For Quick Alerts
  ALLOW NOTIFICATIONS  
  For Daily Alerts

  ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಶಿವಣ್ಣನ 60ನೇ ಹುಟ್ಟುಹಬ್ಬದ ಸೆಲೆಬ್ರೇಷನ್!

  By ಎಸ್ ಸುಮಂತ್
  |

  ಯಂಗ್ ಅಂಡ್ ಎನರ್ಜಿಟಿಕ್ ಹೀರೊ ಅಂದರೆ ಅದು ಯಾವಾಗಲೂ ಒನ್ ಅಂಡ್ ಓನ್ಲಿ ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ, ಕನ್ನಡಿಗರ ಮನ ಮನೆಯ ಹೀರೋ ಡಾ. ಶಿವರಾಜ್ ಕುಮಾರ್ ಅವರಿಗೆ 60 ಸಮೀಪಿಸುತ್ತಿದೆ.

  ಈಗಲೂ ಎನರ್ಜಿ ವಿಚಾರದಲ್ಲಿ ಯಾರು ಕೂಡ ಶಿವಣ್ಣನನ್ನು ಮೀರಿಸುವವರಿಲ್ಲ. ಅವರನ್ನು ಸ್ಪೂರ್ತಿಯಾಗಿಯೇ ತೆಗೆದುಕೊಳ್ಳುತ್ತಾರೆ. ಹಾಗೇ ಅವರ ಹುಟ್ಟುಹಬ್ಬವನ್ನು ಹಬ್ಬದಂತೆ ಅಭಿಮಾನಿಗಳು ಆಚರಿಸುತ್ತಾರೆ. ಅಷ್ಟೇ ಅಲ್ಲ ಜೀ ಕನ್ನಡ ಈ ಬಾರಿ ಈ ಮೂಮೆಂಟ್ ಅನ್ನು ಯಾವಾಗಲೂ ಉಳಿಯುವಂತೆ ನೋಡಿಕೊಳ್ಳುತ್ತಿದೆ.

  ರದ್ದಿ ಪೇಪರ್‌ನಲ್ಲೂ ಸೀರೆ ಮಾಡುವ ವಿಧಾನ ನೋಡಿದ್ದೀರಾ? ಶಾಲಿನಿನೊಮ್ಮೆ ನೋಡಿ ಬಿಡಿ!ರದ್ದಿ ಪೇಪರ್‌ನಲ್ಲೂ ಸೀರೆ ಮಾಡುವ ವಿಧಾನ ನೋಡಿದ್ದೀರಾ? ಶಾಲಿನಿನೊಮ್ಮೆ ನೋಡಿ ಬಿಡಿ!

  ಶಿವಣ್ಣ ಡಿಕೆಡಿಯಲ್ಲಿ ವಿಶೇಷ ಅತಿಥಿಯಾಗಿದ್ದಾರೆ. ಪ್ರತಿ ವಾರವೂ ಅವರಿಗಾಗಿ ಏನಾದರೊಂದು ವಿಶೇಷ ಸಂದರ್ಭವನ್ನು ಜೀ ಕನ್ನಡ ಕ್ರಿಯೇಟ್ ಮಾಡ್ತಾನೆ ಇರುತ್ತೆ. ಇದೀಗ ಅವರಿಗೆ 60 ತುಂಬುತ್ತಿರುವ ಖುಷಿಯಲ್ಲಿ ಡಿಕೆಡಿ ವೇದಿಕೆ ಅದ್ಧೂರಿ ಸಮಾರಂಭಕ್ಕೆ ಅಣಿಯಾಗಿದೆ.

  ಶಿವರಾಜೋತ್ಸವ ಮೂಲಕ ಅದ್ಧೂರಿ ಆಚರಣೆ

  ಶಿವರಾಜೋತ್ಸವ ಮೂಲಕ ಅದ್ಧೂರಿ ಆಚರಣೆ

  ಜುಲೈ 12ಕ್ಕೆ ಶಿವಣ್ಣ ಹುಟ್ಟುಹಬ್ಬ. ಸೆಂಚುರಿಸ್ಟಾರ್ ಹುಟ್ಟುಹಬ್ಬ ಎಂದರೆ ಇಡೀ ಕರ್ನಾಟಕದ ಜನತೆ ತಮ್ಮ ಮನೆಯ ಹಬ್ಬದಂತೆ ಅಚರಿಸುತ್ತಾರೆ. ಈ ಬಾರಿ ಶಿವಣ್ಣ 60 ವರ್ಷಕ್ಕೆ ಕಾಲಿಡುತ್ತಿರುವ ಈ ಸುಮಧುರ ಗಳಿಗೆಯನ್ನು ಜೀ ಕನ್ನಡ ಡಿಕೆಡಿ ವೇದಿಕೆ ಶಿವರಾಜೋತ್ಸವ ಕಾರ್ಯಕ್ರಮದ ಮೂಲಕ ಆಚರಿಸುತ್ತಿದ್ದಾರೆ. ಡಿಕೆಡಿ ಈಗ ಸಂಪೂರ್ಣವಾಗಿ ಶಿವಣ್ಣನಿಗಾಗಿ ಮೀಸಲಿಡಲಾಗುತ್ತಿದೆ. ಶಿವಣ್ಣನ ಹಾಡುಗಳಿಗೆ ಡ್ಯಾನ್ಸ್ ಮಾಡುವುದೇ ಸ್ಪರ್ಧಿಗಳಿಗೆ ಒಂದಷ್ಟು ಖುಷಿ ನೀಡುತ್ತದೆ. ಈ ಮೂಲಕ ಶಿವಣ್ಣನಿಗೆ ಜೀ ಕನ್ನಡ ಹುಟ್ಟುಹಬ್ನದ ಶುಭಾಶಯ ತಿಳಿಸುತ್ತಿದೆ.

  ಸೆಂಚುರಿ ಸ್ಟಾರ್ ಶಿವಣ್ಣ ಹುಟ್ಟುಹಬ್ಬಕ್ಕೆ 60 ಗಂಟೆ ನಿರಂತರ ಸಿನಿಮೋತ್ಸವ !ಸೆಂಚುರಿ ಸ್ಟಾರ್ ಶಿವಣ್ಣ ಹುಟ್ಟುಹಬ್ಬಕ್ಕೆ 60 ಗಂಟೆ ನಿರಂತರ ಸಿನಿಮೋತ್ಸವ !

  200 ಡ್ಯಾನ್ಸರ್‌ಗಳ ಜೊತೆಗೆ ಶಿವಣ್ಣ ಕುಣಿತ

  200 ಡ್ಯಾನ್ಸರ್‌ಗಳ ಜೊತೆಗೆ ಶಿವಣ್ಣ ಕುಣಿತ

  ಶಿವಣ್ಣ ಎಂದಾಕ್ಷಣಾ ಒಂದಷ್ಟು ವಿಶೇಷತೆಗಳು ಮನಸಿನ ಮೂಲೆಯಲ್ಲಿ ರಪ್ ಅಂತ ಪಾಸಾಗುತ್ತವೆ. ಲಾಂಗು ಎಂದಾಕ್ಷಣ, ಶಿವಣ್ಣ ಬರುವ ಸ್ಟೈಲ್ ಕಣ್ಣ ಮುಂದೆ ಬರುತ್ತದೆ. ಇದೇ ಸ್ಟೈಲ್ ಇತ್ತೀಚೆಗೆ ಡಿಕೆಡಿ ವೇದಿಕೆಯಲ್ಲೂ ತೋರಿಸಲಾಗಿತ್ತು. ಇದೀಗ ಶಿವಣ್ಣನ ಹುಟ್ಟುಹಬ್ಬದ ಪ್ರಯುಕ್ತ ಶಿವರಾಜೋತ್ಸವ ಆಚರಿಸುತ್ತಿರುವ ಜೀ ಕನ್ನಡ, 209 ಡ್ಯಾನ್ಸರ್ ಗಳ ಜೊತೆಗೆ ಶಿವಣ್ಣ ಕುಣಿಯುವ ಆ ಅದ್ಭುತ ದೃಶ್ಯಕ್ಕೆ ಸಾಕ್ಷಿಯಾಗಲಿದೆ. ಇದರ ಸಣ್ಣ ಝಲಕ್ ಒಂದನ್ನು ಬಿಟ್ಟು ಒಂದಷ್ಟು ಕ್ಯೂರಿಯಾಸಿಟಿ ಹುಟ್ಟು ಹಾಕಿದೆ.

  ಸ್ಪರ್ಧಿಗಳ ಡ್ಯಾನ್ಸ್‌ಗೆ ಅರಳಿದ ಶಿವಣ್ಣನ ಮುಖ

  ಸ್ಪರ್ಧಿಗಳ ಡ್ಯಾನ್ಸ್‌ಗೆ ಅರಳಿದ ಶಿವಣ್ಣನ ಮುಖ

  ಡ್ಯಾನ್ಸ್ ಮಾಡಬೇಕು ಎಂದರೆ ಶಿವಣ್ಣನ ಸಿನಿಮಾಗಳ ಅದೆಷ್ಟು ಹಾಡುಗಳು ಬೇಕು. ಟಪ್ಪಾಗುಂಚಿಯಿಂದ ಹಿಡಿದು, ಡ್ಯುಯೆಟ್, ರೋಮ್ಯಾಂಟಿಕ್, ಎಮೋಷನಲ್ ಹೀಗೆ ಹಲವು ರೀತಿಯ ಹಾಡುಗಳು ಕುಣಿಯುವುದಕ್ಕೆ, ಸಂದೇಶ ನೀಡುವುದಕ್ಕೆ ಸಿಗುತ್ತದೆ. ಹೀಗಾಗಿ ಶಿವರಾಜೋತ್ಸವಕ್ಕಾಗಿ ಸ್ಪರ್ಧಿಗಳು ಶಿವಣ್ಣನ ಹಾಡುಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಹಾಡು, ನೃತ್ಯ ನೋಡುತ್ತಾ ಶಿವಣ್ಣ ಕೂಡ ಹಳೇ ನೆನಪಿಗೆ ಜಾರಿದ್ದಾರೆ. ಅವರ ಸಿನಿಮಾಗಳನ್ನು ನೆನಪಿಸಿಕೊಂಡು ಮುಖದಲ್ಲಿ ನಗು ಅರಳಿದೆ.

  ಅಣ್ಣಾವ್ರ ಮಕ್ಕಳ ಎಂಟ್ರಿ

  ಸ್ಯಾಂಡಲ್‌ವುಡ್‌ನಲ್ಲಿ ಅಣ್ಣಾವ್ರ ಫ್ಯಾಮಿಲಿ ಎಂದರೇನೆ ಗೌರವ, ಅಭಿಮಾನ, ಖುಷಿ. ಇನ್ನು ಮೂರು ಮುತ್ತಿನಂತ ಮಕ್ಕಳನ್ನು ಕಂಡರೆ ಎಲ್ಲಿಲ್ಲದ ಖುಷಿ. ಈ ಖುಷಿಯನ್ನು ದೇವರು ಇತ್ತೀಚೆಗೆ ಕಿತ್ತುಕೊಂಡು ಬಿಟ್ಟಿದ್ದಾನೆ. ಅಪ್ಪು ಎಂಬ ವಜ್ರವನ್ನು ತನ್ನ ಬಳಿಗೆ ಕರೆದುಕೊಂಡು ಎಲ್ಲರ ಮನಸ್ಸಲ್ಲೂ ನೋವನ್ನೆ ತುಂಬಿಸಿಬಿಟ್ಟಿದ್ದಾನೆ. ಆದರೆ ಶಿವಣ್ಣ ಈ ಬಾರಿ 60 ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಸಂಭ್ರಮದಲ್ಲಿ ಅಣ್ಣಾವ್ರ ಮಕ್ಕಳು ಒಟ್ಟಾಗಿ ಇದ್ದರೆ ಹೇಗೆ? ಜೀ ಕನ್ನಡ ವೇದಿಕೆಯಲ್ಲಿನ ಶಿವರಾಜೋತ್ಸವಕ್ಕೆ ರಾಘವೇಂದ್ರ ರಾಜ್‍ಕುಮಾರ್ ಬಂದಿದ್ದು, ಅಲ್ಲಿ ಅಪ್ಪು ಅವರನ್ನು ಎಲ್ಲರೂ ಮಿಸ್ ಮಾಡಿಕೊಳ್ಳುವಂತೆ ಆಗಿದೆ. ಆದರೆ ಜೊತೆಗಿರದ ಜೀವ ಎಂದಿಗಿಂತ ಜೀವಂತ ಎಂಬುದನ್ನು ಮನದಟ್ಟು ಮಾಡಿಕೊಂಡು, ಫೋಟೊ ಮೂಲಕ ಪವರ್ ಸ್ಟಾರ್ ಡಾ.ಪುನೀತ್ ರಾಜ್‍ಕುಮಾರ್ ಅವರನ್ನು ವೇದಿಕೆ ಮೇಲೆ ಇಳಿಸಿದ್ದಾರೆ. ಅಣ್ಣಾವ್ರ ಮೂರು ಕುಡಿಗಳನ್ನು ನೋಡಿ ಫ್ಯಾನ್ಸ್ ಕಣ್ತುಂಬಿಕೊಂಡಿದ್ದಾರೆ.

  English summary
  Shivarajkumar 60th Birthday Celebration in DKD Reality Show. Here is the details,
  Saturday, July 9, 2022, 18:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X