3 ತಿಂಗಳು, ₹150 ಕೋಟಿ ; ಬಿಗ್ ಬಾಸ್ ನಿರೂಪಣೆಗೆ ಭರ್ಜರಿ ಸಂಭಾವನೆ ಪಡೆದ ಸೂಪರ್ ಸ್ಟಾರ್

ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಬಿಗ್ ಬಾಸ್ ಕಾರ್ಯಕ್ರಮವನ್ನ ಜನ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ. ಇಂಥಾ ಕಾರ್ಯಕ್ರಮ ಈಗ ಕೇವಲ ಕನ್ನಡದಲ್ಲಿ ಮಾತ್ರ ಅಲ್ಲ ಬೇರೆ ಬೇರೆ ಭಾಷೆಗಳಲ್ಲಿ ಕೂಡ ಮತ್ತೊಮ್ಮೆ ಶುರುವಾಗಲಿದೆ. ಎಲ್ಲೆಡೆ ತಯಾರಿಗಳು ಕೂಡ ಆರಂಭವಾಗಿವೆ. ಕನ್ನಡದಲ್ಲಿ ಈ ಸೆಪ್ಟೆಂಬರ್‌ದಿಂದ ಕಾರ್ಯಕ್ರಮ ಆರಂಭವಾಗಲಿದೆ ಎನ್ನುವ ಮಾತು ಕೇಳಿ ಬರುತ್ತಿದ್ದು ...

ಹಿಂದಿಯಲ್ಲಿ ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮ ಎಲ್ಲರಿಗಿಂತ ಮೊದಲು ಶುರುವಾಗುವ ಎಲ್ಲ ಲಕ್ಷಣಗಳಿವೆ. ಆಗಸ್ಟ್ 30ರಿಂದ ಬಿಗ್ ಬಾಸ್‌ಗೆ ಅದ್ಧೂರಿ ಚಾಲನೆ ಸಿಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ತೆಲುಗು ಮತ್ತು ಮಲಯಾಳಂನಲ್ಲಿ ಕೂಡ ಬಿಗ್ ಬಾಸ್‌ ಆಗಸ್ಟ್ ಕೊನೆಯ ವಾರದಲ್ಲಿ ಅಥವಾ ಸೆಪ್ಟೆಂಬರ್‌ನಲ್ಲಿ ಆರಂಭವಾಗುವ ಸಾಧ್ಯತೆ ಇದೆ. ತಮಿಳು ಮತ್ತು ಮರಾಠಿಯಲ್ಲಿ ಈ ಬಾರಿ ಬಿಗ್‌ ಬಾಸ್‌ನ ಯಾವ ಸದ್ದು ಇಲ್ಲ. ಸುದ್ದಿ ಕೂಡ ಇಲ್ಲ.

shocking-salman-khans-bigg-boss-19-fee-revealed-rs-150-crore-for-3-months

ಇನ್ನೂ.. ಕನ್ನಡದಲ್ಲಿ ಬಿಗ್ ಬಾಸ್ ಅಂದರೆ ಸುದೀಪ್ ಹೇಗೆ ನೆನಪಾಗ್ತಾರೋ, ಅದೇ ರೀತಿ ಹಿಂದಿಯಲ್ಲಿ ಸಲ್ಮಾನ್ ಖಾನ್ ನೆನಪಾಗುತ್ತಾರೆ. ಯಾಕೆಂದರೆ.. ಸುದೀಪ್ ಅವರಿಗೆ ಮಾತ್ರ ಬಿಗ್ ಬಾಸ್ ಎರಡನೇ ಮನೆಯಲ್ಲ. ಸಲ್ಮಾನ್ ಖಾನ್ ಅವರಿಗೆ ಕೂಡ ಬಿಗ್ ಬಾಸ್ ಎರಡನೇ ಮನೆಯಂತೆಯೇ. ಸಲ್ಮಾನ್ ಖಾನ್ ಅವರಿಲ್ಲದೇ ಬಿಗ್ ಬಾಸ್ ಊಹಿಸಿಕೊಳ್ಳುವುದು ಕೂಡ ಕಷ್ಟ. ಅಷ್ಟರ ಮಟ್ಟಿಗೆ ಬಿಗ್ ಬಾಸ್‌ ಪ್ರೇಕ್ಷಕರನ್ನು ಸಲ್ಮಾನ್ ಖಾನ್ ಆವರಿಸಿಕೊಂಡಿದ್ದಾರೆ.

ಆರಂಭದ 3 ಸೀಸನ್ ಹೊರತು ಪಡಿಸಿದರೆ ಕಳೆದ 15 ವರ್ಷಗಳಿಂದ ಬಿಗ್ ಬಾಸ್‌ನ ಭಾಗವಾಗಿದ್ದಾರೆ. ಈ ಬಾರಿ ಕೂಡ ಬಿಗ್ ಬಾಸ್‌ ಕಾರ್ಯಕ್ರಮ ನಡೆಸಿಕೊಡಲು ಸಲ್ಮಾನ್ ಖಾನ್ ಸಿದ್ಧರಾಗಿದ್ದಾರೆ. ಹೀಗಿರುವಾಗ ಇದೀಗ ಈ ಬಾರಿ ಬಿಗ್ ಬಾಸ್‌ಗೆ ಸಲ್ಮಾನ್ ಖಾನ್ ಪಡೆದಿರುವ ಸಂಭಾವನೆ ಕುರಿತು ಚರ್ಚೆಯಾಗುತ್ತಿದೆ. ಇದಕ್ಕೆ ಪೂರಕವಾಗಿ ಸಲ್ಮಾನ್ ಖಾನ್ ಈ ಬಾರಿಯ ಬಿಗ್ ಬಾಸ್‌ಗೆ ₹120 ರಿಂದ ₹150 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ''ದಿ ಇಂಡಿಯನ್ ಎಕ್ಸ್‌ಪ್ರೆಸ್'' ವರದಿಯನ್ನು ಮಾಡಿದೆ.

ಇನ್ನು.. ಸಲ್ಮಾನ್ ಖಾನ್ ಸಾರಥ್ಯದಲ್ಲಿ ಮೂಡಿ ಬರುವ ಬಿಗ್ ಬಾಸ್‌ ಕಾರ್ಯಕ್ರಮ ಈ ಬಾರಿ ಮೂರಲ್ಲ ಬದಲಿಗೆ ಐದು ತಿಂಗಳು ನಡೆಯಲಿದೆ ಎಂದು ಹೇಳಲಾಗುತ್ತಿದೆ. ''ಪಿಂಕ್ ವಿಲ್ಲಾ'' ಸೇರಿ ಹಲವು ರಾಷ್ಟ್ರೀಯ ವಾಹಿನಿಗಳು ಈ ಸುದ್ದಿಯನ್ನು ಈ ಹಿಂದೆ ಪ್ರಸಾರವನ್ನು ಮಾಡಿವೆ. ಇನ್ನು ಕೇವಲ ಸಲ್ಮಾನ್ ಖಾನ್ ಮಾತ್ರ ಈ ಬಾರಿ ನಿರೂಪಣೆ ಮಾಡುವುದಿಲ್ಲ ಬದಲಿಗೆ ಸಲ್ಮಾನ್ ಜೊತೆ ಇನ್ನು ಮೂವರು ಸ್ಟಾರ್‌ಗಳು ಬಿಗ್ ಬಾಸ್‌ ಕಾರ್ಯಕ್ರಮದ ನಿರೂಪಣೆಯನ್ನು ಮಾಡಲಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. ಫರ್ಹಾ ಖಾನ್.. ಕರಣ್ ಜೋಹರ್ ಮತ್ತು ಅನಿಲ್ ಕಪೂರ್ ವಿಶೇಷ ನಿರೂಪಕರಾಗಿ ಬರುವ ಸಾಧ್ಯತೆ ಇದೆ ಎಂದು ಕೂಡ ಹೇಳಲಾಗುತ್ತಿದೆ.

shocking-salman-khans-bigg-boss-19-fee-revealed-rs-150-crore-for-3-months

ಇದಕ್ಕೆ ಕೈಗನ್ನಡಿ ಎಂಬಂತೆ ''ದಿ ಇಂಡಿಯನ್ ಎಕ್ಸ್‌ಪ್ರೆಸ್'' ತನ್ನ ಈ ವರದಿಯಲ್ಲಿ ₹120 ರಿಂದ ₹150 ಕೋಟಿ ಪಡೆಯುತ್ತಿರುವ ಸಲ್ಮಾನ್ ಖಾನ್ ಈ ಬಾರಿ ಒಟ್ಟಾರೆಯಾಗಿ 15 ವಾರಗಳ ಕಾಲ ನಿರೂಪಣೆ ಮಾಡಲಿದ್ದಾರೆ ಎಂದು ಹೇಳಿದೆ. ಪ್ರತಿ ವಾರಾಂತ್ಯಕ್ಕೆ ಪ್ರಸ್ತುತವಾಗಿ ₹8 ರಿಂದ ₹10 ಕೋಟಿ ಸಲ್ಮಾನ್ ಖಾತೆಗೆ ಜಮೆಯಾಗಲಿದೆ ಎಂದು ಉಲ್ಲೇಖಿಸಿದೆ. ಸಲ್ಮಾನ್ ಖಾನ್ ಜೊತೆ ಈ ಬಾರಿ ಬೇರೆ ಹೋಸ್ಟ್‌ಗಳು ಇರಲಿದ್ದಾರೆ ಎಂದು ತಿಳಿಸಿದೆ.

ಇನ್ನು ಇದೇ ವರದಿಯ ಪ್ರಕಾರ ಕಳೆದ ವರ್ಷ ಅಂದರೆ ಬಿಗ್ ಬಾಸ್‌ 18ನೇ ಸೀಸನ್‌ಗೆ ಸಲ್ಮಾನ್ ಖಾನ್ ₹250 ಕೋಟಿ ಸಂಭಾವನೆ ಪಡೆದಿದ್ದರು. ಬಿಗ್ ಬಾಸ್ ಸೀಸನ್ 17ಕ್ಕೆ ₹200 ಕೋಟಿಯನ್ನು ನೀಡಲಾಗಿತ್ತು. ಆದರೆ ಈ ಬಾರಿ ಸಂಭಾವನೆ ಕಡಿಮೆಯಾಗಿದೆ. ಇದಕ್ಕೆ ಬೇರೆ ನಿರೂಪಕರು ಇರುವ ವಿಚಾರ ಒಂದು ಕಾರಣವಾದರೆ, ಬಿಗ್ ಬಾಸ್ ಈ ಬಾರಿ ಕಿರುತೆರೆಗಿಂತ ಮೊದಲು ಓಟಿಟಿಯಲ್ಲಿ ಪ್ರಸಾರವಾಗುತ್ತಿರುವುದು ಮತ್ತೊಂದು ಕಾರಣ.

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಒಂದು ಗಂಟೆಯ ಮೊದಲು ಜೀಯೋ ಹಾಟ್‌ ಸ್ಟಾರ್‌ನಲ್ಲಿ ಕಾರ್ಯಕ್ರಮ ಶುರುವಾಗಲಿದೆ. ಈ ಮೂಲಕ ಆಸಕ್ತ ಬಿಗ್ ಬಾಸ್ ಪ್ರೇಮಿಗಳಿಗೆ ಎಲ್ಲರಿಗಿಂತ ಮೊದಲು ಕಾರ್ಯಕ್ರಮ ಕಣ್ತುಂಬಿಕೊಳ್ಳುವ ಸೌಲಭ್ಯವನ್ನು ಆಯೋಜಕರು.. ವಾಹಿನಿಯವರು ನೀಡುತ್ತಿದ್ದಾರೆ. ಹೀಗಾಗಿ ಈ ಬಾರಿ ಬಿಗ್ ಬಾಸ್‌ನ್ನು ಓಟಿಟಿಯ ವಿಭಾಗಕ್ಕೆ ಸೇರಿಸಿರುವ ಆಯೋಜಕರು ಸಲ್ಮಾನ್ ಖಾನ್‌ ಅವರನ್ನು ಕಡಿಮೆ ಸಂಭಾವನೆಗೆ ಒಪ್ಪಿಸಿದ್ದಾರೆ.ಈ ಬಾರಿ ಹೆಚ್ಚು ಹಣ ಖರ್ಚು ಮಾಡದೇ ಇತಿಮಿತಿಯಲ್ಲಿಯೇ ಕಾರ್ಯಕ್ರಮ ನಡೆಸಲು ಮುಂದಾಗಿದ್ದಾರೆ ಎಂದು ''ದಿ ಇಂಡಿಯನ್ ಎಕ್ಸ್‌ಪ್ರೆಸ್'' ವರದಿಯಲ್ಲಿ ಉಲ್ಲೇಖಿಸಲಾಗಿದೆ.

More from Filmibeat

English summary
Salman Khan's Bigg Boss 19 salary breaks all records! He's set to earn an astonishing Rs 120-150 Crores for the season. Read the report
Read more about: biggboss salman khan ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X