'ಆ ಅಪಘಾತ'ದ ಬಳಿಕ ಶಶಿಕುಮಾರ್ ಎದುರಿಸಿದ ಕಷ್ಟ ಯಾರಿಗೂ ಬೇಡ

Recommended Video

Weekend with Ramesh Season 4: ಅಪಘಾತದ ನಂತರ ನಟ ಶಶಿಕುಮಾರ್ ಜೀವನದಲ್ಲಿ ಬಿರುಗಾಳಿಯೇ ಎದ್ದಿತ್ತು

1998 ಜುಲೈ 31ರಂದು ರಾತ್ರಿ ಬೆಂಗಳೂರಿನ ಶಿವಾನಂದ ವೃತ್ತದ ಬಳಿ ಸುಪ್ರೀಂ ಹೀರೋ ಶಶಿಕುಮಾರ್ ಅವರ ಕಾರು ಅಪಘಾತವಾಗುತ್ತೆ. ಈ ಆಕ್ಸಿಡೆಂಟ್ ನಲ್ಲಿ ನಟ ಶಶಿಕುಮಾರ್ ಗೆ ಗಂಭೀರ ಗಾಯಗಳಾಗುತ್ತೆ. ಶಶಿ ಕುಮಾರ್ ಮೂಗಿಗೆ ಹೆಚ್ಚು ಪೆಟ್ಟಾಗುತ್ತೆ.

ಮುಖಕ್ಕೆ ಗಂಭೀರ ಗಾಯಗಳಾದ ಪರಿಣಾಮ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತೆ. ಅಂದು ಯಶಸ್ವಿ ನಟನಾಗಿ ಮೆರೆಯುತ್ತಿದ್ದ ಶಶಿ ಕುಮಾರ್ ಈ ಅಪಘಾತದ ಬಳಿಕ ತಮ್ಮ ವೃತ್ತಿಯನ್ನೇ ನಿಲ್ಲಿಸಬೇಕಾದ ಪರಿಸ್ಥಿತಿಗೆ ಬರ್ತಾರೆ. ಮುಖ ಬಿಟ್ಟರೇ ದೇಹ ಬೇರೆ ಅಂಗಗಳಿಗೆ ಯಾವುದೇ ಹಾನಿಯಾಗಿರಲಿಲ್ಲ. ಆದ್ರೂ, ಶಶಿ ಕುಮಾರ್ ಡ್ಯಾನ್ಸ್, ಫೈಟ್ ಮಾಡೋಕೆ ಆಗಲ್ಲ ಎಂಬ ಸುದ್ದಿ ಹರಿದಾಡಿತು.

ಅಲ್ಲಿಯವರೆಗೂ ಸಂತೋಷವಾಗಿದ್ದ ಶಶಿಕುಮಾರ್ ಅವರ ಕುಟುಂಬ ಏಕಾಏಕಿ ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತೆ. ಸಿನಿಮಾ ಸಿಗಲ್ಲ, ಕೈಯಲ್ಲಿ ಕೆಲಸ ಇಲ್ಲ. ಆ ಸಮಯದಲ್ಲಿ ಯಾವೊಬ್ಬ ಸ್ನೇಹಿತನೂ ಸಹಾಯಕ್ಕೆ ಬರಲ್ಲ. ಹೀಗೆ, ಖ್ಯಾತ ನಟನ ಕುಟುಂಬ ಎದುರಿಸಿದ ಕಷ್ಟ ಒಂದೆರಡಲ್ಲ. ಈ ಬಗ್ಗೆ ಸ್ವತಃ ಶಶಿಕುಮಾರ್ ಕುಟುಂಬ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದೆ. ಮುಂದೆ ಓದಿ.....

ಯಾವ ಸ್ನೇಹಿತನೂ ಬರಲಿಲ್ಲ

ಯಾವ ಸ್ನೇಹಿತನೂ ಬರಲಿಲ್ಲ

ಚೆನ್ನಾಗಿದ್ದಾಗ ಸಿಕ್ಕಾಪಟ್ಟೆ ಖರ್ಚು ಮಾಡುತ್ತಿದ್ದ ಶಶಿ ಕುಮಾರ್ ಗೆ ಅಪಘಾತದ ಬಳಿಕ ಯಾವೊಬ್ಬ ಸ್ನೇಹಿತರು ಸಹಾಯ ಎಲ್ಲರ ಖರ್ಚು ನೋಡಿಕೊಳ್ಳುತ್ತಿದ್ದರಂತೆ. ಆದ್ರೆ, ಅಪಘಾತದ ಬಳಿಕ 10 ಸಾವಿರ ರೂಪಾಯಿಗೆ ಬೇಡುವ ಸ್ಥಿತಿ ಬಂತು ಎಂದು ಭಾವುಕರಾದರು. ಯಾರೂ ಫೋನ್ ರಿಸೀವ್ ಮಾಡಲಿಲ್ಲ. ಫೋನ್ ರಿಸೀವ್ ಮಾಡಿದ್ರೆ ದುಡ್ಡು ಕೇಳ್ತಾನೆ ಎಂಬ ಭಯ ಅವರಿಗಿತ್ತು.

ಮನೆಯಿಂದ ಕನ್ನಡಿ ಹೊರಹಾಕಿದ್ರು

ಮನೆಯಿಂದ ಕನ್ನಡಿ ಹೊರಹಾಕಿದ್ರು

ಶಶಿ ಕುಮಾರ್ ಮುಖಕ್ಕೆ ಗಂಭೀರವಾದ ಗಾಯ ಆಗಿದ್ದ ಪರಿಣಾಮ ಅವರಿಗೆ ಆ ನೋವು ಕಾಣಿಸಬಾರದು ಎಂದು ಕಾರಣಕ್ಕೆ ಮನೆಯಲ್ಲಿದ್ದ ಕನ್ನಡಿಯನ್ನ ಹೊರಹಾಕಿದ್ದರಂತೆ ಕುಟುಂಬ ಸದಸ್ಯರು. ಕನ್ನಡಿ ನೋಡಿದಾಗ ಅವರ ಮುಖ ನೆನಪಾಗಿ ಎಲ್ಲಿ ಅವರಿಗೆ ನೋವು ಉಂಟಾಗುತ್ತೆ ಎಂಬ ಆತಂಕ ಕುಟುಂಬದವರಿಗೆ ಕಾಡಿತ್ತು. ಸುಮಾರು ಆರೇಳು ತಿಂಗಳು ಮನೆಯಲ್ಲಿ ಕನ್ನಡಿ ಇರಲಿಲ್ಲ.

ಹಳೇ ಫೋಟೋ ಯಾವುದು ಇಟ್ಟಿಲ್ಲ

ಹಳೇ ಫೋಟೋ ಯಾವುದು ಇಟ್ಟಿಲ್ಲ

ಇನ್ನು ಶಶಿ ಕುಮಾರ್ ಅವರ ಹಳೇ ಫೋಟೋಗಳನ್ನ ಯಾವುದು ಇಟ್ಟುಕೊಂಡಿಲ್ಲ ಅಂತೆ. ಮನೆಯಲ್ಲಿದ್ದ ಎಲ್ಲ ಹಳೇಯ ಫೋಟೋಗಳನ್ನ ಕೂಡ ಬಿಸಾಡಿದರಂತೆ. ಹಳೇ ಫೋಟೋಗಳನ್ನ ನೋಡಿದಾಗ ತಮ್ಮ ಹಳೇ ಮುಖ ನೆನಪು ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಎಲ್ಲವನ್ನ ಹೊರಹಾಕಿದ್ದರಂತೆ. ಈಗಲೂ ಹಳೇ ಫೋಟೋ ಇಟ್ಟಿಲ್ಲ. ಇದು ಅವರ ಹೊಸ ಮುಖ ಎಂದು ನಂಬಿಸಿದ್ದೇವೆ ಎಂದು ಅವರ ಪತ್ನಿ ಹೇಳಿಕೊಂಡಿದ್ದರು.

ಮಾನಸಿಕ ಖಿನ್ನತೆಗೆ ಒಳಪಟ್ಟಿದ್ದರು

ಮಾನಸಿಕ ಖಿನ್ನತೆಗೆ ಒಳಪಟ್ಟಿದ್ದರು

ಅಪಘಾತವಾದ ಬಳಿಕ ಶಶಿ ಕುಮಾರ್ ಅವರ ಮಾನಸಿಕ ಖಿನ್ನತೆಗೆ ಒಳಪಟ್ಟಿದ್ದರಂತೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮನೆಯಲ್ಲಿ ಇರುತ್ತಿದ್ದರಂತೆ. ತಮ್ಮ ಮುಖವನ್ನ ನೋಡಿಕೊಳ್ಳಲಾಗದ ದೃಷ್ಟಿಕೋನವನ್ನ ಹೊಂದಿದ್ದರಂತೆ. ಸ್ನೇಹಿತರು ಯಾರೂ ಸಹಾಯ ಮಾಡಿಲ್ಲ. ಬಾಡಿಗೆ ಮನೆಯಲ್ಲಿ ವಾಸ. ಇಬ್ಬರು ಮಕ್ಕಳು. ಇದೆಲ್ಲವೂ ಮಾನಸಿಕವಾಗಿ ಶಶಿ ಕುಮಾರ್ ಅವರನ್ನ ಕಾಡಿತ್ತಂತೆ.

'ಕಣ್ಣಾಮುಚ್ಚಾಲೆ' ಚಿತ್ರದಿಂದ ಕೈಬಿಟ್ಟರು

'ಕಣ್ಣಾಮುಚ್ಚಾಲೆ' ಚಿತ್ರದಿಂದ ಕೈಬಿಟ್ಟರು

''ಅಪಘಾತವಾದ ಬಳಿಕ ಚೇತರಿಸಿಕೊಂಡಿದ್ದ ಶಶಿ ಕುಮಾರ್ ಅವರಿಗೆ ಯಾವ ಸಿನಿಮಾನೂ ಬಂದಿಲ್ಲ. ಹೀಗಿದ್ದರೂ ಕಣ್ಣಾಮುಚ್ಚಾಲೆ ಎಂಬ ಸಿನಿಮಾ ಆಫರ್ ಒಂದು ಬಂತು. ನನ್ನ ಸ್ಥಿತಿ ನೋಡಿ ನಾನು ಹೇಳಿಕೊಂಡರೂ ಪರವಾಗಿಲ್ಲ ಮಾಡಿ ಸಾರ್ ಎಂದು ಒಪ್ಪಿಸಿದರು. ಮುಹೂರ್ತ ಎಲ್ಲ ಆಯ್ತು. ಶೂಟಿಂಗ್ ಕೂಡ ಮಾಡಿದ್ದರು. ಇದ್ದಕ್ಕಿಂದ್ದಂತೆ ಹೀರೋನೇ ಬದಲಾಗಿಬಿಟ್ಟರು. ನನ್ನ ಲೈಫ್ ನಲ್ಲಿ ಅದು ಕಣ್ಣಾಮುಚ್ಚಾಲೆ ಆಗೋಯ್ತು'' ಎಂದು ಆ ನೋವನ್ನ ಶಶಿ ಕುಮಾರ್ ಹೇಳಿಕೊಂಡರು.

ನನಗೆ ಮರುಜೀವ ನೀಡಿದ್ದು ಹಬ್ಬ

ನನಗೆ ಮರುಜೀವ ನೀಡಿದ್ದು ಹಬ್ಬ

ಹೀಗೆ ಒಂದು ದಿನ ಜಯಶ್ರೀ ಹಾಗೂ ಡಿ ರಾಜೇಂದ್ರ ಬಾಬು ಮನೆಗೆ ಬಂದರು. ಹಬ್ಬ ಅಂತ ಸಿನಿಮಾದಲ್ಲಿ ನನಗೊಂದು ಅವಕಾಶ ಕೊಟ್ಟರು. ಐದು ಜನ ಹೀರೋಗಳಲ್ಲಿ ನಾನು ಒಬ್ಬ ಆದೆ. ಆ ಸಿನಿಮಾ ನನಗೆ ಇನ್ನೊಂದು ಅವಕಾಶ ಕೊಡ್ತು. ಜಯಶ್ರೀ ಅವರಿಗೆ ನಾನು ಚಿರ ಋಣಿ'' ಎಂದು ತಿಳಿಸಿದರು.

More from Filmibeat

English summary
Kannada actor shashi Kumar remembered about his struggle days when after he met car accident in 1998.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X