ಮನೆ ಮಗಳು ಆದ ಮಾತ್ರಕ್ಕೆ ಮೂಲೆಯಲ್ಲಿ ಕೂತು ಅತ್ಕೊಂಡು ಕೂರಬೇಕಾ ? ಅಸಭ್ಯ ಕಾಮೆಂಟ್‌ಗಳ ಹಾವಳಿ-ಐಶ್ವರ್ಯಾ ಸಿಂಧೋಗಿ ಭಾವುಕ
ಸಾಮಾಜಿಕ ಜಾಲತಾಣ ತುಂಬಾ ಬಲಿಷ್ಠವಾದ ಅಸ್ತ್ರ. ಬದಲಾದ ಈ ಕಾಲಘಟ್ಟದಲ್ಲಿ ಈ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ.
ಆದರೆ ಈಗೀಗ ಈ ಸಾಮಾಜಿಕ ಜಾಲತಾಣವನ್ನು ತಮ್ಮ ವ್ಯಕ್ತಿಗತ ವಿಚಾರಗಳನ್ನು ಹಂಚಿಕೊಳ್ಳಲು ಅನೇಕರು ಬಳಸುತ್ತಿಲ್ಲ.ಒಳ್ಳೆಯ ಕೆಲಸಕ್ಕೆ ಈ ಸೋಶಿಯಲ್ ಮೀಡಿಯಾವನ್ನು ಉಪಯೋಗ ಮಾಡುತ್ತಿಲ್ಲ. ಬದಲಿಗೆ ಹಲವರು ಈ ಸಾಮಾಜಿಕ ಜಾಲತಾಣವನ್ನು ಅವಾಚ್ಯ ಶಬ್ದಗಳಿಂದ ಮತ್ತೊಬ್ಬರನ್ನು ನಿಂದಿಸಲು .. ದ್ವೇಷ - ಅಸೂಯೆಯನ್ನು ಬಿತ್ತಲು .. ಬಳಸುತ್ತಿದ್ದಾರೆ.

ಇನ್ನು ಇವರ ನಡುವೆ ಇಲ್ಲಿ ಮತ್ತೊಂದು ವರ್ಗ ಇದೆ. ಈ ವರ್ಗ ಹೆಣ್ಣು ಮಕ್ಕಳಿಗೆ.. ಮಹಿಳೆಯರಿಗೆ.. ಚಿತ್ರರಂಗದಲ್ಲಿನ ನಾಯಕಿಯರಿಗೆ.. ಲೈಂ*ಗಿಕ ಶೋಷಣೆ.. ಕಿರುಕುಳ ಕೊಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದೆ. ಸ್ತ್ರೀಯರ ಪಾಲಿಗೆ ಕಗ್ಗಂಟಾಗಿ ಉಳಿದಿದೆ. ಇಂತಹವರಿಂದ ಚಿತ್ರರಂಗದಲ್ಲಿ ಹಲವು ಚೆಲುವೆಯ ಕಣ್ಣೀರು ಹಾಕುತ್ತಿದ್ದಾರೆ. ನರಳುತ್ತಿದ್ದಾರೆ. ಉದಾಹರಣೆಗೆ ಐಶ್ವರ್ಯ ಶಿಂಧೋಗಿ.
ಹೌದು, ಐಶ್ವರ್ಯ ಶಿಂಧೋಗಿ.. ''ಬಿಗ್ ಬಾಸ್'' ಸ್ಫರ್ಧಿ. ಕರುನಾಡಿನ ''ಮನೆ ಮಗಳು''. ''ಸಿಂಹಾದ್ರಿ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಐಶ್ವರ್ಯ ''ಜಾಕ್ಸನ್''.. ''ಸಪ್ನೋ ಕಿ ರಾಣಿ''.. ''ರಣತಂತ್ರ''.. ''ಮಮ್ಮಿ: ಸೇವ್ ಮಿ''.. ''ಚಿನ್ನಾರಿ''.. ''ಸಂಯುಕ್ತ 2'' ಹೀಗೆ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಅಭಿನಯಿಸಿದರು. ಕಿರುತೆರೆಯಲ್ಲಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡರು.
ಇಂಥಾ ಐಶ್ವರ್ಯ ಶಿಂಧೋಗಿ ಸದ್ಯ ತಮ್ಮ ಮೇಲಾಗುವ ಸೈಬರ್ ದಾಳಿಯ ಕುರಿತು ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ.ಮನೆ ಮಗಳು ಆದ ಮಾತ್ರಕ್ಕೆ ನನ್ನ ವೈಯಕ್ತಿಕ ಸ್ವಾತಂತ್ಯ್ರ ಬಿಟ್ಟು ಕೊಡಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ''ಸುಮನ್ ಟಿವಿ ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಐಶ್ವರ್ಯ ಶಿಂಧೋಗಿ, ಕೆಟ್ಟ ಕಾಮೆಂಟ್‌ಗಳನ್ನು ನೋಡಿದಾಗ ತುಂಬಾನೇ ಬೇಜಾರಾಗುತ್ತೆ, ತುಂಬಾ ಡಿಸ್ಟರ್ಬ್ ಆಗುತ್ತೆ, ಎಷ್ಟೋ ರಾತ್ರಿಗಳು ನಿದ್ದೆ ಮಾಡಿರಲ್ಲ, ಊಟ ತಿನ್ನೋಕೆ ಮನಸ್ಸಾಗುವುದಿಲ್ಲ ಎಂದಿದ್ದಾರೆ.

ನಾವು ಸೆಲೆಬ್ರಿಟಿ, ಇನ್ಫ್ಲುಯೆನ್ಸರ್, ಆಕ್ಟರ್, ಆದ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ಗೊಂಬೆಗಳ ರೀತಿ ಅವರಿಗೆ ಕಾಣಿಸಬಹುದೇನೋ..? ಆದರೆ, ನಿಜಜೀವನದಲ್ಲಿ ನಮಗೂ ಮನಸು ಇದೆ ಅಲ್ವಾ..? ಎಂದು ಪ್ರಶ್ನೆ ಮಾಡಿರುವ ಐಶ್ವರ್ಯ ಸಿಂಧೋಗಿ, ನಮಗೂ ಮನಸ್ಸಿಗೆ ಬೇಜಾರಾಗುತ್ತೆ ಎನ್ನುವ ಕನಿಷ್ಠ ಜ್ಞಾನ ಇರಬೇಕಲ್ವಾ..? ಎಂದು ಹೇಳಿದ್ದಾರೆ.
ಇನ್ನು ''ಬಿಗ್ ಬಾಸ್'' ಮನೆಯಲ್ಲಿದ್ದಾಗ ನನ್ನ ಮನೆ ಮಗಳು ಅಂತ ಕರೆದರು. ಆದರೆ ಮನೆ ಮಗಳು ತನ್ನ ಇಷ್ಟದ ಬಟ್ಟೆ ಹಾಕಿಕೊಂಡರೆ, ನಮ್ಮ ಸಮಾಜಕ್ಕೆ ಅದು ಇಷ್ಟವಾಗಲ್ಲ ಎಂದು ಹೇಳಿರುವ ಐಶ್ವರ್ಯ, ಇವಳು ಮನೆ ಮಗಳಂತೆ, ಮನೆ ಮಗಳು ಈ ರೀತಿ ಬಟ್ಟೆ ಹಾಕೊಳ್ತಾರಾ? ಮನೆ ಮಗಳು ಥೈಲ್ಯಾಂಡ್‌ಗೆ ಹೋಗ್ತಾರಾ..? ಅಂತೆಲ್ಲ ಕೇಳ್ತಾರೆ, ಕಾಮೆಂಟ್ ಮಾಡ್ತಾರೆ ಎಂದಿದ್ದಾರೆ. ಇವರಿಗೆ ದುಡ್ಡು ಎಲ್ಲಿಂದ ಬರುತ್ತೆ ? ಎನ್ನುತ್ತಾರೆ ಎಂದಿದ್ದಾರೆ.
ಮುಂದುವರೆದು ನಾನು ಮನೆ ಮಗಳು ಆಗುವ ಮೊದಲು ನಾನು ನನ್ನ ಅಪ್ಪ-ಅಮ್ಮನಿಗೆ ಮಗಳು. ನನ್ನ ಅಪ್ಪ-ಅಮ್ಮ ನನಗೆ ಯಾವತ್ತೂ ರಿಸ್ಟ್ರಿಕ್ಷನ್ ಮಾಡಿಲ್ಲ. ನೀನು ಇದೇ ರೀತಿ ಬಟ್ಟೆ ಹಾಕಿಕೊಳ್ಳಬೇಕು, ನೀನು ಇದೇ ರೀತಿ ಕೂತುಕೊಳ್ಳಬೇಕು, ಬಿಹೇವ್ ಮಾಡಬೇಕು ಅಂತ ಯಾವತ್ತೂ ಹೇಳಿಲ್ಲ ಎಂದು ಹೇಳಿರುವ ಐಶ್ವರ್ಯ ಸಿಂಧೋಗಿ, ನನ್ನನ್ನು ಸ್ಟ್ರಾಂಗ್ ಮತ್ತು ಇಂಡಿಪೆಂಡೆಂಟ್ ಆಗಿ ಬೆಳೆಸಿರೋದಕ್ಕೆ, ನಾನು ಅಪ್ಪ-ಅಮ್ಮ ಇಲ್ಲದೇ ಹೋದರೂ ಈ ಸೊಸೈಟಿಯಲ್ಲಿ ಇನ್ನೂ ಇಂಡಿಪೆಂಡೆಂಟ್ ಆಗಿ ಬದುಕುತ್ತಿದ್ದೀನಿ ಎಂದು ಹೇಳಿದ್ದಾರೆ.
ಕಲೆಯಿಂದ ಏನೋ ಒಂದಷ್ಟು ಸಂಪಾದನೆ ಮಾಡ್ತಿದ್ದೇನೆ, ಒಳ್ಳೆಯ ಹೆಸರು ಮಾಡಿದ್ದೇನೆ. ಮನೆ ಮಗಳು ಅಂತ ಟೈಟಲ್ ಕೊಟ್ಟ ತಕ್ಷಣ, ಮೂಲೆಯಲ್ಲಿ ಕೂತುಕೊಂಡು ಕಣ್ಣೀರು ಹಾಕೊಂಡು ಕೂರಬೇಕಾ ? ಎಂದು ಪ್ರಶ್ನೆ ಮಾಡಿರುವ ಐಶ್ವರ್ಯ, ನಾನು ಗಟ್ಟಿಯಾಗಿ ನಿಂತುಕೊಂಡು, ನನ್ನ ಜೀವನವನ್ನ ಎಂಜಾಯ್ ಮಾಡ್ತಿದ್ರೆ, ಅದನ್ನು ಸಹಿಸಿಕೊಳ್ಳೋದಕ್ಕೆ ನಿಮಗೆ ಆಗ್ತಾ ಇಲ್ಲ ಎಂದಿದ್ದಾರೆ. ಸೀರೆ ಉಟ್ಟುಕೊಂಡರು ಕೂಡ ತಪ್ಪು ತಪ್ಪಾಗಿ ಕಾಮೆಂಟ್ ಮಾಡ್ತಾರೆ ಎಂದಿದ್ದಾರೆ.
ಇನ್ನು ಹೆಣ್ಣಿಗೆ ಹೆಣ್ಣೆ ಶತ್ರು ಎನ್ನುವ ಮಾತಿದೆ. ಈ ಮಾತನ್ನು ಐಶ್ವರ್ಯ ಕೂಡ ಒಪ್ಪಿಕೊಳ್ಳುತ್ತಾರೆ. ಇದಕ್ಕೆ ಉದಾಹರಣೆಯನ್ನು ಕೂಡ ನೀಡಿರುವ ಐಶ್ವರ್ಯ, ಒಂದು ಹುಡುಗಿನೇ ನೀವು ಧರಿಸುವ ಬಟ್ಟೆಯಿಂದ ಹುಡುಗರ ಬಿಹೇವಿಯರ್‌ನ ಚೇಂಜ್ ಮಾಡ್ತೀರ ಅಂತ ಕಾಮೆಂಟ್ ಮಾಡಿದ್ದಳು ಎಂದಿದ್ದಾರೆ. ನೀವು ಹಾಕೋ ಬಟ್ಟೆ ಕೈ ಎತ್ತಿ ಮುಗಿಯೋ ಹಾಗಿರಬೇಕು ಹೊರತು, ಕೈ ಹಿಡಿದು ಎಳೆಯುವ ಹಾಗಿರಬಾರ್ದು ಅಂತ ಕಾಮೆಂಟ್ ಮಾಡಿದ್ದಾರೆ, ಇದಕ್ಕೆ ಏನ್ ಹೇಳ್ತೀರಾ ಎಂದಿದ್ದಾರೆ. ಹುಡುಗರ ಬಿಹೇವಿಯರ್ ನಮ್ಮ ಬಟ್ಟೆಯಿಂದ ಡಿಸೈಡ್ ಆಗಲ್ಲ. ಅವರ ಮನಸ್ಥಿತಿ, ಯೋಚನೆಯಿಂದ ಡಿಸೈಡ್ ಆಗುತ್ತೆ ಎಂದು ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.


Click it and Unblock the Notifications