ಪುನೀತ್- ಅಶ್ವಿನಿ ಇಬ್ಬರನ್ನು ಮೊದಲು ಶಿವಣ್ಣ ನೋಡಿದ್ದೆಲ್ಲಿ?

By ಪ್ರಿಯಾ ದೊರೆ

ಜುಲೈ 12, ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್‌ ಹುಟ್ಟುಹಬ್ಬ. ಈ ವಾರದ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋವನ್ನು ಶಿವಣ್ಣಗೋಸ್ಕರ ಡೆಡಿಕೇಟ್ ಮಾಡಲಾಗಿತ್ತು. ಶಿವಣ್ಣ ಹುಟ್ಟುಹಬ್ಬ ಹಿನ್ನೆಲೆ ಎರಡೂ ಸಂಚಿಕೆಯನ್ನು ಶಿವರಾಜೋತ್ಸವ ಎಂದು ನಡೆಸಲಾಗಿತ್ತು.

ಹಾಗಾಗಿ ಇದು ಶಿವರಾಜೋತ್ಸವದ ಸಂಚಿಕೆ. ಈ ಸಂಚಿಕೆಯನ್ನು ಶಿವಣ್ಣನಿಗಾಗಿ ಅರ್ಪಿಸಿದ್ದಾರೆ. ಶಿವಣ್ಣನ ಸಿನಿಮಾದ ಹಾಡುಗಳಿಗೆ ನೃತ್ಯ ಮಾಡಲಾಯಿತು. ಇದರಿಂದ ಶಿವಣ್ಣ ತಮ್ಮ ಸಿನಿಮಾ ಜರ್ನಿಯ ನೆನಪುಗಳನ್ನು ಮೆಲುಕು ಹಾಕಿದರು. ಇದರ ಜೊತೆಗೆ ತಮ್ಮ ಕುಟುಂಬದ ಕೆಲ ಘಟನೆಗಳನ್ನು ನೆನೆದು ಭಾವುಕರಾದರು.

ಇನ್ನು ರಾಜ್‌ ಕುಮಾರ್‌ ಕುಟುಂಬಕ್ಕೂ, ಪಾರಿವಾಳಕ್ಕೂ ಅದೇನೋ ನಂಟು. ಈ ವಿಚಾರ ಹಾಗೂ ಶಿವರಾಜ್ ಕುಮಾರ್‌ ತಮ್ಮ ಮನೆಯ ಬಗ್ಗೆ ನೆನಪು ಮಾಡಿಕೊಂಡರು. ಅಲ್ಲದೇ, ಪುನೀತ್ ರಾಜ್‌ಕುಮಾರ್‌ ಹಾಗೂ ಅಶ್ವಿನಿ ಅವರ ಪ್ರೀತಿಯ ವಿಚಾರವನ್ನೂ ಶಿವಣ್ಣ ಹಂಚಿಕೊಂಡಿದ್ದಾರೆ.

ನೆನಪುಗಳ ಮೆಲುಕು, ಉಡುಗೊರೆಗಳ ಸುರಿಮಳೆ!

ನೆನಪುಗಳ ಮೆಲುಕು, ಉಡುಗೊರೆಗಳ ಸುರಿಮಳೆ!

ಶಿವಣ್ಣನ ಹುಟ್ಟುಹಬ್ಬ ಹಿನ್ನೆಲೆ ಡಿಕೆಡಿ ವೇದಿಕೆಯಲ್ಲಿ ಶಿವಣ್ಣನಿಗೆ ಸಾಲು ಸಾಲು ಉಡುಗೊರೆಗಳನ್ನು ನೀಡಲಾಯ್ತು. ಈ ಉಡುಗೊರೆಗಳು ಕೇವಲ ಖುಷಿಯನ್ನು ಕೊಡದೇ, ನೆನಪುಗಳ ಸುರಿಮಳೆಯನ್ನೇ ಸುರಿಸಿದವು. ಶಿವಣ್ಣನ ಹಾಡುಗಳಿಗೆ ಕುಣಿದಾಗಲೆಲ್ಲಾ ಶಿವಣ್ಣ ತಮ್ಮ ಸಿನಿಮಾ ಜರ್ನಿಯನ್ನು ನೆನಪು ಮಾಡಿಕೊಂಡರು. ಇನ್ನು ಇದರ ಜೊತೆಗೆ ಬೆಂಗಳೂರಿನ ದಿಲೀಪ್‌ ಹಾಗೂ ವಿಧಿತ ಇಬ್ಬರೂ "ಕಡಲೋ ಕಣ್‌ ಕಡಲೋ" ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಹಾಡಿನ ಮೂಲಕ ಶಿವಣ್ಣ ಪಾರಿವಾಳವನ್ನು ನೆನಪು ಮಾಡಿಕೊಂಡರು.

ಪಾರಿವಾಳದ ಕಥೆ ಹೇಳಿದ ಶಿವಣ್ಣ!

ಪಾರಿವಾಳದ ಕಥೆ ಹೇಳಿದ ಶಿವಣ್ಣ!

ಶಾಂತಿ ಮತ್ತು ಪ್ರೀತಿಯನ್ನು ಸಾರುವ ಪಾರಿವಾಳಕ್ಕೂ ರಾಜ್ ಕುಮಾರ್ ಕುಟುಂಬಕ್ಕೂ ಅವಿನಾಭಾವ ಸಂಬಂಧ ಎಂದರೆ ತಪ್ಪಾಗಲಾರದು. ಅಣ್ಣವ್ರ 'ಕಸ್ತೂರಿ ನಿವಾಸ' ಚಿತ್ರದಲ್ಲಿ ಪಾರಿವಾಳ ವಿಶೇಷ ಪಾತ್ರವನ್ನು ನಿರ್ವಹಿಸಿತ್ತು. ಅದರಂತೆಯೇ, ಶಿವಣ್ಣ ಹಾಗೂ ಅಪ್ಪು ಸಿನಿಮಾಗಳಲ್ಲೂ ಪಾರಿವಾಳವಿತ್ತು. ಇನ್ನು ಜೀ ಕನ್ನಡ ವಾಹಿನಿ ಶಿವಣ್ಣಗೆ ಪಾರಿವಾಳವನ್ನು ಉಡುಗೊರೆಯಾಗಿ ಕೊಟ್ಟಾಗ, ತಮ್ಮ ಕುಟುಂಬದೊಂದಿಗೆ ಪಾರಿವಾಳಕ್ಕಿರುವ ನಂಟನ್ನು ನೆನೆದರು. ಈ ವೇಳೆ ಮಾತನಾಡಿ, ಅದೇನೋ ನಮ್ಮ ಕುಂಟುಂಬಕ್ಕೂ ಹಾಗೂ ಪಾರಿವಾಳಕ್ಕೂ ಆಗಿ ಬರುತ್ತೆ. ಅಪ್ಪನ ಚಿತ್ರದಲ್ಲಿ ಪಾರಿವಾಳವಿತ್ತು. ಹಾಗೆಯೇ ನನ್ನ ಮತ್ತು ಅಪ್ಪು ಸಿನಿಮಾದಲ್ಲೂ ಇತ್ತು ಎಂದು ಹೇಳಿದರು.

ಥಿಯೇಟರ್‌ನಲ್ಲಿ ಅಪ್ಪು, ಅಶ್ವಿನಿಯನ್ನು ನೋಡಿದ್ದ ಶಿವಣ್ಣ!

ಥಿಯೇಟರ್‌ನಲ್ಲಿ ಅಪ್ಪು, ಅಶ್ವಿನಿಯನ್ನು ನೋಡಿದ್ದ ಶಿವಣ್ಣ!

ಪಾರಿವಾಳವನ್ನು ಕಂಡ ಶಿವಣ್ಣ, ಅಪ್ಪು ಹಾಗೂ ಅಶ್ವಿನಿ ಅವರು ಪ್ರೀತಿಸುತಿದ್ದ ವಿಚಾರವನ್ನು ಮೆಲುಕು ಹಾಕಿದರು. 'ಕಸ್ತೂರಿ ನಿವಾಸ' ಚಿತ್ರ ರಿಲೀಸ್ ಆದಾಗ ಅಪ್ಪು ಹಾಗೂ ಅಶ್ವಿನಿ ಸಿನಿಮಾ ನೋಡಲು ಕಾವೇರಿ ಥಿಯೇಟರ್‌ಗೆ ಬಂದಿದ್ದರಂತೆ. ಆಗ ಶಿವಣ್ಣನ ಕಣ್ಣಿಗೆ ಈ ಜೋಡಿ ಸಿಕ್ಕಿ ಬಿದ್ದಿದ್ದರಂತೆ. ಅಲ್ಲೇ ಅಪ್ಪು ಜೊತೆಗೆ ಅಶ್ವಿನಿ ಅವರನ್ನು ಮೊದಲು ಶಿವಣ್ಣ ನೋಡಿದ್ದರಂತೆ. ಆಗ ಅಶ್ವಿನಿ ಅವರನ್ನು ಅಪ್ಪು, ಶಿವಣ್ಣಗೆ ಪರಿಚಯ ಮಾಡಿಕೊಟ್ಟರಂತೆ.

ಶಿವಣ್ಣನಿಗೆ 60ನೇ ವಸಂತದ ಸಂಭ್ರಮ!

ಶಿವಣ್ಣನಿಗೆ 60ನೇ ವಸಂತದ ಸಂಭ್ರಮ!

ಶಿವಣ್ಣನ ಹುಟುಹಬ್ಬವನ್ನು ಮುಂಚಿತವಾಗಿಯೇ ಡಿಕೆಡಿ ರಿಯಾಲಿಟಿ ಶೋನಲ್ಲಿ ಅದ್ಧೂರಿಯಾಗಿ ಆಚರಿಸಲಾಗಿದೆ. ಶನಿವಾರ ಹಾಗೂ ಭಾನುವಾರ ಪ್ರಸಾರವಾದ ಎಪಿಸೋಡ್ ಗಳನ್ನು ಶಿವರಾಜೋತ್ಸವವನ್ನಾಗಿ ಆಚರಿಸಿ ಸಂಭ್ರಮಿಸಲಾಯ್ತು. ಈ ಎಪಿಸೋಡ್‌ಗಳಲ್ಲಿ ಶಿವಣ್ಣನ ಚಿತ್ರಗಳ ಹಾಡಿಗೆ ಸ್ಪರ್ಧಿಗಳು ಹೆಜ್ಜೆ ಹಾಕಿ ರಂಜಿಸಿದರು. ಸ್ಪರ್ಧಿಗಳು ಕೂಡ ಡಾನ್ಸ್ ಮೂಲಕ ಶಿವಣ್ಣನಿಗೆ ವಿಶ್ ಮಾಡಿದ್ದಾರೆ. ಡಿಕೆಡಿ ವೇದಿಕೆಯಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು.

More from Filmibeat

English summary
Shivaraj Kumar Talk About Puneeth Rajkumar, Ashwini Puneeth Rajkumar Love Story In DKD Stage, know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X