ಬಿಗ್ ಬಾಸ್ ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಸ್ಫರ್ಧಿ, ಮನೆಯಾಚೆ ಬರುತ್ತಾರಾ ?
ಬಣ್ಣದ ಸೆಳೆತಕ್ಕೆ ಸಿಲುಕಿದವರಲ್ಲಿ ಹಲವಾರು ಜನ ''ಬಿಗ್ ಬಾಸ್''ನಲ್ಲಿ ಭಾಗವಹಿಸಬೇಕೆಂದು ಕನಸು ಕಾಣುತ್ತಾರೆ. ಆದರೆ .. ಈ ಸುವರ್ಣ ಅವಕಾಶ ಎಲ್ಲರಿಗೆ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೂ ಕೂಡ ಮನೆಯಲ್ಲಿ ಹೆಚ್ಚು ದಿನ ಉಳಿಯಲು ಸಾಧ್ಯವಾಗುವುದಿಲ್ಲ. ಯಾಕೆಂದರೆ.. ''ಬಿಗ್ ಬಾಸ್'' ಕೇವಲ ಮಾನಸಿಕ ಸ್ಫರ್ಧೆ ಅಲ್ಲ. ದೈಹಿಕ ಸ್ಫರ್ಧೆ ಕೂಡ ಹೌದು. ಮಾನಸಿಕವಾಗಿ ಬಲಿಷ್ಠವಾಗಿದ್ದು ದೈಹಿಕವಾಗಿ ಬಲಹೀನರಾಗಿದ್ದರೆ..
ಅಥವಾ ದೈಹಿಕವಾಗಿ ಬಲಶಾಲಿಯಾಗಿ ಮಾನಸಿಕವಾಗಿ ದೌರ್ಬಲ್ಯವನ್ನು ಹೊಂದಿದ್ದರೆ ಈ ಮನೆಯಲ್ಲಿ ಉಳಿಯುವುದು, ಫಿನಾಲೆ ಹಂತದವರೆಗೆ ತಲುಪುವುದು ಅಸಾಧ್ಯ. ಹೀಗಾಗಿಯೇ ವ್ಯಕ್ತಿ ಮತ್ತು ವ್ಯಕ್ತಿತ್ವಗಳ ನಡುವೆ ನಡೆಯುವ ಈ ಸಂಘರ್ಷದಲ್ಲಿ ಭಾಗವಹಿಸಿದ್ದಕ್ಕೆ ಹಲವರು ಹಿಂದೆ ಪಶ್ಚಾತಾಪ ಪಟ್ಟಿದ್ದಾರೆ. ''ಬಿಗ್ ಬಾಸ್'' ಮನೆಯಲ್ಲಿನ ರಂಪ ರಾಮಾಯಣದಿಂದ ಬಳಲಿದ್ದಾರೆ. ಬಳಲುತ್ತಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ರಮ್ಯಾ ಜೂ ''ಬಿಗ್ ಬಾಸ್'' ಮನೆಯಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಹೌದು, ರಮ್ಯಾ ಜೂ.. ವೃತ್ತಿಯಲ್ಲಿ ಡ್ಯಾನ್ಸರ್ ಮತ್ತು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್. ಸದ್ಯ ರಮ್ಯಾ ಜೂ ತಮಿಳಿನ ''ಬಿಗ್ ಬಾಸ್'' ಮನೆಯಲ್ಲಿದ್ದಾರೆ. ಆದರೆ.. ಈ ''ಬಿಗ್ ಬಾಸ್'' ಮನೆ ಈ ಬಾರಿ ಹಿಂದಿನಂತೆ ಇಲ್ಲ.
ಯಾಕೆಂದರೆ ಹಿಂದೆ ಕನ್ನಡದಲ್ಲಿ ''ಸ್ವರ್ಗ-ನರಕ'' ಸೃಷ್ಟಿಯಾದಂತೆ ತಮಿಳಿನಲ್ಲಿ ಈ ಬಾರಿ ಮನೆಯನ್ನು ಎರಡು ಭಾಗವಾಗಿ ವಿಂಗಡಣೆ ಮಾಡಲಾಗಿದೆ. ಒಂದು ಕಡೆ ಸಕಲ ಸೌಲಭ್ಯ ಇದ್ದರೆ ಮತ್ತೊಂದು ಕಡೆ ಮೂಲಭೂತ ಸೌಕರ್ಯಗಳ ಕೊರತೆ ಇದೆ.
ಇನ್ನೂ ತಮಿಳು ''ಬಿಗ್ ಬಾಸ್'' ಶುರುವಾಗಿ ಕೇವಲ ಎರಡು ವಾರಗಳಾಗಿವೆ ಅಷ್ಟೇ. ಆದರೆ. ಈ ಎರಡು ವಾರಗಳಲ್ಲಿ ಸ್ಫರ್ಧಿಗಳು ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದಾರೆ. ಮನೆಯ ಈ ವಾತಾವರಣದಿಂದ ಬೇಸತ್ತು ಈಗಾಗಲೇ ಕಾರ್ಯಕ್ರಮದಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದ್ದ ''ವಿಜೆ ನಂದಿನಿ'' ಎಲಿಮಿನೇಷನ್ ಮುನ್ನವೇ ಮನೆಯಿಂದ ಕಣ್ಣೀರು ಹಾಕುತ್ತಾ ಹೊರ ಬಂದಿದ್ದಾರೆ. ನನಗೆ ಈ ಆಟಕ್ಕಿಂತ ಮಾನಸಿಕ ನೆಮ್ಮದಿ ಮುಖ್ಯ ಎಂದು ಹೇಳಿದ್ದಾರೆ. ಇನ್ನೂ ಪ್ರವೀಣ್ ಗಾಂಧಿ ಅವರನ್ನು ಖುದ್ದು ಬಿಗ್ ಬಾಸ್ ಮನೆಯಿಂದ ಹೊರಗಡೆ ಕಳುಹಿಸಿದೆ.
ಹೀಗಿರುವಾಗ ಇದೀಗ ಕಾರ್ಯಕ್ರಮದ ಮತ್ತೊಬ್ಬ ಸ್ಫರ್ಧಿ ರಮ್ಯಾ ಜೂ ಮನೆಯಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.ರಮ್ಯಾ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ ಮನೆಯಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆಘಾತದಲ್ಲಿಯೇ ಓಡಿಕೊಂಡು ಬಂದ ಮನೆಯ ಕಲೈಯರಸನ್.. ಕೆಮಿ.. ತುಷಾರ್.. ಮತ್ತು ಇತರ ಸ್ಪರ್ಧಿಗಳು ರಮ್ಯಾ ಅವರ ಆರೈಕೆ ಮಾಡಿದರು.

ಇನ್ನು ರಮ್ಯಾ ಪ್ರಜ್ಞೆ ತಪ್ಪಿ ಬಿದ್ದ ನಂತರ ಎಲ್ಲರು ಅವರನ್ನು ಮನೆಯ ಹೊರಗಡೆ ಕಳುಹಿಸಲಾಗುತ್ತೆ ಎಂದು ಅಂದುಕೊಂಡಿದ್ದರು. ತಮಿಳು ''ಬಿಗ್ ಬಾಸ್'' ಪ್ರೇಮಿಗಳು ಕೂಡ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಮಾಡಿದ್ದರು.
ಆದರೆ.. ರಮ್ಯಾ ಅವರನ್ನು ''ಬಿಗ್ ಬಾಸ್'' ಮನೆಯಿಂದ ಇನ್ನು ಹೊರಗಡೆ ಕಳುಹಿಸಲಾಗಿಲ್ಲ. ಪ್ರಜ್ಞೆ ತಪ್ಪಿ ಬಿದ್ದ ನಂತರ ತಕ್ಷಣವೇ ಕನ್ಪೆಷನ್ ರೂಮ್‌ಗೆ ಕರೆದೊಯ್ದು ಅಲ್ಲಿ ರಮ್ಯಾ ಅವರಿಗೆ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗಿದೆ. ಸದ್ಯ ರಮ್ಯಾ ಮನೆಯಲ್ಲಿಯೇ ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ. ಆರೋಗ್ಯದ ನೆಪವೊಡ್ಡಿ ಈ ವಾರ ರಮ್ಯಾ ಅವರನ್ನು ''ಬಿಗ್ ಬಾಸ್'' ಎಲಿಮಿನೇಟ್ ಮಾಡಿದರು ಕೂಡ ಮಾಡಬಹುದು. ಆ ಸಾಧ್ಯತೆ ಕೂಡ ಇದೆ. ಉಳಿದಂತೆ ಸದ್ಯ ರಮ್ಯಾ ಪ್ರಜ್ಞೆ ತಪ್ಪಿ ಮನೆಯಲ್ಲಿ ಬಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Click it and Unblock the Notifications











