ಆಘಾತ, ಕನಸು ಭಗ್ನ ; ಒಬ್ಬರಲ್ಲ - ಬಿಗ್ ಬಾಸ್ ಮನೆಯಿಂದ ಇಂದು ಹೊರ ಬರಲಿದ್ದಾರೆ ಇಬ್ಬರು ?
''ಬಿಗ್ ಬಾಸ್'' ಕೇವಲ ಕಾರ್ಯಕ್ರಮ ಮಾತ್ರ ಅಲ್ಲ. ವ್ಯಕ್ತಿ ಮತ್ತು ವ್ಯಕ್ತಿತ್ವಗಳ ಸಂಘರ್ಷ ಕೂಡ ಹೌದು. ಈ ಸಂಘರ್ಷದಲ್ಲಿ ಕೆಲವರು ಕುತಂತ್ರದಿಂದ ಯುದ್ಧ ಗೆಲ್ಲಲು ಮುಂದಾಗುತ್ತಾರೆ. ಇನ್ನೂ ಕೆಲವರು ತಮ್ಮನ್ನು ತಾವು ಶ್ರೇಷ್ಠ ಎಂದುಕೊಳ್ಳುತ್ತಾರೆ. ಮತ್ತೊಬ್ಬರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಎಷ್ಟೇ ಪ್ರಯತ್ನ ಮಾಡಿದರೂ ಕೂಡ ವಾರಾಂತ್ಯಕ್ಕೆ ಒಬ್ಬರಲ್ಲೊಬ್ಬರು ಮನೆಯಿಂದ ಹೊರಗಡೆ ಬರಲೇಬೇಕು.
ನಿಯಮಾನುಸಾರ ''ಅಗ್ನಿ ಪರೀಕ್ಷೆ''ಯನ್ನು ಎದುರಿಸಲೇಬೇಕು. ಇಂದು ( ಭಾನುವಾರ-ನವೆಂಬರ್ 23 ) ಕೂಡ ಕನ್ನಡದ ''ಬಿಗ್ ಬಾಸ್'' ಮನೆಯಲ್ಲಿ ಈ ಅಗ್ನಿ ಪರೀಕ್ಷೆ ಇದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ ಹಿಂದಿಯಲ್ಲಿ ಕೂಡ ಈ ವಾರ ಸ್ಫರ್ಧಿಗಳಲ್ಲಿ ಎಲಿಮಿನೇಶನ್ ಭಯ ಇದೆ. ಒಬ್ಬರಲ್ಲ ಬದಲಿಗೆ ಈ ವಾರ ಇಬ್ಬರು ಹಿಂದಿ ''ಬಿಗ್ ಬಾಸ್'' ಮನೆಯಿಂದ ಹೊರಗಡೆ ಬರುತ್ತಾರೆ ಎನ್ನುವ ಸುದ್ದಿ ಸದ್ಯ ಸದ್ದು ಮಾಡುತ್ತಿದೆ.

ಹೌದು. ಅಸಲಿಗೆ ಈ ಬಾರಿ 18 ಜನ ''ಬಿಗ್ ಬಾಸ್'' ಮನೆಯನ್ನು ಪ್ರವೇಶ ಮಾಡಿದ್ದರು. ಆ ಪೈಕಿ ಸದ್ಯ 09 ಜನ ಮನೆಯಿಂದ ಹೊರ ಬಂದಿದ್ದಾರೆ. ಇನ್ನು 09 ಜನ ಮನೆಯಲ್ಲಿದ್ದಾರೆ. ಈ 9 ಜನರಲ್ಲಿ ಕುನಿಕಾ ಸದಾನಂದ್ ಕೂಡ ಒಬ್ಬರು.
''ಬೇಟಾ''.. ''ಖಿಲಾಡಿ''.. ''ಗುಮ್ರಾಹ್''.. ''ಕೊಯ್ಲಾ''.. ''ಪ್ಯಾರ್ ಕಿಯಾ ತೋ ಡರನಾ ಕ್ಯಾ''.. ''ಹಮ್ ಸಾಥ್ ಸಾಥ್ ಹೈ''.. ''ಪೇಜ್ 3''.. ಹೀಗೆ ನೂರಕ್ಕೂ ಅಧಿಕ ಚಿತ್ರಗಳಲ್ಲಿ ಪ್ರಮುಖವಾದ ಪಾತ್ರಗಳನ್ನು ನಿರ್ವಹಿಸಿರುವ ಕುನಿಕಾ ಕಿರುತೆರೆಯಲ್ಲಿ ಕೂಡ ಕೆಲಸ ಮಾಡಿದ್ದಾರೆ.
ವೃತ್ತಿಯಲ್ಲಿ ವಕೀಲೆ ಆಗಿ ಕೂಡ ಗುರುತಿಸಿಕೊಂಡಿರುವ ಕುನಿಕಾ ಸದಾನಂದ್ ಸಾಮಾಜಿಕ ಕಾರ್ಯಕರ್ತೆ ಕೂಡ ಹೌದು. ''ಬಿಗ್ ಬಾಸ್'' ಮನೆಯಲ್ಲಿ ಖ್ಯಾತ ಗಾಯಕ ಕುಮಾರ್ ಸಾನು ಜೊತೆ ತಮಗೆ ಇದ್ದ ಅಕ್ರಮ ಸಂಬಂಧದ ಕುರಿತು ಮಾತನಾಡಿದ್ದರು ಕುನಿಕಾ ಸದಾನಂದ್.
ಇಂಥಾ ಕುನಿಕಾ ಸದಾನಂದ್ ಈ ವಾರ ಮನೆಯ ಹೊರಗಡೆ ಬರಲಿದ್ದಾರೆ. ಈ ಕುರಿತು ಹಿಂದಿ ''ಬಿಗ್ ಬಾಸ್'' ಕಡೆಯಿಂದ ಇನ್ನೂ ಅಧಿಕೃತ ಘೋಷಣೆ ಹೊರ ಬಂದಿಲ್ಲವಾದರೂ ''ಬಿಗ್ ಬಾಸ್'' ಕುರಿತ ಸುದ್ದಿಗಳನ್ನು ನಿಖರವಾಗಿ ಹಂಚಿಕೊಳ್ಳುತ್ತಾ ಬಂದ ''ದಿ ಖಬ್ರಿ'' ಕುನಿಕಾ ಸದಾನಂದ್ ಇಂದು ( ನವೆಂಬರ್ 23) ಮನೆಯಿಂದ ಹೊರ ಬರುವುದು ಪಕ್ಕಾ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದೆ. ಸದ್ಯ ಈ ಸುದ್ದಿ ಕುನಿಕಾ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

ಇನ್ನೂ ಕೇವಲ ಕುನಿಕಾ ಸದಾನಂದ್ ಮಾತ್ರವಲ್ಲ ವೈಲ್ಡ್ ಕಾರ್ಡ್ ಮೂಲಕ ಮನೆಯನ್ನು ಪ್ರವೇಶ ಮಾಡಿದ್ದ ಭಾರತದ ಸ್ಟಾರ್ ಕ್ರಿಕೆಟ್ ಪ್ಲೇಯರ್ ಮತ್ತು ಖ್ಯಾತ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯ ಶಿಷ್ಯ ದೀಪಕ್ ಚಹಾರ್ ಅವರ ಅಕ್ಕ ಮಾಲತಿ ಚಹಾರ್ ಕೂಡ ಮನೆಯಿಂದ ಇಂದು (ನವೆಂಬರ್ 23 ) ಹೊರ ಬರಲಿದ್ದಾರೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.
ಹಾಗೊಂದು ವೇಳೆ ಇಂದು ಇವರಿಬ್ಬರು ಮನೆಯ ಹೊರಗಡೆ ಬಂದರೆ ಸೆಮಿ ಫೈನಲ್‌ಗೆ ಪ್ರವೇಶ ಮಾಡುತ್ತಿರುವ ಹಿಂದಿ ''ಬಿಗ್ ಬಾಸ್''ನಲ್ಲಿ 7 ಜನ ಉಳಿದುಕೊಂಡಂತೆ ಆಗಲಿದೆ. ಆ ಪೈಕಿ ಅಮಾಲ್ ಮಲ್ಲಿಕ್.. ಅಶ್ನೂರ್ ಕೌರ್.. ಫರ್ಹಾನಾ ಭಟ್ ಮತ್ತು ಗೌರವ್ ಖನ್ನಾ ನಡುವೆ ತೀವೃ ಸ್ಫರ್ಧೆ ಇದೆ. ಈ ನಾಲ್ವರಲ್ಲಿ ಹಲವರ ಪ್ರಕಾರ ಗೌರವ್ ಖನ್ನಾ ಈ ಬಾರಿ ''ಬಿಗ್ ಬಾಸ್'' ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ.


Click it and Unblock the Notifications











