ಬಿಗ್ ಬಾಸ್ ಅಶ್ವಿನಿ ಗೌಡ ದಾಂಪತ್ಯ ಜೀವನ ಮುರಿದು ಬೀಳಲು ಕಾರಣವೇನು? ಮನೆಯೊಳಗೆ ಹೋಗುವ ಮುನ್ನ ಹಂಚಿಕೊಂಡ ನೋವೇನು ?

ಒಬ್ಬರನ್ನೊಬ್ಬರು ಎಷ್ಟೇ ಪ್ರೀತಿ ಮಾಡಿದರು, ಗೌರವಿಸಿದರೂ ಕೂಡ ಮದುವೆಯ ನಂತರ ಕೆಲವೊಮ್ಮೆ ಪರಿಸ್ಥಿತಿ ಬಿಗಡಾಯಿಸಿ ಬಿಡುತ್ತದೆ. ಅದರಲ್ಲಿಯೂ ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ ಅಥವಾ ಸಂಗೀತ ಕ್ಷೇತ್ರವೇ ಇರಲಿ.. ಹೆಸರು.. ಹಣ.. ಕೀರ್ತಿಯನ್ನು ಸಂಪಾದಿಸಿದ ಧ್ರುವತಾರೆಯರ ಬದುಕಿನಲ್ಲಿ ಸರಸ-ವಿರಸ-ಪ್ರೇಮ-ವಿರಹ-ವೇದನೆ-ವಿಚ್ಛೇದನ ಇವೆಲ್ಲವೂ ಮಾಮೂಲು. ಇಂದು ಜೊತೆ ಜೊತೆಯಲ್ಲಿ ಓಡಾಡಿ, ಮರು ದಿನವೇ ಇಲ್ಲಿ ಅನೇಕರು ಬ್ರೇಕಪ್‌ ಮಾಡಿಕೊಳ್ಳುತ್ತಾರೆ.

ಇದಕ್ಕೆ ಕಾರಣ ಪ್ರತಿಯೊಬ್ಬರ ಮನಸಿನಲ್ಲಿಯೂ ವೈವಾಹಿಕ ಜೀವನದ ಬಗ್ಗೆ ವಿಭಿನ್ನವಾದ ಸಿದ್ದ ಮಾದರಿಯ ಟೆಂಪ್ಲೇಟ್ ಕೂತಿರುವುದು. ಹೀಗಾಗಿ ವೈವಾಹಿಕ ಸಂಬಂಧಗಳ ತಂತಿಗಳು ಬಹಳ ಸೂಕ್ಷ್ಮ, ನಿರ್ವಹಿಸುವುದು ತುಂಬಾ ಕಷ್ಟ ಎಂದುಕೊಂಡು ಅನೇಕರು ಸಂಬಂಧಗಳನ್ನು ಕಡೆದುಕೊಳ್ಳುತ್ತಾರೆ. ವಿಚ್ಛೇದನ ಪಡೆದು ಅವರ ಅವರ ಬದುಕು ಬದುಕಲು ಶುರು ಮಾಡುತ್ತಾರೆ. ಉದಾಹರಣೆಗೆ ಅಶ್ವಿನಿ ಗೌಡ.

SHOCKING PRE-BBK 12 Confession Ashwini Gowda Reveals The Truth Behind Her Marriage Failure

ಹೌದು, ಅಶ್ವಿನಿ ಗೌಡ.. ''ಬಿಗ್ ಬಾಸ್'' ಕನ್ನಡ ಹನ್ನೆರಡನೇ ಸೀಸನ್‌ನ ಸ್ಫರ್ಧಿ. ನಟಿ ನಿರೂಪಕಿ ಹೋರಾಟಗಾರ್ತಿ. ರಾಜಕೀಯ ಹಿನ್ನೆಲೆಯಿಂದ ಬಂದ ಅಶ್ವಿನಿ ಗೌಡ ಆಗರ್ಭ ಶ್ರೀಮಂತರು ಕೂಡ ಹೌದು.

''ಬಿಗ್ ಬಾಸ್'' ಮನೆಗೆ ಹೋಗಿ ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳುವ ಅವಶ್ಯಕತೆ ಇವರಿಗೆ ಇರಲಿಲ್ಲವಾದರೂ, ''ಬಿಗ್ ಬಾಸ್'' ಮನೆಯೊಳಗೆ ಹೋಗುವ ಮುನ್ನ ಅಶ್ವಿನಿ ತಮ್ಮ ವ್ಯೆಯಕ್ತಿಕ ಜೀವನದ ಕುರಿತು ಕೆಲ ವಿಚಾರಗಳನ್ನು ಮಾಧ್ಯಮಗಳ ಎದುರು ಹಂಚಿಕೊಂಡಿದ್ದರು. ಆ ಪೈಕಿ ''ಟಿವಿ 9 ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಅಶ್ವಿನಿ ಗೌಡ ತಮ್ಮ ದಾಂಪತ್ಯ ಮುರಿದು ಬೀಳಲು ಕಾರಣವೇನು ಎಂದು ಹೇಳಿದ್ದಾರೆ.

ಈ ಕುರಿತು ''ಟಿವಿ 9 ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಶ್ವಿನಿ ಗೌಡ, ನನ್ನ ವೈವಾಹಿಕ ಬದುಕಿನ ಕುರಿತು ಮಾತನಾಡುವುದಾದರೆ ಅವರು ತುಂಬಾನೇ ಒಳ್ಳೆಯ ವ್ಯಕ್ತಿ, ಅವರದ್ದು ತುಂಬಾ ಒಳ್ಳೆಯ ಕುಟುಂಬ, ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮಗನಿಗೆ ಒಳ್ಳೆಯ ತಂದೆ, ಆದರೆ.. ಕೆಲ ಒಮ್ಮೆ ವ್ಯಕ್ತಿ ವ್ಯಕ್ತಿ ಸೇರಿದಾಗ ಇಬ್ಬರ ನಡುವೆ ಅಂತರ ಬರುತ್ತೆ ಭಿನ್ನಾಭಿಪ್ರಾಯ ಮೂಡುತ್ತೆ. ಹೊಂದಾಣಿಕೆ ಕೊರತೆಯಿಂದ ದೂರವಾಗಬೇಕಾಯ್ತು ಎಂದು ಹೇಳಿದ್ದಾರೆ.

ಇನ್ನೂ ಅನೈತಿಕ ಸಂಬಂಧ, ಕೊಲೆ, ಹೀಗೆ ತೀರಾ ಅಸಹ್ಯ ರೀತಿಯಲ್ಲಿ ಹಲವು ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ, ಈ ಅಸಹ್ಯದ ಬಾಳು ಬಾಳುವುದಕ್ಕಿಂತ ಗೌರವಯುತವಾಗಿ ಆ ವ್ಯಕ್ತಿಯನ್ನು ಗೌರವಿಸುತ್ತಾ ಆ ಕುಟುಂಬವನ್ನು ಕೂಡ ಗೌರವಿಸುತ್ತಾ ನಿಮಗೂ ನೀವು ಗೌರವ ಕೊಡುತ್ತಾ ಆ ಸಂಬಂಧದಿಂದ ಹೊರಗಡೆ ಬರುವುದು ಒಳ್ಳೆಯದು ಎಂದಿರುವ ಅಶ್ವಿನಿ ಈಗೀಗ ಡಿವೋರ್ಸ್ ವಿಷಯದಲ್ಲಿ ತುಂಬಾ ಜನ ಗಲೀಜು ಮಾಡಿಕೊಳ್ಳುತ್ತಾರೆ, ಪರಸ್ಪರ ಬೈದಾಡಿಕೊಂಡು ಸಂಬಂಧ ಮುರಿದುಕೊಳ್ಳುತ್ತಾರೆ.ಆದರೆ ಅದು ತಪ್ಪು, ಬದುಕಿ ಬದುಕಲು ಬಿಡಿ ಎಂದು ಹೇಳಿದ್ದಾರೆ.

SHOCKING PRE-BBK 12 Confession Ashwini Gowda Reveals The Truth Behind Her Marriage Failure

ಮುಂದುವರೆದು ನನ್ನ ವ್ಯೆಯಕ್ತಿಕ ಬದುಕಿನಲ್ಲಿ ನನಗೆ ಯಾವ ಕಹಿ ಅನುಭವ ಆಗಿಲ್ಲ, ಅವರಿಂದ ನನಗ್ಯಾವ ತೊಂದರೆ ಕೂಡ ಆಗಿಲ್ಲ ಎಂದು ಹೇಳಿರುವ ಅಶ್ವಿನಿ ಗೌಡ ಕೆಲ ವಿಚಾರಗಳಿಂದ ಬೇಸರವಾದಾಗ ಹೊರ ಬರಬೇಕೆನ್ನುವ ನಿರ್ಧಾರವನ್ನು ಇಬ್ಬರು ಜೊತೆಯಾಗಿ ಮಾಡಿಕೊಂಡ್ವಿ, ತಂದೆ ತಾಯಿಯ ಜೊತೆ ಮಾತನಾಡಿದ್ವಿ, ನಮಗೂ ಒಬ್ಬ ಮಗ ಇದ್ದಾನೆ, ಅವನ ಭವಿಷ್ಯ ನಮಗೆ ಮುಖ್ಯ, ಹೀಗಾಗಿ ದಾಂಪತ್ಯ ಜೀವನದಿಂದ ಹೊರ ಬಂದ್ವಿ ಎಂದು ಹೇಳಿದ್ದಾರೆ.

ತಂದೆ-ತಾಯಿ ಜಗಳವಾಡುತ್ತಿದ್ದರೆ ಅದು ಮಕ್ಕಳ ಮೇಲೆ ಪರಿಣಾಮ ಬೀರುತ್ತೆ. ಕೆಲವೊಮ್ಮೆ ಮಕ್ಕಳು ಖಿನ್ನತೆಗೆ ಒಳಗಾಗುವ ಸಾಧ್ಯತೆ ಕೂಡ ಇರುತ್ತೆ. ಹೀಗಾಗಿ ಜಗಳವಾಡುತ್ತಾ ಕೆಟ್ಟ ಪರಿಸರದಲ್ಲಿ ಮಗನನ್ನು ಬೆಳೆಸುವುದು ಬೇಡ ಎಂದು ನೀವು ನಿಮ್ಮ ಜೀವನ ನೋಡಿಕೊಳ್ಳಿ ನಾನು ನನ್ನ ಜೀವನ ನೋಡಿಕೊಳ್ಳುತ್ತೇನೆ ಎಂದು ಹೇಳಿ ನಾವು ದೂರ ಆದ್ವಿ ಎಂದು ಹೇಳಿರುವ ಅಶ್ವಿನಿ ಗೌಡ ಇವತ್ತು ಕೂಡ ಅವರ ಮೇಲೆ ನನಗೆ ನನ್ನ ಮೇಲೆ ಅವರಿಗೆ ಹಗೆತನ ಇಲ್ಲ ನಮ್ಮ ನಡುವೆ ದ್ವೇಷ ಇಲ್ಲ. ಅವರ ಕುಟುಂಬದವರು ನನ್ನ ಕುರಿತು ಇವತ್ತಿನವರೆಗೆ ಒಂದು ಕೆಟ್ಟ ಮಾತು ಆಡಿಲ್ಲ ನಾನು ಕೂಡ ಅವರ ಬಗ್ಗೆ ಕೀಳು ಮಟ್ಟದಲ್ಲಿ ಯಾವತ್ತು ಮಾತನಾಡಿಲ್ಲ, ಮಾತನಾಡುವುದು ಇಲ್ಲ ಎಂದು ಹೇಳಿದ್ಧಾರೆ.

More from Filmibeat

English summary
In a candid interview before entering the BBK 12 house, Ashwini Gowda reveals the heartbreaking, unseen reason for her divorce. Read her raw confession about the end of her marriage.
Read more about: divorce ಟಿವಿ biggboss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X