For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್'ನಲ್ಲಿ ಶೈನ್ ಆದ ಶೆಟ್ಟಿ ಕುರಿಯಾದ ಪ್ರತಾಪ್

  |
  Shine Shetty : Bigg Boss Kannada 07 : Shine Shetty lifts the BB trophy | Kuri Prathap

  ಕನ್ನಡ ಕಿರುತೆರೆಯ ದೊಡ್ಡಣ್ಣ ಎಂದೇ ಕರೆಯಲ್ಪಡುವ 'ಬಿಗ್ ಬಾಸ್ ಸೀಸನ್ 7' ನ ಗ್ರಾಂಡ್ ಫಿನಾಲೆ ಅದ್ಧೂರಿಯಾಗಿ ನಡೆದಿದೆ. ನಟ ಶೈನ್ ಶೆಟ್ಟಿ ವಿನ್ನರ್ ಪಟ್ಟ ಪಡೆದಿದ್ದು, ಹಾಸ್ಯ ನಟ ಕುರಿ ಪ್ರತಾಪ್ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

  ಅಕ್ಟೋಬರ್ 13 ರಂದು ಶುರು ಆಗಿದ್ದ ಬಿಗ್ ಬಾಸ್ ಆಟ ಇಂದು (ಫೆಬ್ರವರಿ 2) ಮುಗಿದಿದೆ. ಯಾರು ಈ ಸೀಸನ್ ಗೆಲ್ಲಬಹುದು ಎಂಬ ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಶತದಿನದ ರೋಚಕತೆಯ ಆಟದಲ್ಲಿ ಶೈನ್ ಶೆಟ್ಟಿ ಶೈನ್ ಆಗಿದ್ದಾರೆ. ಕುರಿ ಪ್ರತಾಪ್ ರನ್ನರ್ ಅಪ್ ಆಗಿದ್ದು, ವಾಸುಕಿ ವೈಭವ್ ಮೂರನೇ ಸ್ಥಾನ ಪಡೆದಿದ್ದಾರೆ.

  ಬಿಗ್ ಬಾಸ್ ಮನೆಯ ಕಾಮಿಡಿ ಸ್ಟಾರ್ ಕುರಿ ಪ್ರತಾಪ್ ಗೆದಿದ್ದಾರೆಂದು ಅನೇಕ ಪೋಸ್ಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಶೈನ್ ಶೆಟ್ಟಿ ಹೆಸರು ಕೂಡ ಜೋರಾಗಿಯೇ ಇತ್ತು. ಅಂತಿಮವಾಗಿ ಕಿಚ್ಚ ಶೈನ್ ಶೆಟ್ಟಿ ಕೈಯನ್ನು ಎತ್ತುವ ಮೂಲಕ ಪ್ರೇಕ್ಷಕರ ನೂರು ದಿನಗಳ ಕುತೂಹಲಕ್ಕೆ ತೆರೆ ಎಳೆದರು.

  ಫಿನಾಲೆ ವಾರದಲ್ಲಿ ಹರೀಶ್ ರಾಜ್ ಮಿಡ್ ನೈಟ್ ಎಲಿಮಿನೇಶನ್ ಆದರು. ಹೀಗಾಗಿ ಅಂತಿಮವಾಗಿ 5 ಸ್ಪರ್ಧಿಗಳು ಬಿಗ್ ಬಾಸ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದರು. ಇದರಲ್ಲಿ ಗಾಯಕ ವಾಸುಕಿ ವೈಭವ್ ನೇರ ಟಾಸ್ಕ್ ಮೂಲಕ ಎಂಟ್ರಿ ಪಡೆದರೆ, ವೋಟಿಂಗ್ ಆಧಾರದಲ್ಲಿ ದೀಪಿಕಾ ದಾಸ್, ಭೂಮಿ ಶೆಟ್ಟಿ, ಕುರಿ ಪ್ರತಾಪ್ ಹಾಗೂ ಶೈನ್ ಶೆಟ್ಟಿ ಬಿಗ್ ಫಿನಾಲೆಗೆ ಟಿಕೆಟ್ ಪಡೆದಿದ್ದರು.

  18 ಸ್ಪರ್ಧಿಗಳ ಪೈಕಿ ವಿನ್ನರ್ ಆದ ಶೈನ್ ಶೆಟ್ಟಿಗೆ 50 + 11 ಅಂದರೆ 61 ಲಕ್ಷ ರೂಪಾಯಿ ಬಹುಮಾನವಾಗಿ ಸಿಕ್ಕಿದೆ.

  English summary
  Actor Shine Shetty become the winner of Bigg Boss Kannada 7.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X