'ಈ' ಖ್ಯಾತ ಕಾಮಿಡಿ ಕಿಲಾಡಿಗೆ 'ಬಿಗ್ ಬಾಸ್' ಕಡೆಯಿಂದ ಆಫರ್ ಹೋಗಿರೋದು ಸತ್ಯ.!

ಕಣ್ಮುಚ್ಚಿ ಕಣ್ತೆರೆಯುವುದರಲ್ಲಿ ಒಂದು ವರ್ಷ ಕಳೆದೇ ಬಿಟ್ಟಿದೆ. 'ಬಿಗ್ ಬಾಸ್' ಕಾರ್ಯಕ್ರಮದ ಮತ್ತೊಂದು ಆವೃತ್ತಿ ಶುರುವಾಗಲು ದಿನಗಣನೆ ಆರಂಭವಾಗಿದೆ. ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ಯಾರೆಲ್ಲಾ ಬಲಗಾಲಿಟ್ಟು ಪ್ರವೇಶ ಪಡೆಯಬಹುದು ಎಂಬ ಕುರಿತು ಚರ್ಚೆ ಎಲ್ಲೆಡೆ ನಡೆಯುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಂತೂ 'ಇವರು' ಹೋಗ್ತಾರಂತೆ, 'ಅವರು' ಹೋಗ್ತಾರಂತೆ ಎಂಬ ಅಂತೆ-ಕಂತೆಗಳು ಕೇಳಿಬರುತ್ತಿವೆ. 'ಇವರೇ ನಮ್ಮ ಕನ್ಟೆಸ್ಟೆಂಟ್' ಎಂಬ ಮಾತು ಲಾಂಚ್ ವೇಳೆ ಸುದೀಪ್ ಬಾಯಿಂದ ಬರುವವರೆಗೂ ವೀಕ್ಷಕರಿಗೆ 'ಸ್ಪರ್ಧಿ'ಗಳ ಬಗ್ಗೆ ಕ್ಲಾರಿಟಿ ಸಿಗುವುದಿಲ್ಲ.

'ಬಿಗ್ ಬಾಸ್ ಕನ್ನಡ' ಏಳನೇ ಆವೃತ್ತಿಯಲ್ಲಿ ಸ್ಪರ್ಧಿಸುವವರ ಅಧಿಕೃತ ಪಟ್ಟಿ ಇನ್ನೂ ಲೀಕ್ ಆಗಿಲ್ಲ. ಆದ್ರೆ, ಕನ್ನಡದ ಪ್ರಖ್ಯಾತ 'ಕಾಮಿಡಿ ಕಿಲಾಡಿ'ಯೊಬ್ಬರಿಗೆ ಮಾತ್ರ 'ಬಿಗ್ ಬಾಸ್' ಕಡೆಯಿಂದ ಬಿಗ್ ಆಫರ್ ಹೋಗಿರೋದಂತೂ ಸತ್ಯ. ಆ ಎಕ್ಸ್ ಕ್ಲೂಸಿವ್ ವರದಿ ಇಲ್ಲಿದೆ. ಮುಂದೆ ಓದಿರಿ...

ಯಾರು 'ಆ' ಕಾಮಿಡಿ ಕಿಲಾಡಿ.?

ಯಾರು 'ಆ' ಕಾಮಿಡಿ ಕಿಲಾಡಿ.?

'ಬಿಗ್ ಬಾಸ್' ಬಿಗ್ ಆಫರ್ ಕೊಟ್ಟಿರೋದು ಬೇರೆ ಯಾರಿಗೂ ಅಲ್ಲ. ಕಾಮಿಡಿ ಕಿಲಾಡಿ ಶಿವರಾಜ್.ಕೆ.ಆರ್.ಪೇಟೆ ರವರಿಗೆ. ತಮ್ಮ ಕಾಮಿಡಿ ಟೈಮಿಂಗ್ ಮೂಲಕ ಕಿರುತೆರೆ ವೀಕ್ಷಕರ ಮನ ಗೆದ್ದಿರುವ ಶಿವರಾಜ್.ಕೆ.ಆರ್.ಪೇಟೆ ರವರಿಗೆ 'ಬಿಗ್ ಬಾಸ್' ಕಡೆಯಿಂದ ಬುಲಾವ್ ಬಂದಿದೆ.

ಹಾಗಾದ್ರೆ, 'ದೊಡ್ಮನೆ'ಗೆ ಹೋಗ್ತಾರಾ ಶಿವರಾಜ್.?

ಹಾಗಾದ್ರೆ, 'ದೊಡ್ಮನೆ'ಗೆ ಹೋಗ್ತಾರಾ ಶಿವರಾಜ್.?

ಶಿವರಾಜ್.ಕೆ.ಆರ್.ಪೇಟೆಗೆ 'ಬಿಗ್ ಬಾಸ್'ರಿಂದ ಆಫರ್ ಬಂದಿರೋದು ನಿಜ. ಆದ್ರೆ, 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಶಿವರಾಜ್.ಕೆ.ಆರ್.ಪೇಟೆ ಸ್ಪರ್ಧೆ ಮಾಡುತ್ತಿಲ್ಲ. ಅದಕ್ಕೆ ಕಾರಣ ಅವರ ಬಿಜಿ ಶೆಡ್ಯೂಲ್.

ಸಿನಿಮಾಗಳಲ್ಲಿ ಶಿವರಾಜ್ ಸಖತ್ ಬಿಜಿ.!

ಸಿನಿಮಾಗಳಲ್ಲಿ ಶಿವರಾಜ್ ಸಖತ್ ಬಿಜಿ.!

ಪ್ರತಿಭಾವಂತ ನಟ ಶಿವರಾಜ್.ಕೆ.ಆರ್.ಪೇಟೆಗೆ ಸಾಲು ಸಾಲು ಆಫರ್ ಗಳು ಹುಡುಕಿಕೊಂಡು ಬರುತ್ತಿವೆ. ಸದ್ಯ ಅವರ ಕೈಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್', ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ-೨', ಶ್ರೀಮುರಳಿ ಅಭಿನಯದ 'ಮದಗಜ' ಚಿತ್ರಗಳಿವೆ. ಇದಲ್ಲದೇ ಇನ್ನೂ ಎರಡ್ಮೂರು ಚಿತ್ರಗಳು ಮಾತುಕತೆ ಹಂತದಲ್ಲಿದೆ. ಚಿತ್ರಗಳಲ್ಲಿ ಕಮಿಟ್ ಆಗಿರುವ ಕಾರಣ, 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸ್ಪರ್ಧಿಸಲು ಶಿವರಾಜ್.ಕೆ.ಆರ್.ಪೇಟೆ ರವರಿಗೆ ಸಾಧ್ಯವಾಗಿಲ್ಲ.

ಏನಂತಾರೆ ಶಿವರಾಜ್.?

ಏನಂತಾರೆ ಶಿವರಾಜ್.?

''ಬಿಗ್ ಬಾಸ್ ಕಡೆಯಿಂದ ಆಫರ್ ಬಂದಿತ್ತು. ಅವರಿಗೆ ನನ್ನ ಪರಿಸ್ಥಿತಿಯನ್ನು ವಿವರಿಸಿದೆ. ಅವರು ಅದನ್ನು ತುಂಬು ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ'' ಎಂದು 'ಫಿಲ್ಮಿಬೀಟ್ ಕನ್ನಡ'ಕ್ಕೆ ಶಿವರಾಜ್.ಕೆ.ಆರ್.ಪೇಟೆ ತಿಳಿಸಿದರು.

ಶಿವರಾಜ್.ಕೆ.ಆರ್.ಪೇಟೆ ಕುರಿತು...

ಶಿವರಾಜ್.ಕೆ.ಆರ್.ಪೇಟೆ ಕುರಿತು...

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಶಿವರಾಜ್.ಕೆ.ಆರ್.ಪೇಟೆ ವಿಜೇತರಾದರು. ಅದಾದ್ಮೇಲೆ 'ಅಯೋಗ್ಯ', 'ಅಂಬಿ ನಿಂಗ್ ವಯಸ್ಸಾಯ್ತೋ' ಮುಂತಾದ ಸಿನಿಮಾಗಳಲ್ಲಿ ಶಿವರಾಜ್.ಕೆ.ಆರ್.ಪೇಟೆ ಹಾಸ್ಯ ಕಲಾವಿದನಾಗಿ ಮಿಂಚಿದರು. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಇವರು ಬಹುಬೇಡಿಕೆಯ ಕಾಮಿಡಿ ಕಿಲಾಡಿ.

More from Filmibeat

English summary
Comedy Khiladigalu season 1 Winner, Kannada Actor Shivaraj KR Pete gets an offer to participate in Bigg Boss Kannada 7. Since he is busy in Kannada Films Shivaraj KR Pete has turned down the offer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X