ರೂಪಾಯಿ ಪಡೆದುಕೊಂಡು ಶರಣ್, ಇಂದು ಸ್ಯಾಂಡಲ್ ವುಡ್ ನಿರ್ಮಾಪಕರಿಂದ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುವ ನಟನಾಗಿ ಬೆಳೆದಿದ್ದಾರೆ.

ವಿಶೇಷ ಅಂದ್ರೆ ಶರಣ್ ಅವರ ಸಹೋದರಿ ನಟಿ ಶ್ರುತಿ ಅವರಿಗೂ ನಾಯಕಿಯಾಗಿ ಮೊದಲ ಅವಕಾಶ ನೀಡಿದ್ದು ಕೂಡ ದ್ವಾರಕೀಶ್ ಎಂಬುದು ಗಮನಾರ್ಹ. ದ್ವಾರಕೀಶ್ ನಿರ್ಮಾಣದ ಶ್ರುತಿ ಸಿನಿಮಾದಲ್ಲಿ ಹೆಸರು ಬದಲಿಸಿಕೊಂಡ ಶ್ರುತಿ, ಅಲ್ಲಿಂದ ಕನ್ನಡದ ಟಾಪ್ ನಟಿಯಾಗಿ ಬೆಳೆದಿದ್ದು ಈಗ ಇತಿಹಾಸ.

More from Filmibeat

English summary
Weekend with ramesh 4: Kannada actor sharan participated in Weekend with ramesh 4. Kannada producer and actor dwarakish was give 10 rupees surprise gift to sharan after watching his acting in drama.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X