Shilpa Shetty: ಬೋಲ್ಡ್ ಅವತಾರದ ಮೂಲಕ ಪಡ್ಡೆಹೈಕ್ಕಳ ಮನ ಕದ್ದ ಶಿಲ್ಪಾ ಶೆಟ್ಟಿ
ಕಿರುತೆರೆಯ ಮೂಲಕ ನಟನೆಗೆ ಕಾಲಿಟ್ಟು ತದ ನಂತರ ಹಿರಿತೆರೆಯಲ್ಲಿ ಮಿಂಚುತ್ತಿರುವ ನಟಿಯರ ಪೈಕಿ ಶಿಲ್ಪಾ ಶೆಟ್ಟಿಯೂ ಒಬ್ಬರು. ಅಂದ ಹಾಗೇ ನಾವು ಮಾತನಾಡುತ್ತಿರುವುದು ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿಯ ಬಗ್ಗೆಯಲ್ಲ. ಬದಲಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಚೆಲುವೆ ಬಗ್ಗೆ. ಮಾಡೆಲಿಂಗ್ ಮೂಲಕ ಬಣ್ಸದ ಜಗತ್ತಿನ ನಂಟು ಬೆಳೆಸಿಕೊಂಡ ಶಿಲ್ಪಾ ಶೆಟ್ಟಿ ನಂತರ ಕಿರುತೆರೆಗೆ ಕಾಲಿಟ್ಟು ಈಗ ಹಿರಿತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ.
ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಈಕೆ ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಧಾರಾವಾಹಿಯಲ್ಲಿ ಟ್ರೆಡಿಶನಲ್ ಲುಕ್‌ನಲ್ಲಿ ಕಾಣಿಸಿಕೊಂಡು ವೀಕ್ಷಕರ ಮನ ಸೆಳೆದಿರುವ ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಸಖತ್ ಬೋಲ್ಡ್ ಮತ್ತೆ ಹಾಟ್ ಅವತಾರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದು ಪಡ್ಡೆ ಹೈಕ್ಕಳ ಹಾರ್ಟ್‌ಗೆ ಕನ್ನ ಹಾಕುತ್ತಿದ್ದಾರೆ.

ಎರಡು ಕನಸು ಮೂಲಕ ಕಿರುತೆರೆಗೆ ಎಂಟ್ರಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಎರಡು ಕನಸು' ಧಾರಾವಾಹಿಯಲ್ಲಿ ನಾಯಕಿ ಸಹಜ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಬ್ಯೂಟಿ ಕ್ವೀನ್ ಶಿಲ್ಪಾ ಶೆಟ್ಟಿ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ. ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮರಳಿ ಮನಸಾಗಿದೆ' ಧಾರಾವಾಹಿಯಲ್ಲಿ ನಾಯಕಿ ವೈಷ್ಣವಿಯಾಗಿ ಮೋಡಿ ಮಾಡಿದರು. ಆರಂಭದಲ್ಲಿ ಅದು ಪಾಸಿಟಿವ್ ಪಾತ್ರವಾಗಿದ್ದರೂ ಸಮಯ ಕಳೆದಂತೆ ನೆಗೆಟಿವ್ ಲುಕ್ ಕೂಡಾ ಹೊಂದಿದ್ದು ಅಲ್ಲೂ ವೀಕ್ಷಕ ಮನ ಗೆಲ್ಲುವಲ್ಲಿ ಆಕೆ ಯಶಸ್ವಿಯಾದರು.

ಸಿನಿಮಾದಲ್ಲಿಯೂ ಮೋಡಿ
ರೂಪೇಶ್ ಶೆಟ್ಟಿ ಅಭಿನಯದ 'ಗಿರ್ಗಿಟ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕೋಸ್ಟಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಶಿಲ್ಪಾ ಶೆಟ್ಟಿ 'ನ್ಯೂರಾನ್', '100' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ 'ಶುಗರ್ ಫ್ಯಾಕ್ಟರಿ' ಸಿನಿಮಾದಲ್ಲಿಯೂ ಆಕೆ ಬಣ್ಣ ಹಚ್ಚಿದ್ದು ಅದು ತೆರೆ ಕಾಣಬೇಕಿದೆ.
ಉದ್ಯಮಿಯೂ ಹೌದು
ಇದರ ಜೊತೆಗೆ ಶಿಲ್ಪಾ ಶೆಟ್ಟಿ ಅವರು ತಮ್ಮದೇ ಆದ ಹೊಸ ಬ್ಯುಸಿನೆಸ್ ಒಂದನ್ನು ಶುರು ಮಾಡಿಕೊಂಡಿದ್ದಾರೆ. ಹೌದು, ಆಕರ್ಷಣ್ ಬೈ ಶಿಲ್ಪಾ ಶೆಟ್ಟಿ ಎನ್ನುವ ಸಂಸ್ಥೆಯೊಂದನ್ನು ಶಿಲ್ಪಾ ಶೆಟ್ಟಿ ಶುರು ಮಾಡಿದ್ದು ಅಲ್ಲಿ ಬಾಡಿಗೆಗೆ ಜ್ಯುವೆಲರಿಗಳನ್ನು ನೀಡಲಾಗುತ್ತದೆ. ಒಟ್ಟಿನಲ್ಲಿ ಸದ್ಯ ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿರುವ ಶಿಲ್ಪಾ ಶೆಟ್ಟಿ ಮತ್ತೆ ಕನ್ನಡ ಕಿರುತೆರೆಗೆ ಮರಳುತ್ತಾರಾ ಎಂದು ಕಾದು ನೋಡಬೇಕಾಗಿದೆ.


Click it and Unblock the Notifications











