Don't Miss!
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿರುತೆರೆಯಲ್ಲಿ ಶಿವಣ್ಣ ಅಂದರ್ ಬಾಹರ್ ಬಿಡುಗಡೆ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಮನೆಮಂದಿಯಲ್ಲಾ ಕುಳಿತು ನೋಡಬಹುದಾದ 'ಅಂದರ್ ಬಾಹರ್' ಚಿತ್ರ ಇದೇ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಬಿಡುಗಡೆಯಾಗುತ್ತಿದೆ. ಶಿವಣ್ಣ ಅಭಿನಯದ ಅಮೋಘ ಚಿತ್ರಗಳಲ್ಲಿ ಇದೂ ಒಂದಾಗಿರುವುದು ವಿಶೇಷ.
ಸ್ಟಾರ್ ನೆಟ್ ವರ್ಕ್ ನ ಸುವರ್ಣ ವಾಹಿನಿಯಲ್ಲಿ ಇದೇ ಭಾನುವಾರ (ಅ.20) ರಂದು ಸಂಜೆ 6ಕ್ಕೆ ಚಿತ್ರವನ್ನು ವೀಕ್ಷಿಸಬಹುದು. ಅಂದರ್ ಬಾಹರ್ ಚಿತ್ರ ಬಿಡುಗಡೆಯಾಗಿ ಆರು ತಿಂಗಳು ಕಳೆದಿದೆ. ಈಗ ಕಿರುತೆರೆಗೆ ಲಗ್ಗೆ ಹಾಕುವ ಮೂಲಕ ಮತ್ತೊಮ್ಮೆ ಅಭಿಮಾನಿಗಳಿಗೆ ವೀಕ್ಷಿಸುವ ಅವಕಾಶ ಸಿಗುತ್ತಿದೆ.
ಈ ಹಿಂದೆ ಜೋಗಿ ಚಿತ್ರದಲ್ಲಿ ಶಿವಣ್ಣನಿಗೆ ತಾಯಿಯಾಗಿ ಅಮೋಘ ಅಭಿನಯ ನೀಡಿದ್ದ ಅರುಂಧತಿ ನಾಗ್ ಚಿತ್ರದಲ್ಲಿ ಶಿವಣ್ಣನಿಗೆ ಅಮ್ಮನಾಗಿ ಅಂದರ್ ಬಾಹರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇಲ್ಲೂ ಅಂಡರ್ ವರ್ಲ್ಡ್ ಹಿನ್ನೆಲೆಯೇ ಚಿತ್ರದ ಕಥಾ ಹಂದರ.
ಬರೀ ಮಚ್ಚು ಕೊಚ್ಚು ಹೊಡಿ ಬಡಿ ಸನ್ನಿವೇಶಗಳಷ್ಟೇ ಅಲ್ಲ. ಇಲ್ಲಿ ಕೌಟುಂಬಿಕ ಮೌಲ್ಯಗಳಿಗೂ ಸ್ಥಾನ ನೀಡಲಾಗಿದೆ. ಸೆಂಟಿಮೆಂಟ್, ಪ್ರೀತಿ ಪ್ರೇಮ ಅನುರಾಗ ಅನುಕಂಪ ಎಲ್ಲವೂ ಇವೆ. ವರನಟ ಡಾ.ರಾಜ್ ಕುಮಾರ್ ಅವರ ಆರು ಮಂದಿ ಕಟ್ಟಾ ಅಭಿಮಾನಿಗಳು ನಿರ್ಮಿಸಿರುವ ಚಿತ್ರವಿದು. (ಒನ್ಇಂಡಿಯಾ ಕನ್ನಡ)