ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯಿಂದ ದಿಢೀರ್ ಅಂತ ಹೊರ ಬಂದ ಮಹತಿ ಭಟ್, ಕಾರಣವೇನು ?
ಕಿರುತೆರೆಯಲ್ಲಿ ಒಮ್ಮೊಮ್ಮೆ ಪ್ರೇಕ್ಷಕರ ಹೃದಯ ಗೆದ್ದ ಪಾತ್ರಗಳು ಏಕಾಏಕಿ ಕಣ್ಮರೆಯಾಗುತ್ತಾವೆ. ಇನ್ನೂ ಕೆಲ ಒಮ್ಮೆ ಆ ಪಾತ್ರಧಾರಿಗಳೇ ಬದಲಾಗುತ್ತಾರೆ. ಆ ಜಾಗಕ್ಕೆ ಬೇರೊಬ್ಬರು ಬರುತ್ತಾರೆ. ಹೀಗಾದಾಗ ನೋಡುಗರಲ್ಲಿ ಗೊಂದಲ ಸೃಷ್ಟಿಯಾಗುತ್ತೆ. ತಮ್ಮ ಇಷ್ಟದ ಕಲಾವಿದ ಇದ್ದಕ್ಕಿದ್ದಂತೆ ಧಾರಾವಾಹಿಯಿಂದ ಹೊರ ಬಂದಿದ್ದೇಕೆ..? ಪಾತ್ರದಿಂದ ಹೊರ ನಡೆದಿದ್ದೇಕೆ ? ಎನ್ನುವ ಪ್ರಶ್ನೆಗಳು ಹಲವರನ್ನು ಕಾಡಲು ಶುರುಮಾಡುತ್ತಾವೆ.
ಯಾಕೆಂದರೆ ಕೆಲವೊಂದು ಬದಲಾವಣೆಗಳು ಸದ್ದಿಲ್ಲದೇ ನಡೆದರೂ ಕೆಲವೊಂದು ವಿವಾದ ಸೃಷ್ಟಿಸಿ ಸುದ್ದಿಯಾಗಿವೆ. ಹೀಗಾಗಿ ಸದ್ಯ ಮಹತಿ ವೈಷ್ಣವಿ ಭಟ್ ಅವರ ನಿರ್ಧಾರ ಹಲವರನ್ನು ಚಿಂತೆಗೆ ದೂಡಿದೆ. ಹೌದು ಮಹಿತಿ ಭಟ್.. ''ಡ್ರಾಮಾ ಜ್ಯೂನಿಯರ್ಸ್ ಸೀಸನ್ 1''ರಲ್ಲಿ ಕಾಣಿಸಿಕೊಂಡಿದ್ದ ಪ್ರತಿಭಾವಂತೆ.

ಆ ನಂತರ ''ಗಟ್ಟಿಮೇಳ'' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ಅಂಜಲಿ ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ''ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ'' ಧಾರಾವಾಹಿಯಲ್ಲಿ ಆಕ್ಟ್ ಮಾಡುತ್ತಿದ್ದರು. ಯುವರಾಣಿ ರೇಣುಕೆ ಪಾತ್ರವನ್ನು ನಿರ್ವಹಿಸುತ್ತಿದ್ದರು.
ಆದರೆ ಈಗ ಮಹತಿ ವೈಷ್ಣವಿ ಭಟ್ ಸದ್ಯ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಹೆಸರು-ಕೀರ್ತೀ ನೀಡಿದ ''ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ'' ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಮಹತಿ ಅವರ ಈ ನಿರ್ಧಾರ ಸದ್ಯ ಹಲವರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಹಲವು ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿವೆ.
ಈ ಹಿನ್ನೆಲೆ ಅಭಿಮಾನಿಗಳ ಮನದ ಆತಂಕ..ದುಗುಡ..ದುಮ್ಮಾನ.. ಅರ್ಥ ಮಾಡಿಕೊಂಡಿರುವ ಮಹತಿ ಸದ್ಯ ಸ್ಪಷ್ಟನೆ ನೀಡಿದ್ದಾರೆ. ಧಾರಾವಾಹಿಯಿಂದ ಹೊರ ಬಂದಿರುವುದಾಗಿ ಸಂದೇಶವನ್ನು ಕೂಡ ರವಾನೆ ಮಾಡಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಮಹತಿ ಭಟ್, ಕಳೆದ ಒಂದೂವರೆ ವರ್ಷದಿಂದ ರೇಣುಕೆ ನನ್ನ ಪಾಲಿಗೆ ಕೇವಲ ಪಾತ್ರವಾಗಿರಲಿಲ್ಲ. ನನ್ನ ಆತ್ಮದ ಭಾಗವಾಗಿತ್ತು ಎಂದು ಹೇಳಿದ್ಧಾರೆ. ದೇವಿಯ ಪಾತ್ರ ನಿರ್ವಹಿಸುವ ಈ ಪಯಣದ ನನ್ನ ಅನುಭವ ಕಲ್ಪನೆಗೂ ಮೀರಿದ್ದು. ಇದೀಗ ರೇಣುಕೆಯ ಪಾತ್ರಕ್ಕೆ ಗುಡ್ ಬೈ ಹೇಳುತ್ತಿದ್ದೇನೆ ಎಂದಿರುವ ಮಹತಿ ನನ್ನ ಸ್ವಂತ ಕುಟುಂಬವನ್ನು ಬಿಟ್ಟು ಹೋದಂತೆ ಭಾಸವಾಗುತ್ತಿದೆ. ಕೊನೆಯ ದಿನ ತುಂಬಾನೇ ಭಾವನಾತ್ಮಕವಾಗಿತ್ತು ಎಂದು ಹೇಳಿದ್ದಾರೆ.

ಮುಂದುವರೆದು ರೇಣುಕೆ ಯಾವಾಗಲೂ ನನ್ನೊಂದಿಗೆ ಇರುತ್ತಾಳೆ. ನಾನು ಎಲ್ಲೇ ಹೋದರೂ.. ರೇಣುಕೆಯ ಆಶೀರ್ವಾದ ನನ್ನೊಂದಿಗೆ ಇರುತ್ತದೆ ಎಂದು ಹೇಳಿರುವ ಮಹತಿ ''ಸ್ಟಾರ್ ಸುವರ್ಣ ವಾಹಿನಿ''ಗೆ ಕೂಡ ವಿಶೇಷ ಧನ್ಯವಾದವನ್ನು ಹೇಳಿದ್ದಾರೆ. ರೇಣುಕೆ ಪಾತ್ರಕ್ಕಾಗಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಂದಿ ಮೂವೀಸ್ ಅವರಿಗೆ, ನನ್ನ ನಿರ್ಮಾಪಕರಾದ ಅರವಿಂದ್ ಸರ್ ಮತ್ತು ಶ್ರೀನಿವಾಸ್ ಸರ್ ಮತ್ತು ನಮ್ಮ ನಿರ್ದೇಶನ ತಂಡ - ನಾಗಣ್ಣ, ವಿಷ್ಣು ಸರ್, ಶ್ರೇಯಸ್ ಅಣ್ಣ ಮತ್ತು ರಾಜು ಅಣ್ಣಾ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಮ್ಮ ಮ್ಯಾನೇಜರ್ ಶ್ರೀನಿವಾಸ್ ಸರ್ ಮತ್ತು ಹೇಮಂತ್ ಸರ್, ಪ್ರತಿದಿನ ನನ್ನನ್ನು ಸುಂದರವಾಗಿ ಕಾಣುವಂತೆ ಮಾಡಿದ ನನ್ನ ಮೇಕಪ್, ಕೂದಲು ಮತ್ತು ವೇಷಭೂಷಣ ತಂಡ, ನಮ್ಮನ್ನು ಕುಟುಂಬದಂತೆ ನೋಡಿಕೊಂಡ ನಿರ್ಮಾಣ ತಂಡ, ಸೆಟ್ ವಿಭಾಗ, ಕ್ಯಾಮೆರಾಮೆನ್ ಗುರು ಸರ್ ಮತ್ತು ರಮೇಶ್ ಅಣ್ಣ,ಹೀಗೆ ಪ್ರತಿಯೊಬ್ಬರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಇನ್ನುಳಿದಂತೆ ಈ ಧಾರಾವಾಹಿಯಿಂದ ಹೊರ ಬಂದಿದ್ದೇಕೆ..? ಈ ನಿರ್ಧಾರಕ್ಕೆ ಕಾರಣವೇನು..? ಎನ್ನುವುದನ್ನು ಮಹಿತಿ ಭಟ್ ಹೇಳಿಲ್ಲ. ಈ ಹಿನ್ನೆಲೆ ಹಲವರಲ್ಲಿ ಈಗ ಕುತೂಹಲ ಮನೆ ಮಾಡಿದೆ. ಮಹಿತಿ ಅವರೇ ಹೊರ ಬರುವ ತೀರ್ಮಾನ ಮಾಡಿದ್ರಾ ಅಥವಾ ನಿರ್ಮಾಣ ಸಂಸ್ಥೆಯೇ ಬದಲಾವಣೆ ಕಾರಣವನ್ನು ಹೇಳಿ ಹೊರ ಹೋಗುವಂತೆ ಹೇಳಿತಾ..? ಎಂಬ ಪ್ರಶ್ನೆಗಳು ಸದ್ಯ ಕಿರುತೆರೆ ಪ್ರೇಕ್ಷಕರನ್ನು ಕಾಡುತ್ತಿವೆ. ಉತ್ತರ ಮಹತಿ ಅವರಿಗೆ ಗೊತ್ತು.


Click it and Unblock the Notifications











