ಸುಪ್ರೀಂ ಕೋರ್ಟ್‌ನಲ್ಲಿ ಮಾಜಿ ಬಿಗ್ ಬಾಸ್‌ ಸ್ಫರ್ಧಿಗೆ ಲೈಂಗಿಕ ಕಿರುಕುಳ, ಕಣ್ಣೀರು ಹಾಕಿದ ನಟಿ..!

ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ದಿನನಿತ್ಯ ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ ಮತ್ತು ಲೈಂಗಿಕ ಹಿಂಸೆ ಅನುಭವಿಸಿದ್ದಾರೆ. ಇನ್ನೂ ಅನುಭವಿಸುತ್ತಲೇ ಇದ್ದಾರೆ. ಕೆಲವರು ಮುಂದೆ ಬಂದು ತಮ್ಮ ಮೇಲಾದ ದೌರ್ಜನ್ಯದ ವಿರುದ್ದ ಹೋರಾಡುತ್ತಾರೆ, ಇನ್ನು ಕೆಲವರು ವ್ಯವಸ್ಥೆಯ ವಿರುದ್ದ ಹೋರಾಡಲು ಸಾಧ್ಯವಾಗದೇ ಸುಮ್ಮನಾಗುತ್ತಾರೆ.

ಹೀಗೆ ತನ್ನ ಹದಿಹರೆಯದ ದಿನಗಳಲ್ಲಿ ಲೈಂಗಿಕ ಕಿರುಕುಳಕ್ಕೊಳಗಾದ ನಿಮೃತ್ ಕೌರ್ ಅಹ್ಲುವಾಲಿಯಾ ತನ್ನ ಮೇಲೆ ನಡೆದ ದೌರ್ಜನ್ಯವನ್ನು ನೆನಪು ಮಾಡಿಕೊಂಡಿದ್ದಾರೆ. ಸಂದರ್ಶನದಲ್ಲಿ ಹಳೆಯ ದಿನಗಳನ್ನು ನೆನೆಯುತ್ತಾ ಕಣ್ಣೀರಾಗಿದ್ದಾರೆ.

shocking-testimony-nimrit-kaur-ahluwalia-of-bigg-boss-recounts-assault-in-the-supreme-court

ಹೌದು, ನಿಮೃತ್ ಕೌರ್ ಅಹ್ಲುವಾಲಿಯಾ .. ಹಿಂದಿ ಕಿರುತೆರೆಯ ಛೋಟಿ ಸರ್ದಾರಣಿ. ಬಿಗ್ ಬಾಸ್ 16ನೇ ಸೀಸನ್‌ನಲ್ಲಿ ಸ್ಫರ್ಧಿಯಾಗಿ ಭಾಗವಹಿಸಿದ್ದ ನಿಮ್ರತ್ ಆ ನಂತರ ಖತ್ರೋನ್ ಕೆ ಕಿಲಾಡಿ ರಿಯಾಲಿಟಿ ಶೋನಲ್ಲಿ ಕೂಡ ಕಾಣಿಸಿಕೊಂಡಿದ್ದರು. ವಿಶೇಷ ಅಂದರೆ ಎರಡು ಕಾರ್ಯಕ್ರಮಗಳಲ್ಲಿ ನಿಮ್ರತ್ ಆರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು.

ಇಂಥಾ ನಿಮ್ರತ್ ಕೌರ್ ಅಹ್ಲುವಾಲಿಯಾ 19ರ ಪ್ರಾಯದಲ್ಲಿ ಸುಪ್ರೀಂ ಕೋರ್ಟ್‌ನ ಆವರಣದಲ್ಲಿ ತಮಗಾದ ಲೈಂಗಿಕ ಕಿರುಕುಳದ ಕುರಿತು ಮಾತನಾಡಿದ್ದಾರೆ. ಆ ಕಹಿ ಅನುಭವ ನೆನೆದು ಬಿಕ್ಕಿದ್ದಾರೆ. ಹೌದು, ಹಾಟರ್ಫ್ಲೈ ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಿಮ್ರತ್ ಕೌರ್ ಅಹ್ಲುವಾಲಿಯಾ ತಮ್ಮ 19ನೇ ವಯಸ್ಸಿನಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೇ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ನಿಮ್ರತ್ ನಾನು ಆಗ ಇನ್ನು ಕಾಲೇಜ್‌ನಲ್ಲಿ ಮೂರನೇ ವರ್ಷದಲ್ಲಿ ಓದುತ್ತಿದ್ದೆ, ಆಗ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯನ್ನು ನೋಡಲು ನಾನು ಹೋಗಿದ್ದೇ ಎಂದು ಹೇಳಿದ್ದಾರೆ. ವಿಚಾರಣೆ ನಡೆಯುತ್ತಿದ್ದ ಸಮಯದಲ್ಲಿ ಕೋರ್ಟ್ ರೂಮ್‌ ಜನರಿಂದ ತುಂಬಿ ತುಳುಕುತ್ತಿತ್ತು, ಅಲುಗಾಡಲು ಕೂಡ ಜಾಗ ಇರಲಿಲ್ಲ, ಈ ಸಮಯದಲ್ಲಿ ನನ್ನ ಹಿಂಭಾಗದ ಮೇಲೆ ಕೈಯಾಡಿಸಿದಂತೆ ಆಯ್ತು ಎಂದು ಹೇಳಿರುವ ನಿಮ್ರತ್ ಮೊದ ಮೊದಲು ನಾನು ನಿರ್ಲಕ್ಷಿಸಿದೆ, ನ್ಯಾಯಾಲಯದ ಕೊಠಡಿ ಕಿಕ್ಕಿರಿದು ತುಂಬಿದ್ದರಿಂದ ತಪ್ಪಾಗಿರಬಹುದೆಂದು ಅಂದುಕೊಂಡು ಸುಮ್ಮನಾಗಿದ್ದೆ ಎಂದು ಹೇಳಿದ್ಧಾರೆ.

ನನ್ನಷ್ಟಕ್ಕೆ ನಾನೇ ಸುಖಾ ಸುಮ್ಮನೆ ತುಂಬಾ ಯೋಚನೆ ಮಾಡುತ್ತಿದ್ದೇನೆ ಎಂದುಕೊಂಡೆ ಆದರೆ ಆ ವ್ಯಕ್ತಿ ತನ್ನ ಕೆಲಸ ಮುಂದುವರೆಸಿದ್ದ ಎಂದು ಹೇಳಿರುವ ನಿಮ್ರತ್ ಆ ನಂತರ ಹಿಂದೆ ತಿರುಗಿ ನಾನು ನೋಡಿದೆ ಆದರೆ ಆ ವ್ಯಕ್ತಿ ನನ್ನ ನೋಡದೇ ಬೇರೆ ಕಡೆ ನೋಡುತ್ತಿರುವಂತೆ ನಾಟಕವಾಡಲು ಶುರು ಮಾಡಿದ್ದ ಎಂದು ಹೇಳಿದ್ದಾರೆ.

ಇದರಿಂದ ಆ ನಂತರ ನಾನು ನನ್ನ ನಿಂತ ಸ್ಥಳವನ್ನು ಕೂಡ ಬದಲಾಯಿಸಿದೆ ಎಂದಿರುವ ನಿಮ್ರತ್ ಅವನು ಮತ್ತೆ ನನ್ನ ಹಿಂದೆಯೇ ಬಂದು ನಿಂತುಕೊಂಡ, ನನ್ನ ದೇಹವನ್ನೆಲ್ಲ ಮುಟ್ಟಲು ಶುರು ಮಾಡಿದ ಇದು ಸಾಲದು ಎನ್ನುವಂತೆ ನನ್ನ ಶರ್ಟ್‌ನಲ್ಲಿ ಕೂಡ ಕೈ ಹಾಕುವ ಪ್ರಯತ್ನ ಮಾಡಿದ ಆಗ ನನ್ನ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು ಎಂದು ಆ ದಿನವನ್ನು ನೆನಪು ಮಾಡಿಕೊಂಡಿದ್ದಾರೆ. ಭಾವುಕರಾಗಿದ್ದಾರೆ.

ಅದೃಷ್ಟವಶಾತ್ ಇದೇ ಸಮಯದಲ್ಲಿ ನನ್ನ ದಯನೀಯ ಪರಿಸ್ಥಿತಿಯನ್ನು ಅಲ್ಲಿದ್ದ ಹಿರಿಯ ಮಹಿಳಾ ವಕೀಲರೊಬ್ಬರು ಗಮನಿಸಿದರು, ನಿನಗೇನಾದರೂ ತೊಂದರೆಯಾಗುತ್ತಿದೆಯಾ ಎಂದು ಕೇಳಿದರು, ನಾನು ಹೌದು ಎಂದಿದ್ದೇ ತಡ ಆ ಮಹಿಳೆ ಸೀದಾ ಬಂದು ಆ ವ್ಯಕ್ತಿಯನ್ನು ಗದರಿಸಿ ಕಪಾಳಕ್ಕೆ ಕೂಡ ಹೊಡೆದಿದ್ದರು ಎಂದಿರುವ ನಿಮ್ರತ್ ಆ ನಂತರ ಆ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಲಾಯ್ತು ಎಂದು ಹೇಳಿದ್ಧಾರೆ. ಸಾಮಾನ್ಯವಾಗಿ ಸುಪ್ರೀಂ ಕೋರ್ಟ್‌ನಲ್ಲಿ ನಾವು ನಿಂತಿರುವುದರಿಂದ ಮಾನಸಿಕವಾಗಿ ನಾವು ಸುರಕ್ಷಿತ ಸ್ಥಳದಲ್ಲಿದ್ದೇವೆ ಎಂದು ಅಂದುಕೊಂಡಿರುತ್ತೇವೆ, ಆದರೂ ಕೂಡ ಕೆಲ ಒಮ್ಮೆ ಹೀಗಾಗುತ್ತೆ ಎಂದು ಹೇಳಿದ್ದಾರೆ.

More from Filmibeat

English summary
Bigg Boss star Nimrit Kaur Ahluwalia recently shared a shocking testimony, recounting her experience of being assaulted in the Supreme Court. The revelation has sent shockwaves, as she bravely opened up about the traumatic event that she endured.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X