ರಾಜ್ ಕುಂದ್ರ ಬಂಧನದ ಬಳಿಕ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡ ಶಿಲ್ಪಾ ಶೆಟ್ಟಿ

ಪತಿ, ಉದ್ಯಮಿ ರಾಜ್ ಕುಂದ್ರ ಬಂಧನದಿಂದ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಮುಜುಗರ ಅನುಭವಿಸುವಂತಾಗಿದೆ. ಪತಿಯ ಬ್ಲೂ ಫಿಲ್ಮ್ ಪ್ರಕರಣ ಶಿಲ್ಪಾ ಶೆಟ್ಟಿಯ ಮೇಲೂ ಪರಿಣಾಮ ಬೀರಿದೆ. ಈ ಸಂಬಂಧ ಇತ್ತೀಚಿಗೆ ಮುಂಬೈ ಪೊಲೀಸರು ಶಿಲ್ಪಾ ಶೆಟ್ಟಿಯನ್ನು ವಿಚಾರಣೆ ನಡೆಸಿದ್ದರು. ರಾಜ್ ಕುಂದ್ರ ಬಂಧನದ ಬಳಿಕ ಶಿಲ್ಪಾ ಶೆಟ್ಟಿ ಸಾರ್ವನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಅಲ್ಲದೇ ನೆಟ್ಟಿಗರು ಶಿಲ್ಪಾ ಶೆಟ್ಟಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.

ಇಷ್ಟೆಲ್ಲದರ ನಡುವೆಯೂ ಶಿಲ್ಪಾ ಶೆಟ್ಟಿ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷರಾಗಿದ್ದರು. ಇದರ ಬೆನ್ನಲ್ಲೇ ಶಿಲ್ಪಾ ಶೆಟ್ಟಿ ಕಿರುತೆರೆಗೆ ಮರಳಿದ್ದಾರೆ. ಶಿಲ್ಪಾ ಶೆಟ್ಟಿ ಹಿಂದಿ ಕಿರುತೆರೆಯ ಪ್ರಸಿದ್ಧ ಡಾನ್ಸ್ ಶೋ ಸೂಪರ್ ಡಾನ್ಸರ್-4ನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಪತಿ ರಾಜ್ ಕುಂದ್ರ ಬಂಧನದ ಬಳಿಕ ಶಿಲ್ಪಾ ಶೆಟ್ಟಿ ಡಾನ್ಸ್ ಶೋನ ಜಡ್ಜ್ ಸ್ಥಾನ ತ್ಯಜಿಸಿದ್ದರು. ಇದೀಗ ತಿಂಗಳ ಬಳಿಕ ಶಿಲ್ಪಾ ಮತ್ತೆ ಮರಳಿದ್ದಾರೆ.

ಶಿಲ್ಪಾ ಶೆಟ್ಟಿ ಸ್ಥಾನದಲ್ಲಿ ಖ್ಯಾತ ನಟಿಯಾರಾದ ಕರಿಶ್ಮಾ ಕಪೂರ್, ನೋರಾ ಫತೇಹಿ ಜನಿಲಿಯಾ ದಂಪತಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಶಿಲ್ಪಾ ಕಿರುತೆರೆೆ ಮರಳಿದ್ದು ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಶೋನಲ್ಲಿ ಶಿಲ್ಪಾ ಶೆಟ್ಟಿ ಜೊತೆ ಸಹ ಜಡ್ಜ್ ಗಳಾಗಿ, ಅನುರಾಗ್ ಬಸು ಮತ್ತು ಗೀತಾ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಶಿಲ್ಪಾ ಎಂಟ್ರಿ ಟ್ರೆಂಡಿಂಗ ನಲ್ಲಿದೆ.

Shilpa Shetty return to Super Dancer -4 show after Raj Kundra arrest

ಶಿಲ್ಪಾ ಶೋನಲ್ಲಿ ಭಾಗಿಯಾಗಿರುವ ಪ್ರೋಮೋ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶಿಲ್ಪಾ ಶೆಟ್ಟಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಅನೇಕರು ಕಾಮೆಂಟ್ ಮಾಡಿ, ಈ ಮೂವರು ಜಡ್ಜ್ ಗಳನ್ನು ಮತ್ತೆ ಬದಲಾಯಿಸಬೇಡಿ ಎಂದು ಹೇಳುತ್ತಿದ್ದಾರೆ.

ಇತ್ತೀಚಿಗೆಷ್ಟೆ ಶಿಲ್ಪಾ ಶೆಟ್ಟಿ ಸಹ ಜಡ್ಜ್ ಅನುರಾಗ್ ಬಸು ಪ್ರತಿಕ್ರಿಯೆ ನೀಡಿ, ಶಿಲ್ಪಾ ಶೆಟ್ಟಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದರು. "ನಾವು ಶಿಲ್ಪಾ ಶೆಟ್ಟಿ ಅವರನ್ನು ಸೆಟ್ ನಲ್ಲಿ ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ನಾವೆಲ್ಲರ ನಡುವೆ ಒಂದು ಬಾಂಧವ್ಯವಿದೆ. ನಾವೆಲ್ಲರೂ ಒಂದು ಕುಟುಂಬದ ಹಾಗೆ ಇದ್ದೆವು. ಒಬ್ಬ ವ್ಯಕ್ತಿ ಇಲ್ಲವಾದಾಗ ತುಂಬಾ ಬೇಸರವಾಗುತ್ತೆ. ಶಿಲ್ಪಾ ನಮಗೆ ಪ್ರಿಯ" ಎಂದು ಹೇಳಿದ್ದಾರೆ.

ರಾಜ್ ಕುಂದ್ರ ಅವರನ್ನು ಮುಂಬೈ ಪೊಲೀಸರು ಕಳೆದ ತಿಂಗಳು ಜುಲೈ 19ರಂದು ಬಂಧಿಸಿದ್ದರು. ಪತಿಯ ಅರೆಸ್ಟ್ ಬಳಿಕ ಶಿಲ್ಪಾ ಶೆಟ್ಟಿ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆದರೆ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಮಾನಸಿಕ ಆರೋಗ್ಯದ ಕುರಿತು ಕೆಲವು ಸಲಹೆಗಳನ್ನು ನೀಡಿದ್ದರು. 'ವಿ ಫಾರ್ ಇಂಡಿಯಾ' ಹೆಸರಿನ ಕೋವಿಡ್ 19 ನಿಧಿ ಸಂಗ್ರಹ ಅಭಿಯಾನಕ್ಕೆ ಜೊತೆಯಾಗಿರುವ ಶಿಲ್ಪಾ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆ ದಿನ ವಿಡಿಯೋ ಒಂದನ್ನು ಅಪ್‌ಲೋಡ್ ಮಾಡಿ ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ, ಸಕಾರಾತ್ಮಕ ಚಿಂತನೆ ಇತರ ವಿಷಯಗಳ ಬಗ್ಗೆ ಸಲಹೆಗಳನ್ನು ನೀಡಿದ್ದರು.

''ನಾವಿಂದು ಬಹಳ ಕಷ್ಟದ ಸಮಯದಲ್ಲಿ ಬದುಕುತ್ತಿದ್ದೇವೆ. ನಾವು ಹೇಗೆ ಉಸಿರಾಡುತ್ತೇವೆ ಎಂಬುದುರ ಮೇಲೆ ನಮ್ಮ ಆರೋಗ್ಯ ನಿರ್ಭರವಾಗಿದೆ. ಒಳ್ಳೆಯ ಉಸಿರಾಟದಿಂದ ನಾವು ನಮ್ಮ ದೇಹವನ್ನು ರೋಗಾಣುಗಳಿಂದ ಕಾಪಾಡಿಕೊಳ್ಳಬಹುದು. ನಮ್ಮ ಶ್ವಾಸ ವ್ಯವಸ್ಥೆ ಸದಾ ಉತ್ತಮವಾಗಿರಬೇಕು. ಇದರಿಂದ ಆಮ್ಲಜನಕ ನಮ್ಮ ಮೆದುಳಿಗೆ ಸೇರುವುದು ಸಾಧ್ಯವಾಗುತ್ತದೆ. ಇದರಿಂದಾಗಿಯೇ ಪ್ರಾಣಯಾಮ ಎಂಬುದು ಬಹಳ ಪರಿಣಾಮಕಾರಿಯಾಗಿದೆ. ಉತ್ತಮ ಆರೋಗ್ಯ ಹಾಗೂ ಧನಾತ್ಮಕ ಚಿಂತನೆಗೆ ಇದು ಸಹಾಯ ಮಾಡುತ್ತದೆ'' ಎಂದು ಶಿಲ್ಪಾ ಶೆಟ್ಟಿ ವಿಡಿಯೋದಲ್ಲಿ ಹೇಳಿದ್ದರು. ಇದೀಗ ಕಿರುತೆರೆಗೆ ಮರಳಿರುವ ಶಿಲ್ಪಾ ಶೆಟ್ಟಿಯನ್ನು ನೋಡಲು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

More from Filmibeat

English summary
Bollywood Actress Shilpa Shetty return to Super Dancer -4 show after Raj Kundra arrest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X