ಮುಚ್ಚಿಕೊಂಡು ನಿನ್ನ ಕೆಲಸ ನೋಡಿಕೋ ಎಂದ ರಿಷಿಕಾ
ರೋಹನ್ ಗೌಡ ಅವರು ಬ್ರಹ್ಮಾಂಡ ಶರ್ಮಾ ವಿರುದ್ಧ ಯಾಕೋ ಏನೋ ಒಂದು ಕಣ್ಣು ಇಟ್ಟಿದ್ದಾರೆ. ಈ ಬಾರಿ ನಾಮಿನೇಷನ್ ಸುತ್ತಿನಲ್ಲಿ ಶರ್ಮಾ ಅವರ ಹೆಸರನ್ನು ಸೂಚಿಸಿದರು. ಶರ್ಮಾ ಅವರು ಪ್ರತಿವಾರ ನನ್ನನ್ನು ಕಳುಹಿಸಿಬಿಡಿ ಕಳುಹಿಸಿಬಿಡಿ ಎಂದು ಹೇಳುತ್ತಿದ್ದಾರೆ. ಪ್ರತಿವಾರ ಗೇಟ್ ಬಾಗಿಲು ತೆಗೆದಿರುತ್ತಾರೆ, ಅವರೇ ಹೋಗಬಹುದಲ್ವಾ. ಕ್ಯಾಮೆರಾ ಮುಂದೆ ಬಂದು ಈ ಡ್ರಾಮಾ ಯಾಕೆ ಎಂದು ಮನೆಯ ಸದಸ್ಯರ ಜೊತೆ ಹೇಳಿಕೊಂಡರು.
ಬ್ರಹ್ಮಾಂಡ ಶರ್ಮಾ ಅವರು ಮಹಿಳೆಯರಿಗೆ ಗೌರವ ಕೊಡುತ್ತಿಲ್ಲ. ಮಧ್ಯಾಹ್ನದ ಹೊತ್ತು ನಿದ್ದೆ ಮಾಡುತ್ತಿರುವ ಆರೋಪಗಳನ್ನು ಮಾಡಲಾಯಿತು. ಹಾಗಾಗಿ ಈ ಬಾರಿ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಅವರು ನಾಮಿನೇಟ್ ಆಗಿದ್ದಾರೆ.

ಸಿಂಗ್ ಅವರು ಹೆಚ್ಚಾಗಿ ಇಂಗ್ಲಿಷ್ ಬಳಸುತ್ತಿರುವ ಬಗ್ಗೆ ಅನುಶ್ರೀ ಎಚ್ಚರಿಸಿದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ರಿಷಿಕಾ ಸಾಕು ಮುಚ್ಚಿಕೊಂಡು ಕುಳಿತುಕೊಳ್ಳಮ್ಮ. ಬೆಳಗ್ಗೆಯಿಂದ ಇಂಗ್ಲಿಷ್ ನಲ್ಲೇ ಮಾತನಾಡುತ್ತಿದ್ದೇವೆ Mind your business ಎಂದರು.
ಇದು ಬಿಗ್ ಬಾಸ್ ಆಜ್ಞೆ ಎಂದು ಅನುಶ್ರೀ ಹೇಳಿದ್ದಕ್ಕೆ, ಮುಚ್ಚಿಕೊಂಡು ನಿನ್ನ ಕೆಲಸ ನೋಡಿಕೋ ಎಂದರು. ಆಕೆಯ ಭಾಷೆಯಲ್ಲಿ ಕೆಟ್ಟ ಪದವೊಂದೂ ನುಗ್ಗಿ ಬಂತು. ಆದರೆ ಅದನ್ನು ಮ್ಯೂಟ್ ಮಾಡಲಾಗಿತ್ತು. ಪದೇ ಪದೇ ಬಿಗ್ ಬಾಸ್ ನನಗೆ ದೇವರು ಎನ್ನುವ ಅವರು ಈ ರೀತಿ ಡಬಲ್ ಗೇಮ್ ಆಡುತ್ತಿರುವುದು ಎಲ್ಲರು ಅನುಮಾನದಿಂದ ನೋಡುವಂತಾಗಿದೆ.


Click it and Unblock the Notifications











