ವಾರಕ್ಕೆ 2 ಲಕ್ಷ ; ಬಿಗ್ ಬಾಸ್ ಮನೆಯಿಂದ ಈ ವಾರ ಹೊರ ಬಂದ ಈ ಸ್ಫರ್ಧಿಗೆ ಸಿಕ್ಕ ಸಂಭಾವನೆ ಎಷ್ಟು ?
''ಬಿಗ್ ಬಾಸ್'' ಕೇವಲ ಕಾರ್ಯಕ್ರಮ ನಡೆಸಿಕೊಡುವ ಸ್ಟಾರ್ ನಿರೂಪಕರಿಗೆ ಮಾತ್ರ ಚಿನ್ನದ ಮೊಟ್ಟೆ ಇಡುವ ಕೋಳಿ ಅಲ್ಲ. ಬದಲಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಫರ್ಧಿಗಳಿಗೆ ಕೂಡ ಇಲ್ಲಿ ಭಾರೀ ಹಣವನ್ನು ನೀಡಲಾಗುತ್ತೆ. ಕೆಲವರು ಇಲ್ಲಿ ವಾರಕ್ಕೆ ಲಕ್ಷ ಎಣಿಸಿದರೆ ಇನ್ನೂ ಕೆಲವರ ಸಂಭಾವನೆ ವಾರದ ಲೆಕ್ಕ ತಪ್ಪಿ ಹೋಗುವಷ್ಟಿರುತ್ತೆ. ''ಬಿಗ್ ಬಾಸ್''ನಲ್ಲಿ ಹೇಗಾದರೂ ಮಾಡಿ ಭಾಗವಹಿಸಬೇಕು ಎಂದು ಹಲವರು ಕನಸು ಕಾಣಲು ಇದು ಕೂಡ ಪ್ರಮುಖ ಕಾರಣ.
ಇಂಥಾ ''ಬಿಗ್ ಬಾಸ್ ಕಾರ್ಯಕ್ರಮ ಈಗ ಇನ್ನೊಮ್ಮೆ ಶುರುವಾಗಿದೆ. ಹಿಂದಿ, ತೆಲುಗು, ಮಲಯಾಳಂ ಮಾತ್ರ ಅಲ್ಲ ಕನ್ನಡದಲ್ಲಿ ಕೂಡ ಇಂದಿನಿಂದ ( ಸೆಪ್ಟೆಂಬರ್ 28 ) ''ಬಿಗ್ ಬಾಸ್'' ಕಲರವ ಶುರುವಾಗಿದೆ. ನಿರೀಕ್ಷೆಯಂತೆ ಕೆಲವರು ಮನೆ ಒಳಗೆ ಹೋಗಿದ್ದಾರೆ. ಇನ್ನೂ ಕೆಲವರು ನಿರೀಕ್ಷೆಯನ್ನು ಹುಸಿಗೊಳಿಸಿ ಮನೆಯಾಚೆ ಬಂದಿದ್ದಾರೆ.

ಆ ಪೈಕಿ ಮನೆಯಿಂದ ಕಳೆದ ವಾರ (ನವೆಂಬರ್ 16 ) ಹೊರ ಬಂದ ತೆಲುಗು ಬಿಗ್ ಬಾಸ್ ಸ್ಫರ್ಧಿಯಾದ ನಿಖಿಲ್ ನಾಯರ್ ಅವರ ಸಂಭಾವನೆ ಕುರಿತು ಚರ್ಚೆ ಶುರುವಾಗಿದೆ. ಹೌದು. ನಿಖಿಲ್ ನಾಯರ್.. ಬೆಂಗಳೂರಿನಲ್ಲಿ ಬೆಳೆದ ಕೇರಳದ ಚೆಲುವ. ಮಾಡೆಲಿಂಗ್ ಮಾಡುತ್ತಲೇ ಪಕ್ಕದ ಆಂಧ್ರದವರ ಕಣ್ಣಿಗೆ ಬಿದ್ದ ನಿಖಿಲ್ ನಾಯರ್ ಇಂತಿಂತಿ ಗೃಹಲಕ್ಷ್ಮಿ ಧಾರಾವಾಹಿಯ ಮೂಲಕ ಅಖಂಡ ಹೈದರಾಬಾದ್‌ನೆಲ್ಲೆಡೆ ಮನೆ ಮಾತಾದರು.
ಇಂಥಾ ನಿಖಿಲ್ ನಾಯರ್ ಈ ಬಾರಿಯ ತೆಲುಗು ''ಬಿಗ್ ಬಾಸ್ ಸೀಸನ್ 9''ರಲ್ಲಿ ಭಾಗವಹಿಸಿದ್ದರು. ಕಳೆದ ಅಕ್ಟೋಬರ್ 12ರಂದು ವೈಲ್ಡ್ ಕಾರ್ಡ್ ಮೂಲಕ ಮನೆಯನ್ನು ಪ್ರವೇಶ ಮಾಡಿದ್ದರು. ನಿಜಾ.. ಮನೆಯ ಒಳಗಡೆ ಹೋದ ಸಮಯದಲ್ಲಿ ನಿಖಿಲ್ ಸಪ್ಪೆಯಾಗಿದ್ದರು. ''ಬಿಗ್ ಬಾಸ್'' ಸಾಮ್ರಾಜ್ಯ ಟಾಸ್ಕ್‌ನಲ್ಲಿ ಕಮಾಂಡರ್ ಆಗಿ ಮಿಂಚಿದ್ದರು. ಕ್ಯಾಪ್ಟನ್ ಆಗಿ ಕೂಡ ಹೊರ ಹೊಮ್ಮಿದ್ದರು. ತನುಜಾ ಮತ್ತು ರಿತುಗೆ ಪ್ರಬಲ ಸ್ಫರ್ಧೆಯನ್ನು ನೀಡಿದ್ದರು. ನಾಗಾರ್ಜುನ ಅವರ ಹೃದಯವನ್ನು ಕೂಡ ಗೆದ್ದಿದ್ದರು. ದಿನಗಳು ಉರುಳಿದಂತೆ ನಿಖಿಲ್ ನಾಯರ್ ಅವರೇ ಈ ಬಾರಿ ಬಿಗ್ ಬಾಸ್ ಗೆಲ್ತಾರೆ ಎಂದೇ ತೆಲುಗು ಪ್ರೇಕ್ಷಕರು ಅಂದುಕೊಂಡಿದ್ದರು.

ಆದರೆ .. ಲೆಕ್ಕಾಚಾರ ಸದ್ಯ ಕೆಳಗಾಗಿದೆ. ನಿಖಿಲ್ ನಾಯರ್ ಈ ವಾರ (ನವೆಂಬರ್ 16) ಹೊರಗಡೆ ಬಂದಿದ್ದಾರೆ. ಆದರೆ.. ಹೀಗೆ ಬರುವ ಮೊದಲು ನಿಖಿಲ್ ತಮ್ಮ ಜೊತೆ ಹತ್ತು ಲಕ್ಷ ಹಣ ತೆಗೆದುಕೊಂಡು ಬಂದಿದ್ದಾರೆ ಎನ್ನುವುದೇ ಸದ್ಯದ ಲೇಟೆಸ್ಟ್ ನ್ಯೂಸ್.
ಹೌದು, ''123 ತೆಲುಗು'' ವರದಿಯ ಪ್ರಕಾರ ನಿಖಿಲ್ ನಾಯರ್ ಅವರಿಗೆ ವಾರವೊಂದಕ್ಕೆ 2 ಲಕ್ಷ ಸಂಭಾವನೆ ನೀಡಲಾಗಿದೆ. ಇನ್ನು ನಿಖಿಲ್ ಮನೆಯಲ್ಲಿ ಇದ್ದಿದ್ದು ಐದು ವಾರ. ಈ ಹಿನ್ನೆಲೆ ಮನೆಯಿಂದ ಹೊರಗಡೆ ಬರುವಾಗ 10 ಲಕ್ಷಕ್ಕೂ ಅಧಿಕ ಹಣವನ್ನು ಪಡೆದು ನಿಖಿಲ್ ಬಂದಿದ್ದಾರೆ ಎಂದು ವರದಿಯಾಗಿದೆ.
ಈ ವರದಿಯ ಸತ್ಯಾಸತ್ಯತೆಯನ್ನು ''ಫಿಲ್ಮಿಬೀಟ್ ಕನ್ನಡ'' ದೃಢೀಕರಿಸುವುದಿಲ್ಲವಾದರೂ ಸದ್ಯ ಇವರ ಈ ಸಂಭಾವನೆಯ ವಿಷಯ ಹಲವರನ್ನು ನಿಬ್ಬೇರಗಾಗಿಸಿದೆ. ಪಕ್ಕದ ಆಂಧ್ರದ ಕಿರುತೆರೆಯಲ್ಲಿ ಈ ಕುರಿತು ವ್ಯಾಪಕ ಚರ್ಚೆ ಕೂಡ ನಡೆಯುತ್ತಿದೆ. ಇನ್ನುಳಿದಂತೆ ಸದ್ಯ ''ಬಿಗ್ ಬಾಸ್'' ಮನೆಯಲ್ಲಿ 09 ಜನ ಉಳಿದುಕೊಂಡಿದ್ದಾರೆ. ಆ ಪೈಕಿ ಕನ್ನಡದ ಸಂಜನಾ ಗಲ್ರಾನಿ ಕೂಡ ಒಬ್ಬರು. ಕೈ ಮುಗಿದು ನನ್ನ ಮನೆಗೆ ಕಳುಹಿಸಿ ಎಂದು ಸಂಜನಾ ಬೇಡಿಕೊಂಡರು.. ಕೇಳಿಕೊಂಡರು.. ಕೂಡ ಅದ್ಯಾಕೋ ತೆಲುಗು ''ಬಿಗ್ ಬಾಸ್''ಗೆ ಕರುಣೆ ಬರುತ್ತಿಲ್ಲ. ಈ 09 ಜನರಲ್ಲಿ ಈ ಬಾರಿ ಯಾರು ಗೆಲ್ತಾರೆ ಎನ್ನುವುದನ್ನು ಸದ್ಯ ಕಾದು ನೋಡಬೇಕಿದೆ.


Click it and Unblock the Notifications











