ನನ್ನ ತಂದೆಯೇ ನನ್ನನ್ನು ವೇಶ್ಯೆ ಎಂದು ಕರೆಯುತ್ತಿದ್ದರು, ಕಣ್ಣೀರು ಹಾಕಿದ ಖ್ಯಾತ ನಟಿ..!

ತಾಯಿಗೆ ಸಿಗುವಷ್ಟೇ ಪ್ರಾಮುಖ್ಯತೆ ತಂದೆಗೂ ಕೂಡ ನೀಡಲಾಗುತ್ತೆ. ಪ್ರತಿಯೊಂದು ಮನೆಯಲ್ಲಿ ಮಗ ಇರಲಿ ಮಗಳಿರಲಿ ಅವರಿಗೆ ತಂದೆಯೇ ಮಾರ್ಗದರ್ಶಿ ಆಗಿರುತ್ತಾರೆ. ಮಗಳಿಗೆ ತಂದೆ ಸೂಪರ್ ಹೀರೋ ಆದರೆ ಮಗನಿಗೆ ತಂದೆಯೇ ಸ್ಫೂರ್ತಿ. ಮಕ್ಕಳನ್ನು ಬೆಳೆಸುವಲ್ಲಿ .. ಪ್ರೀತಿಸುವಲ್ಲಿ .. ಅವರಿಗೊಂದು ಉತ್ತಮವಾದ ಭವಿಷ್ಯವನ್ನು ರೂಪಿಸುವುದರಲ್ಲಿ ತಾಯಿಯ ಪಾತ್ರ ಎಷ್ಟು ಮುಖ್ಯವಾಗಿರುತ್ತೋ ಅಷ್ಟೇ ತಂದೆಯ ಪಾತ್ರ ಕೂಡ ಮುಖ್ಯವಾಗಿರುತ್ತೆ.

ತಾಯಿ ಎಷ್ಟೇ ಪ್ರೀತಿಯನ್ನು ನೀಡಿದರೂ ಕೂಡ ತಂದೆಯ ಪ್ರೀತಿಯನ್ನು ಕಾಳಜಿಯನ್ನು ಮಮತೆಯನ್ನು ಎಲ್ಲಾ ಮಕ್ಕಳು ಕೂಡ ಬಯಸುತ್ತಾರೆ. ಆದರೆ, ಎಲ್ಲರು ಅದೃಷ್ಟವಂತರಾಗಿರುವುದಿಲ್ಲ. ಕೆಲವೊಮ್ಮೆ ತಂದೆಯೇ ಮಕ್ಕಳಿಗೆ ಕೇಡು ಬಯಸುತ್ತಾರೆ. ಹಿಡಿ ಶಾಪ ಹಾಕುತ್ತಾರೆ. ಮಾನಸಿಕ ಮತ್ತೂ ಕೆಲವೊಮ್ಮೆ ದೈಹಿಕ ಕಿರುಕುಳವನ್ನು ಕೂಡ ನೀಡುತ್ತಾರೆ. ಇದಕ್ಕೆ ಶೈನಿ ದೋಷಿಯ ಬದುಕು ಸದ್ಯದ ಉದಾಹರಣೆ.

shiny-doshi-breaks-down-as-she-reveals-her-father-called-her-a-prostitute-when-she-was-16

ಹೌದು, ಶೈನಿ ದೋಷಿ .. ಹಿಂದಿ ಕಿರುತೆರೆಯ ಪ್ರಖ್ಯಾತ ಚೆಲುವೆ. ಸರಸ್ವತಿ ಚಂದ್ರ ಧಾರಾವಾಹಿಯ ಮೂಲಕ ಬಣ್ಣದ ಪ್ರಪಂಚದಲ್ಲಿ ಪ್ರಯಾಣ ಶುರು ಮಾಡಿದ ಶೈನಿ ಜಮಾಯಿ ರಾಜಾ, ಲಾಲ್ ಇಷ್ಕ್, ಪಾಂಡ್ಯ ಸ್ಟೋರ್, ಸರೋಜಿನಿ - ಏಕ್ ನಯೀ ಪಹಲ್, ಹೀಗೆ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಕಿರುತೆರೆಯಲ್ಲಿ ಹನ್ನೆರಡು ವರ್ಷಗಳನ್ನು ಕೂಡ ಪೂರೈಸಿದ್ದಾರೆ.

ಇಂಥಾ ಶೈನಿ ದೋಷಿ ಅವರಿಗೆ ಅವರ ತಂದೆಯೇ ವೇಶ್ಯೆ ಎಂದು ಕರೆಯುತ್ತಿದ್ದರು. ಜರಿಯುತ್ತಿದ್ದರು. ಈ ಆಘಾತಕಾರಿ ವಿಚಾರವನ್ನು ಶೈನಿ ದೋಷಿ ಇತ್ತೀಚೆಗೆ ಬಹಿರಂಗಗೊಳಿಸಿದ್ದಾರೆ. ಈ ಕುರಿತು ಸಿದ್ಧಾರ್ಥ್ ಕಣ್ಣನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶೈನಿ ದೋಷಿ ಮನೆಯ ಆರ್ಥಿಕ ಪರಿಸ್ಥಿತಿ ಸರಿಯಿರದ ಕಾರಣ ನಾನು ನನ್ನ ಹದಿನಾರನೇ ವಯಸ್ಸಿನಲ್ಲಿಯೇ ದುಡಿಯಲು ಪ್ರಾರಂಭ ಮಾಡಿದ್ದೇ ಎಂದು ಹೇಳಿದ್ಧಾರೆ.

ಅಹಮದಾಬಾದ್‌ನಲ್ಲಿ ನನ್ನ ಪ್ರಿಂಟ್ ಶೂಟ್‌ಗಳು ನಡೆಯುತ್ತಿದ್ದವು ಕೆಲ ಒಮ್ಮೆ ಕೆಲಸ ಮುಗಿಸುವಷ್ಟರಲ್ಲಿ ರಾತ್ರಿ 2 ಅಥವಾ 3 ಗಂಟೆ ಆಗುತ್ತಿತ್ತು ಎಂದು ಹೇಳಿರುವ ಶೈನಿ ದೋಷಿ ಈ ಸಮಯದಲ್ಲಿ ನನ್ನ ತಾಯಿ ನನ್ನ ಜೊತೆ ಸದಾ ಕಾಲ ಇರುತ್ತಿದ್ದರು ಎಂದು ಹೇಳಿದ್ದಾರೆ.

ನನ್ನ ತಾಯಿ ನನ್ನ ಜೊತೆ ಇದ್ದರೂ ಕೂಡ ನಮ್ಮ ತಂದೆಗೆ ಅನುಮಾನ ಹೀಗಾಗಿಯೇ ನಾವು ಮನೆಗೆ ಹೋದ ತಕ್ಷಣ ದಿನ ಹೇಗಿತ್ತು ? ಸುರಕ್ಷಿತವಾಗಿದ್ದೀರಾ ? ಕೆಲಸ ಹೇಗಿತ್ತು ? ಎಂದು ಕೇಳುವ ಬದಲು ನನ್ನ ತಂದೆ ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎಂದು ಹೇಳಿರುವ ಶೈನಿ ದೋಷಿ 3 ಗಂಟೆಯವರೆಗೆ ಮಗಳನ್ನು ಹೊರಗಡೆ ಕರೆದುಕೊಂಡು ಹೋಗುತ್ತೀಯಾ ? ವೇಶ್ಯಾವಾಟಿಕೆ ನಡೆಸುತ್ತಿದ್ದೀಯಾ ? ಎಂದು ನನ್ನ ತಂದೆ ತಾಯಿಗೆ ಕೇಳುತ್ತಿದ್ದರು, ನನ್ನ ತಾಯಿಯನ್ನು ಬೈಯ್ಯುತ್ತಿದ್ದರು, ನನ್ನನ್ನು ವೇಶ್ಯೆ ಎಂದು ಕರೆಯುತ್ತಿದ್ದರು ಎಂದು ಹೇಳಿದ್ದಾರೆ. ತಮ್ಮ ಆ ದಿನಗಳನ್ನು ನೆನೆಯುತ್ತಾ ಭಾವುಕರಾಗಿದ್ದಾರೆ. ಈ ವಿಚಾರಗಳನ್ನು ನೆನಪು ಮಾಡಿಕೊಂಡಾಗ ನನಗೆ ಈಗಲೂ ಕಣ್ಣೀರು ಬರುತ್ತೆ ಎಂದು ಹೇಳಿದ್ದಾರೆ.

ಮುಂದುವರೆದು ಇದೆಲ್ಲದರಿಂದ ನಾನು ಜೀವನದ ಪಾಠ ಕಲಿತಿದ್ದೇನೆ ಎಂದಿರುವ ಶೈನಿ ದೋಷಿ, ನನಗೆ ನನ್ನ ಕಷ್ಟಗಳನ್ನು ಕೇಳುವ, ನಿನ್ನ ಜೊತೆ ನಾನಿದ್ದೇನೆ ಎಂದು ಧೈರ್ಯ ತುಂಬುವ, ನನ್ನನ್ನು ಬೆಂಬಲಿಸುವ ತಂದೆ ಸಿಗಲೇ ಇಲ್ಲ ಎಂದು ಶೈನಿ ದೋಷಿ ಭಾವುಕರಾಗಿದ್ದಾರೆ.

ಅಂದ್ಹಾಗೇ 2019ರಲ್ಲಿ ಶೈನಿ ತಂದೆ ಅಮರನಾಥ ಯಾತ್ರೆಗಾಗಿ ಹಮ್ಮು ಮತ್ತು ಕಾಶ್ಮೀರಕ್ಕೆ ಹೋದಾಗ ನಿಧನರಾದರು. ತಂದೆ ಅಗಲುವ ಮುನ್ನ ಎರಡು ವರ್ಷ ಶೈನಿ ದೋಷಿ ತಂದೆಯ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದರು. ಸಂದರ್ಶನದಲ್ಲಿ ಈ ಕುರಿತು ವಿಷಾದವನ್ನು ಕೂಡ ಶೈನಿ ವ್ಯಕ್ತಪಡಿಸಿದ್ದಾರೆ.

More from Filmibeat

English summary
Television actor Shiny Doshi, known for Pandya Store and Saraswatichandra, recently spoke to Siddharth Kannan about her strained relationship with her father, recalling how he once called her a “prostitute” over late-night print shoots when she was 16.
Read more about: ಟಿವಿ actress life
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X