ಶಶಿ ಕುಮಾರ್ ಅವರ ವೀಕೆಂಡ್ ವಿತ್ ರಮೇಶ್ ಈ ಕಾರಣಕ್ಕೆ ನೋಡಲೇಬೇಕು.!
Recommended Video
ಕನ್ನಡ ಚಿತ್ರರಂಗದ ಸುಪ್ರೀಂ ಹೀರೋ ಶಶಿ ಕುಮಾರ್ ಅವರು ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬರಲಿದ್ದಾರೆ. ಈಗಾಗಲೇ ಶಶಿಕುಮಾರ್ ಅವರ ಪ್ರೋಮೋ ಕೂಡ ಬಿಡುಗಡೆಯಾಗಿದ್ದು, ಎಪಿಸೋಡ್ ಬಗ್ಗೆ ಕುತೂಹಲ ಮೂಡಿಸಿದೆ.
ಶಶಿ ಕುಮಾರ್ ಅಂದ್ರೆ ಒಳ್ಳೆಯ ನಟ, ಅದ್ಭುತ ಡ್ಯಾನ್ಸರ್ ಅಂತ ಎಲ್ಲರಿಗೂ ಗೊತ್ತಿದೆ. ಅದಕ್ಕೂ ಮಿಗಿಲಾಗಿ ಅವರ ವೈಯಕ್ತಿಕ ಜೀವನದ ಬಗ್ಗೆ ಯಾರಿಗೂ ಅಷ್ಟಾಗಿ ಗೊತ್ತಿಲ್ಲ. ಶಶಿ ಕುಮಾರ್ ಅವರ ಎಪಿಸೋಡ್ ನಲ್ಲಿ ಏನಿರುತ್ತೆ ಬಿಡಿ, ಮಾಮೂಲಿ ಅವರ ಸಿನಿಮಾ, ಸಕ್ಸಸ್, ಫೆಲ್ಯೂರ್ ಜರ್ನಿ ಅಲ್ವಾ ಅಂದುಕೊಂಡಿರ್ತೀರಾ.
ಹೌದು, ಅದು ನಿಜನೇ. ಆದ್ರೆ, ಬೆಳ್ಳಿತೆರೆಯ ಮೇಲಿನ ಸಕ್ಸಸ್ ಮತ್ತು ಫೆಲ್ಯೂರ್ ಗಿಂತ ಆಫ್ ದಿ ಸ್ಕ್ರೀನ್ ನಲ್ಲಿ ಶಶಿಕುಮಾರ್ ಎದುರಿಸಿದ ಚಾಂಲೆಂಜ್ ಏನು ಎಂಬುದು ತಿಳಿಯುವುದಕ್ಕೆ ಈ ವಾರ ವೀಕೆಂಡ್ ವಿತ್ ರಮೇಶ್ ನೋಡಬೇಕಿದೆ.

ಶಶಿ ಕುಮಾರ್ ಜೀವನದಲ್ಲಿ ಅತಿ ದೊಡ್ಡ ಸಂಕಷ್ಟಕ್ಕೆ ಕಾರಣವಾಗಿದ್ದು ಆ ಒಂದು ಅಪಘಾತ. ಅದು ಹೇಗೆ ಆಯಿತು, ಅದರಿಂದ ಶಶಿಕುಮಾರ್ ಅನುಭವಿಸಿದ ನೋವು ಏನು? ಶಶಿ ಕುಮಾರ್ ಜೀವನದ ಮೇಲೆ ಈ ಅಪಘಾತ ಎಷ್ಟು ಕೆಟ್ಟ ಪರಿಣಾಮ ಬೀರಿತು ಎಂಬುದು ಯಾರಿಗೂ ಗೊತ್ತಿಲ್ಲ. ಇದನ್ನ ಸ್ವತಃ ಸುಪ್ರೀಂ ಹೀರೋ ಅಭಿಮಾನಿಗಳ ಮುಂದೆ ಹೇಳಿಕೊಂಡಿದ್ದಾರೆ.


Click it and Unblock the Notifications











