For Quick Alerts
  ALLOW NOTIFICATIONS  
  For Daily Alerts

  ಶಿವರಾಜ್ ಕುಮಾರ್ ಪತ್ನಿ ಗೀತಾಗೆ ಮುಜುಗರ ಆದ ಪ್ರಸಂಗ.!

  By Harshitha
  |

  ಶಿವರಾಜ್ ಕುಮಾರ್ ಪತ್ನಿ ಗೀತಾ ರಾಜಕೀಯ ಕುಟುಂಬದಿಂದ ಬಂದಿರುವವರೇ ಆಗಿರಬಹುದು. ಚುನಾವಣೆಯಲ್ಲೂ ಸ್ಪರ್ಧಿಸಿರಬಹುದು. ಆದರೂ, ಅವರು ಸ್ವಲ್ಪ ಸಂಕೋಚದ ಸ್ವಭಾವದವರು.

  ಮಾಧ್ಯಮಗಳ ಮುಂದೆ ನಿಂತು ಶಿವಣ್ಣನ ಹುಟ್ಟುಹಬ್ಬಕ್ಕೆ ವಿಶ್ ಮಾಡುವುದಕ್ಕೂ ಗೀತಾ ಹಿಂದು ಮುಂದು ನೋಡುತ್ತಾರೆ. ಹೀಗಿರಬೇಕಾದ್ರೆ, ಮೊನ್ನೆ ಒಂದು ಘಟನೆ ನಡೆಯಿತು.

  ಉದಯ ಟಿವಿಯ ಡ್ಯಾನ್ಸ್ ರಿಯಾಲಿಟಿ ಶೋ 'ಕಿಕ್' ಮೊದಲ ಸಂಚಿಕೆ ಚಿತ್ರೀಕರಣ ನಡೆಯುತ್ತಿತ್ತು. ಹೇಳಿ ಕೇಳಿ, 'ಕಿಕ್' ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಮಹಾ ಗುರು. ಹೀಗಾಗಿ, ಶಿವಣ್ಣ ಸ್ಟೆಪ್ ಹಾಕ್ಬೇಕಿತ್ತು. ಆಗ ಶಿವಣ್ಣನ ಜೊತೆ ಪತ್ನಿ ಗೀತಾ ಕೊಡ ಹೆಜ್ಜೆ ಹಾಕಲೇಬೇಕಾದ ಪ್ರಸಂಗ ಎದುರಾಯ್ತು. [ಶಿವಣ್ಣ-ಗೀತಾ; ಜೊತೆಯಾಗಿ..ಹಿತವಾಗಿ..ಕೂಡಿ ಬಾಳಿ..ಹೀಗೆ ಎಂದೂ..]

  ಡಾ.ರಾಜ್ ಕುಮಾರ್ ಅಭಿನಯದ ಸೂಪರ್ ಡ್ಯೂಪರ್ ಹಿಟ್ 'ಕಸ್ತೂರಿ ನಿವಾಸ' ಚಿತ್ರದ 'ನೀ ಬಂದು ನಿಂತಾಗ...' ಹಾಡಿಗೆ ಶಿವಣ್ಣನ ಜೊತೆ ಮೊಟ್ಟ ಮೊದಲ ಬಾರಿಗೆ ಪಬ್ಲಿಕ್ ನಲ್ಲಿ ಸೊಂಟ ಬಳುಕಿಸಿದ ಗೀತಾ ಮುಜುಗರ ಪಟ್ಟುಕೊಂಡರು.

  ತದನಂತರ ಕಾರ್ಯಕ್ರಮದ ನಿರೂಪಕ ಅಕುಲ್ ಗೆ ಫೋನ್ ಮಾಡಿ ತಾವು ಡ್ಯಾನ್ಸ್ ಮಾಡಿದ ಭಾಗವನ್ನ ಡಿಲೀಟ್ ಮಾಡಲು ಹೇಳುವಂತೆ ನಟ ಶಿವರಾಜ್ ಕುಮಾರ್ ಗೆ ಗೀತಾ ಸೂಚಿಸಿದರಂತೆ.

  ''ಆಗಿದ್ದು ಆಯ್ತು. ಶೋನ ಎಂಜಾಯ್ ಮಾಡಬೇಕು'' ಅಂತ ಹೇಳಿ ಖುದ್ದು ಶಿವರಾಜ್ ಕುಮಾರ್, ಪತ್ನಿ ಗೀತಾಗೆ ಸಮಾಧಾನ ಮಾಡಿದರಂತೆ.

  ಶಿವಣ್ಣ-ಗೀತಾ ಡ್ಯಾನ್ಸ್ ಮಾಡಿರುವ 'ಕಿಕ್' ಕಾರ್ಯಕ್ರಮದ ಮೊದಲ ಸಂಚಿಕೆ ಜುಲೈ 16 ರಂದು ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

  English summary
  Kannada Actor Shiva Rajkumar and his wife Geetha has danced for the famous song 'Nee bandu Nintaga' from the film 'Kasturi Nivasa' in Udaya TV's 'Kick' Dance reality show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X