ಆರಂಭದಲ್ಲಿಯೇ 'ಕರ್ಣ'ನಿಗೆ ಆಘಾತ, ಏಕಾಏಕಿ ಧಾರಾವಾಹಿಯಿಂದ ಹೊರ ಬಂದ್ರಾ ಭವ್ಯಾ ಗೌಡ...?

ಸದಭಿರುಚಿಯ ಧಾರಾವಾಹಿಗಳಿಗೆ ಹೆಸರಾದ ವಾಹಿನಿ ಜೀ ಕನ್ನಡ. ಸೀರಿಯಲ್ ಇರಲಿ ಅಥವಾ ರಿಯಾಲಿಟಿ ಶೋಗಳಿರಲಿ ಎಲ್ಲರದಲ್ಲಿಯೂ ಹೊಸತನ ಮತ್ತು ಸ್ವಂತಿಕೆ ಕಾಯ್ದುಕೊಂಡು ಬಂದ ಜೀ ಕನ್ನಡದಲ್ಲಿ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದು ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕಿರಣ್ ರಾಜ್ ಅಭಿನಯದ 'ಕರ್ಣ' ಪ್ರಸಾರವಾಗಬೇಕಿತ್ತು. ಈ ಧಾರಾವಾಹಿಯ ತುಣುಕುಗಳನ್ನು ನೋಡಿದ ಪ್ರೇಕ್ಷಕರು..

ಕಿರಣ್ ರಾಜ್, ಭವ್ಯಾ ಗೌಡ ಮತ್ತು ನಮ್ರತಾ ಗೌಡ ಎಂಬ ತ್ರಿವೇಣಿ ಸಂಗಮವನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು ಕೂಡ. ಆದರೆ. ಅದೇನಾಯ್ತೋ ಗೊತ್ತಿಲ್ಲ. ಸದ್ಯ ಈ ಧಾರಾವಾಹಿಯ ಪ್ರಸಾರವನ್ನು ಇಂದು ನಿಲ್ಲಿಸಲಾಗಿದೆ. ಅನಿರ್ದಿಷ್ಟಾವಧಿ ಕಾಲದವರೆಗೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

Shocker Did Bhavya Gowda Exit Zee Kannada s Karna Premiere Halted

ಸಹಜವಾಗಿ ಧಾರಾವಾಹಿ ತಂಡದ ಮತ್ತು ಜೀ ಕನ್ನಡದ ಈ ನಡೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಯಾಕೆಂದರೆ .. ಮೊನ್ನೆಯವರೆಗೆ ಕರ್ಣನ ಅಂಗಳ ನಂದ ಗೋಕುಲದಂತೆ ಇತ್ತು. ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳಾದ ಕಿರಣ್ ರಾಜ್ .. ನಮ್ರತಾ ಗೌಡ ಮತ್ತು ಭವ್ಯಾ ಗೌಡ ಖುಷಿ ಖುಷಿಯಾಗಿಯೇ ಬಂದು ಮಾತನಾಡಿದ್ದರು. ಧಾರಾವಾಹಿಯ ಕುರಿತು ತಮ್ಮ ಉತ್ಸಾಹ ಮತ್ತು ಉತ್ಸುಕತೆಯನ್ನು ಕೂಡ ವ್ಯಕ್ತಪಡಿಸಿದ್ದರು.

ಆದರೆ ಈಗ 48 ಗಂಟೆಯೊಳಗೆ ಸಂಪೂರ್ಣ ಚಿತ್ರಣ ಬದಲಾಗಿದೆ. ಕರ್ಣ ತಂಡದಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದಿದೆ ಎನ್ನುವ ಮಾತು ಅಷ್ಟದಿಕ್ಕುಗಳಿಂದ ಕೇಳಿ ಬರುತ್ತಿದೆ. ಅದರಲ್ಲಿಯೂ ಭವ್ಯಾ ಗೌಡ ಅವರ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಹೌದು, ಅಸಲಿಗೆ ಕರ್ಣ ಧಾರಾವಾಹಿಯಲ್ಲಿ ನಿಧಿ ಎಂಬ ಪಾತ್ರಕ್ಕೆ ಭವ್ಯಾ ಗೌಡ ಬಣ್ಣ ಹಚ್ಚಿದ್ದಾರೆ. ಕಿರಣ್ ರಾಜ್ ಅವರಿಗೆ ಜೋಡಿಯಾದ ಪಾತ್ರ ಇದು. ಮೊನ್ನೆಯಷ್ಟೇ ಈ ಪಾತ್ರ ಪರಿಚಯದ ವಿಡಿಯೋವನ್ನು ಜೀ ಕನ್ನಡ ಹಂಚಿಕೊಂಡಿತ್ತು.

ಭವ್ಯಾ ಗೌಡ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕರ್ಣ ಧಾರಾವಾಹಿಯ ತಮ್ಮ ಪ್ರೋಮೋವನ್ನು ಖುಷಿಯಿಂದ ಹಂಚಿಕೊಂಡಿದ್ದರು. ಆದರೆ ಈಗ ಭವ್ಯಾ ಗೌಡ ಖಾತೆಯಲ್ಲಿ ನಿಧಿ ನಾಪತ್ತೆಯಾಗಿದ್ದಾಳೆ. ಜೀ ಕನ್ನಡ ಪೇಜ್‌ನಲ್ಲಿ ಕೂಡ ನಿಧಿಯ ಅಸ್ತಿತ್ವ ಇಲ್ಲ.

ಹೀಗಾಗಿಯೇ ಅನೇಕರು ಭವ್ಯಾ ಗೌಡ ಮತ್ತು ತಂಡದ ನಡುವೆ ಕಿರಿಕ್ ಆಗಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಭವ್ಯಾ ಗೌಡ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರಕ್ರಿಯೆ ಮೇಲೆ ನಂಬಿಕೆ ಇಡಿ ಎಂದು ಬರೆದುಕೊಂಡಿದ್ದಾರೆ. ಸಾಲದಕ್ಕೆ ಆಲ್‌ ಓಕೆ ಹಾಡಿರುವ ಅವಮಾನವೇ ಮೊದಲು ಜೀವನದಲ್ಲಿ ಸನ್ಮಾನವೇ ಕೊನೆಗೆ ಮಗಾ ಡೋಂಟ್ ವರಿ ಹಾಡನ್ನು ತಮ್ಮ ಪೋಸ್ಟ್‌ಗೆ ಹಿನ್ನೆಲೆ ಸಂಗೀತವನ್ನಾಗಿ ಹಾಕಿಕೊಂಡಿದ್ದಾರೆ.

ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ಪಡೆಯಲು ಫಿಲ್ಮಿ ಬೀಟ್ ಕನ್ನಡ ತಂಡ ಕರ್ಣ ನಿರ್ಮಾಪಕಿ ಶ್ರುತಿ ನಾಯ್ಡು ಅವರನ್ನು ಸಂಪರ್ಕಿಸಿತ್ತು. ಆದರೆ, ಸ್ವಿಚ್ ಆಫ್ ಆಗಿತ್ತು. ಕರ್ಣ ಧಾರಾವಾಹಿಯ ಸುತ್ತ ಎದ್ದಿರುವ ಗೊಂದಲಗಳು ಇನ್ನೂ ಹೆಚ್ಚಾಗಲು ಇದು ಕೂಡ ಪ್ರಮುಖ ಕಾರಣ.

ಸದ್ಯ ಕರ್ಣ ಧಾರಾವಾಹಿಯಿಂದ ಭವ್ಯಾ ಗೌಡ ಹೊರ ಬಂದಿದ್ದಾರೆ. ಈ ಕಾರಣಕ್ಕೆ ಇಂದು ಪ್ರಸಾರವಾಗಬೇಕಿದ್ದ ಧಾರಾವಾಹಿಯನ್ನು ತಡೆ ಹಿಡಿಯಲಾಗಿದೆ ಎನ್ನುವ ಮಾತು ಕಿರುತೆರೆ ವಲಯದಲ್ಲಿ ಕೇಳಿ ಬರುತ್ತಿದೆ. ಭವ್ಯಾ ಗೌಡ ಅವರ ಪಾತ್ರಕ್ಕೆ ಬೇರೆಯವರ ಹುಡುಕಾಟ ಕೂಡ ನಡೆದಿದೆ ಎನ್ನುವ ಸುದ್ದಿ ಕೂಡ ಚಾಲ್ತಿಯಲ್ಲಿದೆ.

ನಿಜಕ್ಕೂ ಭವ್ಯಾ ಗೌಡ ಕರ್ಣ ಧಾರಾವಾಹಿಯಿಂದ ಹೊರ ಬಂದಿದ್ದಾರಾ.. ? ಹಾಗೊಂದು ವೇಳೆ ಬಂದಿದ್ದೇ ಆದಲ್ಲಿ ಅದಕ್ಕೆ ಕಾರಣವೇನು ? ಒಂದು ವೇಳೆ ಭವ್ಯಾ ಗೌಡ ಧಾರಾವಾಹಿಯಿಂದ ಹೊರ ಬಂದಿಲ್ಲವಾದರೆ ಇಂದು { ಜೂನ್ 16 } ಧಾರಾವಾಹಿ ಪ್ರಸಾರವಾಗದಿರಲು ಕಾರಣವೇನು ? ಈ ಎಲ್ಲ ಪ್ರಶ್ನೆಗಳಿಗೆ ಕರ್ಣ ಧಾರಾವಾಹಿ ತಂಡ ಉತ್ತರ ನೀಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Zee Kannada's 'Karna' serial premiere halted! Uncover the reasons behind the delay, including speculations of Bhavya Gowda's exit from the show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X