For Quick Alerts
  ALLOW NOTIFICATIONS  
  For Daily Alerts

  ವೀಕೆಂಡ್ ವಿತ್ ರಮೇಶ್ ಸಾಧಕರ ಕುರ್ಚಿ ಮೇಲೆ ಕಾಮಿಡಿ ಸ್ಟಾರ್ ಶರಣ್

  |
  Weekend with Ramesh Season 4: ವೀಕೆಂಡ್ ವಿಥ್ ರಮೇಶ್ ನ ಮುಂದಿನ ಅತಿಥಿ ಕನ್ನಡದ ಕಾಮಿಡಿ ಸ್ಟಾರ್

  ಸ್ಯಾಂಡಲ್ ವುಡ್ ನ ಖ್ಯಾತ ಕಾಮಿಡಿ ನಟ ಶರಣ್ ವೀಕೆಂಡ್ ವಿತ್ ರಮೇಶ್ ಸೀಸನ್ 4 ನ ಸಾಧರಕ ಸೀಟ್ ಮೇಲೆ ಕುಳಿತುಕೊಳ್ಳಲಿದ್ದಾರೆ. 1996ರಲ್ಲಿ 'ಪ್ರೇಮ ಪ್ರೇಮ ಪ್ರೇಮ' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶರಣ್ ಇಂದು ಚಂದನವನದ ಕಾಮಿಡಿ ಸ್ಟಾರ್ ನಟನಾಗಿ ಖ್ಯಾತಿಗಳಿಸಿದ್ದಾರೆ.

  ಸ್ಟಾರ್ ನಟರ ಚಿತ್ರಗಳಲ್ಲಿ ಕಾಮಿಡಿ ನಟನಾಗಿ ಕಾಣಿಸಿಕೊಂಡು ಚಿತ್ರ ಪ್ರೇಕ್ಷಕರನ್ನು ನಗೆ ಕಡಲಲ್ಲಿ ತೇಲಿಸುತ್ತಿದ್ದ ಶರಣ್ ಈಗ ನಾಯಕ ನಟನಾಗಿ ಮಿಂಚುತ್ತಿದ್ದಾರೆ. ಬ್ಲಾಕ್ ಬಸ್ಟರ್ 'ಅಧ್ಯಕ್ಷ' ಸಿನಿಮಾ ಶರಣ್ ಸಿನಿ ಜೀವನಕ್ಕೆ ದೊಡ್ಡ ಬ್ರೇಕ್ ತಂದುಕೊಂಡ ಸಿನಿಮಾವಾಗಿದೆ.

  ಕೊನೆಗೂ ಸಾಧಕರ ಕುರ್ಚಿಯಲ್ಲಿ ಕುಳಿತ ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿ

  ಶರಣ್ ಸುಮಾರು 100ಕ್ಕು ಹೆಚ್ಚು ಸಿನಿಮಾಗಳಲ್ಲಿ ಸಹಕಲಾವಿದನಾಗಿ, ಕಾಮಿಡಿ ನಟನಾಗಿ ಕಾಣಿಸಿಕೊಂಡಿದ್ದಾರೆ. 'ರ್ಯಾಂಬೊ' ಚಿತ್ರದಿಂದ ನಾಯಕನಾಗಿ ಮಿಂಚುತ್ತಿರುವ ಶರಣ್ ವೀಕೆಂಡ್ ವಿತ್ ರಮೇಶ್ ಸಾಧಕರ ಕುರ್ಚಿಯಲ್ಲಿ ಕುಳಿತು ಮತ್ತಷ್ಟು ವಿಚಾರಗಳನ್ನು, ಸಿಹಿ ಕಹಿ ಅನುಭವನ್ನುಗಳನ್ನು ಹಂಚಿಕೊಳ್ಳಲಿದ್ದಾರೆ.

  ಚಿತ್ರರಂಗದಲ್ಲಿ ಸುಮಾರು 24ವರ್ಷಗಳಿಂದ ನಿರಂತರ ಕಲಾಸೇವೆ ಮಾಡಿಕೊಂಡು ಬಂದಿರುವ ಶರಣ್ ಅವರನ್ನು ಸಾಧಕರ ಕುರ್ಚಿಯಲ್ಲಿ ನೋಡಲು ಅನೇಕರು ಕಾಯುತ್ತಿದ್ದಾರೆ. ಶರಣ್ ಸಂಚಿಕೆ ಜೂನ್ 9ರಂದು ಪ್ರಸಾರವಾಗುವ ಸಾಧ್ಯತೆ ಇದೆ. ಈ ಬಾರಿ ಉದ್ಯಮ ಕ್ಷೇತ್ರದ ಸಧಕರಾದ ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿ ಸಾಧಕರ ಸೀಟಿನಲ್ಲಿ ಕುಳಿತುಕೊಳ್ಳಲಿದ್ದಾರೆ. ಜೂನ್ 8 ರಂದು ಖ್ಯಾತ ನಿರ್ದೇಶಕ ನಾಗಾಭರಣ ಸಾಧಕರ ಸೀಟಿನಲ್ಲಿ ಕುಳಿತುಕೊಳ್ಳಲಿದ್ದಾರೆ.

  English summary
  Kannada famous comedy actor Sharan will be next guest of Zee Kannada channels Weekend With Ramesh 4. This week may be Sudharanaraya Murthi guest of Weekend With Ramesh 4.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X