Shravani Subramanya Serial:ವರಲಕ್ಷ್ಮೀಯನ್ನು ಅಪಹರಿಸಿದ ವರದ; ಮಗನನ್ನು ಕಾಣದೆ ಕಂಗಾಲಾದ ತಾಯಿ?

By ಪೂರ್ವ

ವರದನ ಮದುವೆ ಮಾಡಲು ಸಾಕಷ್ಟು ಪ್ಲಾನ್ ನಡೆದಿದೆ. ವರದನ ತಾಯಿ ಸುಬ್ಬು ಮನೆಗೆ ಬಂದು ಮದುವೆಯ ಕಾರ್ಡ್ ಕೊಟ್ಟು ಎಲ್ಲರ ಹೊಟ್ಟೆಯುರಿಸಿ ಅಲ್ಲಿಂದ ಹೋಗಬೇಕು ಎಂದು ಬಂದಿರುತ್ತಾಳೆ. ಶ್ರಾವಣಿ ಅದಕ್ಕೆ ಅವಕಾಶವನ್ನೇ ಕೊಡುವುದಿಲ್ಲ. ವರದನ ತಾಯಿ ಮದುವೆ ಕಾರ್ಡ್ ಕೊಡಲು ಬಂದಾಗ ವರಲಕ್ಷ್ಮೀಗೆ ಬಹಳ ಬೇಸರವಾಗುತ್ತದೆ. ತನ್ನಿಂದ ವರದನನ್ನು ದೂರ ಮಾಡಿಟ್ಟರು ಎನ್ನುವ ಬೇಸರ ಆಕೆಗೆ ಮೂಡುತ್ತದೆ. ಇನ್ನು ವರದನ ತಾಯಿ ತನ್ನ ಮಗನಿಗೆ ಮದುವೆ ಮಾಡುವ ಬಗ್ಗೆ ಪ್ರಸ್ತಾಪ ಮಾಡುತ್ತಾಳೆ. ನಿನಗಿಂತ ಒಳ್ಳೆಯ ಪಾರ್ಟಿ. ಹಾಗೆಯೇ ಹುಡುಗಿ ಬಹಳ ಸುಂದರವಾಗಿ ಇದ್ದಾಳೆ. ಆಕೆಯ ಗುಣ ನಡತೆ ಕೂಡ ತುಂಬಾ ಒಳ್ಳೆಯದು. ನಿಮ್ಮ ಹುಡುಗಿಗಿಂತ ಚೆನ್ನಾಗಿ ಓದಿಕೊಂಡಿದ್ದಾಳೆ ಎಂದು ಹೊಟ್ಟೆಯುರಿಸುತ್ತಾರೆ.

ಇದರಿಂದ ಕೋಪಗೊಂಡ ಶ್ರಾವಣಿ ಕೊಂಚ ಸಮಾಧಾನ ತೆಗೆದುಕೊಂಡು ಮಾತು ಮುಂದುವರೆಸುತ್ತಾಳೆ. ಒಳ್ಳೆಯದಾಗಲಿ ನಿಮ್ಮ ಮಗ ಹಾಗೂ ಸೊಸೆ ಚೆನ್ನಾಗಿ ನೂರು ಕಾಲ ಬಾಳಲಿ. ನಾವೆಲ್ಲರೂ ನಿಮ್ಮ ಮಗನ ಮದುವೆಗೆ ಬರುತ್ತೇವೆ ಎಂದು ಕಡ್ಡಿ ಮುರಿದ ಹಾಗೆ ಹೇಳುತ್ತಾಳೆ. ಆಗ ವರದನ ತಾಯಿ ಏನು ಮಾತನಾಡದೆ ಮದುವೆಯ ಆಮಂತ್ರಣ ಕೊಟ್ಟು "ಇನ್ನೂ ಒಂದು ವಾರದಲ್ಲಿ ವರದನ ಮದುವೆ. ಎಲ್ಲರೂ ಬನ್ನಿ" ಎಂದು ಹೇಳುತ್ತಾಳೆ. ಇತ್ತ ವರದ ಬಹಳಷ್ಟು ಒದ್ದಾಡುತ್ತಾನೆ. ವರಲಕ್ಷ್ಮ ಯನ್ನು ಹೇಗಾದರೂ ಮದುವೆ ಆಗಲೇ ಬೇಕು. ಇಲ್ಲವಾದರೆ ಖಂಡಿತವಾಗಿಯೂ ನನಗೆ ಉಳಿಗಾಲವಿಲ್ಲ. ಅಮ್ಮ ಬೇರೆ ಹುಡುಗಿಯ ಜೊತೆ ಮದುವೆ ಮಾಡಿಸುತ್ತಾರೆ. ಬೇರೆ ಹುಡುಗಿಯ ಜೊತೆ ಮದುವೆ ಆಗುವುದು ಖಂಡಿತವಾಗಿಯೂ ನನಗೆ ಇಷ್ಟವಿಲ್ಲ ಎಂದು ಮನದಲ್ಲಿ ಬಹಳಷ್ಟು ಬೇಸರ ವ್ಯಕ್ತಪಡಿಸುತ್ತಿರುತ್ತಾನೆ.

Shravani Subramanya February 19th episode about Varada and Varalakshmi

ಶ್ರಾವಣಿ ತಂದೆ ಕುಸಿದು ಕೆಳಗೆ ಬಿದ್ದಿರುತ್ತಾರೆ. ಯಜಮಾನರು ಬಿದ್ದಿರುವುದನ್ನು ನೋಡಿದ ಕೆಲಸದಾಕೆ ಜೋರಾಗಿ ಕಿರುಚುತ್ತಾಳೆ. ಹೊರಗಡೆಯಿದ್ದ ಸುಬ್ಬು ಬೇಗ ಮನೆಯೊಳಗೆ ಓಡಿ ಬಂದು ಯಜಮಾನರೇ ಎಂದು ಜೋರಾಗಿ ಕೂಗುತ್ತಾನೆ. ಆದರೆ ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಮನೆಯಲ್ಲಿ ಕಾರು ಇಲ್ಲದ ಕಾರಣ ಸುಬ್ಬು ಯಜಮಾನರನ್ನು ಕಟ್ಟಿಕೊಂಡು ಬೈಕ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಡ್ಮಿಟ್ ಮಾಡುತ್ತಾನೆ. ಇಷ್ಟೆಲ್ಲ ಕೆಲಸ ಮಾಡಿ ಮನೆಗೆ ಬಂದ ಸುಬ್ಬುಗೆ ಮನೆಯಲ್ಲಿ ಕೂಡ ನೆಮ್ಮದಿಯಿಲ್ಲ.

ವರದನ ಮಾತಿಗೆ ಕೋಪಗೊಂಡ ಶ್ರಾವಣಿ

ಎಷ್ಟೊತ್ತಿಗೆ ನೋಡಿದರೂ ಕಿತ್ತಾಟ. ಅಣ್ಣ ಮನೆಗೆ ಬರುತ್ತಿರುವುದನ್ನು ನೋಡಿದ ವರಲಕ್ಷ್ಮೀ , ಶ್ರಾವಣಿ ನಡೆದುಕೊಂಡ ರೀತಿಯನ್ನು ಹೇಳುತ್ತಾಳೆ. ಅಣ್ಣ ವರದನ ಮದುವೆಯ ಕಾರ್ಡ್ ಕೊಟ್ಟು ಹೋಗಿದ್ದಾರೆ. ನೀವಿಬ್ಬರೂ ಸೇರಿಕೊಂಡು ನನ್ನ ಬದುಕಿಗೆ ವಿಷ ಹಾಕಿಬಿಟ್ಟಿದ್ದೀರಾ ಎಂದು ಜೋರಾಗಿ ಅಳುತ್ತಾಳೆ. ಈ ಸಂದರ್ಭವನ್ನು ಕಾಯುತ್ತಿದ್ದ ಶ್ರಾವಣಿ ವರದ, ನಾವಿಬ್ಬರೂ ಚೆನ್ನಾಗಿರುವುದು ನಿನಗೆ ನೋಡಿಕೊಂಡು ಸಹಿಸಲು ಆಗುತ್ತಿಲ್ಲ ಎಂದಾದರೆ ನೀನು ಮನೆ ಬಿಟ್ಟು ಎಲ್ಲಾದರೂ ಹೋಗಿ ಬಿಡು ಎಂದು ಹೇಳುತ್ತಾಳೆ. ಇದನ್ನು ಕೇಳಿ ವರಲಕ್ಷ್ಮೀಗೆ ಇನ್ನೂ ಬೇಸರವಾಗುತ್ತದೆ.

Shravani Subramanya February 19th episode about Varada and Varalakshmi

ಹೇಳದೆ ಕೇಳದೆ ಮನೆಯಿಂದ ಹೊರ ನಡೆದ ವರಲಕ್ಷ್ಮೀ

ಇಷ್ಟೆಲ್ಲ ಅನಿಸಿಕೊಂಡು ನಾನು ಯಾಕೆ ಈ ಮನೆಯಲ್ಲಿ ಇರಬೇಕು ಎಂದು ಬ್ಯಾಗ್ ಎಲ್ಲಾ ಪ್ಯಾಕ್ ಮಾಡಿ ಮನೆ ಬಿಡುವ ನಿರ್ಧಾರ ಮಾಡುತ್ತಾಳೆ. ಮನೆಯಿಂದ ಹೊರ ಹೋಗುತ್ತಿದ್ದಂತೆ ವರಲಕ್ಷ್ಮೀಯನ್ನು ವರದ ಕಿಡ್ನಾಪ್ ಮಾಡಿ ಕರೆದುಕೊಂಡು ಹೋಗುತ್ತಾನೆ. ಇತ್ತ ವರದ ಮನೆಯಲ್ಲಿ ಕಾಣಿಸದೆ ಇರುವುದು ನೋಡಿ ಮನೆ ಮಂದಿ ಗಾಬರಿಯಾಗಿದ್ದಾರೆ. ಇತ್ತ ಮನೆ ಎಲ್ಲಾ ಹುಡುಕಿದರೂ ವರದ ಇಲ್ಲ. ವರದ ಏನಾದರು ಓಡಿ ಹೋಗಿಬಿಟ್ನಾ ಎನ್ನುವ ಸಣ್ಣ ಅಳುಕು ಕಾಡುತ್ತದೆ. ಇದೆಲ್ಲ ಆ ಸುಬ್ಬು ಮನೆಯವರ ಕೈ ವಾಡ ಇರಬೇಕು ಎಂದು ವರದನ ತಾಯಿ ಕೊಂಚ ಕೋಪದಿಂದ ಹೇಳುತ್ತಾರೆ. ಇತ್ತ ಶ್ರಾವಣಿ ಪ್ಲಾನ್ ಸಕ್ಸಸ್ ಆಗಿದೆ. ತನ್ನಿಂದಾಗಿ ಪ್ರೀತಿಸುತ್ತಿದ್ದ ಇಬ್ಬರು ಜೋಡಿಗಳು ಬೇರೆ ಆಗಿ ಬಿಡುತ್ತಿದ್ದರು. ಆದರೆ, ಖಂಡಿತವಾಗಿಯೂ ನಾನು ಅದಕ್ಕೆಲ್ಲ ಅವಕಾಶವನ್ನು ಕೊಡಲಾರೆ ಎಂದು ಮನದಲ್ಲಿ ಎಂದುಕೊಂಡು ಖುಷಿಪಡುತ್ತಾಳೆ. ಇತ್ತ ಸುಬ್ಬುಗೆ ತಲೆ ನೋವು. ತನ್ನ ತಂಗಿಯ ಬದುಕು ಹಾಳಾಗುತ್ತಿದೆ ಎನ್ನುವ ನೋವು, ಶ್ರಾವಣಿಯವರಿಂದ ತನ್ನ ಬದುಕು ಇನ್ನಷ್ಟು ಹಾಳಾಗುವ ಭಯ ಸುಬ್ಬುಗೆ ಕಾಡುತ್ತದೆ.

More from Filmibeat

English summary
Shravani Subramanya February 19th episode about Varada and Varalakshmi:
Read more about: serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X