ಭ್ರಮೆ ಅಲ್ಲ: 'ಬಿಗ್ ಬಾಸ್' ಮನೆಯೊಳಗೆ ಹೋಗಿ ಬಂದ ಶಿವಣ್ಣ-ಪ್ರೇಮ್.!

Recommended Video

Bigg Boss Kannada Season 6 : ಬಿಗ್ ಮನೆಗೆ ಕಾಲಿಟ್ಟ ಶಿವರಾಜ್ ಕುಮಾರ್ ಹಾಗು ಡೈರೆಕ್ಟರ್ ಪ್ರೇಮ್

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಮೊದಲ ವಾರದ ಕೊನೆಗೆ 'ಬಿಗ್ ಬಾಸ್' ಮನೆಗೆ ಇಬ್ಬರು ವಿಶೇಷ ಅತಿಥಿಗಳು ಬಂದಿದ್ದರು. ಆ ಇಬ್ಬರು ವಿಶೇಷ ಅತಿಥಿಗಳು ಬೇರೆ ಯಾರೂ ಅಲ್ಲ... ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಪ್ರೇಮ್.!

ಕಳೆದ ಐದು 'ಬಿಗ್ ಬಾಸ್' ಸೀಸನ್ ಗಳಲ್ಲಿ ವಿಶೇಷ ಅತಿಥಿಗಳು ಸುದೀಪ್ ಜೊತೆಗಿನ ವೇದಿಕೆಗೆ ಮಾತ್ರ ಸೀಮಿತವಾಗಿದ್ದರು. ಆದ್ರೆ, ಈ ಬಾರಿ ಅತಿಥಿಗಳಿಗೆ 'ಬಿಗ್ ಬಾಸ್' ಒಳಗೆ ರೌಂಡ್ ಹಾಕಿ, ಸ್ಪರ್ಧಿಗಳಿಗೆ ಟಾಸ್ಕ್ ಕೊಡುವ ಅವಕಾಶ ಕೊಡ ನೀಡಲಾಗಿದೆ.

ಅದರಂತೆ ವೀಕೆಂಡ್ ನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಡೈರೆಕ್ಟರ್ ಪ್ರೇಮ್ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟು ಸ್ಪರ್ಧಿಗಳ ಜೊತೆಗೆ ಕೆಲಕಾಲ ಹರಟಿದರು. ಮುಂದೆ ಓದಿರಿ...

ಸ್ಪರ್ಧಿಗಳಿಗೆ ಟಾಸ್ಕ್ ಕೊಟ್ಟ ಶಿವಣ್ಣ, ಪ್ರೇಮ್

ಸ್ಪರ್ಧಿಗಳಿಗೆ ಟಾಸ್ಕ್ ಕೊಟ್ಟ ಶಿವಣ್ಣ, ಪ್ರೇಮ್

'ಬಿಗ್ ಬಾಸ್' ಮನೆಗೆ ಹೋದ್ಮೇಲೆ, ''ಬಿಗ್ ಬಾಸ್' ಮನೆಯ ವಿಲನ್ ಯಾರು.?'' ಎಂಬುದನ್ನು ಬಹಿರಂಗ ಪಡಿಸುವ ಟಾಸ್ಕ್ ನ ಸ್ಪರ್ಧಿಗಳಿಗೆ ಶಿವಣ್ಣ ಹಾಗೂ ಪ್ರೇಮ್ ನೀಡಿದರು.

ಬಹುತೇಕರ ಬಾಯಲ್ಲಿ ಆಂಡ್ರ್ಯೂ ಹೆಸರು.!

ಬಹುತೇಕರ ಬಾಯಲ್ಲಿ ಆಂಡ್ರ್ಯೂ ಹೆಸರು.!

ಆಂಡ್ರ್ಯೂ ಮಾಡುವ ತಲೆಹರಟೆ, ತರ್ಲೆ ಕೆಲಸಗಳು ಕೆಲವರಿಗೆ ಈಗಾಗಲೇ ಕಿರಿಕಿರಿ ತಂದಿದೆ. ಹೀಗಾಗಿ, ಹಲವರ ಪಾಲಿಗೆ ಆಂಡ್ರ್ಯೂ 'ವಿಲನ್' ಆಗಿದ್ದಾರೆ. ಹೆಚ್ಚು ಜನರಿಂದ 'ವಿಲನ್' ಹಣೆಪಟ್ಟಿ ಪಡೆದ ಆಂಡ್ರ್ಯೂಗೆ ವಿಶೇಷ ಉಡುಗೊರೆ ಕೂಡ ಸಿಕ್ತು.

ಆಂಡ್ರ್ಯೂಗೆ ಸಿಕ್ತು 'ಸುರಕ್ಷ ಕವಚ'

ಆಂಡ್ರ್ಯೂಗೆ ಸಿಕ್ತು 'ಸುರಕ್ಷ ಕವಚ'

ಹೆಚ್ಚು ಸ್ಪರ್ಧಿಗಳ ಪಾಲಿಗೆ ವಿಲನ್ ಆದ ಆಂಡ್ರ್ಯೂಗೆ ಶಿವಣ್ಣ ಕಡೆಯಿಂದ 'ಸುರಕ್ಷಾ ಕವಚ' ಸಿಕ್ತು. ಬಹುಶಃ ನಾಮಿನೇಷನ್ ಸಂದರ್ಭದಲ್ಲಿ ಈ 'ಸುರಕ್ಷ ಕವಚ'ವನ್ನ ಬಳಸಿಕೊಂಡು ಆಂಡ್ರ್ಯೂ ಸೇಫ್ ಆಗುವ ಸಾಧ್ಯತೆ ಹೆಚ್ಚಿದೆ.

ಶಿವಣ್ಣ ಮುಂದೆ ಊಟಕ್ಕೆ ಬೇಡಿಕೆ ಇಟ್ಟ ಸ್ಪರ್ಧಿಗಳು

ಶಿವಣ್ಣ ಮುಂದೆ ಊಟಕ್ಕೆ ಬೇಡಿಕೆ ಇಟ್ಟ ಸ್ಪರ್ಧಿಗಳು

''ಶಿವಣ್ಣನ ಮುಂದೆ ಸ್ಪರ್ಧಿಗಳು ಊಟಕ್ಕಾಗಿ ಬೇಡಿಕೆ ಇಟ್ಟರು. ಮುಂದಿನ ವಾರದೊಳಗೆ ಎಲ್ಲರಿಗೂ ನನ್ನ ಕಡೆಯಿಂದ ಊಟ ಸಿಗಲಿದೆ'' ಎಂದು ಶಿವಣ್ಣ ಮಾತು ಕೊಟ್ಟರು. ಶಿವಣ್ಣನ ಮಾತನ್ನು ನಡೆಸಿಕೊಡಲು 'ಬಿಗ್ ಬಾಸ್' ಅಪ್ಪಣೆ ಕೊಡ್ತಾರಾ ನೋಡಬೇಕು.

More from Filmibeat

English summary
Shiva Rajkumar and Prem as special guest in Bigg Boss Kannada 6.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X