Shravani subramanya: ಮೋಕ್ಷಾಳನ್ನು ಕಾಪಾಡಲು ಹೋಗಿ ಅಪಾಯಕ್ಕೆ ಸಿಲುಕಿದ ಸುಬ್ಬು!

By ಎಸ್ ಸುಮಂತ್

ಶ್ರಾವಣಿ ಧೈರ್ಯವಂತೆ. ಯಾವುದಕ್ಕೂ ಹೆದರುವುದಿಲ್ಲ. ಏನೇ ಸಮಸ್ಯೆ ಆದರೂ ಮುಂದೆ ನಿಲ್ಲುತ್ತಾಳೆ. ಒಂದು ರೀತಿ ಗಂಡು ಬೀರಿ ಎಂದೇ ಹೇಳಬಹುದು. ಕಾಲೇಜಿನಲ್ಲೂ ಅಷ್ಟೇ ಜೋರು ಧ್ವನಿಯಲ್ಲಿಯೇ ಎಲ್ಲರನ್ನು ಹೆದರಿಸುತ್ತಾಳೆ. ಸುಬ್ಬುನಂತು ಗೋಳುಯ್ದುಕೊಳ್ಳುತ್ತಾಳೆ.

ಶ್ರಾವಣಿ ಹೆದರುವುದು ಕೇವಲ ಅವರ ತಂದೆಗೆ ಮಾತ್ರ. ಅವರ ತಂದೆ ಮುಂದೆ ಇದ್ದರೆ ಶ್ರಾವಣಿಗೆ ಮಾತೇ ಬರುವುದಿಲ್ಲ. ತಂದೆಯ ಪ್ರೀತಿಯನ್ನೇ ಬಯಸುವ ಶ್ರಾವಣಿಗೆ ಪ್ರೀತಿ ಸಿಗದೆ ಕಣ್ಣೀರಾಗುತ್ತಾಳೆ.

Shravani subramanya kannada serial Written Update on April 8th episode

ಶ್ರಾವಣಿ ತಂದೆಯ ಪ್ರೀತಿಗಾಗಿ ಹಾತೊರೆಯುತ್ತಿದ್ದಾಳೆ. ಆದರೆ ತಂದೆ ಪ್ರೀತಿ ಸಿಗದಂತೆ ವೀರೇಂದ್ರ ತಂಗಿ ವಿಜಯಾಂಬಿಕೆ ತಡೆಯುತ್ತಿದ್ದಾಳೆ. ಶ್ರಾವಣಿ‌ ಮೇಲೆ ದ್ವೇಷ ಬರುವಂತೆ ಮಾಡುತ್ತಿದ್ದಾಳೆ. ಇದರಿಂದ ಶ್ರಾವಣಿಯ ಪ್ರಯತ್ನವೇ ವ್ಯರ್ಥವಾಗುತ್ತಿದೆ. ವಿಜಯಾಂಬಿಕೆ ಅಷ್ಟು ಮೋಸ ಮಾಡಿದರು, ಅನ್ಯಾಯ ಮಾಡಿದರು. ಅವಳ ಮಗಳ ಪರವಾಗಿಯೇ ನಿಂತಿದ್ದಾಳೆ ಶ್ರಾವಣಿ.

ಸುಬ್ಬು ಕರೆದುಕೊಂಡು ಹೊರಟ ಶ್ರಾವಣಿ

ಮೋಕ್ಷಾಳಿಗೆ ಪ್ರೀತಿ ಪ್ರೇಮಾ ಅಂತ ಮೋಸ ಮಾಡಿ, ಈಗ ಬ್ಲಾಕ್ ಮೇಲ್ ಮಾಡುತ್ತಿರುವ ರೌಡಿಗೆ ಬುದ್ದಿ ಕಲಿಸಲು ಹೊರಟಿದ್ದಾಳೆ ಶ್ರಾವಣಿ. ಅದರಲ್ಲೂ ಸುಬ್ಬುನನ್ನು ಕರೆದುಕೊಂಡು ಹೊರಟಿದ್ದಾಳೆ. ಸುಬ್ಬು ಗಾಡಿ ನಿಲ್ಲಿಸಿ ಬರುವುದರೊಳಗೆ ರೌಡಿಯ ಜೊತೆಗೆ ಮಾತಿನ ಕಾದಾಟಕ್ಕೆ ಇಳಿದಿದ್ದಾಳೆ ಶ್ರಾವಣಿ. ಪ್ರೀತಿ ಹೆಸರಲ್ಲಿ ಮೋಸ ಮಾಡ್ತೀಯಾ ಅಂತ ಅವಳದ್ದೇ ಸ್ಟೈಲ್‌ನಲ್ಲಿ ಜೋರು ಮಾಡಿದ್ದಾಳೆ.

ಸುಬ್ಬು ಇದ್ದರೆ ಶ್ರಾವಣಿ ಸೇಫ್- ವೀರೇಂದ್ರ

ಸುಬ್ಬು ಕೈ ಹಿಡಿದು ಶ್ರಾವಣಿ ಎಳೆದುಕೊಂಡು ಹೋಗಿದ್ದನ್ನು ಮದನ್ ನೋಡಿದ್ದಾನೆ. ಇದನ್ನೆ ದೊಡ್ಡ ವಿಚಾರ ಮಾಡುವುದಕ್ಕೆ ಹೊರಟಿದ್ದ. ಅಕ್ಕನ ಕೈಯಿಂದಾನೂ ಹೇಳಿಸಿದ್ದ. ವೀರೇಂದ್ರನಿಗೆ ಮಗಳನ್ನು ಕಂಡರೆ ಕೋಪವಿರಬಹುದು. ಆದರೆ ಸುಬ್ಬು ಕಂಡರೆ ಅತಿಯಾದ ನಂಬಿಕೆ, ಪ್ರೀತಿ. ತಪ್ಪಾಗಿ ಹೇಳಲು ಬಂದವರಿಗೆ ವೀರೇಂದ್ರ ಸರಿಯಾಗಿಯೇ ಉತ್ತರ ಕೊಟ್ಟಿದ್ದಾನೆ. ಶ್ರಾವಣಿ, ಸುಬ್ಬು ಜೊತೆಗೆ ಇದ್ದಾಳೆ ಎಂದರೆ ಯಾವುದೇ ಭಯ ಬೇಡ. ಅವಳು ಸೇಫ್ ಆಗಿಯೇ ಬರುತ್ತಾಳೆ ಎಂದು ಹೇಳುವ ಮೂಲಕ ಬಾಯಿ ಮುಚ್ಚಿಸಿದ್ದಾನೆ.

Shravani subramanya kannada serial Written Update on April 8th episode

ರಕ್ಷಿಸಲು ಬಂದ ಸುಬ್ಬುಗೆ ಗೂಸಾ

ರೌಡಿಗಳ ಜೊತೆಗೆ ಜೋರು ಜೋರು ಮಾತನಾಡುತ್ತಾ, ನೀವೆಲ್ಲಾ ಗಂಡಸರಾ ಅಂತ ಕೇಳಿದ್ದಾಳೆ. ಮೊದಲೇ ಅವರೆಲ್ಲಾ ಆಸ್ತಿಗಾಗಿಯೇ ಮೋಕ್ಷಾಗಳನ್ನು ಲವ್ ಮಾಡಿದ್ದ. ಈಗ ಎಲ್ಲಾ ರೌಡಿಗಳು ಅವಳ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿದ್ದಾರೆ. ಆಗಲೇ ಸುಬ್ಬು ಎಂಟ್ರಿಯಾಗಿದೆ‌. ನಮ್ಮ ಹೀರೋ ಬಂದ ನೋಡು ಎಂದಿದ್ದಾಳೆ. ಆದರೆ ಡಾಕ್ಯುಮೆಂಟ್ ಇರುವ ಕಾರಿನ ಕೀ ತೋರಿಸಿ, ಧೈರ್ಯ ಇದ್ದರೆ ಈ ತೆಗೆದುಕೊಂಡು ಹೋಗಿ ಎಂದಿದ್ದಾನೆ.

ಸುಬ್ಬು ಕಂಡು ನಿಂತ ಶ್ರಾವಣಿ

ಆ ರೌಡಿಗಳ ಜೊತೆಗೆ ಕಾದಾಟಕ್ಕೆ ಇಳಿದ ಸುಬ್ಬು ಲಾಕ್ ಆಗಿದ್ದಾನೆ. ಸುಬ್ಬು ಒಬ್ಬನಿಗೆ ಎಲ್ಲರು ಸೇರಿ ಹೊಡೆದಿದ್ದಾರೆ. ಅಷ್ಟರಲ್ಲಿ ಕಾರಿನ ಕೀ ಶ್ರಾವಣಿ ಕೈಗೆ ಸಿಕ್ಕಿದೆ. ಕಾರಿನ ಕೀ ಇದೆಯಲ್ಲ, ಡಿಕ್ಕಿ ಓಪನ್ ಮಾಡಿ, ಡಾಕ್ಯುಮೆಂಟ್ ತೆಗೆದುಕೊಂಡು ಓಡಿ ಎಂದು ಶ್ರಾವಣಿಗೆ ಹೇಳಿದ್ದಾನೆ. ಶ್ರಾವಣಿ ಕೂಡ ಸಾಕ್ಷಿಗಳನ್ನೆಲ್ಲಾ ತೆಗೆದುಕೊಂಡು ಓಡುವಾಗ, ಸುಬ್ಬು ತಲೆಗೆ ಜೋರಾಗಿ ಬಿಯರ್ ಬಾಟೆಲ್ ಹೊಡೆದಿದ್ದಾರೆ ರೌಡಿಗಳು. ಇದನ್ನು ಕಂಡು ಶ್ರಾವಣಿಗೂ ಗಾಬರಿಯಾಗಿದೆ. ಸಾಕ್ಷಿಗಳು ಕೈಯಲ್ಲಿ ಇದ್ದರು, ಓಡದೆ ಅಲ್ಲಿಯೇ ನಿಂತಿದ್ದಾಳೆ‌. ಆದರೆ ಸುಬ್ಬು ಯಾವುದೇ ಕಾರಣಕ್ಕೂ ಮದುವೆ ನಿಲ್ಲುವುದಕ್ಕೆ ಬಿಡುವುದಿಲ್ಲ. ರೌಡಿಗಳನ್ನ ಮಟ್ಟ ಹಾಕದೆ ಬಿಡುವುದು ಇಲ್ಲ.

More from Filmibeat

English summary
Shravani subramanya kannada serial today episode. Here is the details about Shravani Subramanya is in danger;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X