'ಬ್ರಹ್ಮಾಸ್ತ್ರ'ದಲ್ಲಿ ಶಿವರಾತ್ರಿ ವಿಶೇಷ: ವೀಕ್ಷಿಸಿ ಇಂದು ರಾತ್ರಿ 8ಕ್ಕೆ

By Harshitha

ಉದಯ ಟಿವಿ ತನ್ನ ಹೊಸ ಹೊಸ ಪ್ರಯೋಗಗಳಿಂದ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇತ್ತೀಚಿಗೆ ಶುರುವಾಗಿರುವ ಹೊಸ ಧಾರಾವಾಹಿ 'ಬ್ರಹ್ಮಾಸ್ತ್ರ' ವಿಭಿನ್ನವಾಗಿದ್ದು, ಶಿವರಾತ್ರಿಯ ವಿಶೇಷ ಸಂಚಿಕೆಯನ್ನ ನೀಡಲು ಮುಂದಾಗಿದೆ.

ನಿರ್ಮಾಪಕ ರವಿ.ಆರ್.ಗರಣಿ ಅವರ ಸಾರಥ್ಯದಲ್ಲಿ ಮೂಡಿ ಬರ್ತಿರೋ ಈ ಧಾರಾವಾಹಿ ಈಗಾಗಲೇ ಕರುನಾಡಿನ ಮುದ್ದು ಮನಸ್ಸುಗಳನ್ನ ಗೆದ್ದು ಯಶಸ್ವಿಯಾಗಿ ಪ್ರಸಾರವಾಗುತ್ತಿದೆ. ನಿರ್ಮಾಣ, ನಿರ್ದೇಶನ, ಸಂಭಾಷಣೆ ಹೀಗೆ ಎಲ್ಲದರಲ್ಲೂ ಕ್ರಿಯಾತ್ಮಕವಾಗಿದೆ ಎಂಬುದು ನೋಡುಗರ ಅಭಿಪ್ರಾಯವಾಗಿದೆ.

ಕನ್ನಡದ ಹುಡುಗ ಮತ್ತು ತೆಲುಗು ಹುಡುಗಿಯ ನಡುವೆ ನಡೆಯುವ ಪ್ರೇಮಕಥೆ 'ಬ್ರಹ್ಮಾಸ್ತ್ರ'. ಅಜ್ಜಿ ಅಲಮೇಲಮ್ಮ ತನ್ನನ್ನು ಕಟುಕನಿಗೆ ಮದ್ವೆ ಮಾಡುವ ನಿರ್ಧಾರ ಮಾಡಿದ್ದಾರೆಂಬ ಕಾರಣಕ್ಕೆ ನಾಯಕಿ ಶಿವರಂಜಿನಿ ಆಂಧ್ರದಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಬರುತ್ತಾಳೆ. ಇಲ್ಲಿ ಅನಿರಿಕ್ಷಿತವಾಗಿ ನಾಯಕ ಸಂತೋಷನ ಭೇಟಿಯಾಗಿ ಅವನ ಮನೆಯಲ್ಲಿರೋ ಪರಿಸ್ಥಿತಿ ಎದುರಾಗುತ್ತದೆ.

ವಿಧಿ ಲಿಖಿತವೆಂಬಂತೆ ಶಿವರಂಜಿನಿ ತನ್ನ ಅತ್ತೆ ಕೃಷ್ಣವೇಣಿ ಮನೆಗೇ ಬಂದಿರುತ್ತಾಳೆ. ಈ ವಿಷ್ಯವನ್ನು ನಾಯಕಿ ನಾಯಕನಿಗೂ ಹೇಳದೆ ಕದ್ದು ಅವನ ಮನೆಯಲ್ಲೇ ಇರುತ್ತಾಳೆ. ಆದರೆ ಈ ಶಿವರಾತ್ರಿ ಹಬ್ಬದಂದು ಮನೆಯಲ್ಲಿ ಅಡಗಿರುವ ಶಿವರಂಜಿನಿ ಸಿಕ್ಕಿ ಬೀಳುವಳೇ ಎಂಬುದೇ ಕುತೂಹಲ. ಮುಂದೆ ಓದಿರಿ...

'ಬ್ರಹ್ಮಾಸ್ತ್ರ' ಶಿವರಾತ್ರಿ ವಿಶೇಷ

'ಬ್ರಹ್ಮಾಸ್ತ್ರ' ಶಿವರಾತ್ರಿ ವಿಶೇಷ

ಎಲ್ಲರಿಗೂ ಗೊತ್ತಿರುವಂತೆ ನಾಯಕ ಸಂತೋಷನದ್ದು ಪ್ರೀತಿ, ಖುಷಿ ಸಂತಸಗಳೇ ತುಂಬಿರುವ ಪುಟ್ಟ ಕೂಡು ಕುಟುಂಬ. ಶಿವರಾತ್ರಿಯ ಜಾಗರಣೆ ವಿಶೇಷಕ್ಕೆ ಈ ಕುಟುಂಬ ಒಂದೊಂದು ವೇಷಗಳನ್ನು ತೊಟ್ಟು ವೀಕ್ಷಕರಿಗೆ ಮನರಂಜಿಸಲು ಸಜ್ಜಾಗಿದೆ.

ಸ್ತ್ರೀ ವೇಷದಲ್ಲಿ ಅಶೋಕ್ ಹೆಗಡೆ

ಸ್ತ್ರೀ ವೇಷದಲ್ಲಿ ಅಶೋಕ್ ಹೆಗಡೆ

ವೇಣು ಪಾತ್ರ ಮಾಡುತ್ತಿರುವ ಅಶೋಕ್ ಹೆಗಡೆಯವರು ಮೊದಲಬಾರಿಗೆ ಸ್ತ್ರೀ ವೇಷ ತೊಟ್ಟು ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರದಲ್ಲಿ ಕಾಣಿಸಲಿದ್ದಾರೆ. ಕತ್ತಿ ಗುರಾಣಿಯ ಹಿಡಿದು ಬ್ರಿಟಿಷರೆದುರು ಹೊಡೆಯೋ ಡೈಲಾಗ್ ಅದ್ಭುತವಾಗಿ ಮೂಡಿಬಂದಿದೆ.

ಹಿರಣ್ಯಕಶ್ಯಪು ಆಗಿ ತ್ರಿವೇಣಿ

ಹಿರಣ್ಯಕಶ್ಯಪು ಆಗಿ ತ್ರಿವೇಣಿ

ನಾಯಕನ ತಾಯಿ ಕೃಷ್ಣವೇಣಿ ಪಾತ್ರ ನಿರ್ವಹಿಸವ ತ್ರಿವೇಣಿಯವರು ಹಿರಣ್ಯ ಕಶ್ಯಪುವಿನ ವೇಷ ತೊಟ್ಟು ತಮ್ಮ ಪ್ರತಿಭೆಯನ್ನ ಈ ಮೂಲಕ ಅನಾವರಣ ಮಾಡಿದ್ದಾರೆ. ಗದೆ ಹಿಡಿದು ನಡೆಯೋ ಅವರ ಗಾಂಭೀರ್ಯ, ಆ ಮಾತಿನ ಗತ್ತು ಇವೆಲ್ಲಾ ಕೇಳುವುದಕ್ಕಿಂತ ನೋಡಿದರೆ ಸಿಗುವ ಖುಷಿಯೇ ಬೇರೆ.

ರಶ್ಮಿತಾಳ ಶಿವತಾಂಡವ

ರಶ್ಮಿತಾಳ ಶಿವತಾಂಡವ

ರಶ್ಮಿತಾ ಅವರ ಖುಷಿ ಪಾತ್ರದಲ್ಲಿ ಅವರ ಅಭಿನಯ ಕಂಡ ನಮಗೆ ಈಗ ಶಿವ ತಾಂಡವ ನೃತ್ಯದ ಮೂಲಕ ಅವರ ನೃತ್ಯ ಪ್ರತಿಭೆಯನ್ನು ಸವಿಯುವ ಅವಕಾಶ ಸಿಕ್ಕಿದೆ.

'ಬೇಡರ ಕಣ್ಣಪ್ಪ' ಆದ ಆನಂದ್

'ಬೇಡರ ಕಣ್ಣಪ್ಪ' ಆದ ಆನಂದ್

ಆನಂದ್ ಆಗಿರುವ ಸಿದ್ದು, ಬೇಡರ ಕಣ್ಣಪ್ಪ ದೃಶ್ಯದಲ್ಲಿ ಡಾ.ರಾಜ್ ಕುಮಾರ್ ಅವರನ್ನ ನೆನಪಿಸುವಂತೆ ಅಭಿನಯಿಸಿದ್ದಾರೆ. ಹಾಗೂ ಅದಕ್ಕೆ ಒಪ್ಪುವಂತಹ ವೇಷಭೂಷಣ ತೊಟ್ಟು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಯಕ್ಷಗಾನ ಮಾಡಿದ ಪ್ರಿಯಾ

ಯಕ್ಷಗಾನ ಮಾಡಿದ ಪ್ರಿಯಾ

ಮುಖ್ಯವಾಗಿ ಬಡಗುತಿಟ್ಟು ಯಕ್ಷಗಾನ ಕಲೆಯನ್ನು ಪ್ರಿಯಾ ಪಾತ್ರಧಾರಿ ಪಲ್ಲವಿ ಮತ್ತಿಗಟ್ಟ ಪ್ರದರ್ಶಿಸಲಿದ್ದಾರೆ. ಯಕ್ಷಗಾನ ವೇಷಭೂಷಣದೊಂದಿಗೆ ನೃತ್ಯ ಮಾಡುವ ಇವರು ಒಂದು ಕ್ಷಣ ರಂಗು ಮೂಡಿಸುತ್ತಾರೆ.

ನಗುವಿನ ಕಚಗುಳಿ

ನಗುವಿನ ಕಚಗುಳಿ

ಹಾಸ್ಯನಟ ಪವನ್, ರಜನಿಕಾಂತ್ ಮತ್ತು ಮೊನೀಷ್ ಅವರು ಗುರುಶಿಷ್ಯ ಮತ್ತು ಬ್ರಿಟಿಷ್ ಅಧಿಕಾರಿಯ ವೇಷತೊಟ್ಟು ನಗುವಿನ ಕಚಗುಳಿ ಇಡುತ್ತಾರೆ. ಇವೆಲ್ಲದರ ಜೊತೆಗೆ ಸಂತು ಆಗಿರುವ ಪ್ರಮೋದ್ ಮತ್ತು ಶಿವರಂಜಿನಿಯಾಗಿರುವ ದೀಪಾ ಹಿರೇಮಠ್ ಅವರು ಡ್ಯೂಯೆಟ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಪ್ರಸಾರ ಯಾವಾಗ.?

ಪ್ರಸಾರ ಯಾವಾಗ.?

'ಬ್ರಹ್ಮಾಸ್ತ್ರ'ದಲ್ಲಿ ಶಿವರಾತ್ರಿ ವಿಶೇಷ ನಾಳೆ ರಾತ್ರಿ 8ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

More from Filmibeat

English summary
Watch Mahashivaratri special in Brahmastra serial today at 8PM in Udaya TV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X