BBK 12 ; ಗಿಲ್ಲಿ ಮೇಲೆ ಕೈ ಮಾಡಿದ ರಿಶಾ ಸುರಕ್ಷಿತ, ಮನೆಯಿಂದ ಹೊರ ಬಂದ ಚಂದ್ರಪ್ರಭ-ಕಾರಣ ಯಾರಿಗಾದ್ರೂ ಗೊತ್ತಾ ?

''ಬಿಗ್ ಬಾಸ್'' ಮನೆಗೆ ಪ್ರತಿ ವರ್ಷ ಹಲವರು ಅತ್ಯುತ್ಸಾಹದಿಂದ ಹೋಗುತ್ತಾರೆ. ಮನೆಯೊಳಗೆ ತೆರಳುವ ಮುನ್ನ ವೇದಿಕೆಯಲ್ಲಿ ಮಾತನಾಡುವಾಗ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಮನೆಯಲ್ಲಿ ನಡೆಯುವ ರಂಪ-ರಾಮಾಯಣದಲ್ಲಿ ಕೂಡ ಭಾಗವಹಿಸುತ್ತಾರೆ. ಮನೆಯಲ್ಲಿ ಸ್ಫರ್ಧಿಗಳ ನಡುವೆ ಬೆಂಕಿಯನ್ನು ಕೂಡ ಹಚ್ಚುವುದರಲ್ಲಿ ಮುಂದಿರುತ್ತಾರೆ. ಆದರೆ.. ಮನೆಯೊಳಗೆ ಹೋದ ಸ್ಫರ್ಧಿಗಳಲ್ಲಿ ಪ್ರತಿವಾರ ಯಾರಾದರೂ ಒಬ್ಬರು ಮನೆ ಹೊರಗಡೆ ಬರಲೇಬೇಕು. ಅದೇ ನಿಯಮ.

ಹೀಗಾಗಿಯೇ ಪ್ರತಿ ವಾರ ಜೊಳ್ಳುಗಳನ್ನ ಉದುರಿಸಿ ಗಟ್ಟಿ ಕಾಳು ಉಳಿಸಿಕೊಳ್ಳಲು ''ಬಿಗ್ ಬಾಸ್'' ಜರಡಿ ಹಿಡಿಯುತ್ತೆ. ಒಬ್ಬರನ್ನು ಮನೆಯ ಹೊರಗೆ ದಬ್ಬಲಾಗುತ್ತೆ. ಸದ್ಯ ಇದೇ ನಿಯಮದಡಿ ಚಂದ್ರಪ್ರಭ ಅವರನ್ನು ಈ ವಾರ ಮನೆಯಿಂದ ಹೊರಗಡೆ ಕಳುಹಿಸಲಾಗಿದೆ.

SHOCK EXIT Chandraprabha Eliminated from Bigg Boss Kannada 12 House

ಹೌದು, ಅಸಲಿಗೆ ಈ ವಾರ ಗಿಲ್ಲಿ ಮೇಲೆ ಕೈ ಮಾಡಿದ್ದಕ್ಕೆ ರಿಶಾ ಮನೆಯಾಚೆ ಹೋಗ್ತಾರೆ ಎಂದು ಎಲ್ಲ ಅಂದುಕೊಂಡಿದ್ದರು. ರಿಶಾಗೆ ಸುದೀಪ್ ತಪರಾಕಿ ಹಾಕ್ತಾರೆ ಎಂದು ಭಾವಿಸಿದ್ದರು. ಆದರೆ..ಹಲ್ಲೆ ಮಾಡಿದ್ದ ರಿಶಾಗೆ ಸುದೀಪ್ ಕ್ಲಾಸ್ ಏನೋ ತೆಗೆದುಕೊಂಡರು.

ಆದರೆ ಇದೇ ಸಮಯದಲ್ಲಿ ಕೆಂಪು ಹಾಗೂ ಹಳದಿ ಕಾರ್ಡುಗಳನ್ನು ಸ್ಪರ್ಧಿಗಳ ಕೈಗೆ ನೀಡಿ ಉಳಿಸಿಕೊಳ್ಳುವುದಾ..? ಹೊರಗಡೆ ಕಳುಹಿಸುವುದಾ..? ಆಯ್ಕೆ ನಿಮ್ಮದು ಎಂದರು. ವಿಶೇಷ ಅಂದರೆ ಹೊಡೆತ ತಿಂದ ಗಿಲ್ಲಿ ರಿಶಾ ಪರ ಬೆಂಬಲದ ಧ್ವಜ ಹಾರಿಸಿದರು. ಗಿಲ್ಲಿಯ ಜೊತೆ ಮನೆಯ ಕ್ಯಾಪ್ಟನ್ ಮಾಳು ಒಬ್ಬರನ್ನು ಹೊರತು ಪಡಿಸಿದರೆ ಉಳಿದವರು ಕೂಡ ಬಂದು ನಿಂತರು. ಈ ಹಿನ್ನೆಲೆ ರಿಶಾ ಅವರನ್ನು ಮನೆಯ ಒಳಗಡೆ ಉಳಿಸಿಕೊಳ್ಳಲಾಯ್ತು.

ಇನ್ನು ಈ ವಾರ ಒಬ್ಬರಲ್ಲ.. ಇಬ್ಬರಲ್ಲ.. ಹತ್ತು ಜನರ ಮೇಲೆ ತೂಗುಕತ್ತಿ ನೇತಾಡುತ್ತಿತ್ತು. ಅಶ್ವಿನಿ ಗೌಡ, ಕಾಕ್ರೋಚ್ ಸುಧಿ, ಧ್ರುವಂತ್, ಗಿಲ್ಲಿ ನಟ, ಸೂರಜ್ ಸಿಂಗ್, ಚಂದ್ರಪ್ರಭ, ರಾಶಿಕಾ ಶೆಟ್ಟಿ, ಸ್ಪಂದನಾ, ಧನುಷ್, ರಕ್ಷಿತಾ ಹೀಗೆ ಯಾರು ಬೇಕಾದರೂ ಮನೆಯಿಂದ ಹೊರಗಡೆ ಹೋಗಬಹುದಿತ್ತು.

ಆದರೆ ಇದೇ ಸಮಯದಲ್ಲಿ ಚಂದ್ರಪ್ರಭಾ ಇದ್ದಕ್ಕಿದ್ದಂತೆಯೇ ಎದ್ದರು. ಸುದೀಪ್ ಎದುರಲ್ಲಿಯೇ ಎದ್ದು ಹೊರ ನಡೆದರು. ಚಂದ್ರಪ್ರಭಾ ಅವರ ಈ ನಡೆ ಹಲವರನ್ನು ಅಚ್ಚರಿಗೆ ದೂಡಿತು. ರಕ್ಷಿತಾ ಕಣ್ಣಿಂದ ಕಣ್ಣೀರಧಾರೆ ಕೂಡ ಹರಿಯಿತು.

shock-exit-chandraprabha-eliminated-from-bigg-boss-kannada-12-house

ಆ ನಂತರ ಹಾಗೂ ಹೀಗೂ ಮತ್ತೆ ಚಂದ್ರಪ್ರಭಾ ಅವರನ್ನು ಕರೆತರಲಾಯ್ತು. ಯಾಕೆ ಹೊರ ಹೋಗಿದ್ದು..? ಎಂಬ ಸುದೀಪ್ ಕೇಳಿದ ಪ್ರಶ್ನೆಗೆ ಕೂಡ ಚಂದ್ರಪ್ರಭ ಬಳಿ ಉತ್ತರ ಇರಲಿಲ್ಲ. ಮನೆಯಲ್ಲಿ ಇರಲು ಇಷ್ಟ ಇಲ್ಲ ಎಂದಷ್ಟೇ ಚಂದ್ರಪ್ರಭ ಹೇಳಿದರು. ಚಂದ್ರಪ್ರಭ ಮಾತನಾಡಿದ ಈ ಮಾತುಗಳಿಗೆ ಇದನ್ನು ನಾವು ತೀರ್ಮಾನಿಸಲ್ಲ. ಜನರಿಗೆ ನೀವು ಇಷ್ಟ ಆಗಲಿಲ್ಲ ಅಂದರೆ ಅವರೇ ನಿಮ್ಮನ್ನು ಹೊರಗಡೆ ಕಳಿಸುತ್ತಾರೆ ಎಂದು ಹೇಳಿದರು.

ಹೀಗೆ ಶುರುವಾದ ಡ್ರಾಮಾ ಆ ನಂತರ ಕ್ಲೈಮ್ಯಾಕ್ಸ್ ತಲುಪಿತು. ಒಬ್ಬೊಬ್ಬರನ್ನಾಗಿಯೇ ಉಳಿಸಿಕೊಳ್ಳುತ್ತಾ ಬಂದ ಸುದೀಪ್ ಕೊನೆಯದಾಗಿ ಸುಧಿ ಮತ್ತು ಚಂದ್ರಪ್ರಭ ಅವರನ್ನು ಡೇಂಜರ್ ಝೋನ್‌ನಲ್ಲಿ ಉಳಿಸಿಕೊಂಡರು.
ಈ ಸಮಯದಲ್ಲಿ ಮೊದಲ ಫಿನಾಲೆಯಲ್ಲಿ ಗೆದ್ದಿದ್ದ ಕಾಕ್ರೋಚ್ ಸುಧಿ ತಮ್ಮಲ್ಲಿದ್ದ ವಿಶೇಷ ಅಧಿಕಾರ ಬಳಸಿದರು. ಆ ಅಧಿಕಾರ ಬಳಸುವ ಮೂಲಕ ಬಿಗ್​​ಬಾಸ್ ಮನೆಯಲ್ಲೇ ಉಳಿದುಕೊಂಡರು. ಚಂದ್ರಪ್ರಭಾ ಅವರು ಮತಗಳ ಲೆಕ್ಕಾಚಾರವಿಲ್ಲದೆ ಹೊರಗೆ ಬಂದರು.

ಆದರೂ ಕೂಡ ಚಂದ್ರಪ್ರಭಾ ನಿರ್ಗಮನ ಹಲವು ಪ್ರಶ್ನೆಗಳನ್ನು ಸದ್ಯ ಹುಟ್ಟು ಹಾಕಿದೆ. ಯಾಕೆಂದರೆ ವೇದಿಕೆ ಮೇಲೆ ಬಂದ ನಂತರ ಕೂಡ ಚಂದ್ರಪ್ರಭ ಸರಿಯಾಗಿ ಮಾತನಾಡಲಿಲ್ಲ. ಖುಷಿಯೂ ಅವರ ಮುಖದಲ್ಲಿ ಕಾಣಲಿಲ್ಲ. ಅವರ ಬೇಸರಕ್ಕೆ ಕಾರಣ '' ಊಸರವಳ್ಳಿ'' ಎಂಬ ಬಿರುದು ಕಾರಣ ಆಯ್ತಾ ? ಅಥವಾ ಬೇರೆ ಯಾವುದಾದರೂ ಕಾರಣ ಇದೆಯಾ ಎನ್ನುವುದು ಕೊನೆಗೂ ಕೂಡ ಗೊತ್ತಾಗಲೇ ಇಲ್ಲ. ಈ ಹಿನ್ನೆಲೆ ಸದ್ಯ ಚಂದ್ರಪ್ರಭಾ ಅವರ ಈ ನಿರ್ಧಾರದ ಕುರಿತು ಸೋಶೀಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ''ಬಿಗ್ ಬಾಸ್‌''ನ ಈ ನಡೆ ಹಲವರ ಅನುಮಾನಕ್ಕೆ ಕೂಡ ಕಾರಣವಾಗಿದೆ.

More from Filmibeat

English summary
Chandraprabha's BBK 12 journey ends! Read the full story on the latest Bigg Boss Kannada Season 12 elimination, including voting results and final moments
Read more about: bigg boss biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X