Sharath Padmanabh: ಗ್ರಾಫಿಕ್ಸ್ ಡಿಸೈನರ್ ಆಗಿದ್ದವ 'ಅರಸನಕೋಟೆ'ಯ ಆದಿಯಾಗಿದ್ದು ಹೇಗೆ?

By ಅನಿತಾ ಬನಾರಿ

ಸಿಕ್ಕ ಮೊದಲ ಅವಕಾಶವನ್ನೇ ಉಪಯೋಗಿಸಿ ತಮ್ಮ ಅದೃಷ್ಟವನ್ನೇ ಬದಲಾಯಿಸಿಕೊಂಡ ಅದೆಷ್ಟೋ ಕಥೆಗಳು ನಮ್ಮ ಮುಂದಿವೆ. ಅಂಥದ್ದೇ ಒಂದು ಕಥೆಯನ್ನು ಇಂದು ನಾವು ಹೇಳಲಿದ್ದೇವೆ. ಅದು 'ಪಾರು' ಧಾರಾವಾಹಿಯ ನಾಯಕ ಶರತ್ ಪದ್ಮನಾಭ ಅವರದು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಎಂಬ ಅದ್ಭುತ ಧಾರಾವಾಹಿಯಲ್ಲಿ ನಾಯಕನಾಗಿ ಜನಮನ ಗೆದ್ದಿರುವ ಶರತ್ ಪದ್ಮನಾಭ ಅವರು ಮೂಲತಃ ಚಿಕ್ಕಮಗಳೂರಿನವರು.

ಇಂಜಿನಿಯರಿಂಗ್ ಪದವಿಯ ನಂತರ ಗ್ರಾಫಿಕ್ ಡಿಸೈನರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದ ಶರತ್ ಕೆಲವು ಫೇಸ್ ಬುಕ್ ಫೋಟೋಗಳನ್ನು ನೋಡಿದ ನಿರ್ದೇಶಕ ದಿಲೀಪ್ ರಾಜ್, ಶರತ್ ಅವರನ್ನು ಸಂಪರ್ಕಿಸಿ ನಟನೆಯ ಆಫರ್ ಇಟ್ಟಾಗ ಖುಷಿಯಿಂದ ಒಪ್ಪಿಕೊಂಡಿದ್ದರು.

ಜಸ್ಟ್ ಮಾತ್ ಮಾತಲ್ಲಿ ಎಂದ ಹ್ಯಾಂಡ್‌ಸಮ್ ಹುಡುಗ

ಹಿಂದೆಂದೂ ಆ್ಯಕ್ಟಿಂಗ್ ಮಾಡದ, ನಟನೆಯ ಬಗ್ಗೆ ಯೋಚನೆಯೂ ಇಲ್ಲದ ಶರತ್ ಧಾರಾವಾಹಿಗಳಲ್ಲಿ ನಟಿಸಲು ಒಪ್ಪಿಕೊಂಡ ನಂತರ 15 ದಿನಗಳ ಕಾಲ ನಟನ ತರಬೇತಿಯನ್ನು ಪಡೆದರು. ನಟನೆ ಎಂದರೆ ಏನು ಎತ್ತ ಎಂಬುದು ಒಂದಷ್ಟು ಕಲಿತ ನಂತರವೇ ಧಾರಾವಾಹಿಗೆ ಕಾಲಿಟ್ಟ ಶರತ್ ಇಂದು ಅರಸನಕೋಟೆ ಅಖಿಲಾಂಡೇಶ್ವರಿ ಮಗ ಆದಿತ್ಯ ಆಗಿ ಫೇಮಸ್ಸು. ಮೊದಲಿಗೆ ನಿರ್ದೇಶಕ ದಿಲೀಪ್ ರಾಜ್ ಅವರ ನಿರ್ದೇಶನದಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜಸ್ಟ್ ಮಾತ್ ಮಾತಲ್ಲಿ' ಎಂಬ ಧಾರಾವಾಹಿಯಲ್ಲಿ ನಾಯಕನಾಗಿ ಕಿರುತೆರೆಗೆ ಕಾಲಿಟ್ಟರು.

Sharath Padmanabh who was working as a graphic designer become an actor

'ಜಸ್ಟ್ ಮಾತ್ ಮಾತಲ್ಲಿ' ಧಾರಾವಾಹಿಯ ನಂತರ ಅದೇ ವಾಹಿನಿಯ ಮತ್ತೊಂದು ಧಾರಾವಾಹಿಯಲ್ಲಿ ನಟಿಸಿದ್ದರು. 'ಪುಟ್ಮಲ್ಲಿ' ಎಂಬ ಸೀರಿಯಲ್‌ನಲ್ಲೂ ನಾಯಕನಾಗಿ ನಟಿಸಿದ ಶರತ್ ಮನೋಜ್ಞ ನಟನೆಯ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಇನ್ನೂ ಹತ್ತಿರವಾದರು.

ಹೆಸರು ತಂದು ಕೊಟ್ಟಿದ್ದು ಆದಿ ಪಾತ್ರ

ಈ ರೀತಿ ಸಿಕ್ಕ ಅವಕಾಶವನ್ನು ತಕ್ಷಣ ಉಪಯೋಗಿಸಿ ಆಡಿಶನ್‌ಗೆ ಕರೆದಾಗ ಹೋಗಿ ಅಲ್ಲಿ ತಮ್ಮ ಅಭಿನಯ ಸಾಮರ್ಥ್ಯದಿಂದ ಗೆದ್ದು, ನಂತರ ತರಬೇತಿ ಪಡೆದು ಎರಡು ಧಾರಾವಾಹಿಗಳಲ್ಲಿ ನಾಯಕನಾಗಿ ನಟಿಸಿದ್ದರು. ಆ ಬಳಿಕ ಪ್ರಸ್ತುತ ಸೂಪರ್ ಹಿಟ್ ಧಾರಾವಾಹಿ 'ಪಾರು'ವಿನಲ್ಲಿ ಅರಸನಕೋಟೆ ಅಖಿಲಾಂಡೇಶ್ವರಿಯವರ ಪುತ್ರ ಆದಿಯಾಗಿ ಧಾರಾವಾಹಿಯ ನಾಯಕನಾಗಿ ಮಿಂಚುತ್ತಿದ್ದಾರೆ. ಈಗಂತೂ ಇವರು ಎಲ್ಲರಿಗೂ ಆದಿ ಪಾತ್ರದ ಮೂಲಕವೇ ಎಂದೇ ಚಿರಪರಿಚಿತರು ಹೌದು.

Sharath Padmanabh who was working as a graphic designer become an actor

ಅಷ್ಟೇ ಅಲ್ಲದೆ 'ನೀವು ಕರೆ ಮಾಡಿರುವ ಚಂದಾದಾರರು' ಎಂಬ ಸಿನಿಮಾದಲ್ಲಿಯೂ ನಟಿಸಿರುವ ಶರತ್ ಅವರಿಗೆ ಈಗಾಗಲೇ ಚಿತ್ರಗಳ ಆಫರ್ ಬರುತ್ತಿದ್ದು ಕಥೆ ಚೆನ್ನಾಗಿಲ್ಲವೆಂದು ಸುಮ್ಮನಿದ್ದಾರೆ. ಆದರೆ ಅದ್ಭುತ ಕಥೆ ಸಿಕ್ಕರೆ, ಖಂಡಿತವಾಗಿಯೂ ನಟಿಸುವ ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೂ ಕಾಲಿಟ್ಟಿರುವ ಇವರು ಕಿರುತೆರೆಯಲ್ಲಿ ಬಹಳ ಬ್ಯುಸಿ ನಟರಾಗಿದ್ದಾರೆ. ಒಟ್ಟಿನಲ್ಲಿ ನಟನೆಯ ಗಂಧ ಗಾಳಿ ತಿಳಿಯದಿದ್ದರೂ, 15 ದಿನಗಳ ತರಬೇತಿಯಿಂದ ಅದ್ಭುತವಾಗಿ ನಟಿಸಿ ಜನಮನ ಗೆದ್ದಿರುವ ಇವರು ಸಿಕ್ಕ ಮೊದಲ ಅವಕಾಶವನ್ನು ಅದ್ಭುತವಾಗಿ ಉಪಯೋಗಿಸಿರುವುದರ ಉತ್ತಮ ಉದಾಹರಣೆ ಎಂದರೆ ತಪ್ಪಾಗಲಾರದೇನೋ!

More from Filmibeat

English summary
Do you know how Sarath Padmanabha, who was working as a graphic designer, became an actor, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X