For Quick Alerts
  ALLOW NOTIFICATIONS  
  For Daily Alerts

  ವೈವಾಹಿಕ ಜೀವನಕ್ಕೆ ಕಾಲಿಟ್ಟ 'ಪಾರು' ಧಾರಾವಾಹಿಯ ನಟ ಶರತ್ ಪದ್ಮನಾಭ್

  |

  'ಪಾರು' ಧಾರಾವಾಹಿ ಖ್ಯಾತಿಯ ಶರತ್ ಪದ್ಮನಾಭ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ದಿವ್ಯಶ್ರೀ ಎಂಬುವವರೊಂದಿಗೆ ಶರತ್ ವಿವಾಹ ಬಂಧನಕ್ಕೆ ಒಳಾಗಾಗಿದ್ದಾರೆ. 'ಗಟ್ಟಿಮೇಳ' ಖ್ಯಾತಿಯ ರಕ್ಷ್, ಹಿಟ್ಲರ್ ಕಲ್ಯಾಣ ಖ್ಯಾತಿಯ ದಿಲೀಪ್ ರಾಜ್, ಅನಿರುದ್ಧ್ ಜಟ್ಕರ್ ಸೇರಿದಂತೆ ಹಲವು ಕಲಾವಿದರು ಮದುವೆಯಲ್ಲಿ ಭಾಗಿಯಾಗಿ ಶರತ್ ಮತ್ತು ದಿವ್ಯಶ್ರೀ ದಂಪತಿಗೆ ಶುಭ ಕೋರಿದ್ದಾರೆ.

  ಶರತ್ ಪದ್ಮಾನಾಭ್ ಧಾರಾವಾಹಿ ಮಾತ್ರವಲ್ಲದೇ ಕೆಲವು ಸಿನಿಮಾಗಳಲ್ಲೂ ಅಭಿನಯಿಸಿರುವ ಶರತ್, 2022ರ ನವೆಂಬರ್ 26ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶರತ್ ಮನೆಯವರ ಸಮ್ಮುಖದಲ್ಲಿ ಸಿಂಪಲ್ ಆಗಿ ಉಂಗುರ ಬದಲಾಯಿಸಿಕೊಂಡಿದ್ದರು. ಇದೀಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

  ಬಹುಕಾಲದ ಗೆಳೆಯನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಪ್ರಿಯಾಂಕಾ ಕಾಮತ್ಬಹುಕಾಲದ ಗೆಳೆಯನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಪ್ರಿಯಾಂಕಾ ಕಾಮತ್

  ಶರತ್ ಮತ್ತು ದಿವ್ಯಶ್ರೀ ವಿವಾಹ ಸಮಾರಂಭ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ನಟ ಶರತ್ ಪದ್ಮಾನಾಭ್ ಕೂಡ ನಿಶ್ಚಿತಾರ್ಥದ ಫೋಟೋವನ್ನಾಗಲಿ, ಮದುವೆ ಬಗ್ಗೆಯಾಗಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿಲ್ಲ. ಇವರಿಬ್ಬರದ್ದು ಅರೇಂಜ್ಡ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಎಂಬುದರ ಕುರಿತು ಮಾಹಿತಿ ಬಹಿರಂಗವಾಗಿಲ್ಲ.

  'ಪುಟ್ಟಮಲ್ಲಿ' ಶರತ್ ಮೊದಲ ಸೀರಿಯಲ್

  'ಪುಟ್ಟಮಲ್ಲಿ' ಶರತ್ ಮೊದಲ ಸೀರಿಯಲ್

  ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಶರತ್ ಪದ್ಮಾನಾಭ್, ಫ್ರಿಲಾನ್ಸ್ ಗ್ರಾಫಿಕ್ ಡಿಸೈನರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ನಂತರ ನಟನೆಯ ಬಗ್ಗೆ ಏನೂ ಅರಿವಿಲ್ಲದಿದ್ದರೂ ಅದೃಷ್ಟ ಪರೀಕ್ಷೆಗಿಳಿದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ದೀಲಿಪ್ ರಾಜ್ ಪ್ರೊಡಕ್ಷನ್ ಹೌಸ್ ನ 'ಪುಟ್ಟಮಲ್ಲಿ ' ಧಾರಾವಾಹಿಯಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ದಿನಗಳ ಕಾಲ ವರ್ಕ್ ಶಾಪ್ ನಡೆಸಿ, ಬೇಸಿಕ್ ನಟನೆಯನ್ನು ಕಲಿತುಕೊಂಡರು. ನಂತರ 'ನೀವು ಕರೆಮಾಡಿದ ಚಂದಾದಾರರು ಸಿನಿಮಾದಲ್ಲೂ ನಟಿಸಿದರು.

  ಪ್ರೇಕ್ಷಕರ ಮನಗೆದ್ದ ನಟ

  ಪ್ರೇಕ್ಷಕರ ಮನಗೆದ್ದ ನಟ

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿ ಅತ್ಯುತ್ತಮ ತಾರಾಗಣ, ರೋಚಕ ತಿರುವು, ಅದ್ಭುತ ಕಥೆಯೊಂದಿಗೆ ಅಪಾರ ವೀಕ್ಷಕರ ಮನಗೆಲ್ಲುವ ಮೂಲಕ ನಂಬರ್ 1 ಸೀರಿಯಲ್ ಆಗಿ ಹೊರಹೊಮ್ಮಿದೆ. ಈ ಧಾರಾವಾಹಿಯಲ್ಲಿ ಶರತ್ ಪದ್ಮನಾಭ್ ನಾಯಕ ಆದಿತ್ಯನಾಗಿ ನಟಿಸುವ ಮೂಲಕ ಜನಮನಗೆದ್ದಿದ್ದಾರೆ. ಈ ಧಾರಾವಾಹಿ ಕೂಡ ದೀಲಿಪ್ ರಾಜ್ ಪ್ರೊಡಕ್ಷನ್ ಹೌಸ್ ಅಡಿ ಮೂಡಿಬರುತ್ತಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದೆ. 'ಪಾರು'ವಿನಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ವಿನಯ್ ಪ್ರಸಾದ್ 'ಅಖಿಲಾಂಡೇಶ್ವರಿ' ಎಂಬ ಪಾತ್ರದಲ್ಲಿ ಮನೋಜ್ಞವಾಗಿ ನಟಿಸುವ ಮೂಲಕ ಧಾರಾವಾಹಿಯ ಘನತೆ ಹೆಚ್ಚಿಸಿದ್ದಾರೆ. ಅಖಿಲಾಂಡೇಶ್ವರಿ ಮಗನ ಪಾತ್ರ ಮಾಡಿರುವ ಶರತ್ ಪದ್ಮನಾಭ್ ಕೂಡ ವೀಕ್ಷಕರ ಹೃದಯ ಗೆದ್ದಿದ್ದಾರೆ.

  ಸಿದ್ದು ಮೂಲಿಮನಿ ಮದುವೆ

  ಸಿದ್ದು ಮೂಲಿಮನಿ ಮದುವೆ

  'ಪಾರು' ಧಾರಾವಾಹಿಯಲ್ಲಿ ಶರತ್ ಪದ್ಮನಾಭ್ ಅವರ ಸಹೋದರನ ಪಾತ್ರದಲ್ಲಿ ನಟಿಸಿರುವ ಸಿದ್ದು ಮೂಲಿಮನಿ ಕೂಡ ಸದ್ಯದಲ್ಲೇ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಫೆಬ್ರವರಿಯಲ್ಲಿ ಸಿದ್ದು ಮೂಲಿಮನಿ ಹಾಗೂ 'ಗಟ್ಟಿಮೇಳ' ಧಾರಾವಾಹಿ ಖ್ಯಾತಿಯ ಪ್ರಿಯಾ ಜೆ ಆಚಾರ್ ಜೊತೆ ಮದುವೆಯಾಗಲಿದ್ದಾರೆ. ಈ ಜೋಡಿ 2022ರ ನವೆಂಬರ್ 20ರಂದು ದಾವಣಗೆರೆಯಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿತ್ತು. ಡ್ಯಾನ್ಸ್ ಶೋವೊಂದರಲ್ಲಿ ಪರಿಚಿತರಾದ ಸಿದ್ದು ಮತ್ತು ಪ್ರಿಯಾ ನಂತರ 'ಧಮಾಕ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಶುರುವಾಗಿದ್ದು, ಇದೀಗ ಗುರುಹಿರಿಯರ ಒಪ್ಪಿಗೆ ಪಡೆದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.

  English summary
  Sharath Padmanabh, A Paaru Serial Actor, Married Divyashre,Know More.
  Monday, January 23, 2023, 18:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X