'ಬಿಗ್ ಬಾಸ್'ನಲ್ಲಿ ಶಾರ್ಮಿಳಾ ಮಾಂಡ್ರೆ?: ಸತ್ಯ ತಿಳಿಸಿದ ನಟಿ

Recommended Video

Bigg Boss season 07 : 'ಬಿಗ್ ಬಾಸ್'ನಲ್ಲಿ ಶಾರ್ಮಿಳಾ ಮಾಂಡ್ರೆ?: ಸತ್ಯ ತಿಳಿಸಿದ ನಟಿ

ಪ್ರತಿ ಬಾರಿ ಬಿಗ್ ಬಾಸ್ ಕಾರ್ಯಕ್ರಮ ಶುರು ಆದಾಗಲೂ ಅವ್ರು ಸ್ಪರ್ಧಿ ಆಗುತ್ತಾರೆ, ಇವ್ರು ಆಗುತ್ತಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿದೆ. ಇದೀಗ ಮತ್ತೆ ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ಪ್ರಾರಂಭ ಆಗುತ್ತಿದ್ದು, ಈ ಬಾರಿಯೂ ಅಂತಹ ಸುದ್ದಿಗಳು ಶುರು ಆಗಿವೆ.

ಕನ್ನಡದ ಚಿತ್ರ ನಟಿ ಶಾರ್ಮಿಳಾ ಮಾಂಡ್ರೆ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 7 ಕಾರ್ಯಕ್ರಮದ ಸ್ಪರ್ಧಿ ಆಗುತ್ತಾರೆ ಎನ್ನುವ ಸುದ್ದಿ ನಿನ್ನೆ ಬಂದಿತ್ತು. ಹಾಸ್ಯ ನಟ ಕುರಿ ಪ್ರತಾಪ್ ಕೂಡ ಈ ಬಾರಿ ಬಿಗ್ ಮನೆಗೆ ಹೋಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಪಕ್ಕಾ ಎನ್ನುವ ಸುದ್ದಿ ಇತ್ತು.

ಬಿಗ್ ಬಾಸ್ ಮನೆಗೆ ತಾವು ಹೋಗಿದ್ದಾರೆ ಎಂಬ ಸುದ್ದಿ ನಟಿ ಶಾರ್ಮಿಳಾ ಮಾಂಡ್ರೆ ಕಣ್ಣಿಗೆ ಬಿದ್ದಿದು, ಕೂಡಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಸೋ‍ಷಿಯಲ್ ಮೀಡಿಯಾದಲ್ಲಿ ಸತ್ಯವನ್ನು ತಿಳಿಸಿದ್ದಾರೆ.

ಇದು ದೊಡ್ಡ ಜೋಕ್ ಎಂದ ಶರ್ಮಿಳಾ

ಇದು ದೊಡ್ಡ ಜೋಕ್ ಎಂದ ಶರ್ಮಿಳಾ

ಬಿಗ್ ಬಾಸ್ ಕಾರ್ಯಕ್ರಮಕ್ಕೆ ತಾವು ಹೋಗುತ್ತಿದ್ದಾರೆ ಎನ್ನುವ ಸುದ್ದಿ ನೋಡಿದ ಶರ್ಮಿಳಾ ಮಾಂಡ್ರೆ ''ಇದು ಈ ವರ್ಷದ ದೊಡ್ಡ ಜೋಕ್'' ಎಂದಿದ್ದಾರೆ. ಈ ಮೂಲಕ ತಾವು ಕಾರ್ಯಕ್ರಮದ ಸ್ಪರ್ಧಿ ಆಗಿಲ್ಲ ಎನ್ನುವದನ್ನು ತಿಳಿಸಿದ್ದಾರೆ. ತಮ್ಮ ಬಗ್ಗೆ ಹರಿದಾಡುತ್ತಿದ್ದ ಗಾಸಿಪ್ ಹೆಚ್ಚಾಗುವ ಮುನ್ನ ತಾವೇ ಸ್ಪಷ್ಟನೆ ನೀಡಿದ್ದಾರೆ.

ಬಿಗ್ ಬಾಸ್ ನಿಂದ ಆಫರ್ ಬಂದಿದ್ಯಾ?

ಬಿಗ್ ಬಾಸ್ ನಿಂದ ಆಫರ್ ಬಂದಿದ್ಯಾ?

ಶಾರ್ಮಿಳಾಗೆ ಬಿಗ್ ಬಾಸ್ ಕಡೆಯಿಂದ ಆಫರ್ ಬಂದಿದ್ದೇಯೇ..?, ಹಾಗೆ ಬಂದಿದ್ದರೆ, ಆ ಅವಕಾಶವನ್ನು ಅವರೇ ತಿರಸ್ಕಾರ ಮಾಡಿದ್ದಾರೆಯೇ ಎನ್ನುವ ಮಾಹಿತಿ ಇಲ್ಲ. ಆದರೆ, ಕಾರ್ಯಕ್ರಮದಲ್ಲಿ ನಾನು ಭಾಗಿಯಾಗುತ್ತಿಲ್ಲ ಎನ್ನುವುದನ್ನು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಅಕ್ಟೋಬರ್ ಎರಡನೇ ವಾರದಿಂದ ಈ ಬಾರಿಯ ಬಿಗ್ ಬಾಸ್ ಶುರು ಆಗುತ್ತಿದೆ.

'ಗಾಳಿಪಟ 2' ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ

'ಗಾಳಿಪಟ 2' ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ

ನಟಿ ಶಾರ್ಮಿಳಾ ಮಾಂಡ್ರೆ ಸದ್ಯ 'ಗಾಳಿಪಟ 2' ಸಿನಿಮಾದ ನಾಯಕಿ ಆಗಿದ್ದಾರೆ. ಈ ಸಿನಿಮಾದ ಮೂರು ನಾಯಕಿಯರ ಪೈಕಿ ಇವರು ಒಬ್ಬರು. ಯೋಗರಾಜ್ ಭಟ್ ಅವರೇ ಈ ಚಿತ್ರವನ್ನೂ ನಿರ್ದೇಶನ ಮಾಡುತ್ತಿದ್ದಾರೆ. ಇದರ ಜೊತೆಗೆ 'ಮೈಸೂರ್ ಮಸಾಲಾ' ಚಿತ್ರ ಕೂಡ ಶರ್ಮಿಳಾ ಕೈ ನಲ್ಲಿ ಇದೆ.

ಮತ್ತೆ ಬಂತು ಕುರಿ ಪ್ರತಾಪ್ ಹೆಸರು

ಮತ್ತೆ ಬಂತು ಕುರಿ ಪ್ರತಾಪ್ ಹೆಸರು

ಕಳೆದ ಕೆಲವು ಬಿಗ್ ಬಾಸ್ ಸೀಸನ್ ಗಳಿಂದ ಪ್ರತಿ ಬಾರಿಯೂ ಹಾಸ್ಯ ನಟ ಕುರಿ ಪ್ರತಾಪ್ ಹೆಸರು ಕೇಳಿ ಬರುತ್ತಲೇ ಇದೆ. ಈ ಬಾರಿಯೂ ಕುರಿ ಪ್ರತಾಪ್ ಬಿಗ್ ಬಾಸ್ ಸ್ಪರ್ಧಿ ಆಗುತ್ತಾರೆ ಎನ್ನುವ ಮಾತಿದೆ. ಆದರೆ, ಅವರು 'ಬಿಗ್ ಬಾಸ್' ಮನೆ ಪ್ರವೇಶ ಮಾಡುವ ಲಕ್ಷಣಗಳು ತೀರಾ ಕಡಿಮೆ.

More from Filmibeat

English summary
Kannada actress Sharmila Mandre gave clarification about her 'Bigg Boss kannada 7' entry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X