»   » 'ಕಾಮಿಡಿ ಕಿಲಾಡಿಗಳು' ಗೆದ್ದ ಪ್ರತಿಭಾವಂತರಿಗೆ ಸಿಕ್ಕ ಬಹುಮಾನ ಹಣ ಎಷ್ಟು ಗೊತ್ತೇ.?

'ಕಾಮಿಡಿ ಕಿಲಾಡಿಗಳು' ಗೆದ್ದ ಪ್ರತಿಭಾವಂತರಿಗೆ ಸಿಕ್ಕ ಬಹುಮಾನ ಹಣ ಎಷ್ಟು ಗೊತ್ತೇ.?

Posted By:
Subscribe to Filmibeat Kannada

'ಕಾಮಿಡಿ ಕಿಲಾಡಿಗಳು'... ದಕ್ಷಿಣ ಭಾರತದ ಕಿರುತೆರೆ ಇತಿಹಾಸದಲ್ಲಿಯೇ ಅತಿ ಹೆಚ್ಚು ಟಿ.ಆರ್.ಪಿ ದಾಖಲೆ ಮಾಡಿರುವ ಶೋ. ಹಾಗಂದ ಮಾತ್ರಕ್ಕೆ ಈ ಕಾರ್ಯಕ್ರಮಕ್ಕೆ 'ಸ್ಟಾರ್'ಗಳಿಂದ ಟಿ.ಆರ್.ಪಿ ಲಭಿಸಿಲ್ಲ. ಬದಲಾಗಿ, ಈ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ಸ್ಪರ್ಧಿಗಳೇ ಇಂದು ಕರ್ನಾಟಕದ 'ಸೂಪರ್ ಸ್ಟಾರ್'ಗಳಾಗಿದ್ದಾರೆ. ಅಷ್ಟರಮಟ್ಟಿಗೆ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ಯಶಸ್ವಿ ಆಗಿದೆ.

ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ನಗೆ ಹೊನಲನ್ನು ಹರಿಸುತ್ತಿದ್ದ 'ಕಾಮಿಡಿ ಕಿಲಾಡಿಗಳು' ಗ್ರ್ಯಾಂಡ್ ಫಿನಾಲೆ ಮುಗಿದಿದೆ.

ಬಾಗಲಕೋಟೆಯಲ್ಲಿ ಗ್ರ್ಯಾಂಡ್ ಫಿನಾಲೆ ಮುಗಿದಿದೆ

ಟಿ.ಆರ್.ಪಿ ರೇಟಿಂಗ್ ನಲ್ಲಿ ದಾಖಲೆ ಮಾಡಿರುವ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಮಾರ್ಚ್ 5 ರಂದು ಬಾಗಲಕೋಟೆಯಲ್ಲಿ ನಡೆಯಿತು.[Exclusive: 'ಕಾಮಿಡಿ ಕಿಲಾಡಿಗಳು' ಗೆದ್ದು ಕಿಲಕಿಲ ಎಂದ ಕಿಲಾಡಿ ಯಾರು.?]

'ಕಾಮಿಡಿ ಕಿಲಾಡಿಗಳು' ಗೆದ್ದ ಶಿವರಾಜ್ ಕೆ.ಆರ್.ಪೇಟೆ

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ವಿಜೇತಾಗಿ ಹೊರಹೊಮ್ಮಿರುವುದು ಕೆ.ಆರ್.ಪೇಟೆ ಪ್ರತಿಭೆ ಶಿವರಾಜ್.

ವಿನ್ನರ್ ಗೆ ಬಹುಮಾನ ಎಷ್ಟು.?

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ವಿನ್ನರ್ ಆಗಿರುವ ಶಿವರಾಜ್ ಕೆ.ಆರ್.ಪೇಟೆ ರವರಿಗೆ ಬರೋಬ್ಬರಿ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ.

ಎರಡನೇ ಸ್ಥಾನ ಯಾರಿಗೆ.?

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಮೊದಲನೇ ರನ್ನರ್ ಅಪ್ (ಎರಡನೇ ಸ್ಥಾನ) ಆಗಿರುವುದು ನಯನ.

ಎರಡನೇ ಸ್ಥಾನಕ್ಕೆ ಬಹುಮಾನ ಎಷ್ಟು.?

ಎರಡನೇ ಸ್ಥಾನ ಪಡೆದಿರುವ ನಯನ ರವರಿಗೆ 3 ಲಕ್ಷ ರೂಪಾಯಿ ಬಹುಮಾನ ದೊರಕಿದೆ.

ಮೂರನೇ ಸ್ಥಾನ ಯಾರಿಗೆ.?

ಹಿತೇಶ್ ಹಾಗೂ ಗೋವಿಂದೇ ಗೌಡ ಜಂಟಿಯಾಗಿ ಮೂರನೇ ಸ್ಥಾನ ಪಡೆದಿದ್ದಾರೆ.

ಇಬ್ಬರಿಗೂ ತಲಾ ಒಂದು ಲಕ್ಷ ರೂಪಾಯಿ

ಮೂರನೇ ಸ್ಥಾನ ಜಂಟಿಯಾಗಿ ಪಡೆದಿರುವ ಹಿತೇಶ್ ಹಾಗೂ ಗೋವಿಂದೇಗೌಡ ರವರಿಗೆ ತಲಾ ಒಂದು ಲಕ್ಷ ರೂಪಾಯಿ ಬಹುಮಾನವಾಗಿ ನೀಡಲಾಗಿದೆ.

ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ

ವಿಜೇತರು ಹಾಗೂ ಅವರು ಪಡೆದಿರುವ ಬಹುಮಾನದ ಕುರಿತು ಜೀ ಕನ್ನಡ ವಾಹಿನಿಯಿಂದ ಇನ್ನೂ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.

ಫೈನಲ್ ನಲ್ಲಿ ಯಾರ್ಯಾರಿದ್ದರು.?

ಶಿವರಾಜ್.ಕೆ.ಆರ್.ಪೇಟೆ, ನಯನ, ಲೋಕೇಶ್, ಅನೀಶ್, ದಿವ್ಯಶ್ರೀ, ಗೋವಿಂದೇ ಗೌಡ, ಸಂಜು ಬಸಯ್ಯ, ಹಿತೇಶ್, ಮುತ್ತುರಾಜ್ ಮತ್ತು ಪ್ರವೀಣ್... ಒಟ್ಟು ಹತ್ತು ಮಂದಿ ಫೈನಾಲೆಯಲ್ಲಿದ್ದರು.

ತೀರ್ಪುಗಾರರು...

ನಿರ್ದೇಶಕ ಯೋಗರಾಜ್ ಭಟ್, ನಟಿ ರಕ್ಷಿತಾ ಹಾಗೂ ನವರಸ ನಾಯಕ ಜಗ್ಗೇಶ್ ಎಂದಿನಂತೆ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ತೀರ್ಪುಗಾರರ ಸ್ಥಾನದಲ್ಲಿ ಇದ್ದರು. ಮಾಸ್ಟರ್ ಆನಂದ್ ನಿರೂಪಣೆಯಲ್ಲಿ ಕಾರ್ಯಕ್ರಮ ಸೊಗಸಾಗಿ ಮೂಡಿಬಂದಿದೆ.

ಪ್ರಸಾರ ಯಾವಾಗ.?

ಮೂಲಗಳ ಪ್ರಕಾರ, ಬರುವ ಭಾನುವಾರ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಪ್ರಸಾರ ಆಗಲಿದೆ.

English summary
Shivaraj.K.R.Pet has Won Zee Kannada's Popular show 'Comedy Khiladigalu'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada