Shiva Rajkumar: ಮತ್ತೊಮ್ಮೆ ಕಿರುತೆರೆಗೆ ಶಿವಣ್ಣ: ಈ ಬಾರಿ ಮಾಸ್ ಎಂಟ್ರಿ

By ಪೂರ್ವ

ಜನಪ್ರಿಯ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಫ್ಯಾಮಿಲಿ ವಾರ್ ಸೀಜನ್-2 ಪ್ರಸಾರವಾಗಿದೆ. ಈ ಹೊಸ ಸೀಜನ್‌ನಲ್ಲಿ ಜೀ ಕನ್ನಡ ವಾಹಿನಿಯ ಕುಟುಂಬದ ಪ್ರಮುಖ ತಾರೆಗಳು ಪಾಲ್ಗೊಂಡು ವೀಕ್ಷಕರನ್ನು ಮನರಂಜಿಸಿದ್ದಾರೆ.

Recommended Video

KGF 2 V/S BEAST | ದೊಡ್ಡ ಸಿನಿಮಾ ಪಟ್ಟಿಯಲ್ಲಿ ಎಲ್ಲರನ್ನು ಹಿಂದಿಕ್ಕಿದ KGF 2 | Yash | Vijay

ಈಗಾಗಲೇ ಜೀ ವಾಹಿನಿಯಲ್ಲಿ ಜನಪ್ರಿಯವಾಗಿರುವ ಕಮಲಿ, ಗಟ್ಟಿಮೇಳ, ಬ್ರಹ್ಮಗಂಟು, ಜೋಡಿಹಕ್ಕಿ, ರಾಧಾ ಕಲ್ಯಾಣ, ಮಹಾದೇವಿ, ಪಾರು, ಜೋಡಿಹಕ್ಕಿ, ಉಘೇ ಉಘೇ ಮಹಾದೇಶ್ವರ, ಸರೆಗಮಪ, ಡ್ರಾಮಾ ಜೂನಿಯರ್ ಸೀಜನ್-2 ಮತ್ತು ಕಾಮಿಡಿ ಕಿಲಾಡಿಗಳು ಸೀಜನ್-3 ಸೇರಿದಂತೆ, ಹಲವಾರು ರಿಯಾಲಿಟಿ ಶೋ ಮತ್ತು ಧಾರಾವಾಹಿಗಳಿಂದ ಹೊಸ ಪ್ರತಿಭಾವಂತರು ಫ್ಯಾಮಿಲಿ ವಾರ್ ಸೀಜನ್-2ರಲ್ಲಿ ಪ್ರಮುಖ ಸ್ಪರ್ಧಿಗಳಾಗಿ ಭಾಗವಹಿಸಿದ್ದಾರೆ ಕೂಡ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಫ್ಯಾಮಿಲಿ ವಾರ್ ಸೀಜನ್-6 ಅನ್ನು ನೋಡಲು ವೀಕ್ಷಕರು ಕಾತರರಾಗಿದ್ದಾರೆ. ಇನ್ನು ಈ ಬಾರಿ ಡಿಕೆಡಿ ವಿಶೇಷ ಸೀಜನ್‌ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎಂಟ್ರಿ ನೀಡಿದ್ದಾರೆ. ಬೆಳ್ಳಿ ತೆರೆಯಿಂದ ಕಿರುತೆರೆಗೆ ರಿಯಾಲಿಟಿ ಶೋ ಒಂದರ ಜಡ್ಜ್ ಆಗಿ ಆಗಮಿಸಿರುವುದು ಈ ಭಾರಿಯ ಡಿಕೆಡಿ ವಿಶೇಷತೆ.

Shivaraj Kumar Will Be Judge In Zee Kannada Reality Show

ಕುಣಿಯೋ ಹೆಜ್ಜೆಗಳಿಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಬಹು ದೊಡ್ಡ ವೇದಿಕೆ ರೆಡಿಯಾಗಿದೆ. ಡ್ಯಾನ್ಸಿಂಗ್ ಚಕ್ರವರ್ತಿ ಶಿವಣ್ಣನೇ ಜಡ್ಜ್ ಎನ್ನುವುದು ವಿಶೇಷ. ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6 ಎಪ್ರಿಲ್ 16 ರಿಂದ ಶನಿವಾರ -ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಸಿನಿಮಾಗಳು, ಅನೇಕ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದರೂ ಕೂಡ ನಟ 'ಹ್ಯಾಟ್ರಿಕ್ ಹೀರೋ' ಶಿವರಾಜ್‌ಕುಮಾರ್ ಅವರು ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಡ್ಯಾನ್ಸ್ ಕರ್ನಾಟಕ ಡಾನ್ಸ್‌ನ ಪ್ರೋಮೋದಲ್ಲಿ ಶಿವರಾಜ್ ಕುಮಾರ್ ಅವರನ್ನು ನೋಡಿ ಅಭಿಮಾನಿಗಳು ಡಿಕೆಡಿ ವೀಕ್ಷಿಸಲು ಕಾತರರಾಗಿದ್ದಾರೆ. ಶಿವರಾಜ್‌ ಕುಮಾರ್ ಈಗಾಗಲೇ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ನಿರೂಪಕ, ಜಡ್ಜ್ ಆಗಿಯೂ ಕಾಣಿಸಿಕೊಂಡಿದ್ದಾರೆ, ಅತಿಥಿಯಾಗಿಯೂ ಆಗಮಿಸಿದ್ದಾರೆ. ಅಂತೆಯೇ "ಡ್ಯಾನ್ಸ್ ಕರ್ನಾಟಕ ಡಾನ್ಸ್"ಗೂ ಬಂದಿದ್ದಾರೆ.

Shivaraj Kumar Will Be Judge In Zee Kannada Reality Show

ಶಿವರಾಜ್‌ಕುಮಾರ್ ಅವರು ಚಿತ್ರರಂಗದಲ್ಲಿ ಬಹಳ ಎನರ್ಜಿಟಿಕ್ ನಟ. ಅಂದು ಇಂದು ಎಂದೆಂದಿಗೂ ಕೂಡ ಅವರ ಎನರ್ಜಿಗೆ ಅವರೇ ಸಾಟಿ. ಶಿವರಾಜ್ ಕುಮಾರ್ ಅವರು "ಡ್ಯಾನ್ಸ್ ಕರ್ನಾಟಕ ಡಾನ್ಸ್" ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಪ್ರೋಮೋ ಈಗಾಗಲೇ ಬಿಡುಗಡೆ ಆಗಿದ್ದು, ಪ್ರೋಮೊ ಅದ್ಭುತವಾಗಿ ಮೂಡಿಬಂದಿದೆ. ಶೂಟಿಂಗ್ ಸೆಟ್‌ನಲ್ಲಿ ಶಿವಣ್ಣ ಕುಳಿತುಕೊಂಡಿರಬೇಕಾದರೆ ಸರ್ ಪ್ರೋಮೋ ರೆಡಿ ಎಂದು ಯುವಕನೋರ್ವ ಹೇಳಿದಾಗ ಕೋಟ್ ಹಾಕಿಕೊಂಡಿರುವ ಶಾಟ್ ತೆಗಿತೀರಾ, ಒಂದ್ಸಲಾ ಮಳೆಲಿ ನಿಲ್ಲಿಸ್ತೀರಾ ಒಂದ್ಸಲಾ ಬೆಂಕಿಲಿ ನಿಲ್ಲಿಸ್ತೀರಾ, ಆಮೇಲೆ ಸ್ಲೋ ಮೋಷನ್‌ನಲ್ಲಿ ವಾಕ್ ಮಾಡ್ತಾ ಕ್ಯಾಮಾರ ಕ್ಲಿಕ್ ಮಾಡಿ ಫೇಸ್‌ನ ರಿವೀಲ್ ಮಾಡ್ತೀರಾ ಎಂದು ಶಿವಣ್ಣ ಹೇಳುತ್ತಾರೆ. ಈ ವೇಳೆ ಆ ಯುವಕ ಕರೆಕ್ಟು ಇದೆಲ್ಲಾ ನಿಮಗೆ ಹೇಗೆ ಗೊತ್ತಾಯ್ತು ಸರ್ ಎಂದು ಕೇಳಿದಾಗ ನಾನು ಇದುವರೆಗೆ 125 ಸಿನಿಮಾ ಮಾಡಿದ್ದೀನಿ ನನಗೆ ಕ್ಯಾಟ್ ವಾಕ್ ಮೂನ್ ವಾಕ್ ಎಲ್ಲಾ ಸೆಟ್ ಆಗಲ್ಲ, ನನಗೆ ಏನೆ ಇದ್ರು ಲೋಕಲ್ ಮಾಸು ಎಂದು ಟಂಪಾಗುಚ್ಚಿ ಸಾಂಗ್‌ಗೆ ಶಿವಣ್ಣ ಡಾನ್ಸ್ ಮಾಡಿದ್ದಾರೆ. ಅದನ್ನು ನೋಡಿಯೇ ಕಣ್ಣು ತುಂಬಿಕೊಳ್ಳಬೇಕು. "ಡ್ಯಾನ್ಸ್ ಕರ್ನಾಟಕ ಡಾನ್ಸ್" ನಲ್ಲಿ ಶಿವಣ್ಣ ಇನ್ನೂ ಏನೆಲ್ಲಾ ಕರಾಮತ್ತು ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Shivaraj Kumar is judge in dance Karnataka dance reality show. Promo released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X