ಬಿಗ್ ಬಾಸ್ ಮನೆಯಲ್ಲಿ ಹೈಡ್ರಾಮಾ, ಎಲಿಮಿನೇಶನ್ ಮುನ್ನವೇ ಕಣ್ಣೀರು ಹಾಕುತ್ತಾ ಹೊರ ಬಂದ ಸ್ಫರ್ಧಿ

''ಬಿಗ್ ಬಾಸ್'' ಭಾರತದ ಜನಪ್ರಿಯ ಕಾರ್ಯಕ್ರಮದಲ್ಲೊಂದು. ಅದರಲ್ಲಿ ದೂಸ್ರಾ ಮಾತಿಲ್ಲ. ನಿಜಾ. ಈ ಕಾರ್ಯಕ್ರಮದ ಬಗ್ಗೆ ಸಾರ್ವತ್ರಿಕ ವಲಯದಲ್ಲಿ ಅಸಮಾಧಾನ ಅಸಹನೆಯ ಅಲೆ ಮೊದಲಿಂದ ಇದ್ದೇ ಇದೆ. ಆದರೂ ಕೂಡ ಬಹುದೊಡ್ಡ ವರ್ಗ ಈ ಕಾರ್ಯಕ್ರಮವನ್ನು ನೋಡುತ್ತಲೇ ಬೈಯುತ್ತಾರೆ. ಬೈಯುತ್ತಲೇ ನೋಡುತ್ತಾರೆ. ಇಂಥಾ ''ಬಿಗ್ ಬಾಸ್'' ಕಾರ್ಯಕ್ರಮದಲ್ಲಿ ಭಾಗವಹಹಿಸುವ ಕನಸನ್ನು ಹಲವರು ಕಾಣುತ್ತಾರೆ. ಕೆಲವರು ಈ ಕನಸನ್ನು ನನಸು ಕೂಡ ಮಾಡಿಕೊಳ್ಳುತ್ತಾರೆ.

ಆದರೆ.. ಇವರಿಗೆ ವಾಸ್ತವದ ಅರಿವು ಆಗುವುದು ಆ ಮನೆಯೊಳಗೆ ಹೋದ ನಂತರವಷ್ಟೇ. ಯಾಕೆಂದರೆ ಬಿಗ್ ಬಾಸ್ ನೋಡಲು ವರ್ಣರಂಜಿತ. ಆದರೆ ಅಲ್ಲಿ ವ್ಯಕ್ತಿ ಮತ್ತು ವ್ಯಕ್ತಿತ್ವಗಳ ನಡುವೆ ಸಂಘರ್ಷ ನಡೆಯುತ್ತೆ. ಕಾಲು ಕೆರೆದುಕೊಂಡೇ ಜಗಳಕ್ಕೆ ಬರುವವರ ಸಂಖ್ಯೆ ಈ ಮನೆಯಲ್ಲಿ ಹೆಚ್ಚಿರುತ್ತೆ.

SHOCK EXIT Nandhini SLAMS Bigg Boss Tamil 9 Contestants amp amp Game After Anxiety Attack Forces Walkout

ಮೃದು ಸ್ವಭಾವದವರಾಗಿದ್ದರೆ.. ಶಾಂತಿ ಪ್ರಿಯರಾಗಿದ್ದರೆ.. ಮಾನಸಿಕ ನೆಮ್ಮದಿ ಮುಖ್ಯ ಎಂದುಕೊಂಡವರಿಗೆ.. ಈ ಕಾರ್ಯಕ್ರಮ ಕಬ್ಬಿಣದ ಕಡಲೆ. ಮನೆಯಲ್ಲಿ ನಡೆಯುವ ರಂಪ ರಾಮಾಯಣ ಕೆಲ ಒಮ್ಮೆ ಕೆಲವರಿಗೆ ಕಿರಿಕಿರಿಯನ್ನುಂಟು ಮಾಡುವ ಸಾಧ್ಯತೆ ಇರುತ್ತೆ. ಈ ಕಾರ್ಯಕ್ರಮಕ್ಕೆ ಬಂದು ತಪ್ಪು ಮಾಡಿದೆ ಎನ್ನುವ ಪಾಪ ಪ್ರಜ್ಞೆ ಕೂಡ ಕೆಲವರಲ್ಲಿ ಮನೆಯೊಳಗೆ ಹೋದ ನಂತರ ಕಾಡಲು ಶುರುವಾಗುತ್ತೆ. ಆಗ ಕೈ ಮುಗಿದು ಹೊರ ಬರುವುದೇ ಏಕೈಕ ದಾರಿಯಾಗಿ ಉಳಿದಿರುತ್ತೆ. ಇದೆಲ್ಲದಕ್ಕೆ ಉದಾಹರಣೆ ವಿಜೆ ನಂದಿನಿ.

ಹೌದು, ವಿಜೆ ನಂದಿನಿ. ವಿಜಯ್ ಸೇತುಪತಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ತಮಿಳು ''ಬಿಗ್ ಬಾಸ್‌'' ಸೀಸನ್ 9ರ ಸ್ಫರ್ಧಿ. ಎಲ್ಲರಂತೆ ವಾರದ ಹಿಂದೆ ಮನೆಯೊಳಗೆ ಖುಷಿ ಖುಷಿಯಾಗಿ ಹೋಗಿದ್ದ ವಿಜೆ ನಂದಿನಿ ಇದೀಗ ನನ್ನಿಂದ ಇನ್ನೂ ಸಾಧ್ಯ ಇಲ್ಲ. ನನ್ನ ಮನೆಗೆ ವಾಪಸ್ ಕಳುಹಿಸಿ ಎಂದು ಬೇಡಿಕೊಂಡಿದ್ದಾರೆ. ಎಲಿಮಿನೇಷನ್ ಮುನ್ನವೇ ಕಣ್ಣೀರು ಹಾಕುತ್ತಾ ಮನೆಯಿಂದ ಹೊರ ಬಂದಿದ್ದಾರೆ. ಇದಕ್ಕೆ ಕಾರಣ ಮಾನಸಿಕ ನೆಮ್ಮದಿ.

''ಬಿಗ್ ಬಾಸ್‌'' ಮನೆ ಪ್ರವೇಶ ಮಾಡಿದ ನಂತರ ಅಲ್ಲಿನ ವಾತಾವರಣ, ಸಹಸ್ಫರ್ಧಿಗಳ ನಡೆ ನುಡಿಗಳಿಂದ ತೀವೃ ಆಘಾತಕ್ಕೆ ಒಳಗಾದ ವಿಜೆ ನಂದಿನಿ, ಮನೆ ಪ್ರವೇಶ ಮಾಡಿದ ನಾಲ್ಕೇ ದಿನಕ್ಕೆ 'ಎನ್ನ ಸೊಲ್ಲ ಪೋರ' ಟಾಸ್ಕ್ ಸಮಯದಲ್ಲಿ, ಹೆಚ್ಚೆಂದರೆ ಈ ಮನೆಯಲ್ಲಿ ನಾನು 20-30 ದಿನ ಇರಬಹುದು ಎಂದು ಹೇಳಿದ್ದರು. ಆ ನಂತರ ಕಿರಿಕಿರಿಗೊಳಗಾಗಿ ಕಿರುಚಾಡಲು ಶುರು ಮಾಡಿದ್ದರು.

ಆ ನಂತರ ಮಾನಸಿಕ ನೆಮ್ಮದಿಯನ್ನು ಸಂಪೂರ್ಣವಾಗಿ ಕಳೆದುಕೊಂಡ ವಿಜೆ ನಂದಿನಿ, ಸಹ ಸ್ಫರ್ಧಿ ಕನಿ ಜೊತೆ ವಾಗ್ಯುದ್ದಕ್ಕಿಳಿದರು. ಇದು ನಕಲಿ ಗೇಮ್.. ಇಲ್ಲಿರುವರೆಲ್ಲ ಮುಖವಾಡದ ಬದುಕು ಬದುಕುತ್ತಿದ್ದಾರೆ. ನನಗೆ ಈ ವಾತಾವರಣದಲ್ಲಿ ಇರಲು ಇಷ್ಟ ಇಲ್ಲ ಎಂದು ಮನೆಯಲ್ಲಿ ರಂಪ ಮಾಡಿದರು.

shock-exit-nandhini-slams-bigg-boss-tamil-9-contestants-game-after-anxiety-crisis-forces-walkout

ಇಷ್ಟೇ ಅಲ್ಲ ನನ್ನ ನಿಜವಾದ ಪ್ರೀತಿಗೆ ಇಲ್ಲಿ ಬೆಲೆ ಇಲ್ಲ. ಇಲ್ಲಿ ಯಾರೂ ಪ್ರಾಮಾಣಿಕರಲ್ಲ ಎಂದು ಕೂಡ ಹೇಳಿದ ವಿಜೆ ನಂದಿನಿ, ಮನೆಯ ಸಹ ಸ್ಫರ್ಧಿಗಳನ್ನು ಕೆಟ್ಟದಾಗಿ ನಿಂದಿಸಿದರು. ನಾನು ಚೆನ್ನಾಗಿರಬೇಕು ಎಂದು ನೀವು ಎಲ್ಲರೂ ಬಯಸಿದರೆ, ಎಲ್ಲರೂ ನನ್ನನ್ನು ನಾಮಿನೇಟ್ ಮಾಡಿ. ನಾನು ಹೊರಡುತ್ತೇನೆ ಎಂದು ಹೇಳಿದರು. ನನಗೆ ಅವಕಾಶ ಸಿಕ್ಕರೇ ನಾನೇ ವಿಜಯ್ ಸೇತುಪತಿಯವರಿಗೆ ಹೇಳಿ ಹೊರಡುತ್ತೇನೆ ಎಂದು ಹೇಳಿದರು.

ಮನೆಯಲ್ಲಿನ ಈ ವಾದ-ವಿವಾದ ಮತ್ತು ವಿಜೆ ನಂದಿನಿ ಅವರ ಭಾವೋದ್ವೇಗ ಸ್ಫೋಟವಾದ ಬೆನ್ನಲ್ಲೇ ಮಧ್ಯ ಪ್ರವೇಶ ಮಾಡಿದ್ದ ''ಬಿಗ್ ಬಾಸ್'' ಕನ್ಪೆಷನ್ ರೂಮ್‌ಗೆ ವಿಜೆ ನಂದಿನಿ ಅವರನ್ನು ಕರೆದಿದ್ದರು. ವೈದ್ಯಕೀಯ ಚಿಕಿತ್ಸೆ ಮತ್ತು ಬೆಂಬಲದ ಕುರಿತು ಮಾತುಗಳನ್ನಾಡಿದ್ದರು.

ಆದರೆ. ವಿಜೆ ನಂದಿನಿ ''ಬಿಗ್ ಬಾಸ್‌''ನ ಯಾವ ಮಾತು ಕೂಡ ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಮನೆಯ ಹೊರಗಡೆ ಹೋಗುವ ಹಠ ಹಿಡಿದರು. ತಮ್ಮ ಅಸಮಾಧಾನ ಹೊರ ಹಾಕಲು ಶುರು ಮಾಡಿದರು. ಈ ಹಿನ್ನೆಲೆ
ನಿಮ್ಮ ಎಡಭಾಗದಲ್ಲಿ ಒಂದು ಬಾಗಿಲು ಇದೆ. ಅದರ ಮೂಲಕ ನೀವು ಹೊರಹೋಗಬಹುದು ಎಂದು ''ಬಿಗ್ ಬಾಸ್'' ಹೇಳಿದರು. ''ಬಿಗ್ ಬಾಸ್'' ಆದೇಶ ಬರುತ್ತಿದ್ದಂತೆಯೇ ಮರುಮಾತನಾಡದೇ ವಿಜೆ ನಂದಿನಿ ಕೂಡ ಮನೆಯಿಂದ ಹೊರ ಬಂದರು.

ಸದ್ಯ ವಿಜೆ ನಂದಿನಿ ಅವರ ಈ ನಿರ್ಧಾರ ಮತ್ತು ಬಿಗ್ ಬಾಸ್ ತೆಗೆದುಕೊಂಡ ನಿರ್ಧಾರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಇನ್ನುಳಿದಂತೆ ಈ ವಾರ ಕಲೈಯರಸನ್.. ವಿಯಾನಾ.. ಅಪ್ಸರಾ ಸಿಜೆ.. ದಿವಾಕರ್.. ಆದಿರೈ.. ಪ್ರವೀಣ್ ರಾಜ್ ಮತ್ತು ಪ್ರವೀಣ್ ಗಾಂಧಿ ಸೇರಿದಂತೆ ಏಳು ಸ್ಪರ್ಧಿಗಳು ಡೇಂಜರ್ ಝೋನ್‌ನಲ್ಲಿದ್ದಾರೆ. ಆದರೆ ಈಗ ವಿಜೆ ನಂದಿನಿ ಹೊರ ನಡೆದ ಹಿನ್ನೆಲೆ ಈ ವಾರ ಮನೆಯಿಂದ ಬೇರೆಯವರನ್ನು ಹೊರಗಡೆ ಕಳುಹಿಸಲಾಗುತ್ತಾ ಇಲ್ಲವಾ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ.

More from Filmibeat

English summary
Contestant Nandhini was forced to walk out of Bigg Boss Tamil 9 due to a severe anxiety attack. Read her emotional statement and why she criticized the game.
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X