Dance Karnataka Dance : ಶಿವಣ್ಣ ಎಂಟ್ರಿಗೆ ಬೆಚ್ಚಿಬಿದ್ದ ರಕ್ಷಿತಾ, ಅರ್ಜುನ್ ಜನ್ಯ, ಅನುಶ್ರೀ.. ಏನಾಗ್ತಿದೆ ಜೀ ಕನ್ನಡದಲ್ಲಿ?
ಜೀ ಕನ್ನಡದಲ್ಲಿ ವಾರಪೂರ್ತಿ ಮನರಂಜನೆ ಸಿಗುತ್ತೆ ಎಂಬುದರಲ್ಲಿ ನೋ ಡೌಟ್. ಹೊಸತನವನ್ನೇ ಹುಡುಕುವ ಜೀ ಕನ್ನಡ, ಆಗಾಗ ಹಲವು ಹೊಸತನ್ನು ಪ್ರಯೋಗ ಮಾಡುತ್ತಿರುತ್ತೆ. ಸಕ್ಸಸ್ ಆದರೆ ಕಂಟಿನ್ಯೂ ಮಾಡುತ್ತೆ ಫೇಲ್ ಆದರೆ ಅರ್ಧಕ್ಕೆ ಕೈ ಬಿಡುತ್ತೆ. ಈಗ ಗೋಲ್ಡನ್ ಗ್ಯಾಂಗ್ ರೀತಿ. ಅದನ್ನು ವೀಕ್ಷಕರು ನೋಡುತ್ತಿಲ್ಲ ಎಂದಾದರೆ ಮುಂದುವರೆಸುವ ಗೋಜಿಗೆ ಹೋಗಲ್ಲ. ಹೀಗಾಗಿಯೆ ಜೀ ಕನ್ನಡ ತನ್ನ ನಂಬರ್ ಒನ್ ಸ್ಥಾನವನ್ನೇ ಕಾಪಾಡಿಕೊಂಡು ಬಂದಿದೆ.
ಅದರಲ್ಲೂ ಸರಿಗಮಪ, ಡಿಕೆಡಿ, ಕಾಮಿಡಿ ಕಿಲಾಡಿಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಆ ಎಲ್ಲಾ ರಿಯಾಲಿಟಿ ಶೋಗಳು ತುಂಬಾ ಹೈಪ್ ಕ್ರಿಯೇಟ್ ಮಾಡಿವೆ. ಪ್ರತಿ ಸೀಸನ್‌ನಲ್ಲೂ ಜೀ ಕನ್ನಡದ ರಿಯಾಲಿಟಿ ಶೋ ಹೊಸ ಕುತೂಹಲವನ್ನು ಹೊತ್ತು ಬರುತ್ತಿದೆ. ಇದೀಗ ಮತ್ತೆ ಡಿಕೆಡಿ ತರಲು ಎಲ್ಲಾ ಸಿದ್ಧತೆಗಳು ನಡೆದಿವೆ. ಆದರೆ ಈ ಬಾರಿ ಡಿಕೆಡಿಗೆ ಸ್ಪೆಷಲ್ ಗೆಸ್ಟ್ ಗ್ರ್ಯಾಂಡ್ ಆಗಿ ಎಂಟ್ರಿ ಕೊಡುತ್ತಿದ್ದಾರೆ.

ಶಿವಣ್ಣನ ಎಂಟ್ರಿಯಿಂದ ಡಿಕೆಡಿಗೆ ಹೊಸ ಕಳೆ
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹೆಸರೇ ಸೂಚಿಸುವಂತೆ ಇದೊಂದು ಡ್ಯಾನ್ಸ್ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಕರ್ನಾಟಕದಾದ್ಯಂತ ಸರ್ಚ್ ಮಾಡಿ ಮಸ್ತ್ ಡ್ಯಾನ್ಸ್ ಮಾಡುವವರನ್ನು ಕರೆತರುತ್ತಾರೆ. ಅಷ್ಟೇ ಅಲ್ಲ ಟ್ಯಾಲೆಂಟ್ ಇದ್ದವರಿಗೂ ಡಿಕೆಡಿ ವೇದಿಕೆ ಕಲ್ಪಿಸಿಕೊಡುತ್ತದೆ. ಈಗಾಗಲೇ ಐದು ಸೀಸನ್‌ನಲ್ಲಿ ಪ್ರತಿಭಾವಂತರು ಸ್ಟೇಜ್ ಮೇಲೆ ಹೆಜ್ಜೆ ಹಾಕಿ, ಎಲ್ಲರ ಮನಸ್ಸನ್ನು ಕುಣಿಸಿ ಆಗಿದೆ. ಈಗ ಸೀಸನ್ 6. ಕಲರ್ ಫುಲ್ ಡ್ಯಾನ್ಸ್ ಜೊತೆಗೆ ಬ್ಯೂಟಿಫುಲ್ ವ್ಯಕ್ತಿ ಈ ಕಾರ್ಯಕ್ರಮದಲ್ಲಿ ನೋಡುವುದಕ್ಕೆ ಸಿಗುತ್ತಾರೆ. ಅವರೇ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಡಾ.ಶಿವರಾಜ್ ಕುಮಾರ್. ಹೌದು, ಡಿಕೆಡಿ ಕಾರ್ಯಕ್ರಮದಲ್ಲಿ ಶಿವಣ್ಣ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ.

ಶ್ಯಾಡೋ ಫೋಟೊ ಬಿಟ್ಟು ಕುತೂಹಲ ಕೊಟ್ಟ ಜೀ ಕನ್ನಡ
ಡ್ಯಾನ್ ಕರ್ನಾಟಕ ಡ್ಯಾನ್ ರಿಯಾಲಿಟಿ ಶೋ ಏಪ್ರಿಲ್ 16 ರಂದು ಆರಂಭವಾಗಲಿದೆ. ಈಗಾಗಲೇ ಅದಕ್ಕೆ ಬೇಕಾಗಿರುವ ಎಲ್ಲಾ ತಯಾರಿಗಳು ನಡೆದಿವೆ. ಪ್ರೋಮೊ ಕೂಡ ಬಿಡಲಾಗಿದೆ. ಅದರಲ್ಲಿ ಸ್ಪೆಷಲ್ ಆಗಿ ಶಿವಣ್ಣ ಅದ್ಭುತ ಎಂಟ್ರಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಶಿವಣ್ಣ ಹೇಗೆ ಇದ್ದರು, ಎಷ್ಟು ದೂರವೇ ಇದ್ದರು ಅವರನ್ನು ಕಂಡು ಹಿಡಿಯುವ ಶಕ್ತಿ ಅವರ ಅಭಿಮಾನಿಗಳಿಗೆ ಇದ್ದೆ ಇದೆ. ಅಷ್ಟೇ ಅಲ್ಲ ಅವರ ನಿಂತುಕೊಳ್ಳುವ, ನಡೆಯುವ ಸ್ಟೈಲ್ ಎಲ್ಲರ ಮನಸ್ಸಲ್ಲಿ ಅಚ್ಚೆಯಾಗಿ ಬಿಟ್ಟಿದೆ. ಹೀಗಿರುವಾಗ ಅವರ ನೆರಳನ್ನು ತೋರಿಸಿದರೆ ಕಂಡು ಹಿಡಿಯದೆ ಇರಲು ಸಾಧ್ಯವಾ..? ಜೀ ಕನ್ನಡ ಕೂಡ ಶಿವರಾಜ್‍ಕುಮಾರ್ ನೆರಳಿರುವಂತ ಫೋಟೊ ಒಂದನ್ನು ಶೇರ್ ಮಾಡಿ, ಇವರು ಯಾರು ಬಲ್ಲಿರೇನು ಅಂತ ಪ್ರಶ್ನೆ ಕೇಳಿದ್ರು. ಅಭಿಮಾನಿಗಳೇ ದೇವರು ಅನ್ನೋ ಅಣ್ಣಾವ್ರ ಕುಟುಂಬವನ್ನು ಗುರುತು ಹಿಡಿಯಲು ಅಸಾಧ್ಯನಾ? ಅಂತ ಮುಗಿಬಿದ್ದವರಂತೆ ಅಭಿಮಾನಿಗಳು ಕಮೆಂಟ್ ಬಾಕ್ಸ್ ತುಂಬಿಸಿದ್ದರು. ಆ ಬಳಿಕ ಶಿವಣ್ಣನ ಇಂಟ್ರುಡಕ್ಷನ್ ಪ್ರೋಮೊ ಬಿಟ್ಟು ಮತ್ತಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದ್ದರು.

ಪ್ರೋಮೊದಲ್ಲಿ ಇರೋದು ಏನು?
ಡಿಕೆಡಿ ಸೀಸನ್ 6 ಶುರು ಮಾಡಲು ಜೀ ಕನ್ನಡ ಕೂಡ ಕಾತುರವಾಗಿದೆ. ಅಷ್ಟೇ ಅಲ್ಲ ವೀಕ್ಷಕರು ಈ ಬಾರಿ ಏನೆಲ್ಲಾ ಇರಲಿದೆ, ಯಾರೆಲ್ಲಾ ಕುಣಿಯಲಿದ್ದಾರೆ ಎಂಬ ಕ್ಯೂರಿಯಾಸಿಟಿಯನ್ನು ಮನಸ್ಸಲ್ಲೆ ಇಟ್ಟುಕೊಂಡು ಆ ದಿನಕ್ಕಾಗಿ ಕಾಯುತ್ತಿದ್ದಾರೆ. ಈ ಹಿಂದಿನ ಸೀಸನ್‌ನಲ್ಲಿ ರಕ್ಷಿತಾ ಪ್ರೇಮ್, ಅರ್ಜುನ್ ಜನ್ಯ, ಚಿನ್ನಿ ಪ್ರಕಾಶ್ ಮಾಸ್ಟರ್ ಜಡ್ಜ್ ಗಳ ಸ್ಥಾನದಲ್ಲಿ ಕುಳಿತಿದ್ದರು. ಆದರೆ ಈ ಬಾರಿ ಅವರಿಗೆ ಜೀ ಕನ್ನಡ ಶಾಕ್ ಕೊಟ್ಟಿದೆ. ಇದು ಪ್ರಮೋಷನ್‌ಗಾಗಿಯೇ ಇರಬಹುದು. ಬಟ್ ನೋಡುಗರಿಗೆ ಅಯ್ಯೋ ಪಾಪ ಎನಿಸದೆ ಇರದು. ಯಾವ ಯೋಚನೆಯೂ ಇಲ್ಲದೆ ರಕ್ಷಿತಾ ಪಾರ್ಲರ್ ಇದ್ದಾರೆ. ಆದರೆ ಇಲ್ಲಿ ಡಿಕೆಡಿಗೆ ಎಲ್ಲಾ ತಯಾರಿ ನಡೆದಿದೆ. ಅರ್ಜುನ್ ಜನ್ಯ, ಶಿವಣ್ಣಪ್ರೋಮೊ ನೋಡಿ ಟೆನ್ಶನ್ ಆಗಿದ್ದಾರೆ. ರಕ್ಷಿತಾಗೆ ಕರೆ ಮಾಡಿದ್ದೆ ತಡ, ಸುದ್ದಿ ಎಲ್ಲಾ ಕಡೆ ಹಬ್ಬಿದೆ. ಅನುಶ್ರೀ, ಅರ್ಜುನ್ ಜನ್ಯಾ, ಚಿನ್ನಿ ಮಾಸ್ಟರ್, ರಕ್ಷಿತಾ ಎಲ್ಲರೂ ಒಟ್ಟಿಗೆ ಸೇರಿ ಸಣ್ಣ ಬೆಳಕಿನಲ್ಲಿ ಕೂತು ಗಂಭೀರವಾಗಿ ಚರ್ಚೆ ಮಾಡುತ್ತಿದ್ದಾರೆ. ಇದೆಲ್ಲ ಪ್ರಮೋಷನ್‌ಗಾಗಿಯೇ ಆದರೂ ಸಖತ್ ಮಜಾ ಕೊಡುತ್ತಿದೆ.

ಶಿವಣ್ಣನ ಬಗ್ಗೆ ಹಿಂಗ್ಯಾಕೆ ಮಾತಾಡಿಕೊಂಡ್ರು?
ಪ್ರೋಮೊ ನೋಡಿದವರು ಶಿವಣ್ಣ ಹೀಗೆ ಮಾಡಿದರು? ರಕ್ಷಿತಾ, ಅರ್ಜುನ್ ಜನ್ಯ, ಅನುಶ್ರೀಗೆ ಇವರಿಂದ ತೊಂದರೆ ಆಗಿ ಬಿಡುತ್ತಾ? ಇದು ಸಾಧ್ಯನಾ? ಅಂತ ಯೋಚಿಸುತ್ತಾ ಇದ್ದಾರೆ. ನಾವೂ ನೋಡೊ ಶಿವಣ್ಣ ಹಾಗೇ ಮಾಡುವುದಕ್ಕೆ ಸಾಧ್ಯನಾ? ನೋ ವೇ ಚಾನ್ಸೆ ಇಲ್ಲ. ಜೀ ಕನ್ನಡ ಬಿಟ್ಟಿರುವ ಡಿಕೆಡಿ ಪ್ರೋಗ್ರಾಂನ ಹೊಸ ಪ್ರೋಮೊದಲ್ಲಿ ಇದೆಲ್ಲವೂ ಅಡಗಿದೆ. ಟೆನ್ಶನ್‌ನಲ್ಲಿ ಕೂತಿದ್ದ ಅನುಶ್ರೀ, ಅರ್ಜುನ್ ಜನ್ಯ, ರಕ್ಷಿತಾ, ಚೆನ್ನಿ ಪ್ರಕಾಶ್ ಅವರನ್ನೆಲ್ಲಾ ಕೈ ಹಿಡಿದು ಬನ್ನಿ ಜೊತೆಗೆ ಹೋಗೋಣಾ ಎಂದು ಕರೆದೊಯ್ದಿದ್ದಾರೆ.


Click it and Unblock the Notifications











