ಮಕ್ಕಳ ಪ್ರತಿಭೆ ಮುಂದೆ ಶಿವಣ್ಣ, ರವಿಚಂದ್ರನ್ ತಲೆಬಾಗಲು ಸಾಧ್ಯವೇ.?

By Harshitha

ಒಂದ್ಕಾಲ ಇತ್ತು. ಟಿ.ಆರ್.ಪಿ ರೇಟಿಂಗ್ ನಲ್ಲಿ ಉದಯ ಟಿವಿಯನ್ನ ಟಚ್ ಮಾಡಲು ಯಾರಿಂದಲೂ ಸಾಧ್ಯವಾಗ್ತಿರ್ಲಿಲ್ಲ. ಅದ್ಯಾವಾಗ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಆರಂಭವಾಯ್ತೋ, ಸುವರ್ಣ ಚಾನೆಲ್ ಟಾಪ್ ಗೇರ್ ಗೆ ಏರ್ತು.

ನಾವೇನ್ ಕಮ್ಮಿ ಅಂತ 'ಬಿಗ್ ಬಾಸ್' ರಿಯಾಲಿಟಿ ಶೋ ಶುರು ಮಾಡಿದ ಕಲರ್ಸ್ ಕನ್ನಡ ನಂ.1 ಪಟ್ಟಕ್ಕೆ ಬಂತು. ಈಗ ಮಕ್ಕಳ ಪ್ರತಿಭೆಯನ್ನ 'ಡ್ರಾಮಾ ಜ್ಯೂನಿಯರ್ಸ್' ಮೂಲಕ ಹೊರತಂದು ಕರ್ನಾಟಕದ ಮೂಲೆ ಮೂಲೆಯಲ್ಲೂ ಜೀ ಕನ್ನಡ ವಾಹಿನಿ ಮನೆ ಮಾತಾಗಿದೆ. ಸಾಲದಕ್ಕೆ 'ಟಿ.ಆರ್.ಪಿಯಲ್ಲಿ ಕಿಂಗ್' ಎನಿಸಿಕೊಂಡಿದೆ. [ಜೀ ಕನ್ನಡ ಟಿ.ಆರ್.ಪಿ ಉಡೀಸ್; ಎಲ್ಲಾ 'ಡ್ರಾಮಾ' ಮಾಡಿದ್ದಕ್ಕೆ.!]

ಹಾಗಂದ ಮಾತ್ರಕ್ಕೆ ಬೇರೆಯವರು ಕೈ ಕಟ್ಟಿ ಸುಮ್ನೆ ಕೂರ್ತಾರಾ.? 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮಕ್ಕೆ ಸೆಡ್ಡು ಹೊಡೆಯಲು ಕಲರ್ಸ್ ಕನ್ನಡ ಮತ್ತು ಉದಯ ವಾಹಿನಿಯವರು 'ಸೂಪರ್ ಸ್ಟಾರ್'ಗಳನ್ನೇ ಕರೆತಂದಿದ್ದಾರೆ. ಮುಂದೆ ಓದಿ.....

'ಡ್ರಾಮಾ ಜ್ಯೂನಿಯರ್ಸ್'ಗೆ ಬಿದ್ದಿದೆ ಚಾಲೆಂಜ್.!

'ಡ್ರಾಮಾ ಜ್ಯೂನಿಯರ್ಸ್'ಗೆ ಬಿದ್ದಿದೆ ಚಾಲೆಂಜ್.!

ಶುರುವಾದಾಗಿನಿಂದಲೂ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ಅಮೋಘ. ಮೊದಲ ಸಂಚಿಕೆಯಲ್ಲೇ ಅತಿ ಹೆಚ್ಚು ವೀಕ್ಷಕರನ್ನ ಸಂಪಾದಿಸಿರುವ ಹೆಗ್ಗಳಿಕೆ ಈ ಶೋಗೆ ಇದೆ. ಈಗ ಇದೇ ಕಾರ್ಯಕ್ರಮಕ್ಕೆ ಹೊಸ ಸವಾಲು ಎದುರಾಗಿದೆ.

'ಕಲರ್ಸ್ ಕನ್ನಡ'ದಲ್ಲಿ ಶುರುವಾಯ್ತು 'ಡ್ಯಾನ್ಸಿಂಗ್ ಸ್ಟಾರ್'.!

'ಕಲರ್ಸ್ ಕನ್ನಡ'ದಲ್ಲಿ ಶುರುವಾಯ್ತು 'ಡ್ಯಾನ್ಸಿಂಗ್ ಸ್ಟಾರ್'.!

ಪುಟಾಣಿ ಮಕ್ಕಳ 'ಡ್ರಾಮಾ ಜ್ಯೂನಿಯರ್ಸ್' ಪ್ರಸಾರವಾಗುವ ಹೊತ್ತಿಗೆ (ಶನಿವಾರ-ಭಾನುವಾರ ರಾತ್ರಿ 9 ಗಂಟೆಗೆ) ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಡ್ಯಾನ್ಸಿಂಗ್ ಸ್ಟಾರ್-3' ಪ್ರಸಾರವಾಗುತ್ತಿದೆ. ['ಡ್ಯಾನ್ಸಿಂಗ್ ಸ್ಟಾರ್' ಮಗದೊಮ್ಮೆ ಶುರು: ಈ ಬಾರಿ ಸ್ಪರ್ಧಿಗಳು ಯಾರು?]

ಮಕ್ಕಳು V/S ರವಿಚಂದ್ರನ್, ಪ್ರಿಯಮಾಣಿ.!

ಮಕ್ಕಳು V/S ರವಿಚಂದ್ರನ್, ಪ್ರಿಯಮಾಣಿ.!

'ಡ್ಯಾನ್ಸಿಂಗ್ ಸ್ಟಾರ್ - 3' ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಹಾಗೂ ನಟಿ ಪ್ರಿಯಾಮಣಿ. ರವಿಚಂದ್ರನ್ ನೇರ ನುಡಿ, ಕಾಮಿಡಿ ಹಾಗೂ ಪ್ರಿಯಾಮಣಿ ಗ್ಲಾಮರ್ ರಂಗು 'ಡ್ರಾಮಾ ಜ್ಯೂನಿಯರ್ಸ್' ವೀಕ್ಷಕರನ್ನ ಸೆಳೆಯುವಲ್ಲಿ ಯಶಸ್ವಿ ಆಗುತ್ತಾ.?

ಉದಯ ಟಿವಿಯಲ್ಲೂ ಟಫ್ ಕಾಂಪಿಟೇಷನ್.!

ಉದಯ ಟಿವಿಯಲ್ಲೂ ಟಫ್ ಕಾಂಪಿಟೇಷನ್.!

'ಕಲರ್ಸ್ ಕನ್ನಡ' ಹಾಗೂ 'ಜೀ ಕನ್ನಡ'....ಇಬ್ಬರಿಗೂ ಟಫ್ ಕಾಂಪಿಟೇಷನ್ ನೀಡಲು ಉದಯ ವಾಹಿನಿ ಸಜ್ಜಾಗಿದೆ. ಅದೂ 'ಕಿಕ್' ಶೋ ಮೂಲಕ. [ನಿಮಗೆಲ್ಲಾ ಮನರಂಜನೆಯ 'ಕಿಕ್' ಕೊಡಲು ಶಿವಣ್ಣ ರೆಡಿ.!]

ಅದೇ ಸಮಯಕ್ಕೆ 'ಕಿಕ್' ಶೋ.!

ಅದೇ ಸಮಯಕ್ಕೆ 'ಕಿಕ್' ಶೋ.!

'ಡ್ರಾಮಾ ಜ್ಯೂನಿಯರ್ಸ್' ಹಾಗೂ 'ಡ್ಯಾನ್ಸಿಂಗ್ ಸ್ಟಾರ್ - 3' ಪ್ರಸಾರವಾಗುವ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಉದಯ ವಾಹಿನಿಯಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ 'ಕಿಕ್' ಕೂಡ ಪ್ರಸಾರವಾಗಲಿದೆ.

ಇಲ್ಲಿ ಶಿವರಾಜ್ ಕುಮಾರ್ ಇದ್ದಾರೆ.!

ಇಲ್ಲಿ ಶಿವರಾಜ್ ಕುಮಾರ್ ಇದ್ದಾರೆ.!

'ಕಿಕ್' ಶೋನಲ್ಲಿ ಕರುನಾಡ ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ತೀರ್ಪುಗಾರರ ಸ್ಥಾನದಲ್ಲಿ ಇದ್ದಾರೆ.

ಮಕ್ಕಳು V/S ಶಿವಣ್ಣ.!

ಮಕ್ಕಳು V/S ಶಿವಣ್ಣ.!

ಶಿವರಾಜ್ ಕುಮಾರ್ ಹೇಳಿ ಕೇಳಿ 'ನಾಟ್ಯ ಸಾರ್ವಭೌಮ' ಅಂತಲೇ ಜನಪ್ರಿಯ. ಇವರ ಜೊತೆ ರಚಿತಾ ರಾಮ್ ಕೂಡ ಶೋನಲ್ಲಿರುವುದರಿಂದ ಅವರವರ ಅಭಿಮಾನಿಗಳನ್ನ ಸೆಳೆಯಬಹುದು. ಆದ್ರೆ ಪ್ರಚಂಡ ಮಕ್ಕಳ ಪ್ರತಿಭೆಗೆ ಮನಸೋತ ವೀಕ್ಷಕರು ಈಗ 'ಕಿಕ್' ಕಡೆ ಮುಖ ಮಾಡುತ್ತಾರಾ.? [ಶಿವರಾಜ್ ಕುಮಾರ್ ಪತ್ನಿ ಗೀತಾಗೆ ಮುಜುಗರ ಆದ ಪ್ರಸಂಗ.!]

ಶಿವಣ್ಣ, ರವಿಚಂದ್ರನ್ ಹಾಗೂ ಪುಟಾಣಿ ಮಕ್ಕಳು...ಮೂವರಲ್ಲಿ ಗೆಲುವು ಯಾರಿಗೆ.?

ಶಿವಣ್ಣ, ರವಿಚಂದ್ರನ್ ಹಾಗೂ ಪುಟಾಣಿ ಮಕ್ಕಳು...ಮೂವರಲ್ಲಿ ಗೆಲುವು ಯಾರಿಗೆ.?

ಒಂದ್ಕಡೆ ಶಿವರಾಜ್ ಕುಮಾರ್, ಇನ್ನೊಂದ್ಕಡೆ ರವಿಚಂದ್ರನ್, ಮತ್ತೊಂದ್ಕಡೆ ಪುಟಾಣಿ ಮಕ್ಕಳು...ಈ ಮೂವರಲ್ಲಿ ಟಿ.ಆರ್.ಪಿ ಗೆಲುವು ಯಾರಿಗೆ ಸಿಗಲಿದೆ ಎಂಬುದೇ ಸದ್ಯ ಟಿವಿ ದುನಿಯಾದಲ್ಲಿ ಹುಟ್ಟಿಕೊಂಡಿರುವ ಮಿಲಿಯನ್ ಡಾಲರ್ ಪ್ರಶ್ನೆ.

ಮಕ್ಕಳ ಮುಂದೆ ಸೂಪರ್ ಸ್ಟಾರ್ ಗಳು ತಲೆಬಾಗಲು ಸಾಧ್ಯವೇ.?

ಮಕ್ಕಳ ಮುಂದೆ ಸೂಪರ್ ಸ್ಟಾರ್ ಗಳು ತಲೆಬಾಗಲು ಸಾಧ್ಯವೇ.?

ಯಾವುದೇ ಕಾರ್ಯಕ್ರಮ ಆಗಲಿ, ಅದು ಯಶಸ್ವಿ ಅಂತ ನಿರ್ಧಾರವಾಗುವುದೇ 'ಟಿ.ಆರ್.ಪಿ ರೇಟಿಂಗ್' ಮೇಲೆ. ಸೂಪರ್ ಸ್ಟಾರ್ ಗಳಿಗೆ 'ಟಿ.ಆರ್.ಪಿ' ಇದ್ದೇ ಇದೆ ಅಂತ ವಾಹಿನಿಯವರು ಶಿವಣ್ಣ, ರವಿಚಂದ್ರನ್, ಪ್ರಿಯಾಮಣಿ ರವರನ್ನ ಕರೆತಂದಿದ್ದಾರೆ. ಅವರೆಲ್ಲ ಮಕ್ಕಳ 'ಡ್ರಾಮಾ ಜ್ಯೂನಿಯರ್ಸ್' ಮುಂದೆ ಸೋಲಲು ಸಾಧ್ಯವೇ.? [ನಿಮ್ಮ ಪುಟಾಣಿ ಕೂಡ 'ಡ್ರಾಮಾ ಜ್ಯೂನಿಯರ್ಸ್'ಗೆ ಹೋಗ್ಬೇಕಾ.?]

ನಿಮ್ಮ ಆಯ್ಕೆ ಯಾವುದು.?

ನಿಮ್ಮ ಆಯ್ಕೆ ಯಾವುದು.?

ಒಂದೇ ಸಮಯದಲ್ಲಿ ಪ್ರಸಾರವಾಗುವ 'ಕಿಕ್', 'ಡ್ಯಾನ್ಸಿಂಗ್ ಸ್ಟಾರ್-3' ಹಾಗೂ 'ಡ್ರಾಮಾ ಜ್ಯೂನಿಯರ್ಸ್' ಪೈಕಿ ನಿಮ್ಮ ಆಯ್ಕೆ ಯಾವುದು.? ಯಾವುದನ್ನ ನೋಡಲು ನೀವು ಇಚ್ಛಿಸುತ್ತೀರಾ.? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ....ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ...

More from Filmibeat

English summary
New Dance reality show 'Kick' will go on air from this Saturday (July 16th) in Udaya TV at 9PM.At Same time, 'Dancing Star 3' will be aired in Colors Kannada Channel Judged by V.Ravichandran and Priyamani. At 9 PM Slot Zee Kannada Channel's popular show 'Drama Juniors' is the King of TRP. Will Shiva Rajkumar and Ravichandran succeed in this TRP War.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X