ಕನ್ನಡದ ಕಿರುತೆರೆಯಲ್ಲೇ ಅತಿ ಹೆಚ್ಚು ಟ್ರೋಲ್ ಆದ ನಟಿ ಇವರು. ಯಾರಿವರು ?

By ಅನಿತಾ ಬನಾರಿ

ಕಿರುತೆರೆಯಾಗಲಿ, ಹಿರಿತೆರೆಯಾಗಲಿ, ಇಂದು ಸೋಶಿಯಲ್ ಮೀಡಿಯಾನೇ ಆಗಲಿ ಟ್ರೋಲಿಂಗ್ ಅನ್ನುವುದು ಬಹಳ ಇತ್ತೀಚಿನ ಆದರೆ ಪರಿಣಾಮಕಾರಿ ಟ್ರೆಂಡ್ ಆಗಿದೆ.ಇಂದು ಸೆಲೆಬ್ರಿಟಿಗಳು ಟ್ರೋಲ್ ಆಗುವುದು ಬಹಳ ಸಹಜ. ನಾನಾ ವಿಚಾರಗಳಿಗೆ ಜನ ಸಾಮಾನ್ಯರು ಅಭಿಮಾನಿಗಳು ಪ್ರೇಕ್ಷಕರು ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುತ್ತಾರೆ. ಟ್ರೋಲಿಂಗ್ ಈಗ ಅದೆಷ್ಟು ದೊಡ್ಡ ಟ್ರೆಂಡ್ ಎಂದರೆ ಸಾವಿರಾರು ಟ್ರೋಲ್ ಪೇಜ್ ಗಳು ಹುಟ್ಟಿಕೊಂಡಿವೆ.

ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಟ್ರೋಲ್ ಆದ ನಟಿ ನಿವೇದಿತಾ ಗೌಡ ಎಂದರೆ ತಪ್ಪಾಗಲ್ಲ. ಬಿಗ್ ಬಾಸ್ ಗೆ ಕಾಲಿಟ್ಟು ಮೊದಲ ಬಾರಿಗೆ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾದರು. ಅಂದು ಬಿಗ್ ಬಾಸ್ ಸೀಸನ್ 5ರಲ್ಲಿ ಭಾಗವಹಿಸಿದ್ದ ನಿವೇದಿತಾ ಗೌಡ ತಮ್ಮ ಹಾವ, ಭಾವ, ನಡೆ, ನುಡಿ, ಮಾತಿಗೆ ಟ್ರೋಲ್ ಆಗಿದ್ದರು.

she-is-the-most-trolled-actress-on-television

ನಂತರ ಮನೆಯಲ್ಲಿ ಇವರ ಹಾಗೂ ಗಾಯಕ ಚಂದನ್ ಶೆಟ್ಟಿ ಅವರ ಫ್ರೆಂಡ್ ಶಿಪ್ ಮತ್ತೊಮ್ಮೆ ಟ್ರೋಲ್ ಆಗಿತ್ತು. ಬಿಗ್ ಬಾಸ್ ಮನೆಯಲ್ಲಿದ್ದ ಅಷ್ಟು ದಿನವೂ ಚಂದನ್ ಶೆಟ್ಟಿಯನ್ನು ಅಣ್ಣ ಎಂದು ಕರೆಯುತ್ತಿದ್ದ ನಿವೇದಿತಾ ಗೌಡ, ಚಂದನ್ ಶೆಟ್ಟಿಯೊಂದಿಗೆ ತುಸು ಹೆಚ್ಚಾಗಿ ಕ್ಲೋಸ್ ಇದ್ದರು. ಚಂದನ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿದ್ದಾಗಲೆ ಗೊಂಬೆ ಗೊಂಬೆ ಎನ್ನುವ ಹಾಡನ್ನು ನಿವೇದಿತಾ ಗೌಡ ಅವರಿಗೋಸ್ಕರ ರಚಿಸಿದ್ದರು.

ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆಯೇ ಒಂದು ಕಾನ್ಸೆಪ್ಟ್ ನಲ್ಲಿ ಚಂದನ್ ಶೆಟ್ಟಿ ಸಾವಿರಾರು ಪ್ರೇಕ್ಷಕರ ಮುಂದೆ ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿದ್ದರು. ಇದರಿಂದ ಈ ಜೋಡಿ ಮತ್ತೆ ಟ್ರೋಲ್ ಆಗಿತ್ತು. ಅದಾದ ಮೇಲೆ ಮದುವೆಯಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ತಮ್ಮ ದಾಂಪತ್ಯ ಜೀವನವನ್ನು ಚೆನ್ನಾಗಿಯೇ ಕಳೆಯುತ್ತಿದ್ದಂತೆ ಭಾಸವಾಗಿತ್ತು. ತಮ್ಮದೇ ಆದ ಯೂಟ್ಯೂಬ್ ಚಾನಲ್ ಅನ್ನು ಹೊಂದಿರುವ ನಿವೇದಿತಾ ಗೌಡ ಆಗಾಗ ಗಂಡನೊಂದಿಗೆ ಫನ್ನಿ ವಿಡಿಯೋ ಅನ್ನು ಶೇರ್ ಮಾಡುತ್ತಲೇ ಇದ್ದರು.

ಬಿಗ್ ಬಾಸ್ ನಂತರ ಬಹಳಷ್ಟು ಖ್ಯಾತಿಯನ್ನು ಪಡೆದಿದ್ದ ನಿವೇದಿತಾ ಗೌಡ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ಆರಂಭಿಸಿದರು. ಮಜಾ ಟಾಕೀಸ್, ಗಿಚ್ಚಿ ಗಿಲಿ ಗಿಲಿ ಹೀಗೆ ಹಲವು ರಿಯಾಲಿಟಿ ಶೋ ಗಳಲ್ಲಿ ಬ್ಯುಸಿ ಇದ್ದಾರೆ ನಿವೇದಿತಾ ಗೌಡ.

ಪ್ರತಿ ಬಾರಿಯೂ ಒಂದಲ್ಲ ಒಂದು ವಿಚಾರಗಳಿಗೆ ಟ್ರೋಲ್ ಆಗುತ್ತಲೇ ಇರುತ್ತಾರೆ ಇವರು. ಅಷ್ಟೇನು ಸ್ಪಷ್ಟವಾಗಿ ಕನ್ನಡ ಮಾತನಾಡಲು ಬರೆದಿರುವ ನಿವೇದಿತಾ ಗೌಡ ಅದೆಷ್ಟು ಬಾರಿ ಟ್ರೋಲರ್ಸ್ ನಿಂದ ಟ್ರೋಲ್ ಆದರೂ ಧೃತಿಗೆಡದೆ ಮುನ್ನುಗ್ಗುತ್ತಲೇ ಇದ್ದಾರೆ. ಒಂದಲ್ಲ ಒಂದು ಅವಕಾಶ ಇವರನ್ನು ಅರಿಸಿಕೊಂಡು ಬರುತ್ತಿದೆ. ಹಾಗಾಗಿ ಬಹಳಷ್ಟು ಟ್ರೋಲ್ ಆದರೂ ಯಾವುದೇ ರೀತಿಯ ಸೆಟ್ ಬ್ಯಾಕ್ ಪಡೆಯದೆ ಮತ್ತೆ ಮುನ್ನುಗ್ಗುತ್ತಲೇ ಇರುವ ನಟಿ ನಿವೇದಿತ ಗೌಡ ಎಂದರೆ ತಪ್ಪಾಗಲ್ಲ.

ಇತ್ತೀಚೆಗೆ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಬಹಳಷ್ಟು ವಿಚಾರಗಳಿಗೆ ಮುನ್ನೆಲೆಗೆ ಬಂದರು. ಹೌದು ನಟಿ ನಿವೇದಿತಾ ಗೌಡ ಹಾಗೂ ಗಾಯಕ ಚಂದನ್ ಶೆಟ್ಟಿ ಇತ್ತೀಚೆಗಷ್ಟೇ ವಿಚ್ಛೇದನ ಪಡೆದರು. ಈ ವಿಚ್ಛೇದನಕ್ಕೆ ಸರಿಯಾದ ಕಾರಣವನ್ನು ಗುಪ್ತವಾಗಿಯೇ ಇಟ್ಟಿದ್ದಾರೆ. ಆದರೆ ಈ ವಿಚ್ಛೇದನದಿಂದ ಮತ್ತೆ ನಿವೇದಿತಾ ಗೌಡ ಅವರನ್ನೇ ಪ್ರೇಕ್ಷಕರು ಟ್ರೋಲರ್ಸ್ ಟಾರ್ಗೆಟ್ ಮಾಡಿದರು. ಹೋದಲ್ಲಿ ಬಂದಲ್ಲಿ ನಿವೇದಿತಾ ಗೌಡ ಅವರನ್ನು ಪ್ರಶ್ನೆ ಮಾಡಲಾಯಿತು.

ರಿಯಾಲಿಟಿ ಶೋಗಳಷ್ಟೇ ಅಲ್ಲದೆ ಇದೀಗ ಸಿನಿಮಾಗಳಲ್ಲಿಯೂ ನಟಿಸುತ್ತಿರುವ ನಟಿ ನಿವೇದಿತಾ ಗೌಡ, ಸದ್ಯಕ್ಕೆ "ಮುದ್ದು ರಾಕ್ಷಸಿ", "ಜಿಎಸ್‌ಟಿ" ಹಾಗೂ ಕೆಲ ತೆಲುಗು ಪ್ರಾಜೆಕ್ಟ್ ಗಳಲ್ಲಿಯೂ ಬ್ಯುಸಿಯಾಗಿದ್ದಾರೆ.

ಇತ್ತೀಚೆಗೆ "ಮುದ್ದು ರಾಕ್ಷಸಿ" ಸಿನಿಮಾದ ನಟನೆಯ ಸಂದರ್ಭದಲ್ಲಿ ನಿವೇದಿತಾ ಗೌಡ ಅವರು ಕಣ್ಣೀರಿಡುತ್ತಿರುವ ದೃಶ್ಯ ಒಂದು ಸರಿಯಾಗಿ ಬಹಳ ಟ್ರೋಲ್ ಆಗಿತ್ತು. ಇದು ಚಂದನ್ ಶೆಟ್ಟಿಯನ್ನು ಆಕೆ ಬಿಟ್ಟು ಹೋಗಿ ಪಶ್ಚಾತಾಪ ಪಡುತ್ತಿರುವ ದೃಶ್ಯ ಎಂದು ಹಲವರು ಊಹಿಸಿದರೆ, ಇನ್ನು ಕೆಲವರು ಇದು ಸಿನಿಮಾದ ಆಕ್ಟಿಂಗ್ ಎಂದು ಅಭಿಪ್ರಾಯ ಪಟ್ಟರು.

ಏನೇ ಆದರೂ ಸದ್ಯಕ್ಕಂತೂ ನಿವೇದಿತಾ ಗೌಡ ಆಗಲಿ ಚಂದನ್ ಶೆಟ್ಟಿ ಆಗಲಿ ಎಲ್ಲೇ ಹೊರಹೋದರು ಅವರ ವಿಚ್ಛೇದನದ ವಿಚಾರವೇ ಮುನ್ನಲೆಗೆ ಬರುತ್ತಿದೆ. ಇದರಿಂದ ನಿವೇದಿತಾ ಗೌಡ ಅವರನ್ನು ಬಹಳಷ್ಟು ಟ್ರೋಲ್ ಮಾಡಲಾಗುತ್ತಿದೆ. ಆದರೂ ಆಕೆ ರಿಯಾಲಿಟಿ ಶೋಗಳಲ್ಲಿ, ಹೊಸ ಪ್ರಾಜೆಕ್ಟ್ ಗಳಲ್ಲಿ ಹುಮ್ಮಸ್ಸಿನಿಂದ ಭಾಗವಹಿಸುತ್ತಿರುವುದು ಖಂಡಿತವಾಗಿಯೂ ಶ್ಲಾಘನೀಯ.

More from Filmibeat

English summary
She is the most trolled actress on television!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X