ಗೂಳಿ ಮೇಲೆ ನೋಡಿ 'ರಾಜ ರಾಜೇಂದ್ರ'ನ ಕಸರತ್ತು
ಕನ್ನಡ ಕಿರುತೆರೆಯಲ್ಲಿ ಮೂಡಿಬರುತ್ತಿರುವ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಸುವರ್ಣ ವಾಹಿನಿಯ 'ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ' ಕಾರ್ಯಕ್ರಮವೂ ಒಂದು. ಕಿರುತೆರೆಯ ವೀಕ್ಷಕರಿಗೆ ಮನೋರಂಜನೆಯ ಮಹಾಪೂರವನ್ನೇ ಹರಿಸುವ ಸದಭಿರುಚಿಯ ಕಾರ್ಯಕ್ರಮವಿದು.
ಸುವರ್ಣ ವಾಹಿನಿಯು ಮೊದಲಿನಿಂದಲೂ ಈ ರೀತಿಯ ವಿಭಿನ್ನ ಕಾರ್ಯಕ್ರಮಗಳನ್ನು ವೀಕ್ಷಕರಿಗೆ ಉಣಬಡಿಸುತ್ತಲೇ ಬರುತ್ತಿದೆ. ಈಗ ಅದೇ ಹಾದಿಯಲ್ಲಿ ಮುಂದುವರೆದು ಇತ್ತೀಚೆಗೆ ಪ್ರಾರಂಭಿಸಿದ ಸೆಲೆಬ್ರಿಟಿ ಗೇಮ್ ಶೋ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ.

ಈ ಗೇಮ್ ಶೋನಲ್ಲಿ ಪ್ರತಿ ಸಂಚಿಕೆಯಲ್ಲೂ ವಿವಿಧ ಸೆಲೆಬ್ರಿಟಿಗಳ ಧಮಾಕಾ! ಈ ಮೊದಲು ಬಿಗ್ ಬಾಸ್ ಸೀಸನ್ 2 ಸ್ಪರ್ಧಿಗಳು, ಅಭಿನೇತ್ರಿ ಚಿತ್ರ ತಂಡ, ಬೆಂಗಳೂರು 23 ಚಲನಚಿತ್ರ ತಂಡ, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್-3 ಫೈನಲಿಸ್ಟ್ ಗಳು ಹಾಗೂ ಮಿಲನ & ಮಧುಬಾಲ ಧಾರಾವಾಹಿಯ ಕಲಾವಿದರು ಭಾಗವಹಿಸಿದ್ದರು.
ಪ್ರತಿ ಸಂಚಿಕೆಯಲ್ಲೂ ವಿವಿಧ ಸೆಲೆಬ್ರಿಟಿಗಳು ಮತ್ತು ಮನೋರಂಜನೆಯ ವೈಖರಿ ಎಲ್ಲವೂ ವಿಭಿನ್ನ. ಈ ಕಾರ್ಯಕ್ರಮದ ವಿಶೇಷ ಎಂದರೆ ಹಾಸ್ಯಭರಿತವಾಗಿರುವ, ಯಾವುದೇ ಚೌಕಟ್ಟುಗಳು ಇಲ್ಲದ ರಿಯಾಲಿಟಿ ಶೋ ಇದು.

ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಕಾರ್ಯಕ್ರಮದ ಈ ಭಾನುವಾರದ (ಫೆ.1) ಸಂಚಿಕೆಯ ಸೆಲೆಬ್ರಿಟಿಗಳು 'ರಾಜರಾಜೇಂದ್ರ' ಸಿನಿಮಾದ ನಾಯಕ ನಟ ಶರಣ್, ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ, ಕುರಿ ಪ್ರತಾಪ್ ಹಾಗೂ ತನ್ಮಯ ಈ ವಾರದ ಅತಿಥಿಗಳು. ಶರಣ್ ಎಂದರೆ ಕಾಮಿಡಿ ಎನ್ನುವುದು ಎಲ್ಲರಿಗೂ ಗೊತ್ತು ಆದರೆ ಅವರೂ ನಕ್ಕೂ, ನಮ್ಮ ಅನು ಮತ್ತು ಶೈನ್ ಕಿರಿಕ್‍ನ ಸ್ವಲ್ಪ ಅಡ್ಜಸ್ಟ್ ಮಾಡ್ಕೊಂಡು ನಮ್ಮ ವೀಕ್ಷಕರನ್ನು ನಕ್ಕು ನಗಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜರಾಜೇಂದ್ರ ಚಲನಚಿತ್ರ ತಂಡದ ಅಭಿಪ್ರಾಯದಂತೆ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಎಂಜಾಯ್ ಮಾಡಬಹುದು. ಮಿಸ್ ಮಾಡ್ಕೊಳ್ದೆ ನೋಡಿ.
ಇಷ್ಟು ದಿನದ ಬಿಜಿ ಶೆಡುಲ್ ನಡುವೆ ನಮಗೂ ಒಂದು ಮನೋರಂನೆ ದೊರೆಯಿತು. ಈ ಗೇಮ್ ಶೋ ಇತರೆ ಗೇಮ್ ಶೋಗಳಿಗಿಂತ ವಿಭಿನ್ನವೆನಿಸಿದೆ ಏಕೆಂದರೆ ಇದರಲ್ಲಿ ಯಾವುದೇ ಕಟ್ಟುಪಾಡುಗಳಿಲ್ಲದ, ಚೌಕಟ್ಟುಗಳಿಲ್ಲದೇ ಆಟ ಆಡಬಹುದು ಕಾರಣ ನಾವೆಲ್ಲರೂ ಎಂಜಾಯ್ ಮಾಡಿ ವೀಕ್ಷಕರಿಗೂ ಎಂಜಾಯ್ ಮೆಂಟ್ ನೀಡಬಹುದು.

ಇದರಲ್ಲಿ ಬಳಸುವ ಪ್ರಾಪರ್ಟಿಗಳು ವಿಭಿನ್ನ, ಮೊದಲ ಸುತ್ತಿನಲ್ಲಿ ಸುತ್ತಿಗೆ ಆಕಾರದ ವಸ್ತು ಬಳಸಿದ್ದು ಮೊಟ್ಟೆ ಬಾಯಲಿಟ್ಟು ಉತ್ತರ ನೀಡುವ ಮೋಜು. ಎರಡನೇ ಸುತ್ತಿನಲ್ಲಿನ ಗೂಳಿ ಇದು ಸುಂಟರಗಾಳಿಯ ಆಟ ಹಾಗೂ ಗೋಡೆ ತುದಿಯಲ್ಲಿ ನಿಂತು ಉತ್ತರಿಸುವ ಟೆನ್ಷನ್ ಮಜವಾಗಿತ್ತು. ಹೀಗೆ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಕಾರ್ಯಕ್ರಮ ಸಂಪೂರ್ಣ ಹಾಸ್ಯಮಯವಾದ ಕಾರ್ಯಕ್ರಮ ಎಂದರೆ ಅತಿಶಯೋಕ್ತಿಯಾಗಲಾರದು.
ಹಾರ್ಟ್ ನ ಕೂಲ್ ಆಗಿ ಇಟ್ಕೊಳ್ಳಿ, ಲೈಫ್ ನ ಸಿಂಪಲ್ಲಾಗಿ ಇಟ್ಕೊಳ್ಳಿ ಅನು ಮತ್ತು ಶೈನ್ ಕಿರಿಕ್‍ನ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಅಂತಲೇ ಶುರು ಮಾಡೋ ನಮ್ಮ ನಿರೂಪಕರು ಅನುಶ್ರೀ ಮತ್ತು ಶೈನ್ ಶೆಟ್ಟಿಯ ನಗುಮೊಗದ ನಿರೂಪಣೆಯನ್ನು ತಪ್ಪದೇ ವೀಕ್ಷಿಸಲು ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ಸುವರ್ಣ ವಾಹಿನಿಯನ್ನು ಟ್ಯೂನ್ ಮಾಡಿ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











