DKD Season 7: ವೇದಿಕೆ ಮೇಲೆ 'ಮಫ್ತಿ' ದೃಶ್ಯದ ಮರುಸೃಷ್ಟಿ.. ಅಂದು ಶಿವಣ್ಣನ ಮಾತಿಗೆ ಕಣ್ಣೀರಿಟ್ಟ ಛಾಯಾ ಸಿಂಗ್

By ಎಸ್ ಸುಮಂತ್

ಜೀ ಕನ್ನಡದಲ್ಲಿ ಹೊಸ ಹೊಸ ಧಾರಾವಾಹಿಗಳು ಬರುತ್ತಲೇ ಇದೆ. ಮನರಂಜನೆಯ ಫುಲ್ ಮೀಲ್ಸ್ ಕೊಡುವುದರಲ್ಲಿ ಜೀ ಕನ್ನಡ ನಂಬರ್ ಒನ್ ಎಂದರೆ ತಪ್ಪಾಗಲಿಕ್ಕಿಲ್ಲ. ಯಾವುದೋ ಒಂದು ಶೋ ಮುಗಿಯುತ್ತಾ ಇದೆ ಅಂದ್ರೆ ಅದನ್ನು ರಿಪ್ಲೇಸ್ ಮಾಡುವುದು, ರಿಪ್ಲೇಸ್ ಆದ ಶೋ ಜನರನ್ನು ಹಿಡಿದಿಡುವಂತಾ ಶೋ ನೀಡುತ್ತದೆ. ಅದರ ಸಾಲಿನಲ್ಲಿ ಈಗ ವೀಕೆಂಡ್‌ನಲ್ಲಿ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋ ಎಲ್ಲರ ಮನಸ್ಸನ್ನು ಗೆಲ್ಲುತ್ತಿದೆ.

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋನಲ್ಲಿ ಹಲವು ಪ್ರತಿಭೆಗಳು ಈ ಬಾರಿ ಮನರಂಜನೆ ನೀಡುತ್ತಿದ್ದಾರೆ. ಪ್ರತಿಭೆಗಳ ಜೊತೆಗೆ ಈ ವಾರ ಒಂದು ಭಾವನಾತ್ಮಕ ಸನ್ನಿವೇಶವೂ ಡಿಕೆಡಿ ವೇದಿಕೆ ಮೇಲೆ ನಡೆದಿದೆ. ಎಲ್ಲರ ಅಚ್ಚುಮೆಚ್ಚಿನ ದೃಶ್ಯಗಳು ಈಗ ರೀ-ಕ್ರಿಯೇಟ್ ಆಗಿದೆ.

Shivarajkumar and Chaya Singh Mufti Scene Recreated in Dance Karnataka Dance Stage

ಜೀ ಕನ್ನಡದಲ್ಲಿ 'ಅಮೃತಧಾರೆ'

ಜೀ ಕನ್ನಡದಲ್ಲಿ ಹೊಸ ಹೊಸ ಧಾರಾವಾಹಿಗಳಿಗೇನು ಕಡಿಮೆ ಇಲ್ಲ. ಆಗಾಗ ಅದ್ಭುತ ಕಥೆಯನ್ನಿಟ್ಟುಕೊಂಡು ಧಾರಾವಾಹಿಗಳು ಮೂಡಿ ಬರುತ್ತವೆ. ಇದೀಗ ಇದೇ ಸೋಮವಾರದಿಂದ 'ಅಮೃತಧಾರೆ' ಧಾರಾವಾಹಿ ಪ್ರಸಾರವಾಗುತ್ತಿದೆ. ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ ಮುಖ್ಯ ಭೂಮಿಕೆಯಲ್ಲಿ ನಟಿಸಿರುವಂತ ಧಾರಾವಾಹಿ ಇದಾಗಿದೆ. ಸದ್ಯ ಸೋಮವಾರದಿಂದ ಧಾರಾವಾಹಿ ಆರಂಭವಾಗುತ್ತಿದ್ದು, ಡಿಕೆಡಿ ವೇದಿಕೆಯಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಡಿಕೆಡಿ ವೇದಿಕೆಯಲ್ಲಿ ಅಣ್ಣ-ತಂಗಿಯ ಸಮಾಗಮ

ಜೀ ಕನ್ನಡ ಅಂದ್ರೆ ರಿಯಾಲಿಟಿ ಶೋ, ಧಾರಾವಾಹಿ ಎಲ್ಲವೂ ಕುಟುಂಬದಂತೆ. ಹೀಗಾಗಿ ಡಿಕೆಡಿ ವೇದಿಕೆಯಲ್ಲಿ 'ಅಮೃತಧಾರೆ' ಧಾರಾವಾಹಿಯ ಪ್ರಚಾರ ಮಾಡುತ್ತಿದ್ದಾರೆ. ಡಿಕೆಡಿ ಅಂದ್ರೆ ಶಿವಣ್ಣ. ಶಿವಣ್ಣ ಅಂದ್ರೆ ಸ್ಯಾಂಡಲ್‌ವುಡ್‌ನಲ್ಲಿ ಅಣ್ಣ ತಂಗಿ ಸಂಬಂಧದ ದೊಡ್ಡ ಮೌಲ್ಯ. ಡಿಕೆಡಿ ವೇದಿಕೆಯಲ್ಲೂ ಮತ್ತೆ ಅಣ್ಣ ತಂಗಿ ಸಂಬಂಧದ ಸಮಾಗಮವಾಗಿದೆ. ಮಫ್ತಿ ಸಿನಿಮಾದಲ್ಲಿ ಶಿವಣ್ಣನ ತಂಗಿ ಪಾತ್ರ ಮಾಡಿರುವ ಛಾಯಾ ಸಿಂಗ್ ಡಿಕೆಡಿ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಮತ್ತೆ ಒಂದೇ ವೇದಿಕೆಯಲ್ಲಿ ಅಣ್ಣ ತಂಗಿಯನ್ನು ನೋಡಿದ ಖುಷಿಯಾಗಿದೆ. ಅದರಲ್ಲೂ ಮಫ್ತಿಯಲ್ಲಿ ಅದೊಂದು ಎಮೋಷನಲ್ ದೃಶ್ಯವಿದೆ. "ನನ್ನ ಗಂಡ ಕೆಟ್ಟವನು ಅಂತ ಹೇಳಬಾರದ ಅಣ್ಣಾ. ಗಂಡ ಕೆಟ್ಟವನು ಅಂದ್ರೆ ನಿನ್ನ ಮನಸ್ಸಿಗೆ ಆಘಾತ ಆಗುತ್ತೆ. ಅದರ ಬದಲು ನಿನ್ನ ಅಣ್ಣನೆ ಕೆಟ್ಟವನು ಎಂದುಕೊಂಡರೆ ಎಷ್ಟೋ ಉತ್ತಮ" ಈ ಡೈಲಾಗ್ ಅನ್ನು ವೇದಿಕೆ ಮೇಲೆ ರೀ-ಕ್ರಿಯೇಟ್ ಮಾಡಲಾಗಿದೆ.

Shivarajkumar and Chaya Singh Mufti Scene Recreated in Dance Karnataka Dance Stage

ಶಿವಣ್ಣನ ಬಾಂಧವ್ಯಕ್ಕೆ ಮನಸೋತ ಛಾಯಾ ಸಿಂಗ್

'ಮಫ್ತಿ' ಸಿನಿಮಾದ ಆ ದೃಶ್ಯವನ್ನು ನೋಡಿ ವೇದಿಕೆ ಮೇಲಿದ್ದವರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಈ ವೇಳೆ ಶಿವಣ್ಣ ಮಾತನಾಡಿ, "ಅವತ್ತು ಆ ಸೀನ್ ಮಾಡುವಾಗಲೂ ಖುಷಿ ಆಯ್ತು. ನಂಗೆ ನನ್ನ ತಂಗಿ ನೋಡಿದಂತೆ ಆಯ್ತು. ಬ್ಯೂಟಿಫುಲ್ ಆಕ್ಟರ್" ಎಂದು ಛಾಯಾ ಸಿಂಗ್ ಅವರನ್ನು ಹೊಗಳಿದ್ದಾರೆ.

ವೇದಿಕೆ ಮೇಲೆ ರಾಕಿ ಕಟ್ಟಿದ ಛಾಯಾ

ಶಿವಣ್ಣ, ಯಾವಾಗ ನನ್ನ ತಂಗಿ ಎಂದರೋ ಛಾಯಾಸಿಂಗ್‌ಗೆ ಕಣ್ಣಲ್ಲಿ‌ ನೀರು ಬಂತು. 'ಮಫ್ತಿ' ಸಿನಿಮಾದ ಆ ಒಂದು ಘಟನೆಯನ್ನು ನೆನೆದರು. "ನಾನು ಮಫ್ತಿ ಸಿನಿಮಾ ಮುಗಿಸಿಕೊಂಡು ಬೆಂಗಳೂರಿಗೆ ಬಂದೆ. ಅಣ್ಣ ಕಾಲ್ ಮಾಡಿದ್ರು. ನಾನು ರಿಸೀವ್ ಮಾಡಿದೆ. ಎಲ್ಲಿದ್ದಿಯಮ್ಮ ಅಂತ ಕೇಳಿದ್ರು. ನಾನು ಬೆಂಗಳೂರಲ್ಲಿ ಅಣ್ಣ ಅಂದೆ. ಏನಿಲ್ಲಮ್ಮ, ರಾಕಿ ಹಬ್ಬ ಅಲ್ವಾ ವಿಶ್ ಮಾಡೋದಕ್ಕೆ ಕಾಲ್ ಮಾಡಿದೆ ಅಂದ್ರು. ನಂಗೆ ಕಣ್ಣಲ್ಲಿ ನೀರು ಬಂತು. ಅವತ್ತು ನಾನಲ್ಲಿ ಇದ್ದುಕೊಂಡು ರಾಕಿ ಕಟ್ಟಿ ಬರಬೇಕಿತ್ತು ಅಂತ". ಛಾಯಾ ಸಿಂಗ್ ಆ ದಿನವನ್ನು ನೆನೆದ ತಕ್ಷಣ ಅನುಶ್ರೀ ದೇವರ ದಾರವನ್ನು ತರಿಸಿದರು. ಅದನ್ನೇ ರಾಕಿಯಾಗಿ ಛಾಯಾ ಸಿಂಗದ ಶಿವಣ್ಣ ಅವರ ಕೈಗೆ ಕಟ್ಟಿದರು.

More from Filmibeat

English summary
Shivarajkumar and Chaya Singh Mufti Scene Recreated in Zee Kannada reality show Dance Karnataka Dance Stage, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X