ಸ್ನೇಹಿತರ ಜೊತೆಯಲ್ಲಿ ನಿಮ್ಮ ಮನೆ ಅಂಗಳಕ್ಕೆ ಶಿವರಾಜ್ ಕುಮಾರ್
Recommended Video

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕನ್ನಡ ಸಿನಿಮಾರಂಗದ ಅಜಾತಶತ್ರು. ಪ್ರತಿ ಕಲಾವಿದರು ಶಿವಣ್ಣನನ್ನ ತುಂಬಾ ಪ್ರೀತಿಸುತ್ತಾರೆ ಹಾಗೂ ಅವರ ಜೊತೆ ಸಮಯ ಕಳೆಯಲು ಇಷ್ಟ ಪಡುತ್ತಾರೆ. ಅದಷ್ಟೇ ಅಲ್ಲದೆ ಶಿವರಾಜ್ ಕುಮಾರ್ ಅವರಿಗೆ ಚಿತ್ರರಂಗ ಹೊರತು ಪಡಿಸಿ ಸಾಕಷ್ಟು ಜನ ಸ್ನೇಹಿತರಿದ್ದಾರೆ.
ಶಿವಣ್ಣನ ಆಪ್ತ ಸ್ನೇಹಿತರು ಯಾರು? ಚಿತ್ರರಂಗದಲ್ಲಿರುವ ಕಲಾವಿದರು ಹ್ಯಾಟ್ರಿಕ್ ಹೀರೋ ಜೊತೆ ಎಷ್ಟು ಆತ್ಮೀಯವಾಗಿದ್ದಾರೆ? ಎನ್ನುವುದನ್ನ ಪ್ರೇಕ್ಷಕರಿಗೆ ತಿಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ 'ಸ್ಟಾರ್ ಸುವರ್ಣ' ವಾಹಿನಿ ತಂಡ.
ಶಿವರಾಜ್ ಕುಮಾರ್ ಅವರ ಆಪ್ತ ಸ್ನೇಹಿತರ ಜೊತೆಯಲ್ಲಿ ಇನ್ನು ಮುಂದೆ ನಿಮ್ಮ ಮನೆ ಟಿವಿಯಲ್ಲಿ ಬರಲಿದ್ದಾರೆ. ಸಾಕಷ್ಟು ವರ್ಷಗಳ ಹಿಂದೆಯೇ ರಿಯಾಲಿಟಿ ಶೋ ಗೆ ಗುಡ್ ಬೈ ಹೇಳಿದ್ದ ಶಿವಣ್ಣ ಮತ್ತೆ ಕಿರುತೆರೆ ಕಡೆ ಮುಖ ಮಾಡಿದ್ದಾರೆ. ಹಾಗಾದ್ರೆ ಶಿವಣ್ಣ ಯಾವ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ? ರಿಯಾಲಿಟಿ ಶೋ ಯಾವಾಗ ಪ್ರಾರಂಭ ಆಗುತ್ತೆ? ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಯಾರಿ ನಂ 1 ನಲ್ಲಿ ಶಿವರಾಜ್ ಕುಮಾರ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಿರುತೆರೆಗೆ ಕಾಲಿಟ್ಟಿದ್ದಾರೆ. ಯಾರಿ ನಂ 1 ಎನ್ನುವ ಹೆಸರಿನ ಕಾರ್ಯಕ್ರಮವನ್ನ ಶಿವಣ್ಣ ನಡೆಸಿಕೊಡಲಿದ್ದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ವಿಭಿನ್ನ ಕಾರ್ಯಕ್ರಮದಲ್ಲಿ ಶಿವಣ್ಣ
ಸಾಕಷ್ಟು ವರ್ಷಗಳ ಹಿಂದೆ ಶಿವರಾಜ್ ಕುಮಾರ್ ನಾನಿರುವುದೇ ನಿಮಗಾಗಿ ಎನ್ನುವ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದರು. ನಂತರ ನಂತರ ಯಾವುದೇ ಟಾಕ್ ಶೋ ನಲ್ಲಿ ಭಾಗಿ ಆಗಿಲ್ಲ. ಆದರೆ ಈಗ ಯಾರಿ ನಂ 1 ಟಾಕ್ ಶೋ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಆಫ್ ಸ್ಕ್ರೀನ್ ಸ್ನೇಹಿತರು ಇರಲಿದ್ದಾರೆ
ಚಿತ್ರರಂಗದಲ್ಲಿನ ಶಿವರಾಜ್ ಕುಮಾರ್ ಅವರ ಸ್ನೇಹಿತರು ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ವಿಶೇಷ ಅಂದರೆ ಶಿವಣ್ಣನ ಫ್ಯಾಮಿಲಿ ಫ್ರೆಂಡ್ಸ್ ಕೂಡ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರಲಿದ್ದಾರೆ.

ಶೀಘ್ರದಲ್ಲೇ ಪ್ರಸಾರ
ಯಾರಿ ನಂ 1 ಕಾರ್ಯಕ್ರಮದ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಸುವರ್ಣ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಆದರೆ ಕಾರ್ಯಕ್ರಮ ಪ್ರಸಾರ ಆಗುವ ದಿನಾಂಕ ಮಾತ್ರ ನಿಗದಿ ಆಗಿಲ್ಲ.

ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಕಲಾವಿದರು
ಕನ್ನಡ ಸಿನಿಮಾರಂಗದ ಬಹುತೇಕ ಕಲಾವಿದರು ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಶೃತಿ ಹರಿಹರನ್, ಅರ್ಜುನ್ ಜನ್ಯ, ರಕ್ಷಿತ ಪ್ರೇಮ್, ಯೋಗರಾಜ್ ಭಟ್, ವಿಜಯ ರಾಘವೇಂದ್ರ, ಹೀಗೆ ಇನ್ನೂ ಅನೇಕರು ಕಿರುತೆರೆಯಲ್ಲಿ ವಾರಾಂತ್ಯದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನ ರಂಜಿಸುತ್ತಿದ್ದಾರೆ.


Click it and Unblock the Notifications











