ಮನೆಗೆ ವಾಪಸ್ ಬಂದ್ಮೇಲೆ ಪತ್ನಿಯಿಂದ ದಿವಾಕರ್ ಗೆ ಕಾದಿತ್ತು ಶಾಕಿಂಗ್ ನ್ಯೂಸ್.! ಏನದು.?

By Harshitha

Recommended Video

ಮನೆಗೆ ವಾಪಸ್ ಬಂದ್ಮೇಲೆ ಪತ್ನಿಯಿಂದ ದಿವಾಕರ್ ಗೆ ಕಾದಿತ್ತು ಶಾಕಿಂಗ್ ನ್ಯೂಸ್ | Filmibeat Kannada

ಮೂರುವರೆ ತಿಂಗಳ ಹಿಂದೆ ಊರೂರು ಸುತ್ತಿ ತೈಲ ಮಾರಾಟ ಮಾಡುತ್ತಿದ್ದ ದಿವಾಕರ್, ಸದ್ಯ ಇಡೀ ಕರ್ನಾಟಕಕ್ಕೆ 'ಬಿಗ್ ಬಾಸ್' ಮೂಲಕ ಚಿರಪರಿಚಿತ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಜನಸಾಮಾನ್ಯ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದ ದಿವಾಕರ್ ರನ್ನರ್-ಅಪ್ ಆಗಿ ಹೊರ ಹೊಮ್ಮಿದರು.

106 ದಿನ 'ಬಿಗ್ ಬಾಸ್' ಎಂಬ ಚಿನ್ನದ ಪಂಜರದಲ್ಲಿ ಇದ್ದು ಕೊನೆಗೆ ಖ್ಯಾತಿ, ಜನಪ್ರಿಯತೆ, ಕೈಯಲ್ಲಿ ಒಂದು ಲಕ್ಷ ರೂಪಾಯಿ ಬಹುಮಾನ ಹಣ, ರನ್ನರ್-ಅಪ್ ಟ್ರೋಫಿ ಹಿಡಿದು ತಮ್ಮ ಮನೆ ಕಡೆಗೆ ಹೆಜ್ಜೆ ಹಾಕಿದ ದಿವಾಕರ್ ಗೆ ಒಂದು ಶಾಕಿಂಗ್ ನ್ಯೂಸ್ ಕಾದಿತ್ತು. ಅದು ತಮ್ಮ ಪತ್ನಿ ಮಮತಾ ಕಡೆಯಿಂದ.

ತಮ್ಮ ಪತಿ 'ಬಿಗ್ ಬಾಸ್ ವಿನ್ನರ್' ಆಗಬೇಕು ಎಂಬುದು ಮಮತಾ ಅವರ ಆಸೆ ಆಗಿತ್ತು. ಆದ್ರೆ, ದಿವಾಕರ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಇತ್ತ ದಿವಾಕರ್ ಅವರಿಗೆ ಹೆಣ್ಣು ಮಕ್ಕಳೆಂದರೆ ಅಚ್ಚುಮೆಚ್ಚು. ಇದೇ ವಿಚಾರದ ಕುರಿತಾಗಿ ಸಿಹಿ ಸುದ್ದಿ ನಿರೀಕ್ಷೆ ಮಾಡಿದ್ದ ದಿವಾಕರ್ ಅವರಿಗೆ ದೊಡ್ಡ ಶಾಕ್ ಕಾದಿತ್ತು. ಏನದು.? ಮುಂದೆ ಓದಿರಿ...

ದಿವಾಕರ್ ಗೆ ಸಿಕ್ತು ಕಹಿ ಸುದ್ದಿ.!

ದಿವಾಕರ್ ಗೆ ಸಿಕ್ತು ಕಹಿ ಸುದ್ದಿ.!

ದಿವಾಕರ್ ಹಾಗೂ ಪತ್ನಿ ಮಮತಾ ಎರಡನೇ ಮಗುವನ್ನು ನಿರೀಕ್ಷೆ ಮಾಡುತ್ತಿದ್ದರು. 'ಬಿಗ್ ಬಾಸ್' ಮನೆಯೊಳಗೆ ದಿವಾಕರ್ ಹೋಗುವ ಮುನ್ನ ಪತ್ನಿ ಮಮತಾ ಗರ್ಭಿಣಿ ಆಗಿದ್ದರು. ಆದ್ರೆ, 'ದೊಡ್ಮನೆ'ಯೊಳಗೆ ದಿವಾಕರ್ ಬಂಧಿಯಾಗಿದ್ದಾಗ ಪತ್ನಿ ಮಮತಾ ಅನಾರೋಗ್ಯಕ್ಕೆ ಒಳಗಾದರು. ಇದರಿಂದ ಗರ್ಭಪಾತ ಉಂಟಾಯಿತು. ಈ ವಿಚಾರ ದಿವಾಕರ್ ಅವರಿಗೆ ಗೊತ್ತಾಗಿದ್ದು 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ.!

ಒಳಗೆ ಹೋಗಿದ್ದಾಗ ಹೇಳಲಿಲ್ಲ.!

ಒಳಗೆ ಹೋಗಿದ್ದಾಗ ಹೇಳಲಿಲ್ಲ.!

'ಬಿಗ್ ಬಾಸ್' ಮನೆಯೊಳಗೆ ಪತ್ನಿ ಮಮತಾ ಹೋಗಿದ್ದಾಗ, ಈ ಸಂಗತಿಯನ್ನ ದಿವಾಕರ್ ಅವರಿಗೆ ಹೇಳಿರಲಿಲ್ಲ. ಎರಡನೇ ಮಗುವಿನ ಕುರಿತಾಗಿ ದಿವಾಕರ್ ಪದೇ ಪದೇ ಕೇಳುತ್ತಿದ್ದರೂ, ಬೇಸರ ಮಾಡಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಪತ್ನಿ ಮಮತಾ ಬಹಿರಂಗ ಪಡಿಸಿರಲಿಲ್ಲ.

ದಿವಾಕರ್ ಗೆ ಸತ್ಯ ಗೊತ್ತಾಗಿದೆ

ದಿವಾಕರ್ ಗೆ ಸತ್ಯ ಗೊತ್ತಾಗಿದೆ

ತಮ್ಮ ಪತ್ನಿಗೆ ಗರ್ಭಪಾತ ಆಗಿರುವ ವಿಷಯ ಸದ್ಯ ದಿವಾಕರ್ ಗೆ ಗೊತ್ತಾಗಿದೆ. ''ವಿಷಯ ಕೇಳಿ ತುಂಬಾ ಬೇಜಾರು ಆಯ್ತು. ಕೊಡುವುದು, ತೆಗೆದುಕೊಳ್ಳುವುದು ಎರಡೂ ದೇವರೇ. ಹೆಣ್ಣು ಮಗು ಆಗಬೇಕು ಅಂತ ಕನಸು ಕಂಡಿದ್ದೆ. ಆದ್ರೆ ಹೀಗಾಗಿರುವುದು ತುಂಬಾ ಬೇಸರ ತಂದಿದೆ'' ಎಂದಿದ್ದಾರೆ ದಿವಾಕರ್. ಸದ್ಯ ದಿವಾಕರ್ ಹಾಗೂ ಪತ್ನಿ ಮಮತಾಗೆ ಗಂಡು ಮಗು ಇದೆ.

ಸಿನಿಮಾ ಆಫರ್ ಬರ್ತಿದ್ಯಂತೆ.!

ಸಿನಿಮಾ ಆಫರ್ ಬರ್ತಿದ್ಯಂತೆ.!

'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ, ದಿವಾಕರ್ ಅವರಿಗೆ ಸಿನಿಮಾ ಹಾಗೂ ಸೀರಿಯಲ್ ಆಫರ್ ಬರ್ತಿದ್ಯಂತೆ. ಆದ್ರೆ, ಇನ್ನೂ ಯಾವ ನಿರ್ಧಾರ ಕೂಡ ತೆಗೆದುಕೊಂಡಿಲ್ಲ ಅಂತಾರೆ ದಿವಾಕರ್.

ಕೋಪ ಕಮ್ಮಿ ಆಗಿದೆ

ಕೋಪ ಕಮ್ಮಿ ಆಗಿದೆ

'ಬಿಗ್' ಮನೆಯಲ್ಲಿ ಇದ್ದು ಬಂದ್ಮೇಲೆ, ದಿವಾಕರ್ ಅವರಿಗೆ ಕೋಪ ಕಮ್ಮಿ ಆಗಿದ್ಯಂತೆ. ಹಾಗೇ, ತಾಳ್ಮೆ ಕೂಡ ಜಾಸ್ತಿ ಆಗಿದೆ ಅಂತಾರೆ ದಿವಾಕರ್.

More from Filmibeat

English summary
Bigg Boss Kannada 5 Runner Diwakar and his wife Mamatha was expecting second baby. But, When Diwakar returned back home after 106 days of his stay in #BBK5 House, a shocking news was awaiting for him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X