ಈ ಎರಡು ವಿಷ್ಯಕ್ಕೆ ಶಶಿ ಕುಮಾರ್ ಬಗ್ಗೆ ಪತ್ನಿಗೆ ಬೇಸರ ಇದ್ಯಂತೆ.!
Recommended Video
ಸುಪ್ರೀಂ ಹೀರೋ ಶಶಿ ಕುಮಾರ್ ಪರಿಚಯ ಕನ್ನಡ ಕಲಾಭಿಮಾನಿಗಳಿಗಿದೆ. ಈಗ ಅವರ ಮಗ ಆದಿತ್ಯ 'ಮೊಡವೆ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಬರ್ತಿದ್ದಾರೆ. ಮಗಳು ಐಶ್ಚರ್ಯಗೆ ಮದುವೆ ಆಗಿದೆ. ಶಶಿ ಕುಮಾರ್ ಧರ್ಮ ಪತ್ನಿ ಸರಸ್ವತಿ. ಮದುವೆ ಆಗಿ ಸುಮಾರು 26 ವರ್ಷ ಕಳೆದಿದೆ.
ಶಶಿ ಕುಮಾರ್ ಅವರ ಪತ್ನಿ ಸರಸ್ವತಿ ಇದುವರೆಗೂ ಯಾವುದೇ ಕಾರ್ಯಕ್ರಮಕ್ಕೆ ಬಂದವರಲ್ಲ. ಆದ್ರೆ, ವೀಕೆಂಡ್ ವಿತ್ ರಮೇಶ್ ಶೋಗಾಗಿ ಮೊದಲ ಸಲ ಕ್ಯಾಮೆರಾ ಫೇಸ್ ಮಾಡಿದ್ದಾರೆ. ಸುಪ್ರೀಂ ಹೀರೋ ಜೊತೆ ಎರಡು ದಶಕಗಳ ಕಾಲ ಸುಖಕರ ಜೀವನ ನಡೆಸಿರುವ ಪತ್ನಿಗೆ ಅವರ ಮೇಲೆ ಕೆಲವು ವಿಚಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಪತ್ನಿಯ ಸಣ್ಣ ಪುಟ್ಟ ಬೇಸರವನ್ನ ಅರಿತ ಶಶಿ ಕುಮಾರ್ ವೇದಿಕೆಯಲ್ಲೇ ಸಮಾಧಾನಪಡಿಸಿದರು. ಅವರ ಆಸೆಯನ್ನ ಪೂರೈಸಿದರು. ಅಷ್ಟಕ್ಕೂ, ಸುಪ್ರೀಂ ಹೀರೋ ಪತ್ನಿಗಿದ್ದ ಆಸೆ ಏನು? ಬೇಸರ ಏನು? ಅದನ್ನ ಹೇಗೆ ಶಶಿ ಕುಮಾರ್ ಈಡೇರಿಸಿದ್ರು? ಮುಂದೆ ಓದಿ.....

ಮದುವೆ ದಿನಾಂಕ ನೆನಪಿಲ್ಲ
ಮದುವೆ ಆಗಿ 26 ವರ್ಷ ಕಳೆದಿದೆ. ತುಂಬಾ ಬ್ಯುಸಿ ಇದ್ದ ಸಮಯದಲ್ಲಿ ಮದುವೆಯಾಗಿದ್ದ ಶಶಿ ಕುಮಾರ್ ಆತುರ ಆತುರವಾಗಿ ವಿವಾಹವಾಗಿದ್ದರಂತೆ. ಅಂದಿನ ಸ್ಟಾರ್ ನಟರೆಲ್ಲಾ ಮದುವೆಗೆ ಹೋಗಿ ಶುಭ ಹಾರೈಸಿದ್ದರು. ಆದ್ರೆ, ಶಶಿ ಕುಮಾರ್ ಅವರಿಗೆ ಮದುವೆ ದಿನಾಂಕ ನೆನಪಿಲ್ಲವಂತೆ ಎಂದು ಸರಸ್ವತಿ ಹೇಳಿಕೊಂಡು ಕಾಲೆಳೆದಿದ್ದಾರೆ. ಜೂನ್ 11, 1993 ರಂದು ವಿವಾಹವಾಗಿದ್ದರು.

ಪತ್ನಿ ಬರ್ತಡೇ ದಿನನೂ ಗೊತ್ತಿಲ್ಲ
ಮದುವೆ ದಿನಾಂಕ ಇರಲಿ, ಪತ್ನಿಯ ಹುಟ್ಟಿದ ದಿನಾಂಕವೂ ಶಶಿ ಕುಮಾರ್ ಗೆ ನೆನಪಿಲ್ಲವಂತೆ. ಇದು ಪತ್ನಿಯ ಬೇಸರಕ್ಕೆ ಕಾರಣವಾಗಿದೆ. ಒಂದೇ ಒಂದು ಸಲನೂ ಬರ್ತಡೇ ವಿಶ್ ಮಾಡಿಲ್ಲ ಎಂದು ದೂರಿದ್ದಾರೆ. ಇನ್ನು ಶಶಿ ಕುಮಾರ್ ಅವರ ಧ್ವನಿ ಕಂಡ್ರೆ ಮನೆಯಲ್ಲಿ ಎಲ್ಲರೂ ಭಯ ಪಡ್ತಾರಂತೆ. ವೇದಿಕೆಯಲ್ಲೂ ಸರಸ್ವತಿ ಅವರ ಭಯ ಕಾಣ್ತಿತ್ತು.

ಮೊದಲ ಸಲ ಐ ಲವ್ ಯೂ ಹೇಳಿದ್ರು
ಶಶಿ ಕುಮಾರ್ ಅವರು ಒಂದು ಸಲನೂ ಪತ್ನಿಗೆ ಐ ಲವ್ ಯೂ ಹೇಳಿಲ್ವಂತೆ. ಈ ಆಸೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನೆರವೇರಿದೆ. ಪತ್ನಿಗೆ ಗ್ರೀಟಿಂಗ್ ನೀಡಿ ಐ ಲವ್ ಯೂ ಹೇಳಿದ್ರು ಶಶಿ ಕುಮಾರ್. ಇದೇ ಮೊದಲು ನನಗೆ ಐ ಲವ್ ಯೂ ಹೇಳಿದ್ದು ಎಂದು ಇದರಿಂದ ಸರಸ್ವತಿ ಅವರು ತುಂಬಾ ಖುಷಿ ಆದರು.

ಮಗ ಆದಿತ್ಯ, ಮಗಳು ಐಶ್ವರ್ಯ
ಶಶಿ ಕುಮಾರ್ ಮಗ ಆದಿತ್ಯ ಮೊಡವೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಗಳು ಐಶ್ವರ್ಯಗೆ ಮದುವೆ ಆಗಿದೆ. ವಿವಾಹದ ಬಳಿಕವೂ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಜರ್ನಲಿಸಂ ಓದುತ್ತಿದ್ದಾರೆ. ಇವರಿಬ್ಬರಿಗೂ ಅಪ್ಪನೇ ಫೇವರೆಟ್. ಶಕ್ತಿ ಎಲ್ಲವೂ.


Click it and Unblock the Notifications











