»   » ಕೆ.ಆರ್.ಪೇಟೆ ಶಿವರಾಜ್ ರವರ ಬದುಕನ್ನೇ ಬದಲಿಸಿದ ಜೀ ಕನ್ನಡ ವಾಹಿನಿ!

ಕೆ.ಆರ್.ಪೇಟೆ ಶಿವರಾಜ್ ರವರ ಬದುಕನ್ನೇ ಬದಲಿಸಿದ ಜೀ ಕನ್ನಡ ವಾಹಿನಿ!

Posted By:
Subscribe to Filmibeat Kannada

''ನನಗೆ ಫುಟ್ ಪಾತ್ ನಲ್ಲಿ ತಿಂದು ಅಭ್ಯಾಸ. ಇಂದು ಇಡ್ಲಿ ತಿನ್ನೋಕೆ ಅಂತ ಹೋದರೂ ಜನ ನನ್ನನ್ನ ಗುರುತಿಸುತ್ತಾರೆ. ಎಲ್ಲೋ ಆಯ್ಕೊಂಡು ತಿಂತಿದ್ದೋನ ಕರ್ನಾಟಕದ ಸ್ಟಾರ್ ಮಾಡಿದ್ದು ಜೀ ಕನ್ನಡ ವಾಹಿನಿ'' - ಹೀಗಂತ ಹೆಮ್ಮೆಯಿಂದ ಹೇಳಿಕೊಂಡವರು 'ಕಾಮಿಡಿ ಕಿಲಾಡಿಗಳು' ವಿಜೇತ ಶಿವರಾಜ್.ಕೆ.ಆರ್.ಪೇಟೆ.

ನಾಟಕ ಮಾಡಿಕೊಂಡು, ಹಲವಾರು ಕಡೆ ಕೆಲಸ ನಿರ್ವಹಿಸುತ್ತಾ ಕಷ್ಟದಿಂದ ಜೀವನ ನಡೆಸುತ್ತಿದ್ದ ಶಿವರಾಜ್.ಕೆ.ಆರ್.ಪೇಟೆ ಇಂದು ಎಲ್ಲರ ಬಾಯಲ್ಲೂ ನಲಿದಾಡುತ್ತಿದ್ದಾರೆ ಅಂದ್ರೆ ಅದಕ್ಕೆ ಕಾರಣ ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು'. ಅಸಲಿಗೆ, ಶಿವರಾಜ್.ಕೆ.ಆರ್.ಪೇಟೆ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ ಸೆಲೆಕ್ಟ್ ಆಗಿದ್ದು ಹೇಗೆ.? ಆ ಇಂಟ್ರೆಸ್ಟಿಂಗ್ ಕಥೆ ಇಲ್ಲಿದೆ ಓದಿರಿ....

ಜೀವನ ಕೊಟ್ಟಿದ್ದು ಜೀ ಕನ್ನಡ ವಾಹಿನಿ

''ನನಗೆ ಜನ್ಮ ಕೊಟ್ಟಿದ್ದು ನನ್ನ ತಾಯಿಯಾದರೆ, ಜೀವನ ಕೊಟ್ಟಿದ್ದು ಜೀ ಕನ್ನಡ ವಾಹಿನಿ. ಯಾಕಂದ್ರೆ, ಎಲ್ಲೋ ಆಯ್ಕೊಂಡು ತಿಂತಿದ್ದೋನ ಸ್ಟಾರ್ ಮಾಡಿದ ವೇದಿಕೆ ಇದು. ತುಂಬಾ ಜನ ಗುರುತಿಸುತ್ತಾರೆ. ನನಗೆ ಗೊತ್ತಿಲ್ಲ, ನನ್ನನ್ನ ಇಷ್ಟೊಂದು ಜನ ಇಷ್ಟ ಪಡುತ್ತಾರಾ ಅಂತ. ನನ್ನಲ್ಲಿ ಇರುವ ಕಲಾವಿದನನ್ನ ಹೊರಗೆ ತೆಗೆಸಿದ್ದು ಜೀ ಕನ್ನಡ'' - ಶಿವರಾಜ್.ಕೆ.ಆರ್.ಪೇಟೆ [ಟಿವಿ9 ವಾಹಿನಿಗೆ ಶಿವರಾಜ್.ಕೆ.ಆರ್.ಪೇಟೆ ಸೇರಿದ್ಹೇಗೆ ಗೊತ್ತಾ.?]

ಜೀವ ಇರೋವರೆಗೂ ಸತೀಶ್ ಸರ್ ನ ನೆನಪಿಸಿಕೊಳ್ಳುತ್ತೇನೆ!

''ಶಂಕರಮಠದ ಹತ್ತಿರ ಅಡಿಷನ್ ಇತ್ತು. ಸತೀಶ್ ಸರ್ ನ ನಾನು ಜೀವ ಇರೋವರೆಗೂ ನೆನಪಿಸಿಕೊಳ್ಳುತ್ತೇನೆ. ಯಾಕಂದ್ರೆ, ನನ್ನಲ್ಲಿದ್ದ ಪ್ರತಿಭೆಯನ್ನ ಗುರುತಿಸಿದ್ದು ಅವರೇ. ಮುಕ್ಕಾಲು ಗಂಟೆ ನನ್ನನ್ನ ಆಡಿಷನ್ ಮಾಡಿದ ನಂತರ 'ಹೇಳ್ತೀವಿ' ಅಂತ ಹೇಳಿದ್ರು'' - ಶಿವರಾಜ್.ಕೆ.ಆರ್.ಪೇಟೆ ['ಕಾಮಿಡಿ ಕಿಲಾಡಿಗಳು' ಗೆದ್ದ ಪ್ರತಿಭಾವಂತರಿಗೆ ಸಿಕ್ಕ ಬಹುಮಾನ ಹಣ ಎಷ್ಟು ಗೊತ್ತೇ.?]

'ಸೆಲೆಕ್ಟೆಡ್' ಅಂತ ಫೋನ್ ಬಂದಾಗ...

''ಒಂದಿನ ಫೋನ್ ಬಂತು... 'ಸೆಲೆಕ್ಟ್' ಆಗಿದ್ದೀರಾ ಅಂತ. ಆಗ ನಾನು ನನ್ನ ಹೆಂಡತಿಯನ್ನ ಖುಷಿಯಿಂದ ಎತ್ತಿಕೊಂಡು ತಿರುಗಿಸಿಬಿಟ್ಟೆ'' - ಶಿವರಾಜ್.ಕೆ.ಆರ್.ಪೇಟೆ ['ಕಾಮಿಡಿ ಕಿಲಾಡಿ' ಶಿವರಾಜ್.ಕೆ.ಆರ್.ಪೇಟೆ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಕಥೆ]

ಮೆಂಟರ್ಸ್ ಕಾರಣ

''ಕಾಮಿಡಿ ಕಿಲಾಡಿಗಳು' ಶೋ ಡೈರೆಕ್ಟರ್ ಶರಣಯ್ಯ ಸರ್. ಒಬ್ಬ ಒಳ್ಳೆ ಕಲಾವಿದ ಒಳ್ಳೆ ಡೈರೆಕ್ಟರ್ ಆಗುತ್ತಾರೆ ಅನ್ನೋದಕ್ಕೆ ಶರಣಯ್ಯ ಸರ್ ಉತ್ತಮ ನಿದರ್ಶನ. ಅವರು ರಂಗಾಯಣದಿಂದ ಬಂದಿರುವವರು. ನಾವು ಇಲ್ಲಿ ಏನೇ ಮಾಡ್ತಿದ್ದೀವಿ ಅಂದರೂ ನಮ್ಮ ಮೆಂಟರ್ಸ್ ಕಾರಣ. ಅಷ್ಟು ಚೆನ್ನಾಗಿ ನಮಗೆ ಹೇಳಿಕೊಡ್ತಾರೆ'' - ಶಿವರಾಜ್.ಕೆ.ಆರ್.ಪೇಟೆ

ಭಾವುಕರನ್ನಾಗಿ ಮಾಡಿದ ಶೋ

''ಕಾಮಿಡಿ ಕಿಲಾಡಿಗಳು' ನಮ್ಮನ್ನ ಭಾವುಕರನ್ನಾಗಿ ಮಾಡಿದೆ. ನಾವೆಲ್ಲರೂ ಒಂದು ಫ್ಯಾಮಿಲಿ ತರಹ ಇದ್ದೇವೆ'' - ಶಿವರಾಜ್.ಕೆ.ಆರ್.ಪೇಟೆ

ಯಾವ ಪಾತ್ರ ಇಷ್ಟ.? ಕಷ್ಟ.?

''ನನಗೆ ಜಾಸ್ತಿ ಕ್ಯಾಚ್ ಆಫೀಸರ್ ಪಾತ್ರಗಳನ್ನೇ ಕೊಡುತ್ತಿದ್ದರು. ಮೊದಲ ಬಾರಿಗೆ ಲೇಡಿ ಕ್ಯಾರೆಕ್ಟರ್ ಮಾಡಿದ್ದು ಸ್ವಲ್ಪ ಕಷ್ಟ ಅನಿಸ್ತು. ಲೇಡಿ ಕ್ಯಾರೆಕ್ಟರ್ ಮಾಡಿದಾಗ ಸೋಫಾ ಮೇಲೆ ಕೂತ್ಕೊಳ್ಳೋಕೆ ಹಿಂಸೆ ಆಗೋದು. ತುಂಬಾ ಇಷ್ಟ ಆಗಿದ್ದು ಟಿ.ಡಿ.ಎಂ ಮಂತ್ರ ಕ್ಯಾರೆಕ್ಟರ್. ರೋಬೋ ಕ್ಯಾರೆಕ್ಟರ್ ತುಂಬಾ ಚಾಲೆಂಜಿಂಗ್ ಆಗಿತ್ತು. ಎರಡೂವರೆ ಗಂಟೆ ನಿಂತುಕೊಂಡು ಮೇಕಪ್ ಮಾಡಿಸಿಕೊಂಡಿದ್ದೇನೆ ಅದಕ್ಕೋಸ್ಕರ. ಅದರ ಮೇಲೆ ಪೇಂಟ್ ಬೇರೆ. ಮೂರುವರೆ ಗಂಟೆ ನಿಂತೇ ಇದ್ದೆ. ಅವತ್ತೇ 'ಕಾಮಿಡಿ ಕಿಲಾಡಿಗಳು' ಸ್ಟೇಜ್ ಮೇಲೆ ನನ್ನ ತಂದೆ ಬಂದಿದ್ದರು. ಅವರನ್ನ ನೋಡಿ ಎಲ್ಲ ಮರೆತುಬಿಟ್ಟೆ'' - ಶಿವರಾಜ್.ಕೆ.ಆರ್.ಪೇಟೆ

ದೊಡ್ಡ ಚಾಲೆಂಜ್ ಆಗಿದ್ದು ಯಾವುದು.?

''ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ನಾನೊಬ್ಬ ಕಂಟೆಸ್ಟೆಂಟ್ ಅನ್ನೋದೇ ಚಾಲೆಂಜ್ ನನಗೆ. ಎಲ್ಲ ರೋಲ್ ಗಳನ್ನೂ ಇಷ್ಟ ಪಟ್ಟು ಮಾಡಿದ್ದೇನೆ. ಆರೋಗ್ಯ ಸಮಸ್ಯೆಯಿಂದ ನಾನು ಡಲ್ ಆಗಿದ್ದೆ. ಆದರೂ ಎಲ್ಲವನ್ನೂ ಪರ್ಫಾಮ್ ಮಾಡಿದ್ದೇನೆ. ಅದೇ ದೊಡ್ಡ ಚಾಲೆಂಜ್'' - ಶಿವರಾಜ್.ಕೆ.ಆರ್.ಪೇಟೆ

ಯಾರೂ ಮಾಡದೇ ಇರುವುದನ್ನು ಮಾಡಿದ್ದೇನೆ.!

''ಯೋಗರಾಜ್ ಭಟ್ ಕ್ಯಾರೆಕ್ಟರ್, ವಿಜಯ್ ಪ್ರಕಾಶ್ ಮತ್ತು ಹಂಸಲೇಖರವರನ್ನ ಇದುವರೆಗೂ ಯಾರೂ ಇಮಿಟೇಟ್ ಮಾಡಿಲ್ಲ. ಅದನ್ನ ನಾನು ಮಾಡಿರುವುದು ನನಗೆ ಖುಷಿ ಕೊಟ್ಟಿದೆ'' - ಶಿವರಾಜ್.ಕೆ.ಆರ್.ಪೇಟೆ

ಇದೇ ದೊಡ್ಡ ಸಾಧನೆ

''ನನಗೆ ಫುಟ್ ಪಾತ್ ನಲ್ಲಿ ತಿಂದು ಅಭ್ಯಾಸ. ಎಲ್ಲೇ ಇಡ್ಲಿ ಮಾರುತ್ತಿದ್ದರೂ, ಹೋಗಿ ತಿನ್ನುತ್ತೇನೆ. ಅಲ್ಲೂ ನನ್ನನ್ನ ಜನ ಮಾತನಾಡಿಸುತ್ತಾರೆ. ಅದೇ ಖುಷಿ ನನಗೆ. ಹೆಲ್ಮೆಟ್ ಹಾಕೊಂಡು ಹೋದ್ರೂ ಪೊಲೀಸ್ರು ಕಂಡು ಹಿಡಿಯುತ್ತಾರೆ'' - ಶಿವರಾಜ್.ಕೆ.ಆರ್.ಪೇಟೆ

English summary
Shivaraj.K.R.Pete reveals the story of getting selected to Zee Kannada Channel's popular show 'Comedy Khiladigalu'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada