ಸುದೀಪ್ ಆಡಿದ ಮಾತಿಗೆ ಚಪ್ಪಾಳೆ ಹೊಡೆದ ಶಿವಣ್ಣ.! ಏನಂಥ ಮಾತು.?

By Harshitha

ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎನ್ನುವ ಹಾಗೆ ಪ್ರತಿಯೊಂದು ವಿಚಾರದ ಬಗ್ಗೆಯೂ ಕಿಚ್ಚ ಸುದೀಪ್ ಅಳೆದು ತೂಗಿ ಮಾತನಾಡುತ್ತಾರೆ. ಅಷ್ಟಿಲ್ಲದೇ, 'ಬಿಗ್ ಬಾಸ್' ಎಂಬ ರಿಯಾಲಿಟಿ ಶೋದಲ್ಲಿ ಐದು ಆವೃತ್ತಿಗಳನ್ನ ಸುದೀಪ್ ಯಶಸ್ವಿಯಾಗಿ ನಿರೂಪಣೆ ಮಾಡಲು ಸಾಧ್ಯ ಆಗುತ್ತಿತ್ತೇ.?

ಮಾತಿನಲ್ಲೇ ಎಲ್ಲವನ್ನೂ ಗೆಲ್ಲುವ ಶಕ್ತಿ, ತಾಕತ್ತು ಸುದೀಪ್ ಗಿದೆ. ಅಂತಹ ಸುದೀಪ್ ರವರ ಮಾತುಗಳನ್ನು ಕೇಳಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಚಪ್ಪಾಳೆ ಹೊಡೆದಿದ್ದಾರೆ.

ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಿಚ್ಚ ಸುದೀಪ್ ಹಾಗೂ ಪ್ರೇಮ್ ಭಾಗವಹಿಸಿದ್ದರು.

Shiva Rajkumar clapped for Sudeeps statement

ಕಾರ್ಯಕ್ರಮದ ಮೊದಲ ಸೆಗ್ಮೆಂಟ್ (ಸತ್ಯನಾ..? ಧೈರ್ಯನಾ..?) ನಲ್ಲಿ ಸತ್ಯ ಹೇಳಲು ಕಿಚ್ಚ ಸುದೀಪ್ ಆಯ್ಕೆ ಮಾಡಿಕೊಂಡಾಗ, ಅವರ ಮುಂದೆ ಎದುರಾದ ಪ್ರಶ್ನೆ - ''ಕನ್ನಡ ಇಂಡಸ್ಟ್ರಿ ನಿಮ್ಮ ಟ್ಯಾಲೆಂಟ್ ಗೆ ಚಿಕ್ಕದು ಅಂತ ಅನಿಸುತ್ತಾ.?''

ಶಿವಣ್ಣ ಈ ಪ್ರಶ್ನೆ ಕೇಳುತ್ತಿದ್ದಂತೆಯೇ, ಸುದೀಪ್ ಬಾಯಿಂದ ಬಂದ ಉತ್ತರ ಇದು - ''ಇಲ್ಲ. ನನಗೆ ಇಲ್ಲಿಂದಲೇ ಗುರುತು ಸಿಕ್ಕಿದ್ದು. ಇದನ್ನ ನಾವು ಚಿಕ್ಕದು ಅನ್ನೋದಲ್ಲ. ಇಂಡಸ್ಟ್ರಿ ಯಾವತ್ತೂ ಚಿಕ್ಕದಾಗಲು ಸಾಧ್ಯ ಇಲ್ಲ, ಇಂಡಸ್ಟ್ರಿಯಲ್ಲಿ ನಾವು ಚಿಕ್ಕವರು ಅಷ್ಟೇ''.

ಸುದೀಪ್ ಹೀಗೆ ಹೇಳುತ್ತಿದ್ದಂತೆಯೇ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಚಪ್ಪಾಳೆ ಹೊಡೆದರು. ಸುದೀಪ್ ಆಡಿದ ಮಾತು ಶಿವಣ್ಣನ ಮನ ಮುಟ್ಟಿತು. ಹಾಗೇ ಅಭಿಮಾನಿಗಳ ಮನ ಕೂಡ.!

More from Filmibeat

English summary
Kannada Actor Shiva Rajkumar clapped for Sudeep's statement in 'No.1 Yari with Shivanna' program.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X