Shravani Subramanya Serial: ಕರ್ನಾಟಕದ ನಂಬರ್ 1 ಸೀರಿಯಲ್ 'ಶ್ರಾವಣಿ ಸುಬ್ರಹ್ಮಣ್ಯ'

By ಪೂರ್ವ

'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿ ಜೀ ಕನ್ನಡದ ಜನಪ್ರಿಯ ಧಾರಾವಾಹಿಯಾಗಿ ಹೊರಹೊಮ್ಮಿದೆ. ಇದು ನೋಡುಗರಿಗೆ ಮನರಂಜನೆ ನೀಡುತ್ತಿರುವುದ ಖಚಿತವಾಗಿದೆ. ದಿನದಿಂದ ದಿನಕ್ಕೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಾ ಮುನ್ನುಗ್ಗುತ್ತಿದೆ. ಶ್ರಾವಣಿ ಹಾಗೂ ಸುಬ್ರಹ್ಮಣ್ಯನ ನಡುವಿನ ಕಥೆಯೇ ಈ ಧಾರಾವಾಹಿಯ ಹೈಲೈಟ್. ಇವರಿಬ್ಬರ ಜೋಡಿಗೆ ವೀಕ್ಷಕರು ಫಿದಾ ಆಗಿದ್ದಾರೆ.

'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿ ಇದೀಗ ನಂಬರ್ ವನ್ ಸ್ಥಾನಕ್ಕೇರಿದೆ. ಕಳೆದ ವಾರದ ಟಿಆರ್‌ಪಿಯಲ್ಲಿ ಈ ಧಾರಾವಾಹಿ 8.8 ಟಿವಿಆರ್ ಅನ್ನು ಪಡೆದುಕೊಂಡಿದೆ. ಈ ಮೂಲಕ ಕರ್ನಾಟಕದ ನಂಬರ್ 1 ಧಾರಾವಾಹಿಯಾಗಿದೆ. ಈ ಖುಷಿ ವಿಷಯವನ್ನು ಜೀ ಕನ್ನಡವೇ ತನ್ನ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದೆ. ದಿನದಿಂದ ದಿನಕ್ಕೆ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿ ಕೂತೂಹಲ ಹೆಚ್ಚಾಗುತ್ತಿದ್ದು ಅಭಿಮಾನಿಗಳು ಸಾಕಷ್ಟು ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಸುಬ್ಬು ಹಾಗೂ ಶ್ರಾವಣಿ ಹಾಕಿದ ತಾಳಕ್ಕೆ ಕುಣಿಯುತ್ತಿದ್ದಾನೆ. ಸುಬ್ಬುಗೆ ಶ್ರಾವಣಿ ಎಂದರೆ ಬಹಳಷ್ಟು ಗೌರವ. ಆದರೆ, ಶ್ರಾವಣಿಗೆ ಸುಬ್ಬು ಎಂದರೆ ಪಂಚ ಪ್ರಾಣ. ಸುಬ್ಬು ಜೊತೆ ಇರುವ ಕ್ಷಣಗಳು ಶ್ರಾವಣಿಗೆ ಬಹಳಷ್ಟು ಮುದ ನೀಡುತ್ತದೆ.

Shravani Subramanya become no 1 Karnataka no Kannada Serial

ಶ್ರಾವಣಿ ತನ್ನ ಅತ್ತೆ ಮಗನನ್ನು ಮದುವೆ ಆಗಬೇಕಿತ್ತು. ಆದರೆ ಮದನ್ ಜೊತೆಗಿನ ಮದುವೆ ಶ್ರಾವಣಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಶ್ರಾವಣಿಗೆ ಸುಬ್ಬು ಎಂದರೆ ಪ್ರೀತಿ. ತನ್ನ ಮದುವೆ ಸುಬ್ಬು ಜೊತೆ ನಡೆಯುತ್ತದೆ ಎಂದು ಅಂದುಕೊಂಡು ಶ್ರಾವಣಿ ಮದುವೆಗೆ ಒಪ್ಪಿಗೆ ನೀಡಿದ್ದಳು. ಆದರೆ ಮದುವೆ ಗಂಡು ಮದನ್ ಸುಬ್ಬು ಅಲ್ಲ ಎಂದು ತಿಳಿದಾಗ ಶ್ರಾವಣಿ ಮಾತ್ರ ಕುಸಿದು ಬಿಟ್ಟಳು. ತಾನೇ ಕೊರಳಿಗೆ ತಾಳಿ ಕಟ್ಟಿಕೊಂಡ ಶ್ರಾವಣಿ, ತನ್ನ ಕೊರಳಿಗೆ ಸುಬ್ಬು ತಾಳಿ ಕಟ್ಟಿದ್ದಾನೆ ಎಂದು ಹೇಳುತ್ತಾಳೆ.

ಸುಬ್ಬು ಶ್ರಾವಣಿಗೆ ಒಂದು ಮಾತು ಕೊಟ್ಟಿರುತ್ತಾನೆ. ಶ್ರಾವಣಿಯಮ್ಮ ನೀವು ಏನೇ ಮಾಡಿದರೂ ಕೂಡಾ ನಾನು ನಿಮ್ಮ ಜೊತೆಗೆ ಇರುತ್ತೇನೆ ಎಂದಿರುತ್ತಾನೆ. ಶ್ರಾವಣಿಗೂ ಒಂದು ಭರವಸೆ ಇತ್ತು. ಸುಬ್ಬು ಏನೇ ಹೇಳಿದರೂ ಆತ ತನಗೆ ಕೊಟ್ಟಿರುವ ಮಾತನ್ನು ಖಂಡಿತವಾಗಿಯೂ ಉಳಿಸಿಕೊಳ್ಳುತ್ತಾಳೆ ಎನ್ನುವ ಆತ್ಮ ವಿಶ್ವಾಸವಿತ್ತು. ಆದ ಕಾರಣ ಸುಬ್ಬು ಜೊತೆ ತನ್ನ ಮದುವೆ ಆಗಿದೆ ಎಂದು ಎಲ್ಲರ ಮುಂದೆ ಶ್ರಾವಣಿ ಹೇಳಿದಾಗ ತಂದೆಗೆ ತುಂಬಾನೇ ನೋವು ಆಗುತ್ತೆ.

ತಂದೆ ನಂಬಿಕೆಗೆ ಮೋಸ ಮಾಡಿದ ಶ್ರಾವಣಿ

ಶ್ರಾವಣಿ ತಾಯಿ ನಂದಿನಿ ಮೋಸ ಮಾಡಿದ್ದಾಳೆ ಎಂದುಕೊಂಡಿದ್ದ ತಂದೆಗೆ ಇದೀಗ ಮಗಳು ಕೂಡ ನಡೆದುಕೊಂಡ ರೀತಿ ಆಘಾತ ತಂದಿದೆ. ಸುಬ್ಬು ರಕ್ಷಣೆಗೆ ಕಾವಲಾಗಿರುವ ಶ್ರಾವಣಿ ತನ್ನ ಗಂಡನನ್ನು ಅರೆಸ್ಟ್ ಮಾಡಿದ ಪೊಲೀಸರಿಗೆ ಸವಾಲು ಹಾಕಿದ್ದಾಳೆ. ನನ್ನ ಗಂಡನನ್ನು ಅರೆಸ್ಟ್ ಮಾಡಲು ನಾನು ಯಾರಿಗೆ ಪರ್ಮಿಷನ್ ಕೊಟ್ಟಿಲ್ಲ. ರಾಜಕೀಯದಲ್ಲಿ ಉತ್ತಮ ಸ್ಥಾನದಲ್ಲಿರುವವರು ಈ ರೀತಿ ಮಾಡಲು ಸಾಧ್ಯ. ಆದರೆ ನಾನು ಕೂಡ ಪ್ರಭಾವಿ ವ್ಯಕ್ತಿಯ ಹೆಸರು ಬಳಸಿಕೊಳ್ಳಬೇಕಾಗುತ್ತದೆ. ಅವರೇ ನನ್ನ ಅಜ್ಜಿ ಎಂದಾಗ ಪೊಲೀಸರು ಕೊಂಚ ದಂಗಾಗುತ್ತಾರೆ. ಶ್ರಾವಣಿ ಮಾತು ಕೇಳಿದ ಪೊಲೀಸರು ಸುಬ್ಬುವನ್ನು ಬಿಟ್ಟು ಕಳುಹಿಸುತ್ತಾರೆ.

ಶ್ರಾವಣಿ ಮೇಲೆ ಮುನಿಸಿಕೊಂಡ ವಿಶಾಲಾಕ್ಷಿ

ಅದಾದ ಬಳಿಕ ಸುಬ್ಬು ಮನೆಗೆ ಶ್ರಾವಣಿ ಬರುತ್ತಾಳೆ. ಸುಬ್ಬು ತಂದೆ ಆತನ ಹೆಂಡತಿಗೆ "ಶ್ರಾವಣಿಗೆ ನೀನು ಆರತಿ ಎತ್ತಿ ಮನೆಯೊಳಗೆ ಕರೆದುಕೋ" ಎಂದು ಹೇಳಿದಾಗ ವಿಶಾಲು ತನ್ನ ಗಂಡನ ಮಾತಿಗೆ ಒಪ್ಪುವುದೇ ಇಲ್ಲ. ಈಕೆ ನನ್ನ ಮನೆಯ ಸೊಸೆಯಲ್ಲ ಎಂದು ಪದೇ ಪದೆ ಹೇಳುತ್ತಲೇ ಇರುತ್ತಾಳೆ. ಆಕೆಗೆ ಬಹಳ ನೋವಾಗುತ್ತದೆ. ವಿಶಾಲುಗೆ ಬಹಳ ಬೇಸರ. ತನ್ನ ಮಗಳ ಜೀವನವನ್ನು ಹಾಳು ಮಾಡಿಬಿಟ್ಟಳು ಎಂದು ಮನದಲ್ಲಿ ಸಾಕಷ್ಟು ಬೇಸರಪಟ್ಟುಕೊಳ್ಳುತ್ತಾಳೆ. ಆದರೆ, ಶ್ರಾವಣಿಯನ್ನು ಮಾತ್ರ ಮನೆಯ ಒಳಗಡೆ ಕರೆದುಕೊಳ್ಳುವುದೇ ಇಲ್ಲ.

More from Filmibeat

English summary
Shravani Subramanya become no 1 Karnataka no Kannada Serial;
Read more about: tv serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X