'ಬಿಗ್ ಬಾಸ್' ಮನೆ ಪ್ರವೇಶಿಸಲು ನೂಕುನುಗ್ಗಲು, 'ಸೆಪ್ಟೆಂಬರ್ 7'ರಿಂದ ಶುರು ಹೊಸ ಅಧ್ಯಾಯ..?

''ಐಪಿಎಲ್'' ಮತ್ತು ''ಬಿಗ್ ಬಾಸ್'' ಕಳೆದ ಹದಿನೆಂಟು-ಹತ್ತೊಂಬತ್ತು ವರ್ಷಗಳಿಂದ ಭಾರತವನ್ನು ಆವರಿಸಿಕೊಂಡಿವೆ. ವರ್ಷದ ಆರಂಭದಲ್ಲಿ ಐಪಿಎಲ್‌ ಸಂಭ್ರಮ ಸಡಗರದಲ್ಲಿ ಮಿಂದೇಳುವ ಅಸಂಖ್ಯಾತ ಜನ ವರ್ಷದ ಮಧ್ಯಂತರಕ್ಕೆ ಬಿಗ್ ಬಾಸ್‌ ಗೆ ಸ್ವಾಗತ ಕೋರಲು ಅಣಿಯಾಗುತ್ತಾರೆ. ತಮ್ಮ ಕಷ್ಟ-ನಷ್ಟಗಳನ್ನೆಲ್ಲ ಮರೆತು ಬಿಗ್ ಬಾಸ್ ಮೈದಾನದ ತುಂಬೆಲ್ಲಾ ಮೈದಣಿಯದೇ ಉರುಳ್ಯಾಡುವ ಸ್ಫರ್ಧಿಗಳ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಾರೆ. ಆದರೆ .. ಈ ಬಾರಿ..

ಈ ಸಂತೆಯಲ್ಲಿ ಭಾಗಿಯಾಗುವ ಸೌಭಾಗ್ಯವನ್ನು ಬಿಗ್ ಬಾಸ್‌ನ ಆಯೋಜಕರು ಬಿಗ್ ಬಾಸ್‌ನ ತಲೆ ಮೇಲೆ ಹೊತ್ತು ಮೆರೆಸುವ ಜನಸಾಮಾನ್ಯರಿಗೆ ಕೂಡ ನೀಡಿದ್ದಾರೆ. ಸೆಲೆಬ್ರಿಟಿಗಳ ಜೊತೆ ನೀವು ಕೂಡ ಬಿಗ್ ಬಾಸ್‌ನಲ್ಲಿ ಭಾಗವಹಿಸಬಹುದು ಎಂದು ಕರೆಯನ್ನು ನೀಡಿದ್ದಾರೆ. ಈ ಕರೆ ಆಯೋಜಕರಿಂದ ಇನ್ನು ಕನ್ನಡಿಗರಿಗೆ ಬಂದಿಲ್ಲವಾದರೂ ಪಕ್ಕದ ಆಂಧ್ರ ಮತ್ತು ಕೇರಳದಲ್ಲಿ ಬಿಗ್ ಬಾಸ್‌ನಲ್ಲಿ ಭಾಗವಹಿಸಲು ನೂಕು ನುಗ್ಗಲಿನ ವಾತಾವರಣ ಕಂಡು ಬಂದಿದೆ.

Shocking Response Bigg Boss Telugu 9 Flooded with Lakhs of Commoner Applications Premieres Sept 7

ಹೌದು, ಮೊದಲೆರಡು ಸೀಸನ್ ಹೊರತು ಪಡಿಸಿದರೆ ಕಳೆದ ಆರು ಸೀಸನ್‌ಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದ ನಾಗಾರ್ಜುನ, ಈ ಬಾರಿ ಕೂಡ ಬಿಗ್ ಬಾಸ್ ಮನೆಗೆ ಮರಳಿದ್ದಾರೆ. ನಿರೂಪಣೆಯ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಈಗಾಗಲೇ ತೆಲುಗು ಬಿಗ್ ಬಾಸ್‌ನ ಪ್ರೋಮೊ ಕೂಡ ಬಿಡುಗಡೆಯಾಗಿದ್ದು ನಾಗಾರ್ಜುನ ಈ ಬಾರಿ ಚದುರಂಗ ಅಲ್ಲ ರಣರಂಗ ಎಂಬ ಖಡಕ್ ಡೈಲಾಗ್‌ ಕೂಡ ಹೊಡೆದಿದ್ದಾರೆ.

ಇದಲ್ಲದೇ ಜನಸಾಮಾನ್ಯರಿಗೆ ಆಹ್ವಾನವನ್ನು ನೀಡಿರುವ ನಾಗಾರ್ಜುನ www.bb9.jiostar.com ವೆಬ್‌ಸೈಟ್‌ನಲ್ಲಿ ನಿಮ್ಮ ಹೆಸರು ನೊಂದಾಯಿಸಿ, ಬಿಗ್ ಬಾಸ್‌ನಲ್ಲಿ ನೀವು ಭಾಗಿಯಾಗುತ್ತಿರುವುದೇಕೆ ಎನ್ನುವ ಕಾರಣವನ್ನು ಹೇಳಿ ವಿಡಿಯೋವನ್ನು ಅಪ್‌ಲೋಡ್ ಮಾಡಿ ಎಂದು ಹೇಳಿದ್ದಾರೆ.

ನಾಗಾರ್ಜುನ ಅವರ ಈ ಮಾತುಗಳನ್ನು ಕೇಳಿ ಲಕ್ಷಾಂತರ ಜನ ಸದ್ಯ ಅರ್ಜಿಯನ್ನು ಸಲ್ಲಿಸಿದ್ದಾರೆ. ಇಂತಹದ್ದೊಂದು ಪ್ರತಿಕ್ರಿಯೆಯನ್ನು ನಿರೀಕ್ಷೆ ಮಾಡದ ಆಯೋಜಕರು ಸದ್ಯ ಬಂದ ಅರ್ಜಿಗಳ ಸಂಖ್ಯೆಯನ್ನು ನೋಡಿ ದಂಗಾಗಿದ್ದಾರೆ ಎಂದು ''ಡೆಕ್ಕನ್ ಕ್ರೋನಿಕಲ್'' ವರದಿಯನ್ನು ಮಾಡಿದೆ.

ಆಯ್ಕೆ ಪ್ರಕ್ರಿಯೆ ಹೇಗೆ ?

ಬಿಗ್ ಬಾಸ್‌ ಮನೆಯಲ್ಲಿ ಭಾಗವಹಿಸುವ ಕನಸು ಹಲವರದ್ದು. ಹೀಗಾಗಿ ಅವಕಾಶ ಸಿಕ್ಕಾಗ ಬಾಚಿಕೊಳ್ಳಬೇಕು ಎಂಬ ಉದ್ದೇಶದಿಂದ ಲಕ್ಷಾಂತರ ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ ಮನೆಯೊಳಗೆ ಹೋಗುವುದು ಅಷ್ಟು ಸುಲಭ ಅಲ್ಲ. ಯಾಕೆಂದರೆ ''ಫಿಲ್ಮಿಬೀಟ್ ತೆಲುಗು''ದ 'ಶಿವ ಕೊಡತಿ' ಅವರ ವರದಿಯ ಪ್ರಕಾರ ಹೀಗೆ ಬಂದ ಲಕ್ಷಾಂತರ ಜನರಲ್ಲಿ ಕೇವಲ 200 ಜನರನ್ನು ಮಾತ್ರ ಮೊದಲ ಹಂತಕ್ಕೆ ಆಯ್ಕೆ ಮಾಡಲಾಗುತ್ತೆ. ಅವರ ವ್ಯಕ್ತಿತ್ವ, ಸ್ಕ್ರೀನ್ ಪ್ರೆಸೆನ್ಸ್ ಪರಿಗಣಿಸಲಾಗುತ್ತೆ.

shocking-response-bigg-boss-telugu-9-flooded-with-lakhs-of-commoner-applications-premieres-sept-7

ಆ ನಂತರ ಈ 200 ಜನರಲ್ಲಿ ಅಳೆದು ತೂಗಿ 100 ಜನರನ್ನು ಮತ್ತೆ ಆಯ್ಕೆ ಮಾಡುವ ಆಯೋಜಕರು ಈ 100ರಲ್ಲಿ 40 ಜನರನ್ನು ಫೋನ್ ಮೂಲಕ ಸಂದರ್ಶನ ನಡೆಸಿ ಆಯ್ಕೆ ಮಾಡುತ್ತಾರೆ. ಈ 40ರಲ್ಲಿ 15 ಜನರಿಗೆ ನೇರ ಸಂದರ್ಶನದಲ್ಲಿ ಭಾಗವಹಿಸುವ ಅವಕಾಶ ಸಿಗಲಿದ್ದು ಅಂತಿಮವಾಗಿ ಪಬ್ಲಿಕ್ ವೋಟಿಂಗ್ ಮೂಲಕ ಮೂರು ಜನ ಅದೃಷ್ಟಶಾಲಿಗಳಿಗೆ ಮನೆಯೊಳಗೆ ಸೆಲೆಬ್ರಿಟಿಗಳ ಜೊತೆ ಕಳುಹಿಸಲಾಗುತ್ತೆ.

ಭಾಗವಹಿಸುವ ಸಂಭಾವ್ಯ ಸೆಲೆಬ್ರಿಟಿಗಳ ಪಟ್ಟಿ !

ಪ್ರಖ್ಯಾತ ಯೂಟ್ಯೂಬರ್, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆದ ಬಮ್ ಚಿಕ್ ಬಬ್ಲೂ, ನಾನ್ ವೆಜ್ ಉಪ್ಪಿನ ಕಾಯಿ ಉದ್ಯಮದಿಂದ ಜನಪ್ರಿಯರಾದ ಅಲೇಖ್ಯ ಚಿಟ್ಟಿ ಪಿಕಲ್ಸ್‌ನ ರಮ್ಯಾ ಕಂಚರ್ಲಾ, ಜ್ಯೋತಿ ರೈ.. ಕಲ್ಪಿಕಾ ಗಣೇಶ್.. ಕಾವ್ಯಾ, ತೇಜಸ್ವಿನಿ.. ಕಿರುತೆರೆ ನಟಿ ನವ್ಯಾ ಸ್ವಾಮಿ.. ಶ್ರಾವಣಿ ವರ್ಮಾ.. ಆರ್‌ ಜೆ ರಾಜ್.. ಸಾಯಿ ಕಿರಣ್.. ಮುಖೇಶ್ ಗೌಡ.. ಚತ್ರಪತಿ ಶೇಖರ್.. ಆರ್‌ ಜೆ ರಾಜ್.. ಇಮ್ಯಾನ್ಯುಯೆಲ್.. ದೇಬ್‌ಜನಿ ಮೋದಕ್..

ಹೀಗೆ ಹಲವರ ಹೆಸರುಗಳು ಸದ್ಯ ಅಂತೆ ಕಂತೆಯ ಸಂತೆಯಲ್ಲಿ ಚಾಲ್ತಿಯಲ್ಲಿವೆ. ಕಿರಾಕ್ ಬಾಯ್ಸ್ ಖಿಲಾಡಿ ಗರ್ಲ್ಸ್‌ ಸೀಸನ್‌ 2ರಲ್ಲಿ ಭಾಗವಹಿಸಿದ್ದ ಅನೇಕ ಸ್ಫರ್ಧಿಗಳು ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ಬರಬಹುದು ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ. ಸ್ಟಾರ್ ಮಾ ಮತ್ತು ಡಿಸ್ನಿ + ಹಾಟ್‌ ಸ್ಟಾರ್‌ನಲ್ಲಿ ಈ ವರ್ಷ ಕೂಡ ತೆಲುಗು ಬಿಗ್ ಬಾಸ್ ಪ್ರಸಾರವಾಗಲಿದೆ.

More from Filmibeat

English summary
Lakhs applied! Bigg Boss Telugu 9 saw a shocking response for commoner entries. The popular show premieres Sept 7th. Find out more here
Read more about: bigg boss nagarjuna ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X