»   » ಜೀ ಕನ್ನಡದಲ್ಲಿ ಶಿವರಾಜ್ ಕುಮಾರ್ 101ನೇ ಚಿತ್ರ

ಜೀ ಕನ್ನಡದಲ್ಲಿ ಶಿವರಾಜ್ ಕುಮಾರ್ 101ನೇ ಚಿತ್ರ

Posted By:
Subscribe to Filmibeat Kannada
ಹ್ಯಾಟ್ರಿಕ್ ಹೀರೋ, ಸ್ಯಾಂಡಲ್ ವುಡ್ ಕಿಂಗ್, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ 101ನೇ ಚಿತ್ರ ಜೀ ಕನ್ನಡದಲ್ಲಿ ಇದೇ ಶನಿವಾರ (ಮಾ.23) ಪ್ರಸಾರವಾಗುತ್ತಿದೆ. ಸಂಜೆ 5.30ಕ್ಕೆ ಸರಿಯಾಗಿ ಈ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.

ಇದೇ ಮೊದಲ ಬಾರಿಗೆ ಶಿವಣ್ಣ ಅಭಿನಯದ ಶಿವ ಚಿತ್ರ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಮೂಲಗಳ ಪ್ರಕಾರ ಈ ‌ಚಿತ್ರದ ಸ್ಯಾಟಲೈಟ್ ರೈಟ್ಸನ್ನು ಜೀ ಕನ್ನಡ ವಾಹಿನಿ ಸರಿಸುಮಾರು ರು.2.5 ಕೋಟಿಗೆ ಖರೀದಿಸಿತ್ತು. ಶಿವಣ್ಣ ಅಭಿನಯದ ಎಲ್ಲಾ ಚಿತ್ರಗಳ ಟಿವಿ ರೈಟ್ಸ್ ಗಳಲ್ಲೇ ಇದು ಅತ್ಯಧಿಕ ಎನಿಸಿದೆ.

ಶಿವಣ್ಣ ಹಾಗೂ ಓಂ ಪ್ರಕಾಶ್ ಸಂಗಮದ 'AK-47' ಚಿತ್ರ ಸೂಪರ್ ಹಿಟ್ ಆಗಿತ್ತು. ಆ ಕಾರಣಕ್ಕೇ ಈ ಚಿತ್ರವನ್ನು ಖರೀದಿ ಮಾಡಿದ್ದಾಗಿ ಜೀ ಕನ್ನಡ ವಾಹಿನಿ ಹೇಳಿಕೊಂಡಿತ್ತು. ಓಂ ಪ್ರಕಾಶ್ ರಾವ್ ಡೈರೆಕ್ಷನ್ ಎಂದರೆ ಕೇಳಬೇಕೆ, ಅದೆಲ್ಲಿಂದಲೋ ಅದೇನನ್ನೋ ಎತ್ತಿಕೊಂಡು ಇನ್ನೇನನ್ನೋ ಮಾಡಿರುತ್ತಾರೆ. ಶಿವ ಚಿತ್ರದ ಚಿತ್ರ ವಿಮರ್ಶೆ ಓದಿ.

ಶಿವರಾಜ್ ಕುಮಾರ್ ಅವರ ಸ್ಟೈಲಿಶ್ ಅಭಿನಯ, ರಾಗಿಣಿ ದ್ವಿವೇದಿ ಅವರ ಗ್ಲಾಮರ್, ಒಂದಷ್ಟು ಫೈಟ್ಸ್, ಇನ್ನೊಂದಿಷ್ಟು ಹಾಡು ಮಸಾಲೆ ಚಿತ್ರದಲ್ಲಿ ಇದ್ದೇ ಇದೆ. ಥಿಯೇಟರ್ ನಲ್ಲಿ ಶಿವ ಚಿತ್ರವನ್ನು ಮಿಸ್ ಮಾಡಿಕೊಂಡಿದ್ದರೆ ಶನಿವಾರ ಜೀ ಕನ್ನಡದಲ್ಲಿ ನೋಡಿ ಆನಂದಿಸಬಹುದು. (ಒನ್ಇಂಡಿಯಾ ಕನ್ನಡ)

English summary
Hat trick Hero Shivrajkumar's 101st film Shiva being aired on Zee Kannada on 23rd March at 5.30 pm. directed by Om Prakash Rao and produced by K. P. Srikanth under Company films banner. The film also stars Ragini Dwivedi in the female lead role. 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X