'ಬಿಗ್ ಬಾಸ್‌'ಗೆ ಹೋಗಿ ನಾನು ತಪ್ಪು ಮಾಡಿದೆ ವಸ್ತಾರೆ ; ಕನ್ನಡದ ಕಣ್ಮಣಿ ಅಪರ್ಣಾ ಪಶ್ಚಾತಾಪದ ಮಾತು ನೆನೆದು ಪತಿ ಭಾವುಕ

ಇನ್ನೇನು ಈ ಕೆಲವೇ ಕ್ಷಣಗಳಲ್ಲಿ (ಸೆಪ್ಟೆಂಬರ್ 28) ಕನ್ನಡದಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮ ಆರಂಭ ಆಗಲಿದೆ. ಕಳೆದ ಹನ್ನೊಂದು ವರ್ಷದಿಂದ ಕಾಯಾ ವಾಚಾ ಮನಸಾದಿಂದ ಕಾರ್ಯಕ್ರಮ ಮುನ್ನಡೆಸಿಕೊಂಡು ಬಂದ ಸುದೀಪ್ ಈ ಬಾರಿ ಕೂಡ ಮನೆಯ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಈಗಾಗಲೇ ಮನೆಯಲ್ಲಿರುವ ಮೂರು ಸ್ಪರ್ಧಿಗಳ ಹೆಸರನ್ನು ಕೂಡ ಹೇಳಲಾಗಿದೆ. ಕಾಕ್ರೋಚ್ ಸುಧಿ.. ಮಂಜು ಭಾಷಿಣಿ.. ಮತ್ತು ಮಲ್ಲಮ್ಮ..

ಹೆಸರು ಕಾರ್ಯಕ್ರಮದ ಮೇಲೀನ ಭರವಸೆ ಹೆಚ್ಚಿಸಿದೆ. ಇನ್ನುಳಿದ ಸ್ಪರ್ಧಿಗಳು ಯಾರು ಎನ್ನುವ ಕುತೂಹಲ ಕೂಡ ಹೆಚ್ಚಾಗಿದೆ. ಈ ಕೂತುಹಲಕ್ಕೆ ಇನ್ನೇನು ಕೆಲ ನಿಮಿಷಗಳಲ್ಲಿ ಉತ್ತರ ಸಿಗಲಿದೆಯಾದರೂ "ಬಿಗ್ ಬಾಸ್ " ನಲ್ಲಿ ಎಲ್ಲವೂ ಪೂರ್ವ ನಿರ್ಧಾರಿತವಾಗಿರುತ್ತೆ ಎಂದು ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅವರ ಪತಿ ನಾಗರಾಜ್ ವಸ್ತಾರೆ ಹೇಳಿದ್ದಾರೆ. ಇಷ್ಟೇ ಅಲ್ಲ ''ಬಿಗ್ ಬಾಸ್'' ಕಾರ್ಯಕ್ರಮದಲ್ಲಿ ಭಾಗವಹಿಸಿ ಆ ನಂತರ ಅಪರ್ಣಾ ಕೊನೆಯವರೆಗೆ ಪಶ್ಚಾತಾಪವನ್ನು ಕೂಡ ಪಟ್ಟಿದ್ದರು ಎಂಬ ಕಹಿ ಸತ್ಯ ಕೂಡ ಹೇಳಿದ್ದಾರೆ.

She Regretted It Anchor Aparna s Untold Bigg Boss Heartbreak Revealed by Husband Nagaraj Vastarey

ಈ ಕುರಿತು ''ಪವರ್ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಪರ್ಣಾ ಅವರ ಪತಿ ನಾಗರಾಜ್ ವಸ್ತಾರೆ, '' ಬಿಗ್‌ ಬಾಸ್‌'' ಅಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಕೊನೆಯವರೆಗೆ ನಮ್ಮ ಇಬ್ಬರಿಗೆ ತುಂಬಾ ಪಶ್ಚಾತಾಪ ಆಯ್ತು ಎಂದು ಹೇಳಿದ್ದಾರೆ. ಮನೆಯವರೆಗೆ ಬಂದು ಅವರು ನಮಗೆ ಹೇಳಿದ್ದೇ ಬೇರೆ, ಆದರೆ ಅಲ್ಲಿ ಆಗಿದ್ದೇ ಬೇರೆ ಎಂದು ಹೇಳಿರುವ ನಾಗರಾಜ್ ವಸ್ತಾರೆ ಅಲ್ಲಿ ಎಲ್ಲರೂ ನಿಮ್ಮ ಸಮ ವಯಸ್ಕರು, ಸಮ ಮನಸ್ಕರು ಎಂದು ನಮಗೆ ಹೇಳಿದ್ದರು ಆದರೆ ಅಲ್ಲಿ ಇದ್ದಿದ್ದೇ ಬೇರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

''ಬಿಗ್ ಬಾಸ್'' ನಿರ್ಧಾರ ತೆಗೆದುಕೊಂಡಿದ್ದಕ್ಕೆ ಅಪರ್ಣಾಗೆ ತುಂಬಾನೇ ಬೇಜಾರಿತ್ತು ಎಂದು ಹೇಳಿರುವ ನಾಗರಾಜ್ ವಸ್ತಾರೆ, ನಮ್ಮ ನಡುವೆ ಆಗ ಸಂಪರ್ಕವೇ ಇರಲಿಲ್ಲ, ಆಕೆಯ ಮೊಬೈಲ್ ಕೂಡ ನನ್ನ ಬಳಿಯೇ ಇತ್ತು ಎಂದು ಹೇಳಿದ್ದಾರೆ. ನಾನೇ ಅಮಾಯಕ.. ಮುಗ್ದ.. ಎಂದುಕೊಂಡರೆ ಅವಳು ಈ ಕ್ಷೇತ್ರದಲ್ಲಿಯೇ ಇದ್ದರೂ ಅವಳು ನನಗಿಂತ ಮುಗ್ದೆ ಎಂದು ಹೇಳಿರುವ ನಾಗರಾಜ್ ವಸ್ತಾರೆ ಅವಳು ಅಲ್ಲಿ ಹೋದ ನಂತರ ತುಂಬಾ ಬೇಸರವಾಯ್ತು ಎಂದು ಹೇಳಿದ್ದಾರೆ.

she-regretted-it-anchor-aparnas-untold-bigg-boss-heartbreak-revealed-by-husband-nagaraj-vastarey

ಮುಂದುವರೆದು ಒಂದು ಹಂತದಲ್ಲಿ ಅವಳು ತನ್ನ ಮಾಂಗಲ್ಯ ತೆಗೆದು ಇದರ ಮೇಲೆ ಆಣೆ ಮಾಡ್ತೀನಿ ಎಂದು ಆ ಕಾರ್ಯಕ್ರಮದಲ್ಲಿ ಹೇಳಿದಾಗ ನನಗೆ ವ್ಯೆಯಕ್ತಿಕವಾಗಿ ತುಂಬಾ ಇರಿಸು ಮುರಿಸಾಯ್ತು ಎಂದು ಹೇಳಿರುವ ನಾಗರಾಜ್ ವಸ್ತಾರೆ, ತಕ್ಷಣ ಆ ಸಂಚಿಕೆಯ ನಂತರ ನಾನು ಫೋನ್ ಮಾಡಿ ಏನೇ ಆಗಲಿ ಅಪರ್ಣೆಯನ್ನು ಕಳುಹಿಸಿ ಕೊಡಿ ಎಂದು ಅವರಲ್ಲಿ ಮನವಿ ಮಾಡಿಕೊಂಡೆ, ಆಗಲೇ ಇದೆಲ್ಲವೂ ಪೂರ್ವ ನಿರ್ಧಾರಿತ ಎಂದು ನನಗೆ ಗೊತ್ತಾಯ್ತು ಎಂದು ಹೇಳಿದ್ದಾರೆ. ನಾನು ಅವಳನ್ನು ಕಳುಹಿಸಿ ಕೊಡಿ ಎಂದು ಹೇಳಿದ ವಾರದಲ್ಲಿಯೇ ಅಪರ್ಣಾನ ಮನೆಯಿಂದ ಹೊರಗಡೆ ಕಳುಹಿಸಲಾಯ್ತು ಎಂದು ಹೇಳಿದ್ದಾರೆ.

''ಬಿಗ್ ಬಾಸ್‌''ನಲ್ಲಿ ಭಾಗವಹಿಸಿದ್ದಕ್ಕೆ ತುಂಬಾನೇ ಅವಳಿಗೆ ಪಶ್ಚಾತಾಪ ಇತ್ತು ಎಂದು ಹೇಳಿರುವ ನಾಗರಾಜ್ ವಸ್ತಾರೆ, ಅಲ್ಲಿ ನಾನು ಪಾಠ ಕಲಿತೆ, ನಾವು ಅಂದುಕೊಂಡಂತೆ ನಮ್ಮೆದುರು ಇರುವ ಜನ ಇರಲ್ಲ ಎನ್ನುವುದು ಅವಳಿಗೆ ಮನದಟ್ಟಾಗಿತ್ತು ಎಂದು ಹೇಳಿದ್ದಾರೆ. ''ಬಿಗ್ ಬಾಸ್‌'' ಮನೆಗೆ ಆಕೆ ಹೋಗಿದ್ದು ಅದಕ್ಕೆ ನಾನು ಒಪ್ಪಿದ್ದು ನಾವು ಇಬ್ಬರು ತೆಗೆದುಕೊಂಡ ಬಹುದೊಡ್ಡ ತಪ್ಪು ನಿರ್ಧಾರ ಎಂದು ಹೇಳಿದ್ದಾರೆ.

More from Filmibeat

English summary
What truly happened after the cameras stopped rolling? Nagaraj Vastarey reveals Anchor Aparna's untold heartache and the reasons she ultimately considered her Bigg Boss stint a mistake.
Read more about: bigg boss biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X